/newsfirstlive-kannada/media/media_files/2026/01/18/dhanush-gowda-1-2026-01-18-19-21-42.jpg)
ಬಿಗ್​ ಬಾಸ್​ ಫಿನಾಲೆ ತಲುಪಿದ್ದ ಧನುಷ್ ಗೌಡ ಅವರಿಗೆ 6ನೇ ಸ್ಥಾನ ಲಭಿಸಿದೆ. ವೀಕ್ಷಕರ ಮತಯುದ್ಧದಲ್ಲಿ ಧನುಷ್​​​ಗೆ ಆರನೇ ಸ್ಥಾನ ಸಿಕ್ಕಿದೆ. ಎವಿಕ್ಷನ್ ಬೆನ್ನಲ್ಲೇ ಸುದೀಪ್ ಅವರು ಧನುಷ್ ಅವರನ್ನು ವೇದಿಕೆಗೆ ಕರೆದಿದ್ದಾರೆ.
ಕನ್ನಡ ಬಿಗ್​ ಬಾಸ್​ ಸೀಸನ್-12 ರ ಅಂತಿಮ 6 ಸ್ಪರ್ಧಿಗಳ ಪೈಕಿಯಲ್ಲಿ ಧನುಷ್ ಕೂಡ ಒಬ್ಬರಾಗಿದ್ದರು. ಗಿಲ್ಲಿ ನಟ, ರಕ್ಷಿತಾ ಶೆಟ್ಟಿ, ಅಶ್ವಿನಿ ಗೌಡ, ಕಾವ್ಯ ಶೈವ, ಮ್ಯೂಟಂಟ್ ರಘು ಕೂಡ ಫೈನಲಿಸ್ಟ್ ಸ್ಪರ್ಧಿಗಳಾಗಿದ್ದರು.
ಇದನ್ನೂ ಓದಿ: ‘ಬಿಗ್ ಬಾಸ್​ಗೆ ಹೋಗೋದು ಬೇಡ ಎಂದಿದ್ದೆ’ ಮೊಮ್ಮಗಳು ರಕ್ಷಿತಾ ಬಗ್ಗೆ ಅಜ್ಜಿ ಹೇಳಿದ್ದೇನು..?
/filters:format(webp)/newsfirstlive-kannada/media/media_files/2025/10/03/dhanush-gowda-big-boss-2025-10-03-14-54-31.jpg)
ಧನುಷ್ ಗೌಡ ಕನ್ನಡ ಕಿರುತೆರೆ ಜನಪ್ರಿಯ ನಟ. ಇವರು ಗೀತಾ ಧಾರಾವಾಹಿಯಲ್ಲಿ ನಾಯಕನಾಗಿ ನಟಿಸುವ ಮೂಲಕ ಕರ್ನಾಟಕದ ಮನೆಮಾತಾಗಿದ್ದಾರೆ. ಮೂಲತಃ ಬೆಂಗಳೂರಿನವರಾದ ಧನುಷ್, ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ. ಧನುಷ್ ಅವರು ತಮ್ಮ ಹಾಗೂ ಮಾವನ ಆಸೆ ಈಡೇರಿಸುವ ಸಲುವಾಗಿ ನಟನಾಗುವ ನಿರ್ಧಾರ ಮಾಡಿದರು. ಇದೀಗ ಬಿಗ್ ಬಾಸ್ ಶೋ ಧನುಷ್ ಅವರನ್ನು ಮತ್ತಷ್ಟು ಮೇಲಕ್ಕೆ ಕೊಂಡೊಯ್ದಿದೆ.
ಟಿವಿ ವಾಹಿನಿಗಳ ಅತಿ ದೊಡ್ಡ ರಿಯಾಲಿಟಿ ಶೋಗಳಲ್ಲಿ ಬಿಗ್​ ಬಾಸ್​ಗೆ ಭಾರೀ ಜನಪ್ರಿಯತೆ ಇದೆ. ದೇಶದಲ್ಲಿ ಬಿಗ್ ಬಾಸ್ ಮೊದಲು ಆರಂಭವಾಗಿದ್ದು, ಹಿಂದಿಯಲ್ಲಿ. ಆ ಬಳಿಕ ಕನ್ನಡದಲ್ಲಿ ಬಿಗ್ ಬಾಸ್ ಪ್ರಸಾರ ಆರಂಭಿಸಲಾಯಿತು. ಬಿಗ್​ ಬಾಸ್ ಅಂದ್ರೆ ವ್ಯಕ್ತಿತ್ವದ ಆಟ. ಪ್ರತಿಭೆಯನ್ನು ಶೋಧಿಸುತ್ತ ವ್ಯಕ್ತಿತ್ವವನ್ನು ಅನಾವರಣ ಮಾಡುವ ಕಲೆಗಾರಿಕೆಯೇ ಬಿಗ್​ ಬಾಸ್​ನ ತಾಖತ್ತು. ವ್ಯಕ್ತಿತ್ವದ ಆಟದಲ್ಲಿ ಈ ವರ್ಷ ಒಟ್ಟು 25 ಸ್ಪರ್ಧಿಗಳು ದೊಡ್ಮನೆಗೆ ಎಂಟ್ರಿ ನೀಡಿದ್ದರು. ಆಟ, ವ್ಯಕ್ತಿತ್ವ ಮತ್ತು ಭಾವನೆ ತುಂಬಿದ್ದ ಬಿಗ್ ಮನೆಯು ಯುದ್ಧ ಭೂಮಿಯಾಗಿ ಅನಾವರಣಗೊಂಡಿತ್ತು.
ಇದನ್ನೂ ಓದಿ:‘ನಾನು ಹಾಡುಗಾರ, ಅವರು..’ ಬಿಗ್ ಬಾಸ್ ಗೆಲ್ಲೋದು ಯಾರೆಂದು ಹೇಳಿದ ಹನುಮಂತು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us