Bigg Boss Finale: ಅಶ್ವಿನಿ ಗೌಡಗೆ ಬಿಗ್‌ ಶಾಕ್..‌ ಮೂರನೇ ಸ್ಥಾನಕ್ಕೆ‌ ಬಿಗ್‌ ಬಾಸ್ ಜರ್ನಿ ಎಂಡ್..!

ಅಶ್ವಿನಿ ಗೌಡ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟಿ, ನಿರ್ಮಾಪಕಿ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಪ್ರಮುಖ ಕಾರ್ಯದರ್ಶಿ. ಇವರು ಕನ್ನಡಪರ ಹೋರಾಟಗಳಿಂದ ಗುರುತಿಸಿಕೊಂಡಿದ್ದಾರೆ. ಇದೀಗ ಅವರ ಬದುಕಿಗೆ ಬಿಗ್​ ಬಾಸ್​ ಹೊಸ ಆಯಮವನ್ನೇ ಕೊಟ್ಟಿದೆ.

author-image
Ganesh Kerekuli
Ashwini Gowda (11)
Advertisment

ಅಶ್ವಿನಿ ಗೌಡ ಅವರು ಬಿಗ್​ ಬಾಸ್​ ಸೀಸನ್​ 12ರ ಸೆಕೆಂಡ್ ರನ್ನರ್ ಅಪ್​ ಆಗಿ ಹೊರ ಹೊಮ್ಮಿದ್ದಾರೆ. ಬಿಗ್​ ಬಾಸ್​ ಫಿನಾಲೆ ಅದ್ದೂರಿಯಾಗಿ ನಡೆದಿದ್ದು, ಗಿಲ್ಲಿ ನಟ ವಿನ್ನರ್‌ ಆಗಿದ್ದಾರೆ. ರಕ್ಷಿತಾ ಶೆಟ್ಟಿ ರನ್ನರ್‌ ಅಪ್‌ ಆದ್ರೆ, ಅಶ್ವಿನಿ ಗೌಡ ಅವರು ಸೆಕೆಂಡರ್‌ ರನ್ನರ್‌ ಅಪ್‌ ಆಗಿದ್ದಾರೆ. 

ಇದನ್ನೂ ಓದಿ:  ಗಿಲ್ಲಿ ನಟ ಬಿಗ್​ ಬಾಸ್​ ಗೆದ್ದರೆ 20 ಲಕ್ಷ ರೂಪಾಯಿ ಕೊಡ್ತೀನಿ -ಶರವಣ ಘೋಷಣೆ

Ashwini Gowda (10)

ಅಶ್ವಿನಿ ಗೌಡ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟಿ, ನಿರ್ಮಾಪಕಿ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಪ್ರಮುಖ ಕಾರ್ಯದರ್ಶಿ. ಇವರು ಕನ್ನಡಪರ ಹೋರಾಟಗಳಿಂದ ಗುರುತಿಸಿಕೊಂಡಿದ್ದಾರೆ. ಇದೀಗ ಅವರ ಬದುಕಿಗೆ ಬಿಗ್​ ಬಾಸ್​ ಹೊಸ ಆಯಮವನ್ನೇ ಕೊಟ್ಟಿದೆ.

ಕನ್ನಡ ಬಿಗ್​ ಬಾಸ್​ ಸೀಸನ್-12 ರ ಅಂತಿಮ 6 ಸ್ಪರ್ಧಿಗಳ ಪೈಕಿಯಲ್ಲಿ ಅಶ್ವಿನಿ ಗೌಡ ಕೂಡ ಒಬ್ಬರಾಗಿದ್ದರು. ಗಿಲ್ಲಿ ನಟ, ರಕ್ಷಿತಾ ಶೆಟ್ಟಿ, ಅಶ್ವಿನಿ ಗೌಡ, ಮ್ಯೂಟಂಟ್ ರಘು, ಧನುಷ್ ಗೌಡ ಹಾಗೂ ಕಾವ್ಯ ಶೈವ ಫೈನಲಿಸ್ಟ್ ಗಳಾಗಿದ್ದರು. ಇದೀಗ ಧನುಷ್ 6ನೇ ಸ್ಥಾನ ಪಡೆದುಕೊಂಡ್ರೆ ರಘು ಅವರು ಐದನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ. ಇದೀಗ ಕಾವ್ಯ ಅವರು ನಾಲ್ಕನೇ ಸ್ಥಾನ ಪಡೆದಿದ್ದಾರೆ. ಅಶ್ವಿನಿ ಗೌಡ ಮೂರನೇ ಸ್ಥಾನ ಪಡೆದರು.      

ಟಿವಿ ವಾಹಿನಿಗಳ ಅತಿ ದೊಡ್ಡ ರಿಯಾಲಿಟಿ ಶೋಗಳಲ್ಲಿ ಬಿಗ್​ ಬಾಸ್​ಗೆ ಭಾರೀ ಜನಪ್ರಿಯತೆ ಇದೆ. ದೇಶದಲ್ಲಿ ಬಿಗ್ ಬಾಸ್ ಮೊದಲು ಆರಂಭವಾಗಿದ್ದು, ಹಿಂದಿಯಲ್ಲಿ. ಆ ಬಳಿಕ ಕನ್ನಡದಲ್ಲಿ ಬಿಗ್ ಬಾಸ್ ಪ್ರಸಾರ ಆರಂಭಿಸಲಾಯಿತು. ಬಿಗ್​ ಬಾಸ್ ಅಂದ್ರೆ ವ್ಯಕ್ತಿತ್ವದ ಆಟ. ಪ್ರತಿಭೆಯನ್ನು ಶೋಧಿಸುತ್ತ ವ್ಯಕ್ತಿತ್ವವನ್ನು ಅನಾವರಣ ಮಾಡುವ ಕಲೆಗಾರಿಕೆಯೇ ಬಿಗ್​ ಬಾಸ್​ನ ತಾಖತ್ತು. ವ್ಯಕ್ತಿತ್ವದ ಆಟದಲ್ಲಿ ಈ ವರ್ಷ ಒಟ್ಟು 24 ಸ್ಪರ್ಧಿಗಳು ದೊಡ್ಮನೆಗೆ ಎಂಟ್ರಿ ನೀಡಿದ್ದರು. 

ಇದನ್ನೂ ಓದಿ: ಬಿಗ್ ಬಾಸ್​ ಫಿನಾಲೆ.. ಧನುಷ್​ ಗೌಡಗೆ ಆರನೇ ಸ್ಥಾನ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Ashwini Gowda Bigg Boss Bigg boss Bigg Boss Finale
Advertisment