/newsfirstlive-kannada/media/media_files/2026/01/04/mustafizur-rahman-2026-01-04-15-56-28.jpg)
ಮುಂದಿನ ತಿಂಗಳು ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಐಸಿಸಿ T20 ವಿಶ್ವಕಪ್-2026 ಆಯೋಜಿಸಲಿವೆ. ಈ ಟೂರ್ನಿ ಆರಂಭಕ್ಕೂ ಮೊದಲೇ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ವಿವಾದ ಹುಟ್ಟುಹಾಕಿದೆ. ಭಾರತದಲ್ಲಿ ತನ್ನ ಪಂದ್ಯಗಳನ್ನು ನಡೆಸದಂತೆ ಮತ್ತು ಅವುಗಳನ್ನು ಐರ್ಲೆಂಡ್ ಗುಂಪಿಗೆ ಸ್ಥಳಾಂತರಿಸುವಂತೆ ಐಸಿಸಿಗೆ ಮುಂದೆ ವಿಚಿತ್ರ ಪ್ರಸ್ತಾಪ ಇಟ್ಟಿದೆ.
ಮುಸ್ತಾಫಿಜುರ್ ರೆಹಮಾನ್​​ನನ್ನು ಐಪಿಎಲ್​ನಿಂದ ಬ್ಯಾನ್ ಮಾಡಿದ ಬೆನ್ನಲ್ಲೇ ಬಿಸಿಬಿ ವಿಚಿತ್ರವಾಗಿ ವರ್ತಿಸುತ್ತಿದೆ. ವೇಳಾಪಟ್ಟಿಯನ್ನು ಅಂತಿಮಗೊಳಿಸಲಾಗ್ತಿರೋದ್ರಿಂದ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು 2026ರ ಟಿ20 ವಿಶ್ವಕಪ್ ವೇಳಾಪಟ್ಟಿಯನ್ನು ನಿರ್ವಹಿಸುವ ಬಗ್ಗೆ ಚರ್ಚೆಯ ವಿಷಯವಾಗಿದೆ. ಇತ್ತೀಚೆಗೆ ಢಾಕಾದಲ್ಲಿ ಐಸಿಸಿ ಪ್ರತಿನಿಧಿಗಳೊಂದಿಗಿನ ಸಭೆಯಲ್ಲಿ, ಬಿಸಿಬಿ ಅನಿರೀಕ್ಷಿತ ಪ್ರಸ್ತಾಪವನ್ನು ಮುಂದಿಟ್ಟಿದೆ. ತಮ್ಮ ಎಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲಿ ನಡೆಸಲು ತಮ್ಮ ಗುಂಪಿನಿಂದ ಐರ್ಲೆಂಡ್‌ನ ಗುಂಪಿಗೆ (ಗ್ರೂಪ್ ಸ್ವಾಪ್) ಸ್ಥಳಾಂತರಿಸಬೇಕೆಂದು ವಿನಂತಿಸಿದೆ.
ಇದನ್ನೂ ಓದಿ: 13 ವರ್ಷದ ಹುಡುಗನ 23 ವಯಸ್ಸಿನ ಶಿಕ್ಷಕಿ ಪರಾರಿ.. ಆಕೆ ಈಗ ಗರ್ಭಿಣಿ..!
/filters:format(webp)/newsfirstlive-kannada/media/media_files/2026/01/03/cricketer-mustafizur-rehaman-out-of-ipl-2026-01-03-11-59-33.jpg)
ವಿವಾದ ಏನು?
