ಹೆಂಡ್ತಿಯನ್ನೇ ಅಕ್ಕ ಎಂದು ಪರಿಚಯಿಸಿ ಯುವತಿಗೆ ಭಾರೀ ವಂಚನೆ.. ಕೋಟಿ ಕೋಟಿ ಹಣ ನುಂಗಿದ ಆರೋಪ

ಹೆಂಡತಿಯನ್ನೇ ಅಕ್ಕ ಎಂದು ಪರಿಚಯಿಸಿ ಮತ್ತೊಬ್ಬ ಯುವತಿಗೆ ಮದುವೆ ಹೆಸರಲ್ಲಿ ಗಾಳ ಕೋಟಿ ಕೋಟಿ ರೂಪಾಯಿ ವಂಚಿಸಿದ ಆರೋಪ ಕೇಳಿಬಂದಿದೆ. ಇಡಿ ಕುಟುಂಬದವರಿಂದಲೇ ವಂಚನೆ ಆಗಿದೆ ಎಂದು ಸಂತ್ರಸ್ತ ಯುವತಿ ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾಳೆ.

author-image
Ganesh Kerekuli
Bengaluru cheating
Advertisment

ಬೆಂಗಳೂರು: ಹೆಂಡತಿಯನ್ನೇ ಅಕ್ಕ ಎಂದು ಪರಿಚಯಿಸಿ ಮತ್ತೊಬ್ಬ ಯುವತಿಗೆ ಮದುವೆ ಹೆಸರಲ್ಲಿ ಗಾಳ ಕೋಟಿ ಕೋಟಿ ರೂಪಾಯಿ ವಂಚಿಸಿದ ಆರೋಪ ಕೇಳಿಬಂದಿದೆ. 

ಇಡಿ ಕುಟುಂಬದವರಿಂದಲೇ ವಂಚನೆ  ಆಗಿದೆ ಎಂದು ಸಂತ್ರಸ್ತ ಯುವತಿ ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾಳೆ. ಮ್ಯಾಟ್ರಿಮೋನಿಯಲ್ಲಿ ವಿಜಯ್ ರಾಜ್ ಗೌಡ ಪರಿಚಯವಾಗಿದ್ದ. 2024 ಮಾರ್ಚ್​ನಲ್ಲಿ ಇಬ್ಬರೂ ಪರಿಚಯವಾಗಿದ್ದರು. ಈ ವೇಳೆ ತಾನು ದೊಡ್ಡ ಉದ್ಯಮಿ, 715 ಕೋಟಿ ಆಸ್ತಿ ಇದೆ ಎಂದು ನಂಬಿಸಿದ್ದ. ನಿನ್ನನ್ನೇ ನಾನು ಮದುವೆ ಆಗೋದು ಎಂದಿದ್ದ. ಅಂತೆಯೇ ಮನೆಯವರಿಗೂ ನನ್ನನ್ನು ಪರಿಚಯ ಮಾಡಿಸಿದ್ದ. ಕೆಂಗೇರಿ ಬಳಿ ನನ್ನನ್ನು ಕರೆಸಿ ಪರಿಚಯ ಮಾಡಿಕೊಟ್ಟಿದ್ದ. ಅಲ್ಲದೇ ಸ್ವಂತ ಹೆಂಡತಿಯನ್ನ ತನ್ನ ಅಕ್ಕ ಎಂದು ಪರಿಚಯಿಸಿದ್ದ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ.

ಪರಿಚಯ ಮಾಡಿದ ಬಳಿಕ ಏನು ಮಾಡಿದ..?

ಯುವತಿ ಮಾಡಿದ ಆರೋಪದ ಪ್ರಕಾರ, ಆತ ಮನೆಯವರಿಗೆ ಆಕೆಯನ್ನು ಪರಿಚಯ ಮಾಡಿಕೊಟ್ಟ ಬಳಿಕ ಇಬ್ಬರ ಮಧ್ಯೆ ಮಾತುಕತೆಗಳು ನಡೆದಿವೆ. ಮದುವೆ, ಬ್ಯುಸಿನೆಸ್​ ಎಲ್ಲ ವಿಚಾರಗಳ ಬಗ್ಗೆಯೂ ಮುಕ್ತವಾಗಿ ಮಾತನ್ನಾಡಿದ್ದಾರೆ. ನಂತರ ಬ್ಯುಸಿನೆಸ್ ಮಾಡುವ ಬಗ್ಗೆ ಪ್ರಸ್ತಾಪ ಮಾಡಿದ್ದಾನಂತೆ. 

ಇದನ್ನೂ ಓದಿ: ಧ್ರುವಂತ್​ಗೆ ‘ಸೀಸನ್ ಚಪ್ಪಾಳೆ’ ನೀಡಿದ್ಕೆ ಭಾರೀ ಟೀಕೆ.. ಖಡಕ್ ಉತ್ತರ ಕೊಟ್ಟ ಸುದೀಪ್..!

