Bigg Boss Finale: ಗಿಲ್ಲಿ ಗೆಲುವಿಗಾಗಿ ಅಭಿಮಾನಿಗಳಿಂದ ಅನ್ನದಾಸೋಹ

ಇಂದು ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಗ್ರ್ಯಾಂಡ್‌ ಫಿನಾಲೆ ನಡೆಯಲಿದೆ. ಯಾರು ಗೆಲ್ಲುತ್ತಾರೆ ಎಂಬ ಕುತೂಹಲ ಬಿಗ್​ ಬಾಸ್ ವೀಕ್ಷಕರಲ್ಲಿ ಹೆಚ್ಚಾಗಿದೆ. ಈ ಮಧ್ಯೆ ಗಿಲ್ಲಿ ಗೆಲ್ಲಿಸಲು ಅಭಿಮಾನಿಗಳಿಂದ ಭಾರೀ ಕಸರತ್ತು ನಡೆಯುತ್ತಿದೆ.

author-image
Ganesh Kerekuli
Bigg boss kannada Gilli Nata
Advertisment

ಇಂದು ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಗ್ರ್ಯಾಂಡ್‌ ಫಿನಾಲೆ ನಡೆಯಲಿದ್ದು, ಮಂಡ್ಯದ ಗಲ್ಲಿ ಗಲ್ಲಿಗಳಲ್ಲೂ ಗಿಲ್ಲಿ ಕ್ರೇಜ್ ಜೋರಾಗಿದೆ. ಹಣ, ಚಿನ್ನ ಕದಿಯೋದನ್ನ ನೋಡಿದ್ದೀರಿ ಆದರೆ ನಾನು ಅನ್ನ ಕದ್ದು ತಿಂದಿದ್ದೆ ಎಂದು ಗಿಲ್ಲಿ ಹೇಳಿದ್ದರು. 

ಹೀಗಾಗಿ ಗಿಲ್ಲಿ ಬಿಗ್‌ಬಾಸ್ ಟ್ರೋಫಿ ಗೆಲ್ಲಲಿ ಎಂದು ಪರಿಸರ ರೂರಲ್ ಡೆವಲಪ್ಮೆಂಟ್ ಸೊಸೈಟಿ ಹಾಗೂ ಮಮತೆಯ ಮಡಿಲು ಸಹಯೋಗದಲ್ಲಿ ಅನ್ನದಾನ ಮಾಡಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿರುವ ರೋಗಿಗಳು, ಸಂಬಂಧಿಕರಿಗೆ ಪೊಂಗಲ್, ಪಾಯಸ, ಬಾಳೆಹಣ್ಣು ವಿತರಿಸಿದ್ದಾರೆ. 

ಅಷ್ಟೇ ಅಲ್ಲ, ಗಿಲ್ಲಿ ಹವಾ ಎಲ್ಲೆಲ್ಲೂ ಜೊರಾಗಿದೆ. ಬಿಗ್​ ಬಾಸ್ ಮನೆ ಇರುವ ಜಾಲಿವುಡ್ ಮುಂದೆಯೇ ಗಿಲ್ಲಿ ಬ್ಯಾನರ್ಸ್ ಅಬ್ಬರ ಜೋರಾಗಿದೆ. ಸಾಲು ಸಾಲಾಗಿ ಗಿಲ್ಲಿ ಮತ್ತು ಕಾವ್ಯಾ ಅವರ ಬ್ಯಾನರ್ಸ್ ಹಾಕಲಾಗಿದೆ. ಅಂಚೀಪುರದ ಅಭಿಮಾನಿಗಳಿಂದ ನಿನ್ನೆ ರಾತ್ರಿ ಜಾಲಿವುಡ್ ಮುಂದೆ ಬ್ಯಾನರ್ಸ್ ಹಾಕಿದ್ದಾರೆ. 

ಇದನ್ನೂ ಓದಿ: ಬಿಗ್​ ಬಾಸ್​ ಸೀಸನ್​ 12ರ ಮುಕ್ತಾಯದ ಬಗ್ಗೆ ಕಿಚ್ಚ ಟ್ವೀಟ್.. ಸುದೀಪ್ ಹೇಳಿದ್ದೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Ashwini Gowda Bigg Boss Gilli Nata Big bang
Advertisment