ಬಾಂಗ್ಲಾದೇಶದ ವೇಗಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡದಿಂದ ಕೈಬಿಟ್ಟಾಗಿನಿಂದ ಬಿಸಿಬಿ ಭಾರತದ ಮೇಲೆ ಕೋಪಗೊಂಡಿದೆ. ರಾಜಕೀಯ ಮತ್ತು ಭದ್ರತಾ ಕಾರಣಗಳನ್ನು ಉಲ್ಲೇಖಿಸಿ ಭಾರತದಲ್ಲಿ ಪಂದ್ಯಗಳನ್ನು ಆಡಲು ಹಿಂಜರಿಯುತ್ತಿದೆ. ವಾಸ್ತವವಾಗಿ, ಬಾಂಗ್ಲಾದೇಶ ಪ್ರಸ್ತುತ ‘ಗ್ರೂಪ್ ಸಿ’ಯಲ್ಲಿದೆ. ಬಾಂಗ್ಲಾ ಪಂದ್ಯಗಳು ಕೋಲ್ಕತ್ತಾ ಮತ್ತು ಮುಂಬೈನಲ್ಲಿ ನಡೆಯಲಿವೆ.
ಬಿಸಿಬಿಯ ಪ್ರಸ್ತಾವನೆ ಹೀಗಿದೆ
ಐರ್ಲೆಂಡ್ ಪ್ರಸ್ತುತ ‘ಗ್ರೂಪ್ ಬಿ’ಯಲ್ಲಿದೆ. ಈ ಎಲ್ಲಾ ಗುಂಪು ಪಂದ್ಯಗಳು ಶ್ರೀಲಂಕಾದ ಕೊಲಂಬೊ ಮತ್ತು ಕ್ಯಾಂಡಿಯಲ್ಲಿ ನಡೆಯಲಿವೆ. ಬಾಂಗ್ಲಾದೇಶ ಮಂಡಳಿ ಬಯಸಿದಂತೆ ಐರ್ಲೆಂಡ್‌ನೊಂದಿಗೆ ಗುಂಪು ಸ್ವೈಪ್ ನಡೆದರೆ, ಬಾಂಗ್ಲಾದೇಶ ತಂಡ ಭಾರತಕ್ಕೆ ಬರಬೇಕಾಗಿಲ್ಲ. ಹಾಗಿದ್ದೂ ಐರಿಶ್ ಕ್ರಿಕೆಟ್ ಮಂಡಳಿ ಮತ್ತು ಐಸಿಸಿ ಈ ಪ್ರಸ್ತಾವನೆಯನ್ನು ಸ್ವೀಕರಿಸುವ ಸಾಧ್ಯತೆಗಳು ತುಂಬಾ ಕಡಿಮೆ.
ಐಸಿಸಿ ಪ್ರತಿಕ್ರಿಯೆ
ವರದಿಗಳ ಪ್ರಕಾರ, ಐರಿಶ್ ಕ್ರಿಕೆಟ್ ಮಂಡಳಿಗೆ ಐಸಿಸಿಯಿಂದ ಕೆಲವು ಭರವಸೆಗಳು ಬಂದಿವೆ. ಗುಂಪುಗಳನ್ನು ಬದಲಾಯಿಸಲು ಯಾರನ್ನೂ ಒತ್ತಾಯಿಸಲಾಗುವುದಿಲ್ಲ. ಐರ್ಲೆಂಡ್‌ನ ಪಂದ್ಯಗಳು ಈ ಹಿಂದೆ ನಿಗದಿಯಂತೆ ಶ್ರೀಲಂಕಾದಲ್ಲಿ ನಡೆಯಲಿವೆ ಎಂದು ಸ್ಪಷ್ಟಪಡಿಸಲಾಗಿದೆ. ಮೆಗಾ ಟೂರ್ನಮೆಂಟ್‌ನ ಆಯೋಜನೆಯಲ್ಲಿ ಇಂತಹ ಲಾಜಿಸ್ಟಿಕಲ್ ಬದಲಾವಣೆಗಳು ಐಸಿಸಿಗೆ ದೊಡ್ಡ ಸವಾಲಾಗಿದೆ.
ಇದನ್ನೂ ಓದಿ: ಹೆಂಡ್ತಿಯನ್ನೇ ಅಕ್ಕ ಎಂದು ಪರಿಚಯಿಸಿ ಯುವತಿಗೆ ಭಾರೀ ವಂಚನೆ.. ಕೋಟಿ ಕೋಟಿ ಹಣ ನುಂಗಿದ ಆರೋಪ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us