/newsfirstlive-kannada/media/media_files/2025/08/26/rcb_kohli-2025-08-26-10-46-18.jpg)
ಇಂಡಿಯನ್ ಪ್ರೀಮಿಯರ್ ಲೀಗ್. ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್. ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಶ್ರೀಮಂತ ಕ್ರಿಕೆಟ್ ಲೀಗ್ನ ಚಾಂಪಿಯನ್. 18 ವರ್ಷಗಳ ಬಳಿಕ ಚೊಚ್ಚಲ ಟ್ರೋಫಿ ಗೆದ್ದ ಆರ್ಸಿಬಿ, ಈಗ ಐಪಿಎಲ್ ಬಾಸ್ ಆಗಿದೆ. 5 ಬಾರಿ ಟ್ರೋಫಿ ಗೆದ್ದ ಚೆನ್ನೈನೇ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿಸಿದೆ. ಆರ್ಸಿಬಿ ಈಗ ಐಪಿಎಲ್ನ ಮೋಸ್ಟ್ ವ್ಯಾಲ್ಯುವೇಬಲ್ ಅಂಡ್ ರಿಚೆಸ್ಟ್ ಟೀಮ್!
ಐಪಿಎಲ್ನ ಮೋಸ್ಟ್ ವ್ಯಾಲ್ಯೂಬಲ್ ಟೀಮ್ ಆರ್ಸಿಬಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು. ಐಪಿಎಲ್ನ ಹಾಲಿ ಚಾಂಪಿಯನ್ಸ್. ಬರೋಬ್ಬರಿ 18 ವರ್ಷಗಳ ಬಳಿಕ ಟ್ರೋಫಿಗೆ ಮುತ್ತಿಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಆನ್ಫೀಲ್ಡ್ನಲ್ಲೇ ಅಲ್ಲ.. ಆಫ್ ದಿ ಫೀಲ್ಡ್ ಮಾರ್ಕೆಟಿಂಗ್ನಲ್ಲೂ ಚಾಂಪಿಯನ್ ಆಗಿದೆ. ಟ್ರೋಫಿಯ ಬರ ನೀಗಿಸಿಕೊಂಡ ಬಳಿಕ ಬ್ರ್ಯಾಂಡ್ ವಾಲ್ಯೂ ಹೆಚ್ಚಿಸಿಕೊಂಡಿರುವ ಬೆಂಗಳೂರು ಬಾಯ್ಸ್, ಸಿಎಸ್‌ಕೆ, ಮುಂಬೈ ಇಂಡಿಯನ್ಸ್ ತಂಡಗಳ ದಾಖಲೆಗಳನ್ನೇ ನುಚ್ಚುನೂರು ಮಾಡಿ ನಂಬರ್.1 ಪಟ್ಟ ಅಲಂಕರಿಸಿದೆ.
ಇದನ್ನೂ ಓದಿ:ರಾಜಸ್ಥಾನ್ ರಾಯಲ್ಸ್ಗೆ ದ್ರಾವಿಡ್ ಶಾಕ್; ಕೋಚ್ ಹುದ್ದೆಗೆ ದಿಢೀರ್ ರಾಜೀನಾಮೆ..!
ಚಾಂಪಿಯನ್ ಆರ್ಸಿಬಿ ಆದಾಯ ಬಂಪರ್ ಏರಿಕೆ
ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ ನೀಡಿ ಆರ್ಸಿಬಿ ಚಾಂಪಿಯನ್ ಆಗಿ ಮೆರೆದಾಡಿದೆ. ಚಾಂಪಿಯನ್ ಆಗಿ ಮರೆದಾಡಿದ ಆರ್ಸಿಬಿ ಆದಾಯ ಕೂಡ ಭರ್ಜರಿ ಏರಿಕೆ ಕಂಡಿದೆ. ಆರ್ಸಿಬಿಯ ಬ್ರ್ಯಾಂಡ್ ವ್ಯಾಲ್ಯೂ ಶೇಖಡ 18.5 ಏರಿಕೆ ಕಂಡಿದೆ. ಇದರೊಂದಿಗೆ ಆರ್ಸಿಬಿಯ ಬ್ರ್ಯಾಂಡ್ ವ್ಯಾಲ್ಯೂ 2307 ಕೋಟಿಗೆ ಹೆಚ್ಚಳವಾಗಿದೆ. ಐಪಿಎಲ್ನ ಶ್ರೀಮಂತ ಫ್ರಾಂಚೈಸಿಯಾಗಿ ಆರ್ಸಿಬಿ ಹೊರಹೊಮ್ಮಿದೆ.
