Advertisment

ಗಂಭೀರ್​, ಅಧ್ಯಕ್ಷ ಮಿಥುನ್ ಯಾರೂ ಅಲ್ಲ.. ಇವರ ಕಂಡ್ರೆ ನಿದ್ದೆಯಿಂದ ಬೆಚ್ಚಿ ಬೀಳ್ತಿದ್ದಾರೆ ಇಂಡಿಯಾ ಪ್ಲೇಯರ್ಸ್..!

ಇಂಡಿಯನ್​ ಕ್ರಿಕೆಟ್​ನಲ್ಲಿ ಎಲ್ಲವೂ ಸರಿಯಿಲ್ವಾ? ಇಷ್ಟು ದಿನ ಪ್ಲೇಯರ್ಸ್​ vs ಪ್ಲೇಯರ್ಸ್​, ಪ್ಲೇಯರ್ಸ್​ vs ಕೋಚ್​, ಕ್ಯಾಪ್ಟನ್ vs ಕೋಚ್​​ ಅಂತೆಲ್ಲಾ ಫೈಟ್​​ ನಡೀತಾ ಇದ್ವು. ಆದ್ರೀಗ ಪ್ಲೇಯರ್ಸ್​ vs ಸೆಲೆಕ್ಟರ್ಸ್​ ಫೈಟ್​ ಜೋರಾಗಿದೆ.

author-image
Ganesh Kerekuli
Team india (12)
Advertisment
  • ಮಾತಿಲ್ಲ, ಕಥೆಯಿಲ್ಲ.. ಸೈಡ್​ಲೈನ್​ಗೆ ‘ಇನ್​​ಡೈರೆಕ್ಟ್​​’ ತಂತ್ರ
  • ಸೆಲೆಕ್ಷನ್​ ಕಮಿಟಿ​​ಯಿಂದ ಆಟಗಾರರಿಗೆ ಸಿಗ್ತಿಲ್ಲ ಕ್ಲಾರಿಟಿ
  • ಸೆಲೆಕ್ಟರ್ಸ್​ ಸೆಲೆಕ್ಷನ್​ ಮಾನದಂಡ ಪ್ರಶ್ನಿಸಿದ ರಹಾನೆ

ಇಂಡಿಯನ್​ ಕ್ರಿಕೆಟ್​ನಲ್ಲಿ ಎಲ್ಲವೂ ಸರಿಯಿಲ್ವಾ? ಇಷ್ಟು ದಿನ ಪ್ಲೇಯರ್ಸ್​ vs ಪ್ಲೇಯರ್ಸ್​, ಪ್ಲೇಯರ್ಸ್​ vs ಕೋಚ್​, ಕ್ಯಾಪ್ಟನ್ vs ಕೋಚ್​​ ಅಂತೆಲ್ಲಾ ಫೈಟ್​​ ನಡೀತಾ ಇದ್ವು. ಆದ್ರೀಗ ಪ್ಲೇಯರ್ಸ್​ vs ಸೆಲೆಕ್ಟರ್ಸ್​ ಫೈಟ್​ ಜೋರಾಗಿದೆ. ಟೀಮ್​ ಇಂಡಿಯಾ ಮಾಜಿ ಹಾಲಿ ಕ್ರಿಕೆಟರ್ಸ್​ ನಡೆ ಒಂದಾದ್ರೆ ಅಜಿತ್ ಅಗರ್ಕರ್​​ ನೇತೃತ್ವದ ಸೆಲೆಕ್ಷನ್​ ಕಮಿಟಿಯದ್ದೇ ಒಂದು ನಡೆಯಾಗಿದೆ. ಸೆಲೆಕ್ಟರ್ಸ್​​ ಮತ್ತು ಆಟಗಾರರ ನಡುವೆ ಕಿತ್ತಾಟ ಈಗ ಹಾದಿ-ಬೀದಿ ರಂಪವಾಗಿದೆ. 

Advertisment

ಟೀಮ್​ ಇಂಡಿಯಾ ಆಟಗಾರರಿಗೆ ಆಯ್ಕೆಗಾರರ ಭಯ!

