/newsfirstlive-kannada/media/media_files/2026/01/12/virat-kohli-7-2026-01-12-08-35-09.jpg)
ಏಕದಿನ ಕ್ರಿಕೆಟ್​ನ ನಂಬರ್.1 ಬ್ಯಾಟರ್ ವಿರಾಟ್​ ಕೊಹ್ಲಿ, ಇಂದೋರ್ ಚಾಲೆಂಜ್​ಗೆ ರೆಡಿಯಾಗಿದ್ದಾರೆ. ಬರೋಡಾದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ್ದ ವಿರಾಟ್, ರಾಜ್​ಕೋಟ್​ನಲ್ಲಿ ಎಡವಿದ್ರು. ಆದ್ರೀಗ ಡು ಆರ್ ಡೈ ಪಂದ್ಯದಲ್ಲಿ ಕಿಂಗ್ ಕೊಹ್ಲಿ ಮೇಲೆ ಮತ್ತೆ ನಿರೀಕ್ಷೆ ಹೆಚ್ಚಾಗಿದೆ. ಕೊಹ್ಲಿ ಬ್ಯಾಟ್​​ನಿಂದ ಶತಕ ನೋಡಲು ಫ್ಯಾನ್ಸ್​ ಕಾತರದಿಂದಿದ್ದಾರೆ.
ಇದನ್ನೂ ಓದಿ: ಲಕ್ಕುಂಡಿ ಉತ್ಖನನ ಜಾಗದಲ್ಲಿ ಬಹೃತ್ ಹಾವು, ಶಿವಲಿಂಗ ಪ್ರತ್ಯಕ್ಷ..!
/filters:format(webp)/newsfirstlive-kannada/media/media_files/2025/12/06/kohli-2025-12-06-10-02-51.jpg)
ನ್ಯೂಜಿಲೆಂಡ್ ಸರಣಿಯಲ್ಲಿ ಫಿಫ್ಟಿ-ಫಿಪ್ಟಿ ಸಕ್ಸಸ್​​​ ರೇಟ್ ಹೊಂದಿರುವ ಕೊಹ್ಲಿ, ಇದೀಗ ಫೈನಲ್ ಫೈಟ್​​ಗೆ ಸಜ್ಜಾಗಿದ್ದಾರೆ. ಶತಕಗಳ ಶತಕದ ಬೇಟೆ ಬೆನ್ನಟ್ಟಿರುವ ವಿರಾಟ್, ಕಿವೀಸ್ ವಿರುದ್ಧ ಕೊನೆಯ ಪಂದ್ಯದಲ್ಲಿ ಘರ್ಜಿಸೋ ವಿಶ್ವಾಸದಲ್ಲಿದ್ದಾರೆ. ಸದ್ಯ ಅತ್ಯುತ್ತಮ ಫಾರ್ಮ್​​ನಲ್ಲಿರುವ ಕೊಹ್ಲಿ, ಇಂದೋರ್​ನಲ್ಲಿ ಎದುರಾಳಿಗಳಿಗೆ ವಿರಾಟ ರೂಪ ತೋರಿಸಲು ರೆಡಿಯಾಗಿದ್ದಾರೆ. ಇಂದೋರ್​ನಲ್ಲಿ ಇದು ಸಾಧ್ಯಾನಾ ಅನ್ನೋ ಪ್ರಶ್ನೆ ಎದುರಾಗಿದೆ.
ಕಿಂಗ್ ಕೊಹ್ಲಿಗೆ ಇಂದೋರ್​ ಅನ್​ಲಕ್ಕಿ ಗ್ರೌಂಡ್..?
