/newsfirstlive-kannada/media/media_files/2026/01/18/bigg-boss-kannada-dhruvanth-2026-01-18-13-19-38.jpg)
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಮಧ್ಯ ವಾರದಲ್ಲಿ ಧ್ರುವಂತ್ ಎಲಿಮಿನೇಟ್ ಆದರು. ಮನೆಯವರ ಜೊತೆ ಮಾತನಾಡಲು ಅವರಿಗೆ ಅವಕಾಶ ಸಿಕ್ಕಿರಲಿಲ್ಲ ಜೊತೆಗೆ ಕಿಚ್ಚ ಸುದೀಪ್ ಜೊತೆ ವೇದಿಕೆ ಮೇಲೆ ಮಾತನ್ನಾಡಲು ಆಗಿರಲಿಲ್ಲ. ನಿನ್ನೆಯ ಎಪಿಸೋಡ್​ನಲ್ಲಿ ಸುದೀಪ್ ಅವರನ್ನ ವೇದಿಕೆಗೆ ಕರೆದು ಮಾತನ್ನಾಡಿಸಿದರು.
ಸುದೀಪ್ ಎದುರು ಏನಂದ್ರು ಧ್ರುವ್..?
ಇಲ್ಲಿಂದ ಹೊರ ಹೋಗುತ್ತಿದ್ದಂತೆ ಗಾಡಿನ ಚೇಸ್ ಮಾಡಿಕೊಂಡು ಬಂದರು. ಇದೊಂದು ಬ್ಯೂಟಿಫುಲ್ ಅನುಭವ. 10 ವರ್ಷದ ತಪಸ್ಸು. ನಾಲ್ಕು ತಿಂಗಳಲ್ಲಿ ಸಾಕಷ್ಟು ಸಿಕ್ಕಿತು. ಒಳಗೆ ಕಟಿಂಗ್ ಮಾಡಬೇಕು ಎಂದುಕೊಂಡಿದ್ದೆ ಆಗಿಲ್ಲ, ಹೀಗಾಗಿ ಹೊರಗೆ ಈ ಹೇರ್​ಸ್ಟೈಲ್ ಮಾಡಿಸಿದೆ ಎಂದಿದ್ದಾರೆ.
ಇದನ್ನೂ ಓದಿ: 13 ವರ್ಷದ ಹುಡುಗನ 23 ವಯಸ್ಸಿನ ಶಿಕ್ಷಕಿ ಪರಾರಿ.. ಆಕೆ ಈಗ ಗರ್ಭಿಣಿ..!
/filters:format(webp)/newsfirstlive-kannada/media/media_files/2026/01/18/bigg-boss-kannada-kiccha-sudeep-1-2026-01-18-12-48-21.jpg)
ನಿಜ ಹೇಳಬೇಕು ಅಂದ್ರೆ ಕಪ್ ಗೆಲ್ಲೋದಲ್ಲ. ಒಂದೊಂದು ಸಲ, ಇಡೀ ಗೇಮ್​ ಶೋನ ವಿನ್ ಆಗೋದು. ನಾನು ಅದನ್ನು ವಿನ್ ಆಗಿದ್ದೇನೆ. ಬಿಗ್​ ಬಾಸ್​ಗೆ ಬರುವಾಗ ನಾನು ಚಿಕ್ಕ ನಿರೀಕ್ಷೆ ಇಟ್ಕೊಂಡು ಬಂದಿದ್ದೆ. ಆದರೆ ಹೊರಗಡೆ ಜನರು ಅದನ್ನು ತುಂಬಾ ದೊಡ್ಡದು ಮಾಡಿಟ್ಟಿದ್ದಾರೆ. ನನಗೆ ಅದು ಗೊತ್ತೇ ಇರಲಿಲ್ಲ.
ನೀವು ಚಪ್ಪಾಳೆ ಕೊಟ್ಟ ದಿನವೇ ನಾನು ವಿನ್ ಆಗಿ ಹೋಗಿದೆ. ನಾನು ಅವತ್ತೇ ಹೇಳಿದೆ. ಜನ ನನ್ನನ್ನ ಇಷ್ಟು ಇಷ್ಟ ಪಡ್ತಾರೆ ಅಂತಾ ನಾನು ಅಂದುಕೊಂಡೇ ಇರಲಿಲ್ಲ. ನನ್ನನ್ನು ನೋಡ್ತಿದ್ದಂತೆಯೇ ಎಲ್ಲರೂ ಜೈ ಮಹಾಕಾಲ್ ಎನ್ನುತ್ತಾರೆ. ಜನರ ಪ್ರತಿಕ್ರಿಯೆ ಬಗ್ಗೆ ನನಗೆ ಸಂತೋಷ ಇದೆ. ಜೈ ಮಹಾಕಾಲ್​​ನ ಬ್ರ್ಯಾಂಡ್ ಮಾಡಿದೀರಾ. ನಾನು ಒಳ್ಳೆಯ ಫಿಲ್ಮ್​​ ಮೇಕರ್ ಆಗಬೇಕು. ಸಿನಿಮಾ ರಂಗದಲ್ಲಿ ಮತ್ತಷ್ಟು ಕೆಲಸ ಮಾಡಬೇಕು ಎಂದಿದ್ದಾರೆ.
ಇದನ್ನೂ ಓದಿ: ಧ್ರುವಂತ್​ಗೆ ‘ಸೀಸನ್ ಚಪ್ಪಾಳೆ’ ನೀಡಿದ್ಕೆ ಭಾರೀ ಟೀಕೆ.. ಖಡಕ್ ಉತ್ತರ ಕೊಟ್ಟ ಸುದೀಪ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us