/newsfirstlive-kannada/media/media_files/2025/08/31/digvesh-rathi-2025-08-31-17-41-03.jpg)
ಕ್ರಿಕೆಟ್ ಅನ್ನೋದು ಕೇವಲ ಜಂಟಲ್ಮನ್ ಗೇಮ್ ಮಾತ್ರವಲ್ಲ. ಒಂದು ಕಿರಿಕ್ ಗೇಮ್ ಅಂದ್ರೂ ತಪ್ಪಿಲ್ಲ. ಬೌಂಡರಿ, ಸಿಕ್ಸರ್ಗಳಿಂದ ರಂಜಿಸುವ ಕ್ರಿಕೆಟ್, ಆಗಾಗ ಕಿರಿಕ್ಗಳಿಂದಲೂ ಸುದ್ದಿಯಾಗುತ್ತೆ.
ಭಾರತೀಯ ಕ್ರಿಕೆಟ್ ಲೋಕದಲ್ಲಿ ಯಾರು ಹೆಚ್ಚು ಸುದ್ದಿಯಾಗ್ತಾರೋ ಇಲ್ವೋ? ಡೆಲ್ಲಿ ಬಾಯ್ಸ್ ಅಂತೂ ಆನ್ಫಿಲ್ಡ್ ವಿವಾದಗಳಿಂದಲೇ ಸುದ್ದಿಯಾಗ್ತಿರ್ತಾರೆ. ವಿರಾಟ್ ಕೊಹ್ಲಿ ಅಂಡ್ ಗೌತಮ್ ಗಂಭೀರ್, ನಿತೀಶ್ ರಾಣಾ ಅಂಡ್ ಹೃತಿಕ್ ಶೊಕೀನ್ ಮೈದಾನದಲ್ಲೇ ಕಿತ್ತಾಡಿದ್ದಿದೆ. ಐಪಿಎಲ್ನಲ್ಲೂ ಡೆಲ್ಲಿ ಮೂಲದ ದಿಗ್ವೇಶ್ ರಾಠಿ, ಕಿರಿಕ್ ಹಾಗೂ ವಿವಾದಗಳಿಂದಲೇ ಟೂರ್ನಿಯುದಕ್ಕೂ ಸುದ್ದಿಯಾಗಿದ್ದಿದೆ. ಇದೇ ದಿಗ್ವೇಶ್ ರಾಠಿ, ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಇದಕ್ಕೆ ಸಾಕ್ಷಿಯಾಗಿದ್ದು ಡೆಲ್ಲಿ ಪ್ರೀಮಿಯರ್ ಲೀಗ್.
ನಿತೀಶ್, ದಿಗ್ವೇಶ್ ರಾಠಿ ಫೈಟ್
ವೆಸ್ಟ್ ಡೆಲ್ಲಿ ಲಯನ್ಸ್ ಅಂಡ್ ಸೌತ್ ಡೆಲ್ಲಿ ಸೂಪರ್‌ಸ್ಟಾರ್ಸ್ ನಡುವಿನ ಎಲಿಮಿನೇಟರ್ ಮ್ಯಾಚ್. ಈ ಪಂದ್ಯದಲ್ಲಿ ಸೌತ್ ಡೆಲ್ಲಿ ಸೂಪರ್‌ಸ್ಟಾರ್ಸ್ ನೀಡಿದ್ದ ಟಾರ್ಗೆಟ್ ವೆಸ್ಟ್ ಡೆಲ್ಲಿ ಬೆನ್ನಟ್ಟಿತ್ತು. ಆರಂಭಿಕ ಅಘಾತದ ನಡುವೆಯೂ ನಿತಿಶ್ ರಾಣಾ ಅಬ್ಬರಿಸುತ್ತಿದ್ದರು. 21 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ಗೆಲುವಿನತ್ತ ಕೊಡೊಯ್ದಿದ್ದ ಪಂದ್ಯಕ್ಕೆ ಮತ್ತಷ್ಟು ರೋಚಕ ಟಚ್ ನೀಡಿದ್ದು ದಿಗ್ವೇಶ್ ರಾಠಿ.
ಇದನ್ನೂ ಓದಿ:ಕೊಹ್ಲಿ, ರೋಹಿತ್ ಭವಿಷ್ಯ ಬರೆಯಲು BCCI ಮುಹೂರ್ತ; ಬೆಂಗಳೂರಲ್ಲಿ ವೇದಿಕೆ ರೆಡಿ..!
