/newsfirstlive-kannada/media/media_files/2025/11/23/money-2025-11-23-16-10-04.jpg)
ಮುಂಬೈನಲ್ಲಿ ಅತಿದೊಡ್ಡ ಡಿಜಿಟಲ್ ಅರೆಸ್ಟ್ ಪ್ರಕರಣ ನಡೆದಿದೆ. ಸೈಬರ್ ಖದೀಮರು 80 ವರ್ಷದ ಮಹಿಳೆಗೆ ಬರೋಬ್ಬರಿ 1.08 ಕೋಟಿ ಪಂಗನಾಮ ಹಾಕಿರುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.
ರಶ್ಮಿ ಶುಕ್ಲಾ ಎಂಬ ಮಹಿಳೆ ಹಾಗೂ ಆಕೆಯ ಗ್ಯಾಂಗ್ ಮೋಸ ಮಾಡುವಲ್ಲಿ ಯಶಸ್ವಿ ಆಗಿದೆ. ಕೇಂದ್ರ ಸೈಬರ್ ಸೆಲ್ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ. ನಾಗ್ಪುರದ ಬ್ಯಾಂಕ್ ಖಾತೆಯಿಂದ 3.5 ಮಿಲಿಯನ್ ವಂಚನೆಯ ಮೊತ್ತವನ್ನು ಪೊಲೀಸರು ಹೋಲ್ಡ್ ಮಾಡಿಸಿದ್ದಾರೆ.
ಹೇಗೆ ನಡೆಯಿತು?
ಸಂತ್ರಸ್ತೆ ಪೊಲೀಸರಿಗೆ ಅಕ್ಟೋಬರ್ 27 ರಂದು ಕರೆ ಬಂದಿರುವುದಾಗಿ ತಿಳಿಸಿದ್ದಾಳೆ. ಕರೆ ಮಾಡಿದ ವ್ಯಕ್ತಿ ತನ್ನನ್ನು ‘ವಿಜಯ್ ಖನ್ನಾ’ ಎಂದು ಪರಿಚಯಿಸಿಕೊಂಡಿದ್ದಾನೆ. ಬಳಿಕ ನಿಮ್ಮ ಆಧಾರ್ ಕಾರ್ಡ್ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಳಸಲಾಗಿದೆ ಎಂದು ನಂಬಿಸಿದ್ದಾನೆ. ಅದಕ್ಕಾಗಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ಬಂದ್ ಮಾಡ್ತಿದ್ದೇವೆ ಎಂದು ಬೆದರಿಸಿದ್ದಾನೆ.
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದರಿಂದ ವೃದ್ಧೆ ಗಾಬರಿಯಾಗಿದ್ದಾಳೆ. ನಂತರ ನೀವು ಮಹಿಳೆ ಆಗಿರೋದ್ರಿಂದ ನಾವು ನಿಮ್ಮನ್ನು ವಿಚಾರಣೆ ಮಾಡಲ್ಲ. ನಮ್ಮ ಹಿರಿಯ ಮಹಿಳಾ ಅಧಿಕಾರಿ ತನಿಖೆ ಮಾಡಲಿದ್ದಾರೆ ಎಂದು ಕರೆ ವರ್ಗಾಯಿಸಿದ್ದಾನೆ. ರಶ್ಮಿ ಶುಕ್ಲಾ ಎಂಬ ಹೆಸರಿನ ಮಹಿಳೆಗೆ ವರ್ಗಾಯಿಸುತ್ತಿದ್ದೇನೆ ಎಂದಿದ್ದಾನೆ. ಅಲ್ಲಿಂದ ವೃದ್ಧೆಯ ಬಳಿ ಹಣ ಪೀಕುವ ಕೆಲಸ ಆಗಿದೆ.
ಫೋನ್ ಕರೆ ವರ್ಗಾವಣೆ ಆಗ್ತಿದ್ದಂತೆಯೇ, ವಂಚಕರು ವೃದ್ಧೆಗೆ ಬೆದರಿಕೆ ಹಾಕಿದ್ದಾರೆ. ನೀವು ಈಗ ಡಿಜಿಟಲ್ ಅರೆಸ್ಟ್ ಆಗಿದ್ದೀರಿ. ತನಿಖೆಗೆ ಸಹಕರಿಸಬೇಕು ಎಂದಿದ್ದಾರೆ. ಅಂತೆಯೇ ಬಂಧನಕ್ಕೆ ಸಂಬಂಧಿಸಿ ನಕಲಿ ವಾರೆಂಟ್ ಕೂಡ ವೃದ್ಧೆಯ ಫೋನ್​​ಗೆ ಕಳುಹಿಸಿದ್ದಾರೆ. ನಿಮ್ಮ ಆಧಾರ್ ಕಾರ್ಡ್​ ದುರ್ಬಳಕೆ ಆಗಿದೆ ಅಂತಾ ಮಾನಸಿಕ ಹಿಂಸೆ ನೀಡಿ ವಿವಿಧ ಖಾತೆಗಳಿಗೆ 1.08 ಕೋಟಿ ಹಣ ವರ್ಗಾಯಿಸಿಕೊಂಡು ಲಪಟಾಯಿಸಿದ್ದಾರೆ.
ಬ್ಯಾಂಕ್ ಖಾತೆ ಖಾಲಿ ಆದಾಗ ಗೊತ್ತಾಗಿದೆ..
ಕೆಲವು ದಿನಗಳ ನಂತರ ಆಕೆಗೆ ಕರೆಗಳು ಬರೋದು ನಿಂತಿದೆ. ಅಷ್ಟರಲ್ಲಾಗಲೇ ಆಕೆಯ ಬ್ಯಾಂಕ್ ಖಾತೆಯಿಂದ ಎಲ್ಲಾ ಹಣವನ್ನು ವರ್ಗಾಯಿಸಿಕೊಂಡಿದ್ದರು. ಬ್ಯಾಂಕ್​ನಲ್ಲಿ ಹಣ ಇಲ್ಲದೇ ಇರೋದು ಗೊತ್ತಾದಾಗ ತಾನು ಮೋಸ ಹೋಗಿರುವ ಬಗ್ಗೆ ಅರಿವಿಗೆ ಬಂದಿದೆ. ನಾಗ್ಪುರ ನಿವಾಸಿ ಹಿತೇಶ್ ಮಹುಸ್ಕರ್ ಅವರ ಬ್ಯಾಂಕ್ ಖಾತೆಗೆ ದೊಡ್ಡ ಮೊತ್ತದ ಹಣ ವರ್ಗಾಯಿಸಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಇದನ್ನೂ ಓದಿ: ಪವರ್ ಕೇಳ್ತಿರೋ DK ಶಿವಕುಮಾರ್​ಗೆ ಕೌಂಟರ್ ಕೊಟ್ಟ ಪರಮೇಶ್ವರ್..! VIDEO
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us