/newsfirstlive-kannada/media/media_files/2025/08/28/rcb-cares-2025-08-28-15-27-04.jpg)
ಸೆಪ್ಟೆಂಬರ್​​ 30, 2025. ಐಪಿಎಲ್​​ನ ಮಾಜಿ ಅಧ್ಯಕ್ಷ ಲಲಿತ್​ ಮೋದಿ ಮಾಡಿದ್ದ ಒಂದು ಟ್ವೀಟ್​ ಕ್ರಿಕೆಟ್​ ಲೋಕದಲ್ಲಿ ಸಂಚಲನ ಸೃಷ್ಟಿಸಿತ್ತು. ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ಫ್ರಾಂಚೈಸಿ ಮಾರಾಟಕ್ಕೆ ತೆರೆ ಹಿಂದೆ ಪ್ಲಾನ್​ ನಡೀತಿದೆ ಅನ್ನೋ ಸ್ಫೋಟಕ ಸುದ್ದಿಯನ್ನ ಲಲಿತ್​ ಮೋದಿ ರಿವೀಲ್​ ಮಾಡಿದ್ರು. ಅದಾದ ಬಳಿಕ ಲಲಿತ್​ ಮೋದಿ ಸೈಲೆಂಟಾಗಿದ್ದಾರೆ. ಅತ್ತ ಫ್ರಾಂಚೈಸಿ ಕೂಡ YES OR NO ಏನನ್ನೂ ಹೇಳದೇ ಮೌನಕ್ಕೆ ಜಾರಿದೆ. ಆರ್​​ಸಿಬಿ ಮೇಲೆ ಆಸಕ್ತಿ ಖರೀದಿದಾರರು ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗ್ತಿದ್ದಾರೆ. ಒಂದಲ್ಲ.. ಎರಡಲ್ಲ.. ಬರೋಬ್ಬರಿ ಆರು ಕಂಪನಿಗಳು ಆರ್​​ಸಿಬಿ ಖರೀದಿಗೆ ರೆಡಿಯಾಗಿವೆ.
ಇದನ್ನೂ ಓದಿ: ಆಲ್​ ಟೈಮ್ IPL ತಂಡ ಪ್ರಕಟಿಸಿದ ಗೇಲ್..! ಆರ್​ಸಿಬಿಯಿಂದ ಎಷ್ಟು ಮಂದಿಗೆ ಸ್ಥಾನ..?
ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಮೇಲೆ ಸಿರಮ್​ ಇನ್ಟಿಟ್ಯೂಟ್​ನ ಆದಾರ್​ ಪೂನಾವಾಲ ಕಣ್ಣು ಬಿದ್ದಿದೆ. ಆರ್​​ಸಿಬಿ ಸೇಲ್​ಗಿದೆ ಅನ್ನೋ ಸುದ್ದಿ ಹೊರಬಿದ್ದ ಬೆನ್ನಲ್ಲೇ ಬಹಿರಂಗವಾಗೇ ಆದಾರ್​ ಪೂನಾವಾರ ಆಸಕ್ತಿಯಿದೆ ಎಂದು ಹೇಳಿದ್ರು. ಇದೀಗ ಹಾಲಿ ಓನರ್ಸ್​ ಡಿಯಾಜಿಯೋ ಗ್ರೂಪ್​ ಜೊತೆಗೆ ಈ ಬಗ್ಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. 2010ರಲ್ಲಿ ಐಪಿಎಲ್​ಗೆ 2 ಹೊಸ ತಂಡಗಳ ಎಂಟ್ರಿಯಾದಾಗಲೇ ಪೂನಾವಾಲ ಫ್ಯಾಮಿಲಿ ತಂಡ ಖರೀದಿಗೆ ಬಿಡ್​ ಮಾಡಿತ್ತು. ಅಂದು ಬಿಡ್​ ಗೆಲ್ಲುವಲ್ಲಿ ಫೇಲ್​ ಆಗಿದ್ದ ಪೂನಾವಾಲ ಇಂದು ಆರ್​​ಸಿಬಿ ಖರೀದಿ ಖರೀದಿಸಿ ಕನಸು ನನಸು ಮಾಡಿಕೊಳ್ಳೋ ಲೆಕ್ಕಾಚಾರದಲ್ಲಿದ್ದಾರೆ.
ಜಿಂದಾಲ್​ ಕಂಪನಿಯ ಪಾಲಾಗುತ್ತಾ RCB?