ಕಳೆದ ಕೆಲ ದಿನಗಳಿಂದ ಭಾರತೀಯ ಕ್ರಿಕೆಟ್​ ವಲಯದಲ್ಲಿ ಅಜಿತ್​ ಅಗರ್ಕರ್ ಹೆಸ್ರು ಸಖತ್​ ಸೌಂಡ್​ ಮಾಡ್ತಿದೆ. ಅಜಿತ್​ ಅಗರ್ಕರ್​ ನೇತೃತ್ವದ ಸೆಲೆಕ್ಷನ್​ ಕಮಿಟಿಯ ನಡೆ ಕ್ರಿಕೆಟರ್ಸ್​​ನ ಕೆರಳಿಸಿದೆ. ಇದ್ರ ಜೊತೆಗೆ ಟೀಮ್​ ಇಂಡಿಯಾ ಆಟಗಾರರಿಗೆ ಸೆಲೆಕ್ಟರ್ಸ್​ ಭಯ ಶುರುವಾಗಿದ್ಯಾ ಎಂಬ ಪ್ರಶ್ನೆಯೂ ಹುಟ್ಟಿದೆ. ಮೊನ್ನೆ ಮೊನ್ನೆಯಷ್ಟೇ ಅಜಿತ್​ ಅಗರ್ಕರ್​ ಮೇಲೆ ವೇಗಿ ಮೊಹಮ್ಮದ್​ ಶಮಿ ಅಟ್ಯಾಕ್ ಮಾಡಿದ್ರು. ಇದೀಗ ಅಖಾಡಕ್ಕೆ ಮಾಜಿ ಆಫ್​ ಸ್ಪಿನ್ನರ್​ ಆರ್​​ ಅಶ್ವಿನ್ ಎಂಟ್ರಿಯಾಗಿದೆ. 

ಇದನ್ನೂ ಓದಿ: ಕನ್ನಡಿಗನ ಕಡೆಗಣಿಸಿ ಹರ್ಷಿತ್ ರಾಣಾಗೆ ಚಾನ್ಸ್​.. ಏನಿದು ವಿವಾದ..?

ಕಳೆದ ಕೆಲ ತಿಂಗಳಿಂದ ಟೀಮ್​ ಇಂಡಿಯಾ ಫ್ಯಾನ್ಸ್​ಗೆ ಸರ್​​​ಪ್ರೈಸ್​​ ಶಾಕ್​ಗಳು ಎದುರಾಗಿವೆ. ಈ ಹಿಂದಿನ ಆಸ್ಟ್ರೇಲಿಯಾ ಪ್ರವಾಸದ ವೇಳೆ ಅಶ್ವಿನ್​ ನಿವೃತ್ತಿಯಾದ್ರೆ, ಅದಾದ ಬಳಿಕ ಕೊಹ್ಲಿ-ರೋಹಿತ್​ ಟೆಸ್ಟ್​ಗೆ ಸಡನ್​ ನಿವೃತ್ತಿ ಘೋಷಿಸಿ ಶಾಕ್​ ನೀಡಿದ್ರು. ಚಿಕ್ಕ ಸುಳಿವು ಇಲ್ಲದೇ ಇದಕ್ಕಿದ್ದಂತೆ ದಿಗ್ಗಜರು ನಿವೃತ್ತಿ ಯಾಗಿದ್ದು ಹಲವು ಪ್ರಶ್ನೆಗಳನ್ನ ಹುಟ್ಟಿಸಿತ್ತು. ಇದೀಗ ಸ್ವತಃ ಅಶ್ವಿನ್​ ಆಟಗಾರರನ್ನ ಸೈಡ್​​ಲೈನ್​​ ಮಾಡಲು ಸೆಲೆಕ್ಟರ್ಸ್​ ಅನುಸರಿಸ್ತಾ ಇರೋ ಇನ್​ಡೈರೆಕ್ಟ್​​ ತಂತ್ರವನ್ನ ರಿವೀಲ್​ ಮಾಡಿದ್ದಾರೆ. 

ಪರೋಕ್ಷ ಮಾತುಗಳಲ್ಲಿ ಕಾರ್ಯ 
ಭಾರತೀಯ ಕ್ರಿಕೆಟ್​ ಸದ್ಯ ಪರೋಕ್ಷ ಮಾತುಗಳಲ್ಲಿ ಕಾರ್ಯ ನಿರ್ವಹಿಸ್ತಾ ಇದೆ. ಇದೊಂದು ನಾನು ಬದಲಾಗಬೇಕೆಂದು ಬಯಸುತ್ತೇನೆ. ಈ ಬದಲಾವಣೆ ಆಟಗಾರರು ಹಾಗೂ ಆಡಳಿತಗಾರರು ಇಬ್ಬರ ಕಡೆಯಿಂದಲೂ ಆಗಬೇಕಿದೆ. ಸಮಸ್ಯೆ ಏನಂದ್ರೆ ನೇರವಾಗಿ ಮಾತನಾಡಿದ್ರೆ, ಹೊರಗಡೆ ಸುದ್ದಿ ಹರಡುತ್ತೆ. ಹೀಗಾಗಿ ಆಟಗಾರರಿಗೆ ತಮ್ಮ ತಲೆಯಲ್ಲಿ ಏನಿದು ಎಂದು ಯಾರಿಗಾದ್ರೂ ಹೇಳುವ ಆತ್ಮವಿಶ್ವಾಸವಿಲ್ಲ.
ಆಶ್ವಿನ್​, ಮಾಜಿ ಕ್ರಿಕೆಟಿಗ