2ನೇ ಸ್ಥಾನದಲ್ಲಿ ಅಂಬಾನಿ ಬ್ರಿಗೇಡ್ ಮುಂಬೈ
ಮುಂಬೈ ಇಂಡಿಯನ್ಸ್, ಐಪಿಎಲ್ನ ಮೋಸ್ಟ್ ಸಕ್ಸಸ್ಫುಲ್ ಫ್ರಾಂಚೈಸಿ. ಕಳೆದ ಸೀಸನ್ನಲ್ಲಿ ಹೇಳಿಕೊಳ್ಳುವ ಆಟವಾಡದ ಮುಂಬೈನ ಬ್ರ್ಯಾಂಡ್ವ್ಯಾಲ್ಯೂ ಲಿಸ್ಟ್ನಲ್ಲಿ 2ನೇ ಸ್ಥಾನದಲ್ಲಿದೆ. 2024ರಿಂದ 2025ಕ್ಕೆ 18.6 ಪರ್ಸೆಂಟ್ಗೆ ವ್ಯಾಲ್ಯೂ ಏರಿದೆ. ಒಟ್ಟಾರೆ 2075 ಕೋಟಿ ಬ್ರ್ಯಾಂಡ್ ವ್ಯಾಲ್ಯೂ ಅಂಬಾನಿ ಬ್ರಿಗೆಡ್ ಮುಂಬೈ ಇಂಡಿಯನ್ಸ್ನದ್ದಾಗಿದೆ.
ನಂ.1 ಸ್ಥಾನದಿಂದ ಮೂರಕ್ಕೆ ಕುಸಿದ CSK
ಬ್ರ್ಯಾಂಡ್ ವಾಲ್ಯೂನಲ್ಲಿ ಕಳೆದ ವರ್ಷ ನಂ.1 ಪಟ್ಟದಲ್ಲಿದ್ದ 5 ಬಾರಿಯ ಚೆನ್ನೈ, 2025ರಲ್ಲಿ 3ನೇ ಸ್ಥಾನಕ್ಕೆ ಕುಸಿದಿದೆ. ಇಂಟ್ರೆಸ್ಟಿಂಗ್ ಅಂದ್ರೆ, ಚೆನ್ನೈ ಆನ್ಫೀಲ್ಡ್ನಲ್ಲೇ ಅಲ್ಲ. ಆಫ್ ದಿ ಫೀಲ್ಡ್ ಪರ್ಫಮೆನ್ಸ್ನಲ್ಲೂ ಪಾತಾಕ್ಕೆ ಕುಸಿದಿದೆ. ಅದು ಎಷ್ಟರ ಮಟ್ಟಿಗೆ ಅಂದ್ರೆ, ಚೆನ್ನೈ ತಂಡದ Growth ಪರ್ಸೆಂಟ್ 1.7ರಷ್ಟು ಮಾತ್ರ. ಕೇವಲ 1.7ರಷ್ಟು ಏರಿಕೆ ಕಂಡಿರುವ ಚೆನ್ನೈ, ಒಟ್ಟು ಬ್ರ್ಯಾಂಡ್ ವಾಲ್ಯೂ, 2015 ಕೋಟಿ.
ಇದನ್ನೂ ಓದಿ: ಕೊಹ್ಲಿ, ರೋಹಿತ್ ಭವಿಷ್ಯ ಬರೆಯಲು BCCI ಮುಹೂರ್ತ; ಬೆಂಗಳೂರಲ್ಲಿ ವೇದಿಕೆ ರೆಡಿ..!