ಉದ್ಯಮಿ ಪಾರ್ಥ್​ ಜಿಂದಾಲ್ ಆರ್​​​ಸಿಬಿಯ ಖರೀದಿಗೆ ಗಂಭೀರವಾಗಿ ಚಿಂತಿಸಿದ್ದಾರೆ. ಈಗಾಗಲೇ ಐಪಿಎಲ್​ನಲ್ಲಿ ಜಿಂದಾಲ್ ಕಂಪನಿ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಒಡೆತನ ಹೊಂದಿದೆ. ಡೆಲ್ಲಿ ಫ್ರಾಂಚೈಸಿಯ 50 ಪರ್ಸೆಂಟ್​ ಶೇರುಗಳ ಹೊಂದಿರೋ ಪಾರ್ಥ್​ ಜಿಂದಾಲ್​, ಪೂರ್ಣ ಪ್ರಮಾಣದಲ್ಲಿ ತಂಡವೊಂದರ ಒಡೆಯನಾಗೋ ಲೆಕ್ಕಾಚಾರದಲ್ಲಿದ್ದಾರಂತೆ. ISL​​ನ ಬೆಂಗಳೂರು ಫುಟ್ಬಾಲ್​ ತಂಡದ ಒಡೆಯನಾಗಿರೋ ಪಾರ್ಥ್​ ಜಿಂದಾಲ್​, ಕ್ರಿಕೆಟ್​ನಲ್ಲೂ ಬೆಂಗಳೂರು ಮೂಲದ ತಂಡದ ಖರೀದಿಗೆ ಹೆಚ್ಚು ಆಸಕ್ತಿ ಹೊಂದಿದ್ದಾರೆ.
ರೆಡ್​​ ಆರ್ಮಿ ಮೇಲೆ ‘ದೊಡ್ಡಣ್ಣ’ ಅದಾನಿಗೂ ಕಣ್ಣು
ಭಾರತದ ಟಾಪ್​ ಶ್ರೀಮಂತರಲ್ಲಿ ಒಬ್ಬರಾದ ಗೌತಮ್​ ಅದಾನಿ ಕೂಡ ಆರ್​​ಸಿಬಿ ಖರೀದಿಗೆ ಮುಂದಾಗಿದ್ದಾರೆ. ಐಪಿಎಲ್​ನಲ್ಲಿ ತಂಡದ ಖರೀದಿಸಲು 2022ರಲ್ಲಿ ಪ್ರಯತ್ನಿಸಿ ಅದಾನಿ ಗ್ರೂಪ್​ ವಿಫಲವಾಗಿತ್ತು. ಬಳಿಕ ಮಹಿಳಾ ಪ್ರೀಮಿಯರ್​ ಲೀಗ್​ನಲ್ಲಿ ಗುಜರಾತ್​ ಜೈಂಟ್ಸ್​ ತಂಡವನ್ನ ಅದಾನಿ ಗ್ರೂಪ್​ ಖರೀದಿಸಿದೆ. ಆರ್​​ಸಿಬಿಯನ್ನ ತೆಕ್ಕೆಗೆ ತೆಗೆದುಕೊಂಡು ಐಪಿಎಲ್​ಗೂ ಎಂಟ್ರಿಕೊಡುವ ಲೆಕ್ಕಾಚಾರದಲ್ಲಿದೆ.
ಅಮೇರಿಕಾದ 2 ಕಂಪನಿಗಳು
ಡೆಲ್ಲಿ ಮೂಲದ ಮಲ್ಟಿ ಮಿಲೇನಿಯರ್​ ಒಬ್ಬರೂ ಕೂಡ ಆರ್​​ಸಿಬಿ ಖರೀದಿಗೆ ಆಸಕ್ತಿ ಹೊಂದಿದ್ದಾರೆ ಎಂದು ವರದಿಯಾಗಿದೆ. ಯಾರೆಂಬ ಮಾಹಿತಿ ಬಹಿರಂಗವಾಗಿಲ್ಲ. ಜೊತೆಗೆ ಅಮೆರಿಕಾ ಮೂಲದ 2 ಇಕ್ವಿಟಿ ಕಂಪನಿಗಳು ಕೂಡ ಆರ್​​ಸಿಬಿಯ ಓನರ್ಸ್​​ ಜೊತೆಗೆ ಮಾತುಕತೆಯನ್ನ ನಡೆಸಿವೆ ಎನ್ನಲಾಗ್ತಿದೆ.
ಇದನ್ನೂ ಓದಿ:ಕೊಹ್ಲಿ ಆರ್​ಸಿಬಿ ಬಿಡುವ ನಿರ್ಧಾರದ ಹಿಂದಿನ 5 ಕಾರಣಗಳು ಇಲ್ಲಿವೆ!