Advertisment

ಕೆಲ ದಿನಗಳ ಹಿಂದಷ್ಟೇ ವೇಗಿ ಮೊಹಮ್ಮದ್​ ಶಮಿ ಸೆಲೆಕ್ಷನ್​ ಕಮಿಟಿ ಮುಖ್ಯಸ್ಥ ಅಜಿತ್​ ಅಗರ್ಕರ್​​ ಮೇಲೆ ಅಟ್ಯಾಕ್​ ಮಾಡಿದ್ರು. ಮೊಹಮ್ಮದ್​ ಶಮಿ ಡ್ರಾಪ್​ ಮಾಡಿದ್ದನ್ನ ಪ್ರಶ್ನಿಸಿದಾಗ ಅಗರ್ಕರ್​​​ ಶಮಿ ಬಗ್ಗೆ ನನಗೆ ಅಪ್​ಡೇಟ್​​ ಇಲ್ಲ ಎಂದಿದ್ರು. ಇದಕ್ಕೆ ನೇರವಾಗಿ ಅಟ್ಯಾಕ್​ ಮಾಡಿದ್ದ ಶಮಿ ಕೌಂಟರ್​ ಕೊಟ್ಟಿದ್ರು. 

ಇದನ್ನೂ ಓದಿ: ಬಿಗ್​ಬಾಸ್ ಮನೆಯಲ್ಲಿ ಕಾಡಿತು ದೊಡ್ಡ ಆತಂಕ.. ಕಣ್ಣೀರಿಟ್ಟ ಜಾಹ್ನವಿ.. VIDEO

ನೋಡಿ ಅಣ್ಣಾ. ನಿಮಗೆ ಅಪ್​ಡೇಟ್​ ಬೇಕಂದ್ರೆ ನೀವು ಕೇಳಬೇಕು. ತಿಳಿದುಕೊಳ್ಳಬೇಕು. ಅಪ್​ಡೇಟ್​ ಕೊಡೋದು ನನ್ನ ಕೆಲಸವಲ್ಲ. ನನ್ನ ಕೆಲಸ ಏನು.? ಎನ್​ಸಿಎಗೆ ಹೋಗೋದು. ಮ್ಯಾಚ್​ ಆಡೋದು. ಸಿದ್ಧತೆ ನಡೆಸೋದು. ಇದೆಲ್ಲಾ ನನ್ನ ಕೆಲಸ. ಅದು ಅವರಿಗೆ ಯಾರು ಅಪ್​​ಡೇಟ್​ ನೀಡ್ತಾರೋ ಅವರ ಕೆಲಸ. ಇದು ನನ್ನ ಜವಾಬ್ದಾರಿಯಲ್ಲ. 

ಮೊಹ್ಮದ್ ಶಮಿ, ಟೀಂ ಇಂಡಿಯಾ ಆಟಗಾರ

ಶಮಿ ಆಕ್ರೋಶದ ಮಾತುಗಳ ಬಗ್ಗೆಯೂ ಅಶ್ವಿನ್​ ಮಾತನಾಡಿದ್ದಾರೆ. ಸೆಲೆಕ್ಷನ್​ ಕಮಿಟಿ ಆಟಗಾರರಿಗೆ ಕ್ಲಾರಿಟಿ ನೀಡ್ತಿಲ್ಲ ಇದೇ ಸಮಸ್ಯೆಗೆ ಕಾರಣ ಎಂದಿದ್ದಾರೆ.

ಆತನಿಗೆ ಕ್ಲಾರಿಟಿ ಇಲ್ಲ
ಶಮಿ ಉತ್ತಮವಾಗಿ ಆಡಿದ್ದ ಮತ್ತು ಪ್ರೆಸ್​ಮೀಟ್​ನಲ್ಲಿ ಮಾತನಾಡಿದ್ದ. ಆತ ಯಾಕೆ ಹಾಗೆ ಮಾಡಿದ? ಯಾಕಂದ್ರೆ, ಆತನಿಗೆ ಕ್ಲಾರಿಟಿ ಇಲ್ಲ. 
ಆಶ್ವಿನ್​, ಮಾಜಿ ಕ್ರಿಕೆಟಿಗ

Advertisment

ಸೀನಿಯರ್​​ ಆಟಗಾರ ಅಜಿಂಕ್ಯಾ ರಹಾನೆ ಕೂಡ ಸೆಲೆಕ್ಟರ್ಸ್​ ವಿಚಾರದಲ್ಲಿ ಆಟಗಾರರ ಭಯದ ಬಗ್ಗೆ ಮಾತನಾಡಿದ್ದಾರೆ. ಇಷ್ಟೇ ಅಲ್ಲ.. ಸೆಲೆಕ್ಟರ್ಸ್​​ ಸೆಲೆಕ್ಷನ್​ನ ಮಾನದಂಡವೇ ಬದಲಾಗಬೇಕು ಎಂದಿದ್ದಾರೆ.

