/newsfirstlive-kannada/media/media_files/2025/10/20/virat-kohli-2025-10-20-16-03-09.jpg)
ವಿಶ್ವ ಕ್ರಿಕೆಟ್​ನಲ್ಲಿ ಈಗ ಟೀಮ್ ಇಂಡಿಯಾ ಆಟಗಾರರದ್ದೇ ಸದ್ದು. ಆನ್​ಫೀಲ್ಡ್​​ ಮತ್ತು ಆಫ್ ದ ಫೀಲ್ಡ್​​ನಲ್ಲಿ ಆಟಗಾರರ ನಡೆ ನುಡಿ ಬಗ್ಗೆ, ವ್ಯಾಪಕ ಚರ್ಚೆಯಾಗ್ತಿದೆ. ಇದೇ ವಿಚಾರಗಳು ಈಗ ಸೋಶಿಯಲ್ ಮೀಡಿಯಾಗಳಲ್ಲಿ ಫುಲ್ ಟ್ರೆಂಡಿಂಗ್​​ ಆಗ್ತಿವೆ.
ಕೊಹ್ಲಿಯನ್ನ ಅಟ್ಯಾಕ್ ಮಾಡಿದ ಬಾಬಾ ಬಾಗೀಶ್ವರ್
ಬಾಗೇಶ್ವರ್ ಧಾಮ್​ನ ಮುಖ್ಯಸ್ಥ ಧೀರೇಂದ್ರ ಕೃಷ್ಣ ಶಾಸ್ತ್ರಿ, ಟೀಮ್ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ಮೇಲೆ ಅಟ್ಯಾಕ್ ಮಾಡಿದ್ದಾರೆ. ಭಾರತದಲ್ಲಿ ಕೋಟಿ ಕೋಟಿ ಹಣ ಮಾಡಿರೋ ಕೊಹ್ಲಿ, ಎಲ್ಲೋ ಲಂಡನ್​​ನಲ್ಲಿ ಮನೆ ಕಟ್ಟಿಸಿ ವಾಸ ಮಾಡುತ್ತಿದ್ದಾರೆ. ಆದ್ರೆ ನಾನು ನಿಯತ್ತಾಗಿ ಕಥೆಗಳನ್ನ ಹೇಳಿಕೊಂಡು ಹಣ ಮಾಡಿದ್ದೇನೆ. ಬಂದ ಹಣದಲ್ಲಿ ಬಡವರಿಗೆ ಆಸ್ಪತ್ರೆಗಳನ್ನ ಕಟ್ಟಿಸಿದ್ದೇನೆ. ಬಡವರ ಸೇವೆ ಮಾಡಿದ್ದ ನನ್ನನ್ನ ಮೋಸಗಾರ ಅಂತಾರೆ. ಆದ್ರೆ ಕೊಹ್ಲಿಯನ್ನ ಹೀರೋ ಅಂತಾರೆ ಅಂತ ಬಾಬಾ ಬಾಗೀಶ್ವರ್ ಆಕ್ರೋಶದ ಮಾತುಗಳನ್ನ ಆಡಿದ್ದಾರೆ.
ರೋ-ಕೋ ಬಗ್ಗೆ ಅಗರ್​ಕರ್ ಬಾಂಬ್
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಆರಂಭವಾಗಿದೆ. ಆದ್ರೆ ಸರಣಿಗೂ ಮುನ್ನ ಟೀಮ್ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥ ಅಜೀತ್ ಅಗರ್​ಕರ್, ಬಾಂಬ್​ವೊಂದನ್ನ ಸಿಡಿಸಿದ್ದಾರೆ. ಅಗರ್​ಕರ್ ಮಾತು ಕೇಳಿದ ಕ್ರಿಕೆಟ್ ಅಭಿಮಾನಿಗಳು, ಶಾಕ್ ಆಗಿದ್ದಾರೆ. ಇಂಗ್ಲೆಂಡ್ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾದಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಆಡಬೇಕಿತ್ತು. ನಾವು ಇಬ್ಬರನ್ನ ಇಂಗ್ಲೆಂಡ್​ನಲ್ಲಿ ಟೆಸ್ಟ್ ಸರಣಿ ಆಡುವಂತೆ ಮನವಿ ಮಾಡಿಕೊಂಡೆವು. ರೋ-ಕೋ, ಟೆಸ್ಟ್ ನಿವೃತ್ತಿ ಆಯ್ಕೆ ಮಾಡಿಕೊಂಡರು ಎಂದು ಶಾಕಿಂಗ್ ವಿಚಾರ ಹೇಳಿದ್ದಾರೆ.