2025ರಲ್ಲಿ ಚೊಚ್ಚಲ ಐಪಿಎಲ್​ ಟ್ರೋಫಿ ಗೆದ್ದ ಬಳಿಕ ಆರ್​ಸಿಬಿಯ ಷೇರುಗಳ ಮೌಲ್ಯ ಗಣನೀಯವಾಗಿ ಏರಿಕೆ ಕಂಡದೆ. ಸದ್ಯದ ಮಾಹಿತಿ ಪ್ರಕಾರ ಆರ್​​ಸಿಬಿಯ ಮೌಲ್ಯ 2 ಬಿಲಿಯನ್​​​ ಯುಎಸ್​​ ಡಾಲರ್​​ ಎನ್ನಲಾಗ್ತಿದೆ. ಸರಿ ಸುಮಾರು 17 ಸಾವಿರದ 59 ಕೋಟಿಗೂ ಅಧಿಕ ಮೌಲ್ಯವನ್ನ ಹೊಂದಿದೆ. ಇದಕ್ಕಿಂತ ಹೆಚ್ಚಿನ ಅಮೌಂಟ್​​ಗೆ ಸೇಲ್​ ಮಾಡಲು ಆರ್​​ಸಿಬಿ ಓನರ್ಸ್​ ಮುಂದಾಗಿದ್ದಾರೆ. ಡಿಮ್ಯಾಂಡ್​ ಹೆಚ್ಚಾಗಿದ್ದು, 6 ಮಂದಿ ಖರೀದಿದಾರರೂ ಮುಂದೆ ಬಂದಿದ್ದಾರೆ.
ಆರ್​ಸಿಬಿ ಫ್ರಾಂಚೈಸಿ ಮಾರಲು ಹೊರಟಿದ್ದೇಕೆ?
ಐಪಿಎಲ್​​ ಕೇವಲ ಕ್ರಿಕೆಟ್ ಅಲ್ಲ. ಅದೊಂದು ಬ್ಯುಸಿನೆಸ್. ಆಟಗಾರರ ಮೇಲೆ ಕೋಟಿ ಕೋಟಿ ಸುರಿಯುವ ಮಾಲೀಕರು ದೊಡ್ಡ ಲಾಭದ ನಿರೀಕ್ಷೆಯಲ್ಲಿರ್ತಾರೆ. ಒಂದು ವೇಳೆ ತಂಡ ಉತ್ತಮ ಪ್ರದರ್ಶನ ನೀಡ್ತಿದ್ರೆ, ಇದೇ ಸಮಯ ಕಾಯುವ ಫ್ರಾಂಚೈಸಿ ಮಾಲೀಕರು, ತಂಡವನ್ನ ಹೆಚ್ಚಿನ ಲಾಭಕ್ಕೆ ಮಾರಲು ಮುಂದಾಗ್ತಾರೆ. ಈ ಹಿಂದೆ ಗುಜರಾತ್​ ಟೈಟನ್ಸ್​ ತಂಡದ ಮಾಲೀಕತ್ವ ಹೊಂದಿದ್ದ ಸಿವಿಸಿ ಕ್ಯಾಪಿಟಲ್ಸ್​, ಮೊದಲ 2 ಸೀಸನ್​ನಲ್ಲಿ ತಂಡ ಸಾಲಿಡ್​ ಪರ್ಫಾಮೆನ್ಸ್​ ನೀಡಿದ ಮೇಲೆ ಮಾರಾಟ ಮಾಡಿತ್ತು. ಇದೀಗ ಡಿಯಾಜಿಯೋ ಆರ್​​ಸಿಬಿಯನ್ನ ಮಾರೋಕೆ ಹೊರಟಿದೆ.
ಆರ್​ಸಿಬಿ ಫ್ರಾಂಚೈಸಿ ಮಾರಾಟಕ್ಕಿದ್ಯೋ? ಇಲ್ವೋ? ಅನ್ನೋದು ಅಧಿಕೃತವಾಗಿ ತಿಳಿದು ಬಂದಿಲ್ಲ. ಖರೀದಿಗೆ ಹಲವು ಕಂಪನಿಗಳಂತೂ ಕ್ಯೂನಲ್ಲಿ ನಿಂತಿವೆ. ಆರ್​​ಸಿಬಿ ಫ್ರಾಂಚೈಸಿಗಿರೋ ಕ್ರೇಜ್​ನ ಲಾಭ ಪಡೆದು ಕೋಟಿ ಕೋಟಿ ಕಮಾಲ್​ ಮಾಡೋ ಲೆಕ್ಕಾಚಾರ ಹಾಕ್ತಿವೆ. ಹಾಲಿ ಓನರ್​​​ ಡಿಯಾಜಿಯೋ ಕಂಪನಿ ಮಾತ್ರ ಈ ವಿಚಾರದಲ್ಲಿ ಮೌನಕ್ಕೆ ಜಾರಿದೆ.
ಇದನ್ನೂ ಓದಿ: ಗಿಲ್ ಪಡೆಗೆ ಭಾರೀ ಮುಖಭಂಗ.. ಮೊದಲ ಪಂದ್ಯ ಗೆದ್ದ ಆಸ್ಟ್ರೇಲಿಯಾ..!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