ಆಟಗಾರರು ಸೆಲೆಕ್ಟರ್ಸ್​​ ಬಗ್ಗೆ ಭಯದಲ್ಲಿರಬಾರದು. ನಾನು ಸೆಲೆಕ್ಟರ್ಸ್​ ಬಗ್ಗೆ ಮಾತನಾಡಬೇಕು ಮುಖ್ಯವಾಗಿ ಡೊಮೆಸ್ಟಿಕ್​ ಕ್ರಿಕೆಟ್​ನಲ್ಲಿ. ಇತ್ತೀಚೆಗೆ ಕ್ರಿಕೆಟ್​ನಿಂದ ನಿವೃತ್ತಿಯಾದವರು ಸೆಲೆಕ್ಟರ್ಸ್ ಆಗಿರಬೇಕು. 5-6 ಅಥವಾ 7-8 ವರ್ಷದ ಕೆಳಗೆ ರಿಟೈರ್​​ ಆದವರು. ಯಾಕಂದ್ರೆ, ಕ್ರಿಕೆಟ್​ ಬೆಳೆಯುತ್ತಿದೆ. ಸೆಲೆಕ್ಟರ್ಸ್​ ಮನಸ್ಥಿತಿ ಹಾಗೂ ಮೈಂಡ್​ಸೆಟ್​​ ಅದಕ್ಕೆ ಮ್ಯಾಚ್​ ಆಗಬೇಕು. 20-30 ವರ್ಷದ ಹಿಂದೆ ಕ್ರಿಕೆಟ್​​ ಹೇಗಿತ್ತು ಎಂಬುವುದರ ಮೇಲೆ ನಿರ್ಧಾರಗಳಾಗಬಾರದು.

ಇದನ್ನೂ ಓದಿ: ಹಳೇ ಚಾಳಿ ಬಿಟ್ಟಿಲ್ಲ ಕೊಹ್ಲಿ.. ಕಿಂಗ್​​​ಗೆ ಅದೇ ಸಮಸ್ಯೆ ಮುಳುವಾಯ್ತು..!
 
ಒಂದೆಡೆ ಒಬ್ಬರ ಮೇಲೊಬ್ಬರು ಆಟಗಾರರು ಸೆಲೆಕ್ಷನ್​ ಕಮಿಟಿಯನ್ನ ಟಾರ್ಗೆಟ್​ ಮಾಡಿ ಮಾತನಾಡ್ತಿದ್ದಾರೆ. ಸೆಲೆಕ್ಷನ್​ ಕಮಿಟಿ ಮುಖ್ಯಸ್ಥ ಅಜಿತ್​ ಅಗರ್ಕರ್​ ಮಾತ್ರ ಯಾರು ಏನ್​ ಬೇಕಾದ್ರೂ ಹೇಳಲಿ ಮುಂದೆ ನೋಡೋಣ ಅಂತಿದ್ದಾರೆ. ಇದ್ರ ನಡುವೆ ರೋಹಿತ್​-ಕೊಹ್ಲಿ ಆಸಿಸ್ ಎದುರಿನ ಮೊದಲ ಒನ್​ ಡೇಯಲ್ಲಿ ಫೇಲ್​ ಆಗಿದ್ದಾರೆ. ಇದೀಗ ರೋಹಿತ್​ -ಕೊಹ್ಲಿಯ ರಿಟೈರ್​ಮೆಂಟ್​ ಚರ್ಚೆ ಮತ್ತೆ ಆರಂಭವಾಗಿದೆ. ಹೀಗಾಗಿ ಸೆಲೆಕ್ಟರ್ಸ್​ vs ಪ್ಲೇಯರ್ಸ್​ ದಂಗಲ್​ ಸದ್ಯಕ್ಕಂತೂ ನಿಲ್ಲುವಂತೆ ಕಾಣ್ತಿಲ್ಲ. 

Advertisment

ಇದನ್ನೂ ಓದಿ: ಮಂದಾನ ಭಾವಿ ಪತಿ ಹಾಕಿಸಿಕೊಂಡಿರೋ ಟ್ಯಾಟೂ ಏನು..? ಅಷ್ಟೊಂದು ಪ್ರೀತಿಸ್ತಾರಾ?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Ajit Agarkar
Advertisment
Advertisment
Advertisment