Things got 𝐡𝐞𝐚𝐭𝐞𝐝 between Digvesh Rathi and Nitish Rana 👀pic.twitter.com/KqIkB6DYCE
— Cricbuzz (@cricbuzz) August 30, 2025
10ನೇ ಓವರ್ ಎಸೆತಯಲು ಬಂದ ದಿಗ್ವೇಶ್ಗೆ, ರಾಣಾ 1 ಬೌಂಡರಿ, ಸಿಕ್ಸರ್ನೊಂದಿಗೆ ವೆಲ್ ಕಮ್ ಮಾಡಿದ್ರು. ಈ ಬಳಿಕ 4ನೇ ಎಸೆತ ಎಸೆಯಲು ಬಂದ ದಿಗ್ವೇಶ್, ಚೆಂಡನ್ನ ಎಸೆಯದೇ ಹಿಂತಿರುಗಿದ್ದರು. ಇದಾದ ಬಳಿಕ ಚೆಂಡೆಸೆಯಲು ಮುಂದಾದಾಗ ನಿತೀಶ್ ರಾಣಾ ಹಿಂದೆ ಸರಿದರು. ನಂತರ ಸ್ವಿಚ್ ಹಿಟ್ನೊಂದಿಗೆ ಸಿಕ್ಸ್ ಬಾರಿಸಿದ ನಿತಿಶ್ ರಾಣಾ, ಬ್ಯಾಟ್ ಮೇಲೆ ಸಹಿ ಹಾಕುವ ಮೂಲಕ ನೋಟ್ಬುಕ್ ಸೆಲೆಬ್ರೇಷನ್ಗೆ ಟಕ್ಕರ್ ನೀಡಿದರು. ನಿತಿಶ್ ರಾಣಾರ ಸೆಲಬ್ರೇಷನ್ಗೆ ಕೆಂಡವಾಗಿದ್ದ ದಿಗ್ವೇಶ್, ನಿಂದಿಸಿದ್ದಾರೆ. ಇದು ಮಾತಿನ ಚಕಮಕಿಗೆ ಕಾರಣವಾಯ್ತು.
ಲೀಗ್ನಲ್ಲಿ ಇದೇ ತಂಡದ ಬ್ಯಾಟರ್ಗೆ ಕೆಣಕಿದ್ದ ದಿಗ್ವೇಶ್ ರಾಠಿ
ಎಲಿಮಿನೇಟರ್ ಪಂದ್ಯದಲ್ಲೇ ಅಲ್ಲ. ಲೀಗ್ ಮ್ಯಾಚ್ನಲ್ಲೂ ವೆಸ್ಟ್ ಡೆಲ್ಲಿ ಲಯನ್ಸ್ ತಂಡದ ಅಂಕಿತ್ ಕುಮಾರ್ಗೆ ಕೆಣಕಿದ್ದರು. ಪವರ್ ಪ್ಲೇನಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸ್ತಿದ್ದ ಅಂಕಿತ್ಗೆ ಚೆಂಡನ್ನು ಎಸೆಯದೇ ಹಿಂತಿರುಗಿ ಕೆಣಕಿದ್ದರು. ನಂತರ ಚೆಂಡೆಸೆಯಲು ಬಂದಿದ್ದ ದಿಗ್ವೇಶ್ಗೆ, ಅಂಕಿತ್ ಕ್ರೀಸ್ನಿಂದ ಹೊರ ನಡೆದು ಪ್ರತ್ಯುತ್ತರ ನೀಡಿದರು. ಈ ವೇಳೆ ಕೋಪಗೊಂಡ ದಿಗ್ವೇಶ್, ಅಶ್ಲೀಲವಾಗಿ ಬೈದ್ದಿದ್ದರು. ಇದಕ್ಕೆ ಅಂಕಿತ್, 12ನೇ ಓವರ್ನಲ್ಲಿ ದಿಗ್ವೇಶ್ ರಾಥಿಗೆ ಬ್ಯಾಕ್ ಟು ಬ್ಯಾಕ್ ಎರಡು ಸಿಕ್ಸ್ ಸಿಡಿಸಿ ಮುಟ್ಟಿ ನೋಡಿಕೊಳ್ಳುವಂತೆ ಮಾಡಿದ್ರು.
NITISH RANA AGAINST DIGVESH RATHI IN DPL ELIMINATOR:
— Tanuj (@ImTanujSingh) August 30, 2025
- He hits 0,4,6,6,6,0,4,6,0,0,6.