ಆರ್ಸಿಬಿ, ಮುಂಬೈ, ಚೆನ್ನೈ ಮೊದಲ ಮೂರು ಸ್ಥಾನಗಳಲ್ಲಿದ್ರೆ, 5.1ರಷ್ಟು ಬೆಳವಣಿಗೆ ಕಂಡಿರುವ ಕೊಲ್ಕತ್ತಾ ತಂಡದ ಮೌಲ್ಯ 1946 ಕೋಟಿಯಾಗಿದೆ. ಶೇಕಡಾ 16.7 ಪರ್ಸೆಟ್ ಬೆಳವಣಿಗೆ ಹೊಂದಿರುವ ಸನ್ ರೈಸರ್ಸ್ ಹೈದ್ರಾಬಾದ್, ಬ್ರ್ಯಾಂಡ್ ಮೌಲ್ಯ 1320.5 ಕೋಟಿ. 1303.4 ಕೋಟಿಯ ಬ್ರ್ಯಾಂಡ್ ವಾಲ್ಯೂ ಹೊಂದಿರುವ ಡೆಲ್ಲಿ ಕ್ಯಾಪಿಟಲ್ಸ್, ಆದಾಯ ಶೇಕಡಾ 16ರಷ್ಟು ಹೆಚ್ಚಿದೆ. ರಾಜಸ್ಥಾನ್ ರಾಯಲ್ಸ್ 1252 ಕೋಟಿ, ಗುಜರಾತ್ ಟೈಟನ್ಸ್ 1217 ಕೋಟಿ ಬ್ರ್ಯಾಂಡ್ ವ್ಯಾಲ್ಯೂ ಹೊಂದಿದ್ರೆ. 9ನೇ ಸ್ಥಾನದಲ್ಲಿರುವ ಪಂಜಾಬ್ ಕಿಂಗ್ಸ್ ಬೆಳವಣಿಗೆ ಶೇಖಡ 39.6ರಷ್ಟು ಇದೆ. ಇದರ ಒಟ್ಟು ಬ್ರ್ಯಾಂಡ್ ಮೌಲ್ಯ 1209 ಕೋಟಿ ರೂಪಾಯಿ.
39.6% ಹೆಚ್ಚಾದ ಪಂಜಾಬ್ ಕಿಂಗ್ಸ್ ಬ್ರ್ಯಾಂಡ್ವ್ಯಾಲ್ಯೂ
ಆಶ್ಚರ್ಯ ಅನ್ನಿಸಿದ್ರು ಇದು ಸತ್ಯ. ಸೀಸನ್-18ರಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಪಂಜಾಬ್ ಕಿಂಗ್ಸ್, ಟ್ರೋಫಿ ಗೆಲ್ಲುವಲ್ಲಿ ವಿಫಲವಾಗಿದೆ ನಿಜ. ಬ್ರ್ಯಾಂಡ್ ವ್ಯಾಲ್ಯೂನಲ್ಲಿ ಭಾರೀ ಏರಿಕೆ ಕಂಡಿದೆ. ಒಂದಲ್ಲ, ಎರಡಲ್ಲ ಶೇಖಡ 39.6ರಷ್ಟು ಗೈನ್ ಆಗಿದೆ. ಹೀಗಾದ್ರೂ ಮೋಸ್ಟ್ ವಾಲ್ಯೂಬಲ್ ಟೀಮ್ ಲಿಸ್ಟ್ನಲ್ಲಿ 9ನೇ ಸ್ಥಾನದಲ್ಲೇ ಉಳಿದೆ. ರಿಷಭ್ ಪಂತ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ಶೇಕಡಾ 34.1ರಷ್ಟು ಬೆಳವಣಿಗೆ ಕಂಡಿವೆ. ಇದು ಆಯಾ ತಂಡದಗಳ ಆದಾಯವನ್ನು ದುಪ್ಪಟಾಗಿಸಿದಕ್ಕೆ ಬೆಸ್ಟ್ ಎಕ್ಸಾಂಪಲ್. ಒಟ್ಟಾರೆ ಬ್ರ್ಯಾಂಡ್ ಮೌಲ್ಯದಲ್ಲಿ ಆರ್ಸಿಬಿ ಕಾಣ್ತಿರುವುದು ಫ್ಯಾನ್ಸ್ಗೆ ಖುಷಿ ವಿಚಾರ.
ಇದನ್ನೂ ಓದಿ:ನಿತೀಶ್, ದಿಗ್ವೇಶ್ ರಾಠಿ ಫೈಟ್! ಕೆಣಕಿ ಕೈಸುಟ್ಟುಕೊಂಡ ದಿಗ್ವೇಶ್ VIDEO
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