ದೀಪಾವಳಿ ದಿನವೂ ರಾಜಧಾನಿ ಬೆಂಗಳೂರಿನಲ್ಲಿ ರಾಜ್ಯ ರಾಜಕೀಯಕ್ಕೆ ಬಿಡುವಿರಲಿಲ್ಲ. ಬೆಳಕಿನ ಹಬ್ಬದ ನೆಪದಲ್ಲಿ ಇವತ್ತು ಹೆಚ್​ಡಿಕೆ ಮತ್ತು ವಿಜಯೇಂದ್ರ ಭೇಟಿ ಆಗಿದೆ. ಕೇಂದ್ರ ಸಚಿವರ ನಿವಾಸಕ್ಕೆ ಬಂದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚಿಸಿದ್ದಾರೆ.. ಇನ್ನೊಂದು ಇಂಟ್ರಸ್ಟಿಂಗ್​ ಅಂದ್ರೆ ಎರಡೂ ಪಕ್ಷಗಳ ನಡುವೆ ಸಮಿತಿ ರಚನೆ ಬಗ್ಗೆ ಮಾತುಕತೆ ಆಗಿದೆ.
ಇದನ್ನೂ ಓದಿ:ಮದುವೆ ಆದ ಜಾಗದಲ್ಲೇ ಮತ್ತೆ ಮದುವೆಯಾದ ಪ್ರೇಮ್ ದಂಪತಿ -VIDEO
ವರ್ಷಾಂತ್ಯ ಅಥವಾ ವರ್ಷಾರಂಭಕ್ಕೆ ಎಲೆಕ್ಷನ್​ಗಳು ಸಾಲುಗಟ್ಟಲಿವೆ. ಬಿಹಾರದಲ್ಲಿ ಕಾಂಗ್ರೆಸ್​​​-ಆರ್​​ಜೆಡಿ ಮೈತ್ರಿ ಬಿಕ್ಕಟ್ಟಿನ ಹಾಸ್ಯದ ಪ್ರಹಸನ ಕಂಡ ಬಿಜೆಪಿ ದಿಢೀರ್​​ ಎಚ್ಚೆತ್ತಿದೆ. ಆ ಕಾರಣಕ್ಕೋ ಏನೋ ಗೊತ್ತಿಲ್ಲ, ಇವತ್ತು ಜೆ.ಪಿ.ನಗರದಲ್ಲಿರುವ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ನಿವಾಸ, ರಾಜಕೀಯದ ಸೆಂಟರ್​​ ಆಫ್​​ ಅಟ್ರ್ಯಾಕ್ಷನ್​​ ಆಗಿ ಮಾರ್ಪಟ್ಟಿತು. ಹೆಚ್​ಡಿಕೆಯನ್ನ ಬೆಳಕಿನ ಹಬ್ಬ ದೀಪಾವಳಿ ನೆಪದಲ್ಲಿ ಇಡೀ ಬಿಜೆಪಿ ಪಡೆ ಭೇಟಿ ಮಾಡಿದೆ.
ಕುಮಾರಸ್ವಾಮಿ ಜತೆ ಮೀಟಿಂಗ್​​
ಗ್ರೇಟರ್​​​ ಬೆಂಗಳೂರು ಎಲೆಕ್ಷನ್​, ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಎಲೆಕ್ಷನ್​ಗಳು ಸಮೀಪಿಸ್ತಿವೆ. ಡಿಸಿಎಂ ಡಿಕೆಶಿ ಮತ್ತು ಕಾಂಗ್ರೆಸ್​​ ಆಗಲೇ ಸರಣಿ ರೂಪದಲ್ಲಿ ಸಿದ್ಧತೆ ಆರಂಭಿಸಿದ್ದಾರೆ.. ಹೀಗಾಗಿ ಚೆಕ್​ಮೇಟ್​​ ತಂತ್ರಗಾರಿಕೆ ರೂಪಿಸಲು ಬಿಜೆಪಿ ಜೆಡಿಎಸ್​​ ಗೊಂದಲಗಳ ನಿವಾರಣೆ, ಒಗ್ಗಟ್ಟಿನ ಪ್ರದರ್ಶನಕ್ಕೆ ತಾಲೀಮು ಆರಂಭಿಸಲು ಪ್ಲಾನ್​ ಮಾಡ್ತಿದೆ. ಇಂದು ಹೆಚ್​ಡಿಕೆ ನಿವಾಸದಲ್ಲಿ ಸಾಸಿವೆಯಷ್ಟೇ ಚರ್ಚೆ ಆಗಿದೆ.