ಇಂದೋರ್​ನ ಹೊಲ್ಕರ್​ ಸ್ಟೇಡಿಯಮ್​ನಲ್ಲಿ ವಿರಾಟ್ ಕೊಹ್ಲಿ ಅಟ್ಟರ್ ಫ್ಲಾಪ್ ಆಗಿದ್ದಾರೆ. ಈ ಮೈದಾನದಲ್ಲಿ ಆಡಿರೋ 4 ಏಕದಿನ ಪಂದ್ಯಗಳಲ್ಲಿ ಕೊಹ್ಲಿ ಬ್ಯಾಟ್​ನಿಂದ ರನ್ ಬಂದೇ ಇಲ್ಲ. ಒಂದೇ ಒಂದು ಅರ್ಧಶತಕವನ್ನೂ ಕೊಹ್ಲಿ ಸಿಡಿಸಿಲ್ಲ. ಇದೇ ಕಾರಣಕ್ಕೆ ಇಂದೋರ್, ವಿರಾಟ್ ಪಾಲಿಗೆ ಅನ್​ಲಕ್ಕಿ ಗ್ರೌಂಡ್ ಎನಿಸಿಕೊಂಡಿದೆ.
ಇದನ್ನೂ ಓದಿ: ಇವತ್ತು ರೋಹಿತ್-ಕೊಹ್ಲಿ ಫ್ಯಾನ್ಸ್​ಗೆ ಸ್ಪೆಷಲ್ ಡೇ.. ವರ್ಷದ FIRST HALF ಮುಗಿಸಿದ ದಿಗ್ಗಜರು..!
/filters:format(webp)/newsfirstlive-kannada/media/media_files/2025/12/03/virat-kohli-1-2025-12-03-16-07-28.jpg)
ಇಂದೋರ್ ಅಗ್ನಿ ಪರೀಕ್ಷೆ ಗೆಲ್ತಾರಾ ವಿರಾಟ್?
ವಿರಾಟ್ ಕೊಹ್ಲಿ ಮುಂದಿರೋ ಬಿಗ್ ಚಾಲೆಂಜ್ ಇದೇನೇ. ಅದು ಇಂದೋರ್ ಅಗ್ನಿ ಪರೀಕ್ಷೆ ಗೆಲ್ಲೋದು. ಇಲ್ಲಿ ಆಡಿರುವ 4 ಪಂದ್ಯಗಳಲ್ಲಿ ಕೊಹ್ಲಿ ಗಳಿಸಿರೋದು ಕೇವಲ 99 ರನ್ ಮಾತ್ರ. ಕೊಹ್ಲಿಯ ಹೈಯೆಸ್ಟ್ ಸ್ಕೋರ್ ಜಸ್ಟ್ 36 ರನ್ ಮಾತ್ರ. ಅದು ಸಹ ಇದೇ ನ್ಯೂಜಿಲೆಂಡ್ ವಿರುದ್ಧ. ಕೊಹ್ಲಿ ಇಂದೋರ್ ಅಗ್ನಿಪರೀಕ್ಷೆಯನ್ನ ಮೆಟ್ಟಿ ನಿಂತ್ರೆ, ಟೀಮ್ ಇಂಡಿಯಾಕ್ಕೆ ಗೆಲುವು ಪಕ್ಕಾ.
ಇಂದೋರ್ ಏಕದಿನ ಪಂದ್ಯ ಕೇವಲ ಪ್ರತಿಷ್ಟೆಯ ಪಂದ್ಯ ಮಾತ್ರವಲ್ಲ. ವಿರಾಟ್​​ ಕೊಹ್ಲಿಗೆ ಈ ಪಂದ್ಯ ಗೆಲ್ಲಲೇಬೇಕು. ಪಂದ್ಯ ಗೆಲ್ಲಬೇಕು ಅಂದ್ರೆ ಕೊಹ್ಲಿಯಂತಹ ಅನುಭವಿ ಬ್ಯಾಟ್ಸ್​ಮನ್​ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಬೇಕು. ರನ್​ಮಳೆ ಸುರಿಸಲೇಬೇಕು. ಒಂದು ವೇಳೆ ಕೊಹ್ಲಿ ಮತ್ತೆ ಕೈಕೊಟ್ರೆ, ಪಂದ್ಯ ಕಿವೀಸ್​​ ಕೈಗೆ ಹೋಗೋದನ್ನ ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ.