ಈ ವೇಳೆ ನಮ್ಮ ಆಸ್ತಿ ಸಂಬಂಧ ಇಡಿ (ಜಾರಿ ನಿರ್ದೇಶನಾಲಯ)ದಲ್ಲಿ ಕೇಸ್ ದಾಖಲಾಗಿದೆ. ಅಕೌಂಟ್ ಪ್ರಾಬ್ಲಂ ಆಗಿದೆ. ಅದಕ್ಕೆ ಸಂಬಂಧಿಸಿದ ಕೆಲವು ದಾಖಲೆಗಳು, ಕೋರ್ಟ್ ಪ್ರತಿಗಳನ್ನ ತೋರಿಸಿದ್ದ. ಹಣದ ಅವಶ್ಯಕತೆ ಇದೆ ಎಂದು 15 ಸಾವಿರ ಹಣ ಪಡೆದಿದ್ದ. ನಂತರ ಒಟ್ಟಿಗೆ ಬ್ಯುಸಿನೆಸ್ ಮಾಡೋಣ ಎಂದು ಯುವತಿ ಹೆಸರಲ್ಲಿ ಲೋನ್ ಮಾಡಿಸಿದ್ದನಂತೆ. ಜೊತೆಗೆ ಆ ಯುವತಿ ಸ್ನೇಹಿತರ ಬಳಿಯೂ ಸಾಲ ಪಡೆದಿದ್ದ ಎನ್ನಲಾಗಿದೆ. 

ಸಾಲ ಪಡೆಯುವಾಗ ಮದುವೆಗೆ ಹೆಣ್ಣು ನೋಡಲು ಬರುತ್ತೇವೆ ಎಂದು ಕಥೆ ಕಟ್ಟಿದ್ದ. ಪುನಃ ಯುವತಿ ಸ್ನೇಹಿತರಿಗೆ ಬ್ಯುಸಿನೆಸ್ ಮಾಡಲು ಪ್ರೇರೇಪಿಸಿ ಲಕ್ಷ ಲಕ್ಷ ಸಾಲ ಪಡೆದಿದ್ದ. ಹೀಗೆ ಹಂತಹಂತವಾಗಿ 1.75 ಕೋಟಿ ಹಣ ಪಡೆದಿರುವ ಆರೋಪ ಇದೆ. ಯುವತಿ ಸಂಬಂಧಿಗಳು, ಸ್ನೇಹಿತರಿಂದ ಲಕ್ಷ ಲಕ್ಷ ಹಣವನ್ನು ಪಡೆದುಕೊಂಡು ಮೋಸ ಮಾಡಿದ್ದಾನೆ ಎನ್ನಲಾಗಿದೆ. 

ಇದನ್ನೂ ಓದಿ:  13 ವರ್ಷದ ಹುಡುಗನ 23 ವಯಸ್ಸಿನ ಶಿಕ್ಷಕಿ ಪರಾರಿ.. ಆಕೆ ಈಗ ಗರ್ಭಿಣಿ..!

ಇದರಿಂದ ಅನುಮಾನಗೊಂಡ ಕೆಲವರು ಕೇಳಿದಾಗ ಬ್ಯಾಂಕ್ ಖಾತೆಗಳು ಫ್ರೀಜ್ ಆಗಿವೆ. ಹೈಕೋರ್ಟ್, ಸುಪ್ರೀಂ ಕೋರ್ಟ್​ನಲ್ಲಿ ಕೇಸ್ ಇದೆ ಎಂದು ನಂಬಿಸಿದ್ದ. ಒಮ್ಮೆ 22 ಲಕ್ಷ ಹಣ ವಾಪಸ್ ಕೊಟ್ಟು ಉಳಿದ ಹಣ ನೀಡಲು ಹಿಂದೇಟು ಹಾಕಿದ್ದಾನೆ. ಇನ್ನು ಹಣ ಕೇಳಿದ ಯುವತಿ ಹಾಗೂ ಸ್ನೇಹಿತರಿಗೆ ಬೆದರಿಕೆ ಕೂಡ ಹಾಕಿದ್ದಾನೆ ಎಂಬ ಆರೋಪವಿದೆ. 

ಹಣ ವಾಪಸ್ ಕೇಳಲು ಹೋದಾಗ ಈತನ ಅಸಲಿ ಸಿಕ್ರೇಟ್ ಬಯಲಾಗಿದೆ. ಮದುವೆಯಾಗಿ ಮಗು ಇದ್ದರೂ ಯುವತಿಗೆ ಮದುವೆ ಆಮಿಷ ಒಡ್ಡಿದ್ದಾನೆ. ಮನೆಯವರ ಪರಿಚಯದ ವೇಳೆ ಹೆಂಡತಿಯನ್ನೆ ಅಕ್ಕ ಎಂದು ನಂಬಿಸಿದ್ದ. ಈಗ ನನಗೆ ಮೋಸ ಹೋಗಿರೋದು ಗೊತ್ತಾಗಿದೆ ಎಂದು ಆರೋಪಿಸಿದ್ದಾಳೆ. ವಿಜಯ್ ರಾಜ್ ಗೌಡ, ಬೊರೇಗೌಡ, ಸೌಮ್ಯ ವಿರುದ್ಧ ಕೇಸ್ ವೈಟ್ ಫೀಲ್ಡ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದೀಗ ಪ್ರಕರಣವು ಕೆಂಗೇರಿ ಪೊಲೀಸ್ ಠಾಣೆಗೆ ವರ್ಗಾವಣೆ ಆಗಿದೆ. 

ಇದನ್ನೂ ಓದಿ: ‘ಜೈ ಮಹಾಕಾಲ್’ ಕಿಚ್ಚನ ಎದುರು ಧ್ರುವಂತ್ ಬಿಚ್ಚಿಟ್ಟ ಕನಸು ಏನು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bengaluru News
Advertisment