/newsfirstlive-kannada/media/media_files/2025/10/01/channai-2025-10-01-07-14-37.jpg)
ಚೆನ್ನೈ: ತಮಿಳುನಾಡಿನಲ್ಲಿ ಕಾಲ್ತುಳಿತ ಸಂಭವಿಸಿದ ಬೆನ್ನಲ್ಲೇ ಮತ್ತೊಂದು ದುರಂತ ಸಂಭವಿಸಿದೆ. ಚೆನ್ನೈನಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು 9 ಜನರು ಜೀವ ಬಿಟ್ಟಿದ್ದಾರೆ. ಈ ಘಟನೆಯು ಎಣ್ಣಾರ್ ಚೆನ್ನೈ ಸಮೀಪದ ತಿರುವಳ್ಳೂರು ಜಿಲ್ಲೆಯ ಮೀಂಜೂರಿನ ಊರನಂಪೆಡು ಗ್ರಾಮದ ಬಳಿಯ ಥರ್ಮಲ್ ಪವರ್ ಸ್ಟೇಷನ್​ನಲ್ಲಿ ನಡೆದಿದೆ.
ಮೃತರು ಅಸ್ಸಾಂ ಮೂಲದವರು ಆಗಿದ್ದು ಅವರನ್ನು ಮುನ್ನಾ ಕೆಂಪರೈ, ಸೊರ್ಬೋಜಿತ್ ಥೌಸೆನ್, ಫೈಬಿಟ್ ಫಾಂಗ್ಲು, ಬಿಡೈಯುಮ್ ಪೋರ್ಬೋಸಾ, ಪಬನ್ ಸೊರೊಂಗ್, ಪ್ರಯಾಂತೊ ಸೊರೊಂಗ್, ಸುಮನ್ ಖಾರಿಕಾಪ್, ದಿಮಾರಾಜ್ ಥೌಸೆನ್, ದೀಪಕ್ ರೈಜಂಗ್ ಎಂದು ಗುರುತಿಸಲಾಗಿದೆ. ಸಾವನ್ನಪ್ಪಿದ ಕಾರ್ಮಿಕರು ಎಲ್ಲ ಅಸ್ಸಾಂ ಮೂಲದವರೇ ಆಗಿದ್ದಾರೆ. ನಿರ್ಮಾಣ ಹಂತದ ಕಟ್ಟಡ ಏಕಾಏಕಿ ಕುಸಿದು ಬಿದ್ದಿದ್ದರಿಂದ ದುರ್ಘಟನೆ ಸಂಭವಿಸಿದೆ. ಈ ದುರಂತಕ್ಕೆ ಕಾರಣ ಏನು ಎಂಬುದು ಪೊಲೀಸರ ತನಿಖೆಯಿಂದ ಗೊತ್ತಾಗಬೇಕಿದೆ.
ಎಣ್ಣೋರ್ ಉಷ್ಣ ವಿದ್ಯುತ್ ಸ್ಥಾವರ ಘಟಕದೊಳಗೆ ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಕುಸಿದು ಸ್ಥಳದಲ್ಲೇ ನಾಲ್ವರು ಬಲಿಯಾಗಿದ್ದರು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗುತ್ತಿತ್ತು. ಈ ವೇಳೆ ಇನ್ನೂ ಐವರು ಜೀವ ಬಿಟ್ಟಿದ್ದಾರೆ. ಸದ್ಯ 9 ಜನರು ಘಟನೆಯಲ್ಲಿ ಪ್ರಾಣ ಬಿಟ್ಟಂತೆ ಆಗಿದೆ. ಆಸ್ಪತ್ರೆಗೆ ದಾಖಲಾದವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಗೆಸ್​ ಮಾಡಿ; ಬಾಹುಬಲಿ, ದಂಗಲ್ ಅಲ್ಲವೇ ಅಲ್ಲ.. 21ನೇ ಶತಮಾನದ ಅತ್ಯಂತ ಜನಪ್ರಿಯ ಸಿನಿಮಾ?
ಈ ಸಂಬಂಧ ಪ್ರಾಧಾನಿ ಮೋದಿಯವರ ಕಚೇರಿ ಪಿಎಂಒ ಆಫ್ ಇಂಡಿಯಾ ಎಕ್ಸ್​ ಖಾತೆ ಮೂಲಕ ಸಂತಾಪ ಸೂಚಿಸಿದೆ. ಇಂತಹ ಕಷ್ಟದ ಸಂದರ್ಭದಲ್ಲಿ ಸಂತ್ರಸ್ತ ಕುಟುಂಬದ ಜೊತೆ ನಾವು ಇರುತ್ತೇವೆ. ಘಟನೆಯಲ್ಲಿ ಜೀವ ಕಳೆದುಕೊಂಡ ವ್ಯಕ್ತಿಗಳ ಪ್ರತಿ ಕುಟುಂಬಕ್ಕೆ ಪಿಎಂಎನ್​​ಆರ್​ಎಫ್​ ಅಡಿ 2 ಲಕ್ಷ ರೂಪಾಯಿಗಳ ಪರಿಹಾರ ನೀಡಲಾಗುವುದು. ಹಾಗೇ ಗಾಯಾಳುಗಳಿಗೆ 50,000 ರೂಪಾಯಿ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.
ಇನ್ನು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್​ ಮಾಡಿದ್ದು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. 9 ಮೃತರಲ್ಲಿ ನಾಲ್ವರು ಕರ್ಬಿ ಅಗಲೊಂಗ್ ಜಿಲ್ಲೆಯವರು ಹಾಗೂ ಐದು ಜನ ಹೊಜೈ ಜಿಲ್ಲೆಯವರು ಆಗಿದ್ದಾರೆ. ತಮಿಳುನಾಡಿನಿಂದ ಮೃತದೇಹಗಳನ್ನು ತರಲು ಅಲ್ಲಿನ ಸರ್ಕಾರದೊಂದಿಗೆ ಮಾತನಾಡಲಾಗುವುದು ಎಂದು ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