Advertisment

ಕನ್ನಡಿಗನ ಕಡೆಗಣಿಸಿ ಹರ್ಷಿತ್ ರಾಣಾಗೆ ಚಾನ್ಸ್​.. ಏನಿದು ವಿವಾದ..?

ಹರ್ಷಿತ್ ರಾಣಾ ಫ್ಲಾಪ್ ಶೋ, ಕ್ರಿಕೆಟ್ ಅಭಿಮಾನಿಗಳನ್ನ ಕೆರಳಿ ಕೆಂಡವಾಗಿಸಿದೆ. ಪ್ಲೇಯಿಂಗ್ ಇಲೆವೆನ್​​ಗೆ ಅನ್​ಫಿಟ್ ಆದ್ರೂ ಹರ್ಷಿತ್, ಗಂಭೀರ್​​​​​ರ ಕೃಪಾಕಟಾಕ್ಷದಿಂದ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ತಿದ್ದಾರೆ. ಮಾಜಿ ಕ್ರಿಕೆಟಿಗರು ಗಂಭೀರ್​​​​​​ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದಾರೆ.

author-image
Ganesh Kerekuli
Harshit rana
Advertisment
  • ವೇಗಿ ಹರ್ಷಿತ್ ರಾಣಾ ಫ್ಲಾಪ್, ಕೋಚ್ ಗಂಭೀರ್​ಗೆ ಕ್ಲಾಸ್
  • ಮತ್ತೆ ಹರ್ಷಿತ್ ರಾಣಾ ಬೆಂಬಲಕ್ಕೆ ನಿಂತ ಕೋಚ್ ಗಂಭೀರ್
  • ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ ಯುವ ವೇಗಿ​

ಟೀಮ್ ಇಂಡಿಯಾಕ್ಕೆ ಎಂಟ್ರಿ ಕೊಟ್ಟ ಒಂದೇ ವರ್ಷದಲ್ಲಿ ಯುವ ವೇಗಿ ಹರ್ಷಿತ್ ರಾಣಾ, ಮೂರೂ ಫಾರ್ಮೆಟ್​​​ ಆಡಿಬಿಟ್ರು.  ಟೆಸ್ಟ್, ಏಕದಿನ ಮತ್ತು T20 ಕ್ರಿಕೆಟ್​ನಲ್ಲಿ, ಗುರುತಿಸಿಕೊಂಡು ಬಿಟ್ರು. ಹರ್ಷಿತ್​ಗೆ ಟ್ಯಾಲೆಂಟ್ ಇದೆ ನಿಜ. ಆದ್ರೆ ರಾಣಾ, ಸಿಕ್ಕ ಅವಕಾಶಗಳಲ್ಲಿ ಪರ್ಫಾಮ್ ಮಾಡಲಿಲ್ಲ. ಕೋಚ್ ಗೌತಮ್ ಗಂಭೀರ್​​ ಆರ್ಶಿವಾದದಿಂದ ತಂಡದಲ್ಲಿ ಸ್ಥಾನ ಪಡೆದಿರುವ ರಾಣಾ ಇದೀಗ ವ್ಯಪಾಕ ಟೀಕೆ ಗುರಿಯಾಗಿದ್ದಾರೆ.  

Advertisment

ಪರ್ತ್​​​ ಏಕದಿನ ಪಂದ್ಯದಲ್ಲಿ ಹರ್ಷಿತ್ ರಾಣಾ, ಪ್ಲೇಯಿಂಗ್ ಇಲೆವೆನ್​​ನಲ್ಲಿ ಕಾಣಿಸಿಕೊಂಡಿದ್ರು. ಬ್ಯಾಟಿಂಗ್​ನಲ್ಲಿ ಕೇವಲ 1 ರನ್​ಗಳಿಸಿದ್ದ ರಾಣಾ, 4 ಓವರ್ ಬೌಲಿಂಗ್ ಮಾಡಿ ಯಾವುದೇ ವಿಕೆಟ್ ಪಡೆಯಲಿಲ್ಲ. ಮೊದಲ ಏಕದಿನ ಪಂದ್ಯದಲ್ಲಿ ರಾಣಾ ಫ್ಲಾಪ್ ಶೋ ನೀಡ್ತಿದಂತೆ, ಮಾಜಿ ಕ್ರಿಕೆಟಿಗರು ಮತ್ತು ಕ್ರಿಕೆಟ್ ಅಭಿಮಾನಿಗಳು ಕೋಚ್ ಗೌತಮ್ ಗಂಭೀರ್​ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.​

ಇದನ್ನೂ ಓದಿ: ಹಳೇ ಚಾಳಿ ಬಿಟ್ಟಿಲ್ಲ ಕೊಹ್ಲಿ.. ಕಿಂಗ್​​​ಗೆ ಅದೇ ಸಮಸ್ಯೆ ಮುಳುವಾಯ್ತು..!

ಕನ್ನಡಿಗ ಪ್ರಸಿದ್ಧ್​ಗೆ ಕೊಕ್​, ಆ ಸ್ಥಾನಕ್ಕೆ ಬಲಿಷ್ಠ ಪ್ಲೇಯರ್​..! ಹೇಗಿರುತ್ತೆ ಟೀಂ ಇಂಡಿಯಾ ಪ್ಲೇಯಿಂಗ್​-11

ಕೋಚ್ ಗಂಭೀರ್​ರ ರಾಜಕೀಯ ಇಲ್ಲೇ ಗೊತ್ತಾಗುತ್ತೆ ನೋಡಿ. ಅನುಭವಿ ವೇಗಿ ಪ್ರಸಿದ್ಧ್ ಕೃಷ್ಣ ತಂಡದಲ್ಲಿ ಇದ್ರೂ ಕೋಚ್ ಗಂಭೀರ್​​​​ ಹರ್ಷಿತ್ ರಾಣಾಗೆ ಮಣೆ ಹಾಕಿದ್ದಾರೆ. ಹರ್ಷಿತ್​ಗೆ ಹೋಲಿಸಿದ್ರೆ ಪ್ರಸಿದ್ಧ್ ಎಷ್ಟೋ ಪಟ್ಟು ಉತ್ತಮ. 17 ಏಕದಿನ ಪಂದ್ಯಗಳನ್ನ ಆಡಿರುವ ಪ್ರಸಿದ್ಧ್, ಉತ್ತಮ ಎಕಾನಮಿ ಕೂಡ ಹೊಂದಿದ್ದಾರೆ. ಅನುಭವದಲ್ಲಿ ಮತ್ತು ಬೌಲಿಂಗ್ ಎಕಾನಮಿಯಲ್ಲಿ ಪ್ರಸಿದ್ಧ್,  ಹರ್ಷಿತ್​ಗಿಂತ ಬೆಸ್ಟ್. ಆದ್ರೂ ಕೋಚ್​ ತಾರತಮ್ಯ ಮಾಡಿರೋದು ಎಷ್ಟು ಸರಿ?

Advertisment

ಇತ್ತೀಚಿಗಷ್ಟೇ ಭಾರತ ತಂಡದ ಮಾಜಿ ಆಟಗಾರರಾದ ಕ್ರಿಸ್ ಶ್ರೀಕಾಂತ್ ಮತ್ತು ಆರ್.ಅಶ್ವಿನ್, ಹರ್ಷಿತ್ ರಾಣಾ ಬಗ್ಗೆ ಮಾತನಾಡಿದ್ರು. ಹರ್ಷಿತ್​, ಕೋಚ್ ಗಂಭೀರ್​​​ರ ಫೇವರಿಟ್ ಪ್ಲೇಯರ್. ಆದ್ರೆ ಹರ್ಷಿತ್ ತಂಡದಲ್ಲಿ ಯಾವ ಮಾನದಂಡದ ಮೇಲೆ ಇದ್ದಾರೋ ಗೊತ್ತಿಲ್ಲ ಅಂತ, ಗಂಭೀರ್ ವಿರುದ್ಧ ಟೀಕೆ ಮಾಡಿದ್ರು. ಅಂದು ಶ್ರೀಕಾಂತ್ ಮತ್ತು ಅಶ್ವಿನ್​​ಗೆ ತಿರುಗೇಟು ನೀಡಿದ್ದ ಗಂಭೀರ್, ಇಂದು ಮತ್ತೆ ಹರ್ಷಿತ್ ರಾಣಾ ಬೆಂಬಲಕ್ಕೆ ನಿಂತಿದ್ದಾರೆ. ತಾನು ಮಾಡಿದ್ದೇ ಸರಿ ಅಂತ ತೊಡೆತಟ್ಟಿದ್ದಾರೆ.  

ಇದನ್ನೂ ಓದಿ:ಮಂದಾನ ಭಾವಿ ಪತಿ ಹಾಕಿಸಿಕೊಂಡಿರೋ ಟ್ಯಾಟೂ ಏನು..? ಅಷ್ಟೊಂದು ಪ್ರೀತಿಸ್ತಾರಾ?

ಹರ್ಷಿತ್ ರಾಣಾ, ಮೂಲತಃ ಡೆಲ್ಲಿಯವರು. ಸದ್ಯ ಐಪಿಎಲ್ ಫ್ರಾಂಚೈಸಿ ಕೊಲ್ಕತ್ತಾ ನೈಟ್​ರೈಡರ್ಸ್ ತಂಡದ ಆಟಗಾರ ಕೂಡ ಹೌದು. ಕೋಚ್ ಗೌತಮ್ ಗಂಭೀರ್​​​​​ ಸಹ ಡೆಲ್ಲಿಯವರೇ. ಗಂಭೀರ್ ಕೆಕೆಆರ್ ಮೆಂಟರ್ ಕೂಡ ಆಗಿದ್ರು. ಅದೇ ಕಾರಣದಿಂದ ಗಂಭೀರ್​​, ಹರ್ಷಿತ್ ರಾಣಾರನ್ನ ಬ್ಯಾಕ್​ ಮಾಡ್ತಿದ್ದಾರೆ ಅಂತ ಹೇಳಲಾಗ್ತಿದೆ. ಡೆಲ್ಲಿ-ಕೆಕೆಆರ್ ಕನೆಕ್ಷನ್​ನಿಂದ ಹರ್ಷಿತ್ ರಾಣ, ಗಂಭೀರ್​ರ ಫೇವರಿಟ್ ಪ್ಲೇಯರ್ ಆಗಿದ್ದಾರೆ ಎನ್ನಲಾಗ್ತಿದೆ.  

Advertisment

ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ ಯುವ ವೇಗಿ

ಯುವ ವೇಗಿ ಹರ್ಷಿತ್ ರಾಣಾ ವಿರುದ್ಧ ಮಾಜಿ ಆಟಗಾರರು ಮಾತ್ರವಲ್ಲ, ಕ್ರಿಕೆಟ್ ಅಭಿಮಾನಿಗಳು ಸಿಡಿದೆದ್ದಿದ್ದಾರೆ. ಹರ್ಷಿತ್ ಆಲ್​ ಫಾರ್ಮೆಟ್ ಪ್ಲೇಯರ್, ಆದ್ರೆ ಆತ ಯಾವ ಫಾರ್ಮೆಟ್​ನಲ್ಲೂ ಉತ್ತಮ ಪ್ರದರ್ಶನ ನೀಡಿಲ್ಲ ಅಂತ ಒಬ್ಬ ಅಭಿಮಾನಿ ಕಮೆಂಟ್ ಮಾಡಿದ್ರೆ, ಮತ್ತೊಬ್ಬ ಅಭಿಮಾನಿ ಹರ್ಷಿತ್ ನಿಜವಾದ ಆಲ್​ರೌಂಡರ್. ಆದ್ರೆ ಆತನಿಗೆ ಬ್ಯಾಟಿಂಗ್​​​​ ಬರಲ್ಲ..ಬೌಲಿಂಗ್​ ಕೂಡ ಬರಲ್ಲ ಅಂತ ಟೀಕಿಸಿದ್ದಾರೆ.

ಇದನ್ನೂ ಓದಿ:ಕೊಹ್ಲಿಯನ್ನ ಅಟ್ಯಾಕ್ ಮಾಡಿದ ಬಾಬಾ ಬಾಗೀಶ್ವರ್.. ಫುಲ್ ಟ್ರೆಂಡಿಂಗ್ ವಿಷ್ಯ ಇಲ್ಲಿದೆ..!

ಹರ್ಷಿತ್ ರಾಣಾ ಪ್ರತಿಭಾವಂತ ಕ್ರಿಕೆಟರ್ ಹೌದೋ ಅಲ್ಲವೋ ಅನ್ನೋದು, ಕೋಚ್​ಗೆ ಚೆನ್ನಾಗೇ ಗೊತ್ತಿದೆ. ಕೋಚ್, ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಇಡಬಾರದು ಅಷ್ಟೇ.

Advertisment

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Prasidh Krishna Harshit Rana
Advertisment
Advertisment
Advertisment