ಕೊಹ್ಲಿ, ರೋಹಿತ್ ಭವಿಷ್ಯ ಬರೆಯಲು BCCI ಮುಹೂರ್ತ; ಬೆಂಗಳೂರಲ್ಲಿ ವೇದಿಕೆ ರೆಡಿ..!

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಭವಿಷ್ಯ ಅಂತತ್ರಕ್ಕೆ ಸಿಲುಕಿದೆ. ಆಸ್ಟ್ರೇಲಿಯಾ ಎದುರಿನ ಏಕದಿನ ಸರಣಿ ಆಡ್ತಾರೋ? ಇಲ್ವೋ? ಎಂಬ ಗೊಂದಲದ ನಡುವೆ ಬಿಗ್​ ಟೆಸ್ಟ್ ಪಾಸ್ ಮಾಡಬೇಕಿದೆ. ಬೆಂಗಳೂರಿನಲ್ಲಿ ಮುಹೂರ್ತ ಫಿಕ್ಸಾಗಿದೆ. ಸ್ವಲ್ಪ ಯಾಮಾರಿದರೂ ಗೇಟ್​ ಪಾಸ್ ಫಿಕ್ಸ್​.

author-image
Ganesh Kerekuli
Virat kohli Rohit sharma

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ Photograph: (ಬಿಸಿಸಿಐ)

Advertisment

ಏಷ್ಯನ್ ಕದನಕ್ಕೆ ಟೀಮ್ ಇಂಡಿಯಾ ಸಜ್ಜಾಗಿದೆ. ಸೆಪ್ಟೆಂಬರ್ ಮೊದಲ ವಾರವೇ ಸೂರ್ಯ ನಾಯಕತ್ವದ ಟೀಮ್ ಇಂಡಿಯಾ, ಎರಡು ಬ್ಯಾಚ್​ಗಳಾಗಿ ದುಬೈ ಹಾರ್ತಾರೆ. ಅತ್ತ ಟಿ20 ಟೀಮ್ ದುಬೈಗೆ ಹಾರ್ತಿದ್ರೆ, ಇತ್ತ ವಿರಾಟ್​ ಕೊಹ್ಲಿ ಹಾಗೂ ರೋಹಿತ್​​​ ಶರ್ಮಾರ ಭವಿಷ್ಯಕ್ಕೆ ಮುಹೂರ್ತ ಫಿಕ್ಸ್​ ಆಗಿದೆ. 

ಬೆಂಗಳೂರಲ್ಲೇ ರೋಹಿತ್, ವಿರಾಟ್​ ಕೊಹ್ಲಿ ಹಣೆಬರಹ

ಇಂಗ್ಲೆಂಡ್ ಟೆಸ್ಟ್​ ಸರಣಿ ಮುಗಿದ್ದೇ ಮುಗಿದಿದ್ದು ಶರ್ಮಾ, ಕೊಹ್ಲಿ ಭವಿಷ್ಯದ ಚರ್ಚೆಗಳು ಜೋರಾಗಿದೆ. ಈಗಾಗಲೇ ಭವಿಷ್ಯದ ತಂಡ ಕಟ್ಟುವ ಲೆಕ್ಕಾಚಾರದಲ್ಲಿರುವ ಬಿಸಿಸಿಐ, ರೋಹಿತ್ ಹಾಗೂ ಕೊಹ್ಲಿಯನ್ನು ಬಿಟ್ಟು ಮುನ್ನಡೆಯೋಕೆ ರೆಡಿಯಾಗಿದೆ. ಆಸ್ಟ್ರೇಲಿಯಾ ಸರಣಿಯನ್ನಾಡ್ತಾರಾ? ಅದಕ್ಕಿಂತಲೂ ಮುನ್ನವೇ ಗುಡ್ ಬೈ ಹೇಳ್ತಾರಾ ಎಂಬ ಪ್ರಶ್ನೆ ಚರ್ಚೆಯಲ್ಲಿರುವುದಾಗಲೇ ರೋಹಿತ್, ಕೊಹ್ಲಿಯ ಹಣೆ ಬರಹಕ್ಕೆ ಬಿಸಿಸಿಐ ವೇದಿಕೆ ರೆಡಿ ಮಾಡಿದೆ. 

ಇದನ್ನು ಓದಿ: ವಿರುಷ್ಕಾ ನೆಚ್ಚಿನ ಶ್ವಾನದ ಹೆಸರೇನು? KL ರಾಹುಲ್ ಏನೆಂದು ಕರೀತಾರೆ?