ಇದನ್ನೂ ಓದಿ: ಇವತ್ತು ರೋಹಿತ್-ಕೊಹ್ಲಿ ಫ್ಯಾನ್ಸ್​ಗೆ ಸ್ಪೆಷಲ್ ಡೇ.. ವರ್ಷದ FIRST HALF ಮುಗಿಸಿದ ದಿಗ್ಗಜರು..!
/filters:format(webp)/newsfirstlive-kannada/media/media_files/2025/10/26/rohit_kohli_aus-2025-10-26-09-16-55.jpg)
ಬರೋಡಾದಲ್ಲಿ ಕೊಹ್ಲಿ ಶತಕ ಮಿಸ್ ಆಯ್ತು. ರಾಜ್​ಕೋಟ್​​ನಲ್ಲಿ ಕೊಹ್ಲಿ ನಿರೀಕ್ಷೆಯನ್ನ ಹುಸಿಮಾಡಿದ್ರು. ವಿರಾಟ್ ಇಂದೋರ್​ನಲ್ಲಿ ಅಬ್ಬರಿಸಲೇಬೇಕು. ಕಿವೀಸ್ ಬೌಲರ್​ಗಳನ್ನ ಬೇಟೆಯಾಡಿ ರನ್​​​​​ ದಾಖಲಿಸಬೇಕು. ಐಪಿಎಲ್​ಗೂ ಮುನ್ನ ಕೊಹ್ಲಿಯದ್ದು ಇದೇ ಕೊನೆಯ ಏಕದಿನ ಪಂದ್ಯವಾಗಿದೆ. ಹಾಗಾಗಿ ವಿರಾಟ್ ಶತಕ ಸಿಡಿಸಿ ಕಾನ್ಫಿಡೆನ್ಸ್​ನಿಂದ ಸರಣಿಗೆ ಸೈನ್ ಆಫ್ ಮಾಡಬೇಕಿದೆ.
ಕೊಹ್ಲಿ ಎಷ್ಟೇ ಶತಕಗಳನ್ನ ಸಿಡಿಸಿದ್ರೂ ಅಭಿಮಾನಿಗಳಿಗೆ ಸಮಾಧಾನವಿಲ್ಲ. ಕೊಹ್ಲಿ ಆಡೋ ಪ್ರತಿ ಪಂದ್ಯದಲ್ಲೂ ಅಭಿಮಾನಿಗಳು ಶತಕ ನಿರೀಕ್ಷಿಸುತ್ತಾರೆ. ಮತ್ತೊಂದೆಡೆ ವಿರಾಟ್​​ಗೂ ಅಭಿಮಾನಿಗಳಿಗೆ ನಿರಾಸೆ ಮಾಡೋ ಮನಸ್ಸಿಲ್ಲ. ಹಾಗಾಗಿ ಕೊನೆಯ ಪಂದ್ಯದಲ್ಲಿ ಶತಕ ಸಿಡಿಸಲೇಬೇಕು. ಸೂಪರ್ ಸಂಡೇಯಂದು ಅಭಿಮಾನಿಗಳಿಗೆ ಸೂಪರ್ ಉಡುಗೊರೆ ನೀಡಬೇಕು ಅನ್ನೋ ಲೆಕ್ಕಾಚಾರದಲ್ಲಿದ್ದಾರೆ.
ವಿರಾಟ್ ಇಂದೋರ್ ಚಾಲೆಂಜ್ ಗೆಲ್ಲಲಿ. ಟೀಮ್ ಇಂಡಿಯಾಕ್ಕೆ ಸರಣಿ ಗೆಲ್ಲಿಸಿಕೊಡಲಿ. ಹಾಗೆ ಕ್ರಿಕೆಟ್ ಅಭಿಮಾನಿಗಳ ನಿರೀಕ್ಷೆ ಉಳಿಸಿಕೊಳ್ಳಲಿ ಅನ್ನೋದೇ ಎಲ್ಲರ ಆಶಯ.
ಇದನ್ನೂ ಓದಿ: ನಾರ್ವೆಯಲ್ಲಿ ಹುಟ್ಟಿದ ಪ್ರೀತಿ ವಿಶಾಖಪಟ್ಟಣದಲ್ಲಿ ಒಂದಾಯಿತು..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us