/newsfirstlive-kannada/media/media_files/2026/01/18/bigg-boss-kannada-kiccha-sudeep-1-2026-01-18-12-48-21.jpg)
ಬಿಗ್​ ಬಾಸ್​ ಸೀಸನ್​ 12ಕ್ಕೆ ಇವತ್ತು ತೆರೆ ಬೀಳಲಿದೆ. ಇವತ್ತು ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಈ ಮಧ್ಯೆ ಕಳೆದ ಒಂದು ವಾರದಿಂದ ಭಾರೀ ಚರ್ಚೆಯಲ್ಲಿದ್ದ ಸೀಸನ್ ಚಪ್ಪಾಳೆಗೆ ಕಿಚ್ಚ ಸುದೀಪ್ ಸ್ಪಷ್ಟನೆ ಕೊಟ್ಟಿದ್ದಾರೆ.
ಕಿಚ್ಚ ಸುದೀಪ್ ಕಳೆದ ವಾರ ಧ್ರುವಂತ್​​ಗೆ ಸೀಸನ್ ಚಪ್ಪಾಳೆ ಕೊಟ್ಟಿದ್ದರು. ಈ ವಿಷಯದ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗಳು ನಡೆದಿದ್ದವು. ಕಿಚ್ಚನ ನಿರ್ಧಾರದ ಪರ, ವಿರೋಧಗಳ ಬಗ್ಗೆ ಸಾಕಷ್ಟು ಚರ್ಚೆ ಆಗಿತ್ತು. ನಿನ್ನೆಯ ಎಪಿಸೋಡ್​​ನಲ್ಲಿ ಸುದೀಪ್ ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: 13 ವರ್ಷದ ಹುಡುಗನ 23 ವಯಸ್ಸಿನ ಶಿಕ್ಷಕಿ ಪರಾರಿ.. ಆಕೆ ಈಗ ಗರ್ಭಿಣಿ..!
ಕಿಚ್ಚನ ಚಪ್ಪಾಳೆ ನನ್ನ ಅನಿಸಿಕೆ. ಯಾರು ಅರ್ಹರೋ ಅವರನ್ನು ಹುರಿದುಂಬಿಸಬೇಕು ಎಂದು ಶಾಲೆಯಲ್ಲಿ ಟೀಚರ್ ಹೇಳಿಕೊಟ್ಟಿದ್ದರು. ಬಿಗ್ ಬಾಸ್ ಒಬ್ಬ ವ್ಯಕ್ತಿ ಇಂದ ಅಲ್ಲ, ಒಬ್ಬ ಸುದೀಪ್ ಇಂದ ಅಲ್ಲ. ಬಿಗ್ ಬಾಸ್ ಎಲ್ಲರ ಕೊಡುಗೆ. ಪ್ರತಿಯೊಬ್ಬರೂ ಇದ್ದರೆ ಮಾತ್ರ ಬಿಗ್ ಬಾಸ್. ಅವರು ಗೆಲ್ಲದೆ ಇರಬಹುದು. ಬಿಗ್ ಬಾಸ್ ಮನೆಗೆ ಅವರ ಕೊಡುಗೆ ಇದೆ ಎಂಬುದನ್ನು ಒಪ್ಪಲೇಬೇಕು ಎಂದು ಸುದೀಪ್ ಹೇಳಿದ್ದಾರೆ.
ಶೋ ನಡೆಸಿಕೊಡೋ ನಮಗೆ ಯಾರು ಹೊರ ಹೋಗ್ತಾರೆ ಎಂಬ ವಿಷಯ ಗೊತ್ತಿರೋದಿಲ್ವಾ? ಹಾಗಿದ್ರೂ ಕೊಟ್ಟಿದ್ದೇವೆ ಎಂದರೆ ಅದಕ್ಕೆ ಅರ್ಥ ಇದೆ. ಗೆಲ್ಲುವವರು ಯಾರೇ ಇರಬಹುದು. ಎಲ್ಲರ ಕಾಂಟ್ರಿಬ್ಯೂಷನ್ ಇದೆ ಎಂದಾಗ ನ್ಯಾಯವಾಗಿ ಮನಸ್ಫೂರ್ವಕವಾಗಿ ಧ್ರುವಂತ್​​ಗೆ ಕೊಟ್ಟೆ. ಚಪ್ಪಾಳೆ ವಿಷಯದಲ್ಲಿ ಜೀವನ್ನೇ ಜಾಲಾಡಿಬಿಟ್ರಲ್ಲ. ಕಿಚ್ಚನ ಚಪ್ಪಾಳೆಯಲ್ಲಿ ತಲೆಕೆಡಿಸಿಕೊಳ್ಳೋಬೇಡಿ. ನಮ್ಮದು ಉದ್ಧಾರ ಮಾಡೋ ಚಪ್ಪಾಳೆ, ಹೊರಗೆ ತಟ್ಟುತ್ತಾ ಇರೋದು ಹಾಳು ಮಾಡೋ ಚಪ್ಪಾಳೆ. ನಿಮ್ಮ ಜೀವನ ಮೇಲೆ ಗಮನ ಹರಿಸಿ. ಕಿಚ್ಚ ಚಪ್ಪಾಳೆ ಮೇಲೆ ಅಲ್ಲ ಎಂದಿದ್ದಾರೆ.
ಇದನ್ನೂ ಓದಿ: ಇವತ್ತು ರೋಹಿತ್-ಕೊಹ್ಲಿ ಫ್ಯಾನ್ಸ್​ಗೆ ಸ್ಪೆಷಲ್ ಡೇ.. ವರ್ಷದ FIRST HALF ಮುಗಿಸಿದ ದಿಗ್ಗಜರು..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us