ಕೇಂದ್ರ ಸಚಿವ ಕುಮಾರಸ್ವಾಮಿ ಭೇಟಿ ಮಾಡಿದ ಬಿ.ವೈ ವಿಜಯೇಂದ್ರ, ದೀಪಾವಳಿ ಹಬ್ಬದ ಶುಭಾಶಯ ಕೋರಿದ್ರು.. ಬಳಿಕ ಮಾತನಾಡಿದ ವಿಜಯೇಂದ್ರ, ರಾಜ್ಯದ ರಾಜಕೀಯ ಪರಿಸ್ಥಿತಿ ಕುರಿತು ಚರ್ಚೆ ಮಾಡಿದ್ದು, ಬಿಜೆಪಿ-ಜೆಡಿಎಸ್ ಪಕ್ಷಗಳ ಸಮನ್ವಯ ಸಮಿತಿ ರಚನೆ ಕುರಿತು ಸಲಹೆಗಳನ್ನು ಕೇಳಿದ್ದಾಗಿ ಹೇಳಿದ್ರು. ಬೆಂಗಳೂರಿಗೆ ಸೀಮಿತವಾಗಿ ಒಂದು, ರಾಜ್ಯಕ್ಕೆ ಸಂಬಂಧಿಸಿ ಮತ್ತೊಂದು ಸಮನ್ವಯ ಸಮಿತಿಗೆ ಹೆಚ್​​ಡಿಕೆ ಸಲಹೆ ನೀಡಿದ್ದಾರೆ ಎಂದ್ರು.
ಇದನ್ನೂ ಓದಿ: ತನ್ನ ತಂದೆಯ ಜೊತೆ ಪತ್ನಿಗೆ ಅಫೇರ್ ಆರೋಪ : 33 ವರ್ಷದ ಮಗ ನಿಗೂಢ ಸಾವು, ತಂದೆ ನಿವೃತ್ತ ಡಿಜಿಪಿ ಮೇಲೆ ಅನುಮಾನ
ಹೆಚ್​ಡಿಕೆ-ವಿಜಯೇಂದ್ರ ಮೀಟಿಂಗ್​
- ಬೆಂಗಳೂರು, ರಾಜ್ಯದಲ್ಲಿ ರಸ್ತೆಗಳು ಸೇರಿ ಮೂಲ ಸೌಕರ್ಯ ಕೊರತೆ
- ಐಟಿ ಉದ್ಯಮಿಗಳ ಜೊತೆಗೆ ಸರ್ಕಾರದ ಕೆಟ್ಟ ನಡವಳಿಕೆ ಬಗ್ಗೆ ಚರ್ಚೆ
- ಕಮಿಷನ್​​​ ಕುರಿತು ಪತ್ರ ಬರೆದ ಗುತ್ತಿಗೆದಾರರಿಗೆ ಸಚಿವರಿಂದ ಬೆದರಿಕೆ
- ರಾಜ್ಯದಲ್ಲಿ ಹೆಚ್ಚಿದ ಮರಳು ಮಾಫಿಯಾ, ಇಸ್ಪೀಟ್ & ಮಟ್ಕಾ ದಂಧೆ
- ಅನಾವಶ್ಯಕವಾಗಿ ಆರೆಸ್ಸೆಸ್ ಬಗ್ಗೆ ಟೀಕಿಸುತ್ತಿರುವ ಸಿಎಂ ಮತ್ತು ಖರ್ಗೆ
- ಆಡಳಿತ ಪಕ್ಷದ ವೈಫಲ್ಯ ಮುಚ್ಚಿಕೊಳ್ಳಲು ಚಿತ್ರ-ವಿಚಿತ್ರವಾಗಿ ಪ್ರಚಾರ
ಒಟ್ಟಾರೆ, ಎಲೆಕ್ಷನ್​​ ಒಂದ್ಕಡೆಯಾದರೆ ಮುಂದಿನ ದಿನಗಳಲ್ಲಿ ಸರ್ಕಾರದ ಬೇರೆ ಬೇರೆ ವೈಫಲ್ಯಗಳ ಬಗ್ಗೆ ಎರಡೂ ಪಕ್ಷಗಳ ಜಂಟಿ ಹೋರಾಟ ಬಗ್ಗೆ ಮಾತುಕತೆ ಆಗಿದೆ. 8-10 ದಿನಗಳಲ್ಲಿ ಎರಡು ಪಕ್ಷಗಳ ನಡುವೆ ಸಮನ್ವಯ ಸಮಿತಿ ರಚನೆ ಆಗಲಿದ್ದು, ರೂಪುರೇಷೆ ಹೇಗಿರಲಿದೆ ಅನ್ನೋದು ಕಾದು ನೋಡಬೇಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