‘ನಾನು ಹಾಡುಗಾರ, ಅವರು..’ ಬಿಗ್ ಬಾಸ್ ಗೆಲ್ಲೋದು ಯಾರೆಂದು ಹೇಳಿದ ಹನುಮಂತು

ಬಿಗ್ ಬಾಸ್ ಸೀಜನ್ 12ರ ವಿನ್ನರ್ ಘೋಷಣೆಗೆ ಕೆಲವೇ ಕೆಲವು ಗಂಟೆಗಳು ಭಾಕಿ ಇದೆ. ಈ ನಡುವೆ ಅಭಿಮಾನಿಗಳಲ್ಲಿ ಯಾರು ಬಿಗ್ ಬಾಸ್ ಗೆಲ್ಲುತ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ. ಈ ಬಗ್ಗೆ ಮಾಜಿ ವಿನ್ನರ್ ಹನುಮಂತು ಲಮಾಣಿ ಮಾತನ್ನಾಡಿದ್ದಾರೆ.

author-image
Ganesh Kerekuli
Hanumanth
Advertisment

ಬಿಗ್ ಬಾಸ್ ಸೀಜನ್ 12ರ ವಿನ್ನರ್ ಘೋಷಣೆಗೆ ಕೆಲವೇ ಕೆಲವು ಗಂಟೆಗಳು ಭಾಕಿ ಇದೆ. ಈ ನಡುವೆ ಅಭಿಮಾನಿಗಳಲ್ಲಿ ಯಾರು ಬಿಗ್ ಬಾಸ್ ಗೆಲ್ಲುತ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ. ಈ ಬಗ್ಗೆ ಮಾಜಿ ವಿನ್ನರ್ ಹನುಮಂತು ಲಮಾಣಿ ಮಾತನ್ನಾಡಿದ್ದಾರೆ. 

ಯಾರು ವಿನ್ನರ್ ಎಂದು ಘೋಷಣೆ ಮಾಡುವಾಗ ಎದೆಯಲ್ಲಿ ಢವಢವ ಅನಿಸುತ್ತದೆ. ಈ ಬಾರಿ ಗಿಲ್ಲಿ ಚೆನ್ನಾಗಿ ಆಟವಾಡಿದ್ದಾರೆ. ಅವರು ಗೆಲ್ಲುವ ವಿಶ್ವಾಸ ನನಗೆ ಇದೆ. ಬಿಗ್ ಬಾಸ್ ಮನೆಯಲ್ಲಿ ಯಾವುದೇ ಮೊಸ ಇಲ್ಲ. ಮೋಸ ನಡೆಯೋದಾಗಿದ್ರೆ ಕಳೆದ ಬಾರಿ ನಾನು ಗೆಲ್ಲುತ್ತಿರಲಿಲ್ಲ. 

ಇದನ್ನೂ ಓದಿ: 13 ವರ್ಷದ ಹುಡುಗನ 23 ವಯಸ್ಸಿನ ಶಿಕ್ಷಕಿ ಪರಾರಿ.. ಆಕೆ ಈಗ ಗರ್ಭಿಣಿ..!

Gilli Nata

ಈ ಬಾರಿ ಅತೀಹೆಚ್ಚು ವೋಟಿಂಗ್ ಆಗಿದೆ. ಅತೀ ಹೆಚ್ಚು ವೋಟು ಗಿಲ್ಲಿ ನಟ ತೆಗೆದುಕೊಂಡಿದ್ದಾರೆ. ಈ ಬಾರಿ ಗಿಲ್ಲಿ ಅಣ್ಣ ಗೆಲ್ತಾನೆ. ಗಿಲ್ಲಿದು ನಂದು ಒಳ್ಳೆಯ ಸ್ನೇಹ ಇದೆ. ಅವರು ಮಾತುಗಾರರು, ನಾನು ಹಾಡುಗಾರ ಎಂದು ಹನುಮಂತು ಹೇಳಿದ್ದಾರೆ. 

ಜಾಲಿವುಡ್ ಮುಂಭಾಗ ಗಿಲ್ಲಿ ಅಭಿಮಾನಿಗಳು

ಜಾಲಿವುಡ್ ಮುಂಭಾಗ ಗಿಲ್ಲಿ ಅಭಿಮಾನಿಗಳು ಸೇರಿದ್ದಾರೆ. ಗಿಲ್ಲಿ ಡೈಲಾಗ್ ಹೊಡೆದು ಶಿಳ್ಳೆ ಹಾಕುತ್ತಿದ್ದಾರೆ. ಕಾರ್ ಬಾನಟ್ ಮೇಲೆ ಗಿಲ್ಲಿ ಫೋಟೋ ಹಾಕಿಸಿ ನೂರಾರು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಬೇರೆ ಬೇರೆ ಜಿಲ್ಲೆಗಳಿಂದ ಬಿಗ್ ಬಾಸ್ ಮನೆ ಬಳಿ ಅಭಿಮಾನಿಗಳು ಬರುತ್ತಿದ್ದಾರೆ. 

ಇದನ್ನೂ ಓದಿ: ಬಾಂಗ್ಲಾದೇಶ ಹೊಸ ನಾಟಕ.. ಐಸಿಸಿ ಮುಂದೆ ವಿಚಿತ್ರ ಬೇಡಿಕೆ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bigg Boss Kannada 12 Hanumantha Lamani Gilli Nata Bigg boss Bigg Boss winner Bigg Boss Finale
Advertisment