ಇದನ್ನೂ ಓದಿ:RCB ಮಾರಾಟಕ್ಕಿದೆ.. ಖರೀದಿಗೆ ಮುಗಿಬಿದ್ದ ಪ್ರತಿಷ್ಠಿತ 6 ಸಂಸ್ಥೆಗಳು..!
ಯಾವ ಜಗಳವೂ ಇಲ್ಲ
ಏಕದಿನ ತಂಡದ ನಾಯಕತ್ವ ಕಳೆದುಕೊಂಡ ರೋಹಿತ್ ಶರ್ಮಾ, ಕೋಚ್ ಮತ್ತು ಆಯ್ಕೆ ಸಮಿತಿ ವಿರುದ್ಧ ಗರಂ ಆಗಿದ್ದಾರೆ. ದಿಢೀರ್ ಅಂತ ಏಕದಿನ ತಂಡದ ನಾಯಕತ್ವದಿಂದ ಕೆಳಗಿಳಿಸಿ, ಶುಭ್ಮನ್​​​​ ಗಿಲ್​ಗೆ ಪಟ್ಟ ಕಟ್ಟಲಾಗಿದೆ ಅಂತ ರೋಹಿತ್, ತಮ್ಮ ಆಪ್ತರಲ್ಲಿ ಅಸಮಾಧಾನ ತೋಡಿಕೊಂಡಿದ್ದಾರೆ. ರೋಹಿತ್, ಏಕದಿನ ತಂಡದ ನೂತನ ನಾಯಕ ಗಿಲ್ ವಿರುದ್ದ ಮುನಿಸಿಕೊಂಡಿದ್ದಾರೆ ಅಂತ ಹೇಳಲಾಗ್ತಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಗಿಲ್, ನನ್ನ ರೋಹಿತ್ ಶರ್ಮಾ ನಡುವೆ ಅಂತಹದ್ದೇನು ಆಗಿಲ್ಲ. ನಮ್ಮ ನಡುವೆ ಯಾವ ಜಗಳವೂ ಒಳ ಇಲ್ಲ ಅಂತ, ಸ್ಪಷ್ಟನೆ ನೀಡಿದ್ದಾರೆ.
ಗಿಲ್​ ನೆನಸಿಕೊಂಡು ಭಯ ಬಿದ್ದಿದ್ದೆ
ಟಿ-ಟ್ವೆಂಟಿ ತಂಡದ ನಾಯಕ ಸೂರ್ಯಕುಮಾರ್ ಯಾದವ್, ಇತ್ತೀಚಿಗೆ ನಡೆದ ಘಟನೆಯೊಂದನ್ನ ಹಂಚಿಕೊಂಡಿದ್ದಾರೆ. ಶುಭ್ಮನ್​​ ಗಿಲ್​​ಗೆ ಏಕದಿನ ತಂಡದ ನಾಯಕತ್ವ ಕೊಟ್ಟಾಗ, ನನಗೆ ಭಯವಾಗಿತ್ತು. ಯಾಕಂದ್ರೆ ಗಿಲ್, ನನ್ನಿಂದ ಟಿ-ಟ್ವೆಂಟಿ ತಂಡದ ನಾಯಕತ್ವವನ್ನೂ ಕಸಿದುಕೊಳ್ಳಬಹುದು. ಈಗಾಗಲೇ ಗಿಲ್, ಟೆಸ್ಟ್ ಮತ್ತು ಏಕದಿನ ತಂಡದ ಸಾರಥಿ ಆಗಿದ್ದಾರೆ. ಮುಂದೆ ಟಿ-ಟ್ವೆಂಟಿ ತಂಡದ ನಾಯಕನಾಗಬಹುದು ಅಂತ ನಾನು ಬೆಚ್ಚಿಬಿದ್ದಿದ್ದೆ. ತಮ್ಮ ಆತಂಕದ ದಿನಗಳ ಬಗ್ಗೆ SKY ಮನಬಿಚ್ಚಿ ಮಾತನಾಡಿದ್ದಾರೆ.
