/newsfirstlive-kannada/media/media_files/2026/01/18/rakshitha-grand-mother-2026-01-18-17-29-59.jpg)
ಬಿಗ್​​ ಬಾಸ್​ ಫೈನಲಿಸ್ಟ್ ರಕ್ಷಿತಾ ಶೆಟ್ಟಿ ಅವರ ಅಜ್ಜಿ ರತ್ನ ಫುಲ್ ಖುಷಿಯಾಗಿದ್ದಾರೆ. ತಮ್ಮ ಮುದ್ದಿನ ಮೊಮ್ಮಗಳು ಬಿಗ್ ಬಾಸ್ ಮನೆಯ ಅಂತಿಮ ಹಣಾ ಹಣಿಯಲ್ಲಿ ಇರೋದಕ್ಕೆ ಖುಷಿ ವ್ಯಕ್ತಪಡಿಸಿದ್ದಾರೆ.
ಆಕೆ ಬಿಗ್ ಬಾಸ್ ಮನೆಗೆ ಹೋದಾಗ ಬೇಡ ಎಂದಿದ್ದೆ. ಆದರೆ ಈಗ ಆಕೆಯ ಸಾಧನೆ ನೋಡಿ ಹೆಮ್ಮೆಯಾಗುತ್ತದೆ ಎಂದಿದ್ದಾರೆ. ಇಳಿ ವಯಸ್ಸಿನ ಅಜ್ಜಿಗೆ ರಕ್ಷಿತಾಳೆ ಆಧಾರ. ತನ್ನ ಮೊಮ್ಮಗಳ ಆಟದ ಕುರಿತು ನ್ಯೂಸ್​ಫಸ್ಟ್ ಜೊತೆ ಮಾತನ್ನಾಡಿರುವ ಅವರು, ಅವಳ ಯೂಟ್ಯೂಬ್​​ಗಳನ್ನು ನೋಡಿ ಮೊದಲು ನನಗೆ ಖುಷಿಯಾಗುತ್ತಿರಲಿಲ್ಲ. ಈಗ ನನಗೆ ರಕ್ಷಿತಾ ಬಗ್ಗೆ ಹೆಮ್ಮೆಯಾಗುತ್ತದೆ. ಆಕೆಗೆ ನಿಜವಾಗಿಯೂ ಕನ್ನಡ ಸರಿಯಾಗಿ ಮಾತನಾಡಲು ಬರಲ್ಲ. ಆಕೆ ಮುಂಬೈನಲ್ಲೇ ಹುಟ್ಟಿ ಬೆಳೆದವಳು. ಇತ್ತೀಚೆಗಷ್ಟೇ ಊರಿಗೆ ಬಂದು ಹೋಗುತ್ತಿದ್ದಾಳೆ ಎಂದರು.
ಈಗ ಊರವರೆಲ್ಲ ನನ್ನ ಮೊಮ್ಮಗಳ ಬಗ್ಗೆ ಮಾತನಾಡುತ್ತಾರೆ. ಆಕೆ ಎಲ್ಲೂ ನಾಟಕ ಮಾಡಿಲ್ಲ. ಮನೆಯಲ್ಲಿ ಹೇಗಿರುತ್ತಾಳೋ ಹಾಗೇಯೇ ಇದ್ದಾಳೆ. ಊರಲ್ಲೂ ಅಷ್ಟೇ, ಎಲ್ಲರ ಜೊತೆ ಚೆನ್ನಾಗಿ ಬರೆಯುತ್ತಾಳೆ. ರಕ್ಷಿತಾ ಗೋಸ್ಕರ ನಾನು ಬಿಗ್ ಬಾಸ್ ನೋಡುತ್ತಿದ್ದೇನೆ. ನನ್ನ ಮೊಮ್ಮಗಳು ಗೆದ್ದು ಬರಲಿ ಎಂದು ಹಾರೈಸುತ್ತೇನೆ. ರಕ್ಷಿತಾ ರಘು ಹಾಗೂ ಗಿಲ್ಲಿ ಜೊತೆ ಇದ್ದದ್ದು ಇಷ್ಟ ಆಯಿತು ಎಂದಿದ್ದಾರೆ.
ಬಿಗ್ ಬಾಸ್ ಫೈನಲಿಸ್ಟ್ ಪಟಾಕಿ ರಕ್ಷಿತ ಊರಲ್ಲಿ ಸಂಭ್ರಮದ ವಾತಾವರಣ ಇದೆ. ಉಡುಪಿ ಜಿಲ್ಲೆ ಕಾಪು ತಾಲೂಕಿನ ಹೆಜಮಾಡಿಯ ಕನ್ನಂಗಾರು ಗ್ರಾಮದಲ್ಲಿ ಸಂಭ್ರಮವೋ ಸಂಭ್ರಮ.
ಇದನ್ನೂ ಓದಿ: ‘ನಾನು ಹಾಡುಗಾರ, ಅವರು..’ ಬಿಗ್ ಬಾಸ್ ಗೆಲ್ಲೋದು ಯಾರೆಂದು ಹೇಳಿದ ಹನುಮಂತು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us