He smashed 38 runs in just 11 balls with 345.54 strike rate - THE MADNESS OF RANA. 🥶🔥 pic.twitter.com/5TqU44p0Fr
ಅಭಿಷೇಕ್ ಶರ್ಮಾ ಜೊತೆ ನಡೆದಿತ್ತು ಕಿರಿಕ್
ಐಪಿಎಲ್ನಲ್ಲಿ ಲಕ್ನೋ ಪರ ಆಡ್ತಿದ್ದ ದಿಗ್ವೇಶ್ ರಾಠಿ, ನೋಟ್ ಬುಕ್ ಸೆಲೆಬ್ರೇಷನ್ನಿಂದಲೇ ಹೆಚ್ಚು ಸುದ್ದಿಯಾಗಿದ್ದರು. ಇದೇ ನೋಟ್ ಬುಕ್ ಸೆಲಬ್ರೇಷನ್ನಿಂದ ಅಭಿಷೇಕ್ ಶರ್ಮಾ ಹಾಗೂ ದಿಗ್ವೇಶ್ ರಾಠಿ ಮಾತಿನ ಚಕಮಕಿಗೆ ಕಾರಣವಾಯ್ತು. ಲಕ್ನೋ ಬೌಲರ್ಗಳನ್ನ ಮನಬಂದಂತೆ ದಂಡಿಸಿದ್ದ ಅಭಿಷೇಕ್, ಕೇವಲ 20 ಎಸೆತಗಳಲ್ಲಿ 59 ರನ್ ಚಚ್ಚಿದ್ದರು. ಈ ವೇಳೆ ರಾಠಿ ಬೌಲಿಂಗ್ನಲ್ಲಿ ಅಭಿಷೇಕ್, ಶಾರ್ದೂಲ್ಗೆ ಕ್ಯಾಚ್ ನೀಡಿ ಔಟಾದರು. ವಿಕೆಟ್ ಸಿಕ್ಕ ಖುಷಿಯಲ್ಲಿ ನೋಟ್ ಬುಕ್ ಸೆಲಬ್ರೇಷನ್ ಮಾಡಿದರು. ಇದಕ್ಕೆ ಕುಪಿತಗೊಂಡಿದ್ದ ಅಭಿಷೇಕ್, ವಾಗ್ವಾದಕ್ಕಿಳಿದರು. ಪರಿಸ್ಥಿತಿ ವಿಕೋಪಕ್ಕೆ ಹೋಗುವ ಮುನ್ನ ಅಂಪೈರ್ಸ್ ಹಾಗೂ ಸಹ ಆಟಗಾರರು ಸಮಾಧಾನ ಪಡೆಸಿದ್ರು.
ಪ್ರಿಯಾಂಶ್ ಆರ್ಯ ಬಳಿ ತೆರೆಳಿ ನೋಟ್ ಬುಕ್ ಸೆಲಬ್ರೇಷನ್
ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಪ್ರಿಯಾಂಶ್ ಆರ್ಯ ವಿಕೆಟ್ ಉರುಳಿಸಿದ್ರು. ವಿಕೆಟ್ ಬಿದ್ದ ಬಳಿಕ ಪ್ರಿಯಾಂಶ್ ಬಳಿ ತೆರಳಿ ನೋಟ್ಬುಕ್ ಸೆಲಬ್ರೇಷನ್ ಮಾಡಿದ್ರು. ಈ ಸೆಲಬ್ರೇಷನ್ನಿಂದ ಮ್ಯಾಚ್ ರೆಫರಿ ಕೆಂಗಣ್ಣಿಗೆ ಗುರಿಯಾದ ದಿಗ್ವೇಶ್, ದಂಡಕ್ಕೆ ಗುರಿಯಾದ್ರು.
ಇದನ್ನೂ ಓದಿ:ವಿರಾಟ್ ಕೊಹ್ಲಿ ಹಾದಿಯಲ್ಲೇ ಹಾರ್ದಿಕ್ ಪಾಂಡ್ಯ.. ಏನದು?
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ನಮನ್ಧೀರ್ನ ಕ್ಲೀನ್ ಬೋಲ್ಡ್ ಮಾಡಿದ ದಿಗ್ವೇಶ್, ನೋಟ್ಬುಕ್ ಸೆಲಬ್ರೇಷನ್ ಮಾಡಿದ್ರು. ಶಿಸ್ತು ಉಲ್ಲಂಘಿಸಿದ ಕಾರಣಕ್ಕೆ ಮತ್ತೊಮ್ಮೆ ಮ್ಯಾಚ್ ರೆಫರಿ ದಂಡಾಸ್ತ್ರ ಪ್ರಯೋಗಿಸಿದ್ರು. ಹೀಗೆ ಟೂರ್ನಿಯುದ್ದಕ್ಕೂ ನೋಟ್ಬುಕ್ ಸೆಲಬ್ರೇಷನ್ನಿಂದ ದಂಡ ಪಾವತಿಸುತ್ತಿದ್ದ ದ್ವಿಗ್ವೇಶ್, ಒಂದು ಪಂದ್ಯದಿಂದ ಬ್ಯಾನ್ ಕೂಡ ಆಗಬೇಕಾಯ್ತು. ಆದ್ರೀಗ ಡೆಲ್ಲಿ ಪ್ರೀಮಿಯರ್ ಲೀಗ್ನಲ್ಲೂ ಅನ್ನೇ ಮುಂದುವರಿಸಿರುವ ದಿಗ್ವೇಶ್, ಮತ್ತೆ ದಂಡದ ಶಿಕ್ಷೆಗೆ ಒಳಗಾಗಿದ್ದಾರೆ. ವಿವಾದದ ಕೇಂದ್ರ ಬಿಂದುವಾಗಿದ್ದಾರೆ.
ಇದನ್ನೂ ಓದಿ:ರಾಜಸ್ಥಾನ್ ರಾಯಲ್ಸ್ಗೆ ದ್ರಾವಿಡ್ ಶಾಕ್; ಕೋಚ್ ಹುದ್ದೆಗೆ ದಿಢೀರ್ ರಾಜೀನಾಮೆ..!
Digvesh Rathi! pic.twitter.com/rN2Yjx9sOr
— RVCJ Media (@RVCJ_FB) August 31, 2025
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