ROHIT_KOHLI_NEW

ಅತ್ತ ಸೂರ್ಯ ನಾಯಕತ್ವದ ಟೀಮ್ ಇಂಡಿಯಾ ಏಷ್ಯಾಕಪ್​​ಗೆ ಸಜ್ಜಾಗಿರುವ ಹೊತ್ತಲ್ಲೇ, ಇತ್ತ ಬಿಸಿಸಿಐ ರೋಹಿತ್ ಶರ್ಮಾಗೆ ಬುಲಾವ್​ ನೀಡಿದೆ. ಫಿಟ್ನೆಸ್ ಟೆಸ್ಟ್​ಗೆ ಒಳಗಾಗುವಂತೆ ಸೂಚಿಸಿದೆ. ಇದಕ್ಕಾಗಿ ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸ್​ಲೆನ್ಸ್​ಗೆ ಹಾಜರಾಗಲಿರುವ ರೋಹಿತ್ ಶರ್ಮಾ, ಸೆಪ್ಟೆಂಬರ್ 13ರಂದು ಫಿಟ್ನೆಸ್ ಟೆಸ್ಟ್​ಗೆ ಒಳಗಾಗಲಿದ್ದಾರೆ. ರೋಹಿತ್ ಶರ್ಮಾನೇ ಅಲ್ಲ, ಕೊಹ್ಲಿಯೂ ಸಹ ಫಿಟ್ನೆಸ್ ಟೆಸ್ಟ್​ ಎದುರಿಸಬೇಕಿದ್ದು ಇನ್ನಷ್ಟೇ ಬುಲಾವ್ ನೀಡಲಿದೆ.

ರೋಹಿತ್​​, ಕೊಹ್ಲಿಗೆ ಎರಡೆರಡು​ ಟೆಸ್ಟ್​..!

ಟೀಮ್ ಇಂಡಿಯಾ ಆಟಗಾರರು ವರ್ಷದಲ್ಲಿ ಒಂದರಿಂದ 2 ಫಿಟ್ನೆಸ್​ ಟೆಸ್ಟ್ ಎದುರಿಸ್ತಾರೆ. ಕ್ರಿಕೆಟ್​ನಿಂದ ಬಹು ದಿನಗಳ ಕಾಲ ದೂರ ಉಳಿಯುವ ಆಟಗಾರರು, ಕಡ್ಡಾಯವಾಗಿ ಫಿಟ್ನೆಸ್​ ಟೆಸ್ಟ್​ಗೆ ಒಳಗಾಗಲೇಬೇಕು. ಇದರಂತೆ ರೋಹಿತ್ ಶರ್ಮಾ, ವಿರಾಟ್​ ಬಹುದಿನಗಳಿಂದ ಕ್ರಿಕೆಟ್​ನಿಂದ ದೂರ ಉಳಿದಿದ್ದಾರೆ. ಐಪಿಎಲ್​ ಹೊರತು ಪಡೆಸಿದ್ರೆ ಐಸಿಸಿ ಚಾಂಪಿಯನ್ಸ್​ ಟ್ರೋಫಿ ಬಳಿಕ ಒಂದೇ ಒಂದು ಪಂದ್ಯವನ್ನಾ ಆಡಿಲ್ಲ. ಬರೋಬ್ಬರಿ 5 ತಿಂಗಳಿಂದ ಅಂತಾರಾಷ್ಟ್ರೀಯ ಪಂದ್ಯಗಳನ್ನೇ ಆಡಿಲ್ಲ. ಹೀಗಾಗಿ ರೋಹಿತ್ ಶರ್ಮಾ ಹಾಗೂ ವಿರಾಟ್​ ಕೊಹ್ಲಿಯ ಆಯ್ಕೆಗೆ ಫಿಟ್ನೆಸ್ ಟೆಸ್ಟ್​ ಮಾನದಂಡವಾಗಿದೆ. ಈ ಸಲ ರೋಹಿತ್, ಕೊಹ್ಲಿ ಕೇವಲ ಒಂದು ಟೆಸ್ಟ್​ ಮಾತ್ರವೇ ಎದುರಿಸಲ್ಲ. 2 ಫಿಟ್ನೆಸ್ ಟೆಸ್ಟ್ ಪಾಸ್ ಮಾಡಬೇಕಿದೆ.

ಇದನ್ನೂ ಓದಿ:ರಾಜಸ್ಥಾನ್ ರಾಯಲ್ಸ್​​ಗೆ ದ್ರಾವಿಡ್​ ಶಾಕ್; ಕೋಚ್​ ಹುದ್ದೆಗೆ ದಿಢೀರ್ ರಾಜೀನಾಮೆ..!

KOHLI_AXAR

ರೋಹಿತ್ ಶರ್ಮಾ ಹಾಗೂ ವಿರಾಟ್​, ಈ ಸಲ ಯೋ ಯೋ ಟೆಸ್ಟ್  ಮಾತ್ರವಲ್ಲ. ಬಿಸಿಸಿಐ ಪರಿಚಯಿಸಿರುವ ನೂತನ ಬ್ರಾಂಕೋ ಟೆಸ್ಟ್​ಗೂ ಒಳಗಾಗಬೇಕಿದೆ. ಹೀಗಾಗಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ಫಿಟ್ನೆಸ್ ಟೆಸ್ಟ್ ಪಾಸ್ ಮಾಡೋದು ಬಿಗೆಸ್ಟ್​ ಚಾಲೆಂಜ್. ಯೋ ಯೋ ಟೆಸ್ಟ್ ಪಾಸ್ ಮಾಡಿದ್ರೂ ಬ್ರಾಂಕೋ ಟೆಸ್ಟ್​ ಪಾಸ್ ಮಾಡೋದು ಅಷ್ಟು ಸುಲಭದಲ್ಲ. ಹೀಗಾಗಿ ನಿಗದಿತ ಸಮಯದಲ್ಲಿ ಫಿಟ್ನೆಸ್ ಟೆಸ್ಟ್​ ಪಾಸ್ ಮಾಡದಿದ್ರೆ, ಕಿಕ್​ ಔಟ್ ಆಗೋದ್ರಲ್ಲಿ ಅನುಮಾನ ಇಲ್ಲ.

ಬಿಸಿಸಿಐ ಫುಲ್​ ಸಿರೀಯಸ್..!

ಬೂಮ್ರಾ ವಿವಾದದ ಬಳಿಕ ಫಿಟ್ನೆಸ್ ವಿಚಾರದಲ್ಲಿ ಫುಲ್ ಸೀರಿಯಸ್ ಆಗಿರುವ ಬಿಸಿಸಿಐ, ಹೊಸ ಬ್ರಾಂಕೋ ಫಿಟ್ನೆಸ್ ಟೆಸ್ಟ್​ ಪರಿಚಯಿಸಿದೆ. ಫಿಟ್ನೆಸ್ ವಿಚಾರದಲ್ಲಿ ಕಾಂಪ್ರಮೈಸ್ ಆಗೋ ಮಾತೇ ಇಲ್ಲ ಎಂದಿರುವ ಬಿಗ್​ಬಾಸ್​ಗಳು, ಇತ್ತ ಬಿಸಿಸಿಐ ಸೆಂಟರ್ ಆಫ್ ಎಕ್ಸ್​ಲೆನ್ಸ್​ನಲ್ಲಿರುವ ಫಿಸಿಯೋ, ಟ್ರೈನರ್ಸ್​ ಹಾಗೂ ಫಿಟ್ನೆಸ್​ ಕೋಚ್​​ಗಳಿಗೆ ವಾರ್ನ್ ಮಾಡಿದೆ. ಹಿಂದೆ ಒಂದೆರಡು ಅಂಕ ಕಡಿಮೆ ಇದ್ರೂ, ಫಿಟ್ನೆಸ್ ಟೆಸ್ಟ್​ನಲ್ಲಿ ಪಾಸ್ ಮಾಡದಕ್ಕೆ ಬ್ರೇಕ್ ಹಾಕುವಂತೆ ತಿಳಿಸಿದೆ. ಕಟ್ಟು ನಿಟ್ಟಿನ ಆದೇಶವನ್ನು ಹೊರಡಿಸಿರುವ ಬಿಸಿಸಿಐ, ಅಂಥದ್ದೇನಾದರು ಕಂಡು ಬಂದ್ರೆ ಕಠಿಣ ಕ್ರಮದ ಸೂಚನೆ ನೀಡಿದೆ. ಹೀಗಾಗಿ ರೋಹಿತ್ ಶರ್ಮಾ, ಕೊಹ್ಲಿಗೆ ಸಂಕಷ್ಟ ಎದುರಾಗೋದ್ರಲ್ಲಿ ಡೌಟೇ ಇಲ್ಲ.

ಕೊಹ್ಲಿ ಓಕೆ.. ಶರ್ಮಾ ಫಿಟ್ನೆಸ್​ನದ್ದೇ ಚಿಂತೆ

2027ರ ಏಕದಿನ ವಿಶ್ವಕಪ್​ ದೃಷ್ಟಿಯಲ್ಲಿಯಿಂದ ಹೊಸ ಕೋರ್ ಟೀಮ್ ಕಟ್ಟಲು ಬಿಸಿಸಿಐ ಮುಂದಾಗಿದೆ. ಈ ನಿಟ್ಟಿನಲ್ಲೇ ಹೊಸ ಫಿಟ್ನೆಸ್ ಟೆಸ್ಟ್ ಪರಿಚಯಿಸಿರುವ ