Advertisment

ಪಾಕ್‌ಗೆ ಸಿಂಹಸ್ವಪ್ನ.. ಮತ್ತಷ್ಟು ಶಕ್ತಿಶಾಲಿ ‘ಬ್ರಹ್ಮೋಸ್’..! 800 ಕಿಮೀ ದೂರ ಗುರಿಮುಟ್ಟಿ ಶತ್ರುಗಳ ಸಂಹಾರ!

ಜಗದೇಕ ವೀರ.. ಬಲೆ ಗುರಿಕಾರ.. ಪಾಕ್‌ನ ಹುಟ್ಟಡಗಿಸಿದ ಶೂರ.. ಇಟ್ಟ ಗುರಿ ತಪ್ಪಲ್ಲ.. ಬುಸುಗುಟ್ಟಿ ಬಾಲ ಬಿಚ್ಚಿದ್ರೆ ಬಿಡೋ ಮಾತೇ ಇಲ್ಲ. ಇದಕ್ಕೆ ಸಾಕ್ಷಿ ಆಪರೇಷನ್ ಸಿಂಧೂರ.. ಪಾಕಿಸ್ತಾನವೆಂಬ ಸೈತಾನ ದೇಶವನ್ನೇ ನಡುಗಿಸಿರೋ ಸುಲ್ತಾನ.. ಅವನೇ ಬ್ರಹ್ಮೋಸ್‌.. ಈಗ ಮತ್ತಷ್ಟು ಶಕ್ತಿಶಾಲಿಯಾಗಿದ್ದಾನೆ.

author-image
Ganesh Kerekuli
BrahMos
Advertisment

ಬ್ರಹ್ಮೋಸ್‌.. ಶರವೇಗದ ಸರದಾರ. ಪಾಕಿಸ್ತಾನಕ್ಕೆ ನಡುಕ ಹುಟ್ಟಿಸಿರೋ ಧೀರ. ಇದೀಗ ಮತ್ತಷ್ಟು ಶಕ್ತಿಶಾಲಿಯಾಗಿ ಎದುರಾಳಿಗಳ ಹುಟ್ಟಡಗಿಸಲು ಬ್ರಹ್ಮೋಸ್ ಸಜ್ಜಾಗುತ್ತಿದ್ದಾನೆ. ಪಾಪಿ ಪಾಕ್‌ನ ಇಂಚಿಂಚು ಭೂಮಿಯೂ ಬ್ರಹ್ಮೋಸ್ ಟಾರ್ಗೆಟ್‌ನಲ್ಲಿದೆ. ಕೆಚ್ಚೆದೆಯ ಕ್ಷಿಪಣಿ ಮುಂದೆ ಶತ್ರುಗಳು ಬಾಲ ಬಿಚ್ಚಿದ್ರೆ ಏಕ್‌ ಮಾರ್ ದೋ ತುಕ್ಡಾ ಆಗೋದು ಗ್ಯಾರಂಟಿ.

Advertisment

800 ಕಿ.ಮೀ. ದೂರದ ಗುರಿಮುಟ್ಟಿ ಶತ್ರುಗಳ ಸಂಹಾರ!

ಆಪರೇಷನ್ ಸಿಂಧೂರದಲ್ಲಿ ಪಾಕಿಸ್ತಾನಿಯರು ಬಿರುಬೇಸಿಗೆಯಲ್ಲೂ ಗಢಗಢ ನಡುಗುವಂತೆ ಮಾಡಿದ್ದು ಭಾರತೀಯ ಸೇನೆಯ ಕೆಚ್ಚೆದೆಯ ಕ್ಷಿಪಣಿ ಬ್ರಹ್ಮೋಸ್‌.. ಪಾಕಿಸ್ತಾನದಲ್ಲಿ ರಕ್ತಪಿಪಾಸುಗಳ ನೆಲೆ.. ಪರಮಾಣು ಜಾಲವನ್ನೇ ಧ್ವಂಸ ಮಾಡಿದ್ದ  ಮಿಸೈಲ್ ಈಗ ಮತ್ತಷ್ಟು ಶಕ್ತಿ ಹೆಚ್ಚಿಸಿಕೊಂಡಿದೆ. ಪಾಕಿಸ್ತಾನವನ್ನ ಸಿಂಹಸ್ವಪ್ನವಾಗಿ ಕಾಡಲು ರಣವಿಕ್ರಮನಾಗಿ ರಣಬೇಟೆಗೆ ಕಾದು ಕೂತಿದೆ. 

ಇದನ್ನೂ ಓದಿ:ತನ್ನ ತಂದೆಯ ಜೊತೆ ಪತ್ನಿಗೆ ಅಫೇರ್ ಆರೋಪ : 33 ವರ್ಷದ ಮಗ ನಿಗೂಢ ಸಾವು, ತಂದೆ ನಿವೃತ್ತ ಡಿಜಿಪಿ ಮೇಲೆ ಅನುಮಾನ

ಬ್ರಹ್ಮೋಸ್ ಮತ್ತಷ್ಟು ಶಕ್ತಿಶಾಲಿ!

  • ಬ್ರಹ್ಮೋಸ್‌ ಕ್ಷಿಪಣಿಯ ಸಾಮರ್ಥ್ಯ ದುಪ್ಪಟ್ಟು ಹೆಚ್ಚಳ
  • 300 ಕಿ.ಮೀ.ರಿಂದ 800 ಕಿ.ಮೀಗಳ ವರೆಗೆ ಶಕ್ತಿವರ್ಧನೆ
  • 800 ಕಿ.ಮೀ. ವ್ಯಾಪ್ತಿಯ ಗುರಿ ಮುಟ್ಟಲಿರುವ ಬ್ರಹ್ಮೋಸ್‌
  • ರಾಮ್‌ಜೆಟ್ ಎಂಜಿನ್ ನವೀಕರಣ ಜೊತೆ ಕ್ಷಿಪಣಿ ಪರೀಕ್ಷೆ
  • 2026-27 ರಲ್ಲಿ ಉತ್ಪಾದನೆಯು ಪ್ರಾರಂಭವಾಗುವ ಸಾಧ್ಯತೆ
  • 2 ವರ್ಷದಲ್ಲಿ ಸೂಪರ್ ಸಾನಿಕ್ ಕ್ರೂಸ್‌ ಕ್ಷಿಪಣಿ ಸೇರ್ಪಡೆ
  • 2027ಕ್ಕೆ ಭಾರತೀಯ ಸೇನೆಗೆ ಅಪ್‌ಡೇಟ್ ಬ್ರಹ್ಮೋಸ್ ಎಂಟ್ರಿ
  • ಮೊದಲು ಭೂ ಸೇನೆ ಮತ್ತು ನೌಕಾಪಡೆಗೆ ಬ್ರಹ್ಮೋಸ್ ಎಂಟ್ರಿ
Advertisment

ಪಾಕ್‌ನ ಮೂಲೆ ಮೂಲೆಗಳೂ ಬ್ರಹ್ಮೋಸ್ ಟಾರ್ಗೆಟ್‌

ಈಗಾಗಲೇ ಬ್ರಹ್ಮೋಸ್‌ ಕ್ಷಿಪಣಿ ಶಕ್ತಿ ಎಂಥದ್ದು ಅಂತ ವಿಶ್ವಕ್ಕೆ ಅರ್ಥವಾಗಿದೆ. ಇದೀಗ 800 ಕಿಲೋ ಮೀಟರ್‌ಗೆ ಶಕ್ತಿಯನ್ನ ಹೆಚ್ಚಿಸಿದ್ರೆ ಪಾಕಿಸ್ತಾನದ ಮೂಲೆ ಮೂಲೆಯೂ ಬ್ರಹ್ಮೋಸ್‌ನ ಕಣ್ಣಳತೆಯಲ್ಲೇ ಇರಲಿದೆ. ಪಾಪಿಸ್ತಾನ ಬಾಲ ಬಿಚ್ಚಿದ್ರೆ ಶತ್ರು ದೇಶದ ಹುಟ್ಟಡಗಿಸಲು ಬ್ರಹ್ಮೋಸ್ ಕ್ಷಿಪಣಿಯೊಂದೇ ಸಾಕು. ಇನ್ನು, ನಿನ್ನೆ ಯೋಧರ ಜೊತೆಗಿನ ದೀಪಾವಳಿಯಲ್ಲಿ ಪ್ರಧಾನಿ ಮೋದಿ ಬ್ರಹ್ಮೋಸ್‌ ಕ್ಷಿಪಣಿಯ ಪರಾಕ್ರಮವನ್ನ ಹಾಡಿಹೊಗಳಿದ್ರು. ಅರಬ್ಬಿ ಸಮುದ್ರದಲ್ಲಿ ನಿಂತು ಶತ್ರು ದೇಶಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದ್ರು.

ನಮ್ಮ ಬ್ರಹ್ಮೋಸ್‌ ಮತ್ತು ಆಕಾಶ್‌ನಂತಹ ಕ್ಷಿಪಣಿಗಳು ಆಪರೇಷನ್‌ ಸಿಂಧೂರನಲ್ಲಿ ಭಾರತೀಯ ಸೇನೆಯ ಸಾಮರ್ಥ್ಯವೇನು ಅಂತ ಸಾಬೀತುಪಡಿಸಿವೆ. ಅದರಲ್ಲೂ ಬ್ರಹ್ಮೋಸ್‌ ಎಂಬ ಹೆಸರನ್ನ ಕೇಳಿದ್ರೆ ಅನೇಕ ಜನರಿಗೆ ಈಗಲೂ ಭಯ ಆವರಿಸುತ್ತಿದೆ. ಈಗ ವಿಶ್ವದ ಅದೆಷ್ಟೋ ದೇಶಗಳು ಈ ಕ್ಷಿಪಣಿಯನ್ನ ಕೊಳ್ಳಲು ಮುಂದೆ ಬರುತ್ತಿವೆ -ನರೇಂದ್ರ ಮೋದಿ, ಪ್ರಧಾನಮಂತ್ರಿ

ಶಬ್ದಕ್ಕಿಂತ ವೇಗದಲ್ಲಿ ನುಗ್ಗುವ ಬ್ರಹ್ಮೋಸ್ ಕ್ಷಿಪಣಿ ಶಕ್ತಿಯನ್ನ ಹೆಚ್ಚಿಸಿಕೊಂಡು ಸೇನೆಯನ್ನ ಸೇರಿದ್ರೆ ಭಾರತೀಯ ಸೇನೆಯ ಬಲ ದುಪ್ಪಟ್ಟು ಆಗೋದಂತೂ ನಿಶ್ಚಿತ.

Advertisment

ಇದನ್ನೂ ಓದಿ: ಬಿಜೆಪಿ-ಜೆಡಿಎಸ್​ನಲ್ಲಿ ಇವತ್ತು ಭಾರೀ ಬೆಳವಣಿಗೆ.. ಏನೆಲ್ಲ ನಡೆಯಿತು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BrahMos
Advertisment
Advertisment
Advertisment