ಇದನ್ನೂ ಓದಿ: ಕೊಹ್ಲಿ ನಿವೃತ್ತಿ ಪ್ಲಾನ್ ರೆಡಿ.. ಲಂಡನ್​ನಲ್ಲಿ ನೆಲೆಯೂರಲು ನಿರ್ಧರಿಸಿದ್ದೇಕೆ..?
ವೇಗಿ ಶಮಿಗೆ ಚೀಫ್ ಸೆಲೆಕ್ಟರ್ ಟಾಂಗ್
ಟೀಮ್ ಇಂಡಿಯಾ ಆಟಗಾರರು ಮತ್ತು ಆಯ್ಕೆ ಸಮಿತಿಯ ಒಳ ಜಗಳ ಇದೇ ಮೊದಲಲ್ಲ. ಈ ಹಿಂದೆ ಸಾಕಷ್ಟು ಆಟಗಾರರು, ಆಯ್ಕೆ ಸಮಿತಿಯ ವಿರುದ್ಧ ಸಿಡಿದೆದ್ದರು. ಇದೀಗ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ, ಆಯ್ಕೆ ಸಮಿತಿ ಮುಖ್ಯಸ್ಥ ಅಜೀತ್​ ಅಗರ್​​​ಕರ್ ವಿರುದ್ಧ ಅಸಮಾಧಾನ ಹೊರಹಾಕಿದ್ರು. ಶಮಿ ಹೇಳಿಕೆಗೆ ಕೌಂಟರ್ ಕೊಟ್ಟಿರುವ ಚೀಫ್ ಸೆಲೆಕ್ಟರ್ ಅಗರ್​​​​ಕರ್, ಅವರು ಏನು ಹೇಳ್ತಾರೋ ಹೇಳಲಿ, ಮುಂದೆ ನೋಡೋಣ ಅಂದಿದ್ದಾರೆ. ಒಟ್ನಲ್ಲಿ, ಕ್ರಿಕೆಟ್ ಅಂದ್ರೆನೇ ಎಂಟರ್​ಟೈನ್ಮೆಂಟ್. ಕ್ರಿಕೆಟಿಗರು ಅಂದ್ರೆನೇ ಹೀರೋಸ್.. ಹಾಗಾಗಿ ಇಲ್ಲಿ ಏನ್ ನಡೆದ್ರೂ ಏನ್ ಮಾಡಿದ್ರೂ ಸುದ್ದಿನೇ.
ಇದನ್ನೂ ಓದಿ: ಆಸ್ಟ್ರೇಲಿಯಾದ ವಿರುದ್ಧದ 2ನೇ ಪಂದ್ಯಕ್ಕೆ ಟೀಮ್ ಇಂಡಿಯಾದಲ್ಲಿ ಏನೆಲ್ಲಾ ಬದಲಾವಣೆ? : ಯಾರು ಸೇರ್ಪಡೆ, ಯಾರು ಡ್ರಾಪ್ ಆಗ್ತಾರೆ?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