/newsfirstlive-kannada/media/media_files/2026/01/18/team-india-bcci-photo-2026-01-18-09-40-08.jpg)
Photograph: (ಬಿಸಿಸಿಐ)
ಇಂದೋರ್ ಏಕದಿನ ಪಂದ್ಯ ಭಾರೀ ಕುತೂಹಲ ಕೆರಳಿಸಿದೆ. ಒಂದೆಡೆ ಟೀಮ್ ಇಂಡಿಯಾ ಹೊಲ್ಕರ್​ ಸ್ಟೇಡಿಯಮ್​ನಲ್ಲಿ ವಿಜಯ ಪತಾಕೆ ಹಾರಿಸಲು ಮುಂದಾಗಿದ್ರೆ, ಮತ್ತೊಂದೆಡೆ ನ್ಯೂಜಿಲೆಂಡ್, ಸೋಲೋ ಮಾತೇ ಇಲ್ಲ ಅಂತಿದೆ. ಇಂದು ಉಭಯ ತಂಡಗಳ ನಡುವೆ ಜಿದ್ದಾಜಿದ್ದಿ ಹೋರಾಟ ನಿರೀಕ್ಷಿಸಲಾಗಿದೆ. ಸೂಪರ್​​ ಸಂಡೇಯಂದು ಸೂಪರ್ ಫೈಟ್​​​​​ ನೋಡಲು, ಕ್ರಿಕೆಟ್ ಫ್ಯಾನ್ಸ್ ಸಹ ಕಾತರದಿಂದ ಎದುರು ನೋಡ್ತಿದ್ದಾರೆ.
ಕೊಹ್ಲಿಯ ಸಾಲಿಡ್ ಬ್ಯಾಟಿಂಗ್​ನಿಂದ ಟೀಮ್ ಇಂಡಿಯಾ, ಬರೋಡಾ ಏಕದಿನ ಪಂದ್ಯದಲ್ಲಿ 4 ವಿಕೆಟ್​ಗಳ ಗೆಲುವು ದಾಖಲಿಸಿತ್ತು. ಎರಡನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್​ನ ಡ್ಯಾರೆಲ್ ಮಿಚ್ಚೆಲ್ ಆಕರ್ಷಕ ಶತಕ, ಟೀಮ್ ಇಂಡಿಯಾಕ್ಕೆ ಸೋಲಿನ ರುಚಿ ತೋರಿಸಿತು. ಮೂರು ಪಂದ್ಯಗಳ ಸರಣಿಯಲ್ಲಿ ಟೀಮ್ ಇಂಡಿಯಾ ಮತ್ತು ನ್ಯೂಜಿಲೆಂಡ್ 1-1 ಅಂತರದಿಂದ ಸಮಬಲ ಸಾಧಿಸಿವೆ. ಆದ್ರೆ ಇಂದೋರ್ ಪಂದ್ಯ ಯಾರ ಮಡಲಿಗೆ ಅನ್ನೋದು, ದೊಡ್ಡ ಪ್ರಶ್ನೆಯಾಗಿದೆ.
/filters:format(webp)/newsfirstlive-kannada/media/media_files/2025/12/04/team-india-8-2025-12-04-07-41-56.jpg)
ಚೇಸ್​​​​​​​​​ ಮಾಡಿದ್ರೆ ಗಿಲ್ ಪಡೆಗೆ ಗೆಲುವು ಕಷ್ಟವಲ್ಲ
ಟೀಮ್ ಇಂಡಿಯಾ ಬಿಗ್ಗೆಸ್ಟ್ ಸ್ಟ್ರೆಂಥೇ ಚೇಸಿಂಗ್. ಬರೋಡಾ ಏಕದಿನ ಪಂದ್ಯದಲ್ಲೂ ಟೀಮ್ ಇಂಡಿಯಾ ಚೇಸ್ ಮಾಡಿ ಗೆಲುವು ದಾಖಲಿಸಿತ್ತು. ಅದ್ರೆ ಮೊದಲ ಬ್ಯಾಟಿಂಗ್ ಮಾಡಿದ್ದ ಅದೆಷ್ಟೋ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಎಡವಿದೆ. ರಾಜ್​ಕೋಟ್​ನಲ್ಲೂ ಆಗಿದ್ದು ಅದೇ.! ಹಾಗಾಗಿ ಇಂದು ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ್ರೆ, ಗಿಲ್ ಪಡೆಗೆ ಗೆಲುವು ಗ್ಯಾರೆಂಟಿ.
ಮೊಹಮ್ಮದ್ ಶಮಿ, ಆರ್ಷ್​ದೀಪ್ ಸಿಂಗ್​, ಅಕ್ಷರ್ ಪಟೇಲ್​ರಂತಹ ಕ್ವಾಲಿಟಿ ಬೌಲರ್​ಗಳಲ್ಲಿಲ್ಲದ ಟೀಮ್ ಇಂಡಿಯಾ, ಬೌಲಿಂಗ್​ನಲ್ಲಿ ಸ್ವಲ್ಪ ವೀಕ್ ಇದ್ದಂತೆ ಕಾಣುತ್ತದೆ. ಮೊದಲ ಪಂದ್ಯದಲ್ಲಿ 300 ರನ್ ಲೀಕ್ ಮಾಡಿದ್ದ ಟೀಮ್ ಇಂಡಿಯಾ ಬೌಲರ್​ಗಳು, ಎರಡನೇ ಪಂದ್ಯದಲ್ಲೂ ಓವರ್​ಗೆ 6ಕ್ಕಿಂತ ಹೆಚ್ಚು ರನ್ ನೀಡಿದ್ರು. ಸದ್ಯ ಟೀಮ್ ಇಂಡಿಯಾಕ್ಕೆ ಬೌಲರ್​ಗಳದ್ದೇ ಸಮಸ್ಯೆ. ಬೌಲರ್​ಗಳು ಸ್ವಲ್ಪ ಟೈಟ್ ಸ್ಪೆಲ್​ ಹಾಕಿದ್ರೆ, ಟೀಮ್ ಇಂಡಿಯಾಕ್ಕೆ ಸರಣಿ ಗೆಲ್ಲೋದು ಕಷ್ಟವೇನಲ್ಲ. ​​​
ಇದನ್ನೂ ಓದಿ: ಸರ್ಕಾರಕ್ಕೆ ನಿಧಿ ಕೊಟ್ಟ ಕುಟುಂಬಕ್ಕೆ ಈಗ ಆತಂಕ! : ಕೇಡಾಗುತ್ತೆ ಎಂಬ ಆತಂಕದಲ್ಲಿ ನಿಧಿ ಸರ್ಕಾರಕ್ಕೆ ಕೊಟ್ಟ ಕುಟುಂಬ!
ಇಂದೋರ್​ನ ಹೊಲ್ಕರ್ ಮೈದಾನ, ಟೀಮ್ ಇಂಡಿಯಾಕ್ಕೆ ಹ್ಯಾಪಿ ಹಂಟಿಂಗ್ ಗ್ರೌಂಡ್. ಈ ಮೈದಾನದಲ್ಲಿ ಟೀಮ್ ಇಂಡಿಯಾಕ್ಕೆ ಸೋಲು ಅನ್ನೋ ಪದನೇ ಇಲ್ಲ. ಆಡಿರೋ 7 ಪಂದ್ಯಗಳಲ್ಲಿ ಟೀಮ್ ಇಂಡಿಯಾ ಎಲ್ಲಾ 7 ಪಂದ್ಯಗಳನ್ನ ಗೆದ್ದು, ತನ್ನದೇ ಗೆಲುವಿನ ದಾಖಲೆ ನಿರ್ಮಿಸಿದೆ. ಇಂದು 8ನೇ ಗೆಲುವಿಗಾಗಿ ಟೀಮ್ ಇಂಡಿಯಾ ಕಿವೀಸ್ ವಿರುದ್ಧ ಹೋರಾಟ ನಡೆಸಲು ಮುಂದಾಗಿದೆ.
ಪ್ರಸಕ್ತ ಸರಣಿಯಲ್ಲಿ ಟೀಮ್ ಇಂಡಿಯಾಕ್ಕಿಂತ ನ್ಯೂಜಿಲೆಂಡ್​​ ತಂಡ, ಭರ್ಜರಿ ಆಟ ಪ್ರದರ್ಶಿಸಿದೆ. ಮೊದಲ ಪಂದ್ಯದಲ್ಲಿ 300 ರನ್ ದಾಖಲಿಸಿದ್ದ ಕಿವೀಸ್, ಕೊನೆಯ ಓವರ್​​ವರೆಗೂ ಗೆಲುವಿಗಾಗಿ ಹೋರಾಟ ನಡೆಸಿತು. ರಾಜ್​ಕೋಟ್ ಏಕದಿನ ಪಂದ್ಯದಲ್ಲೂ ಕಿವೀಸ್​​ ಮೇಲುಗೈ ಸಾಧಿಸಿತ್ತು. ಟೀಮ್ ಇಂಡಿಯಾ ನೀಡಿದ್ದ 285 ರನ್​ಗಳ ಗುರಿಯನ್ನ ನ್ಯೂಜಿಲೆಂಡ್ 48 ಓವರ್​ಗಳಲ್ಲೇ ಚೇಸ್ ಮಾಡಿತ್ತು. ಅದು ಕೇವಲ 3 ವಿಕೆಟ್ ಕಳೆದುಕೊಂಡಷ್ಟೇ..!
ಸೂಪರ್​ ಸಂಡೇಯ ಸೂಪರ್ ಫೈಟ್​​, ತೀವ್ರ ಕುತೂಹಲ ಕೆರಳಿಸಿದೆ. ಇಂದೋರ್​​ನ ಗೆಲುವಿನ ಸರದಾರ ಟೀಮ್ ಇಂಡಿಯಾವನ್ನ ಸೋಲಿಸಲು, ಕಿವೀಸ್ ಪ್ಲಾನ್ ಏನು ಅನ್ನೋದನ್ನ ಕಾದುನೋಡೋಣ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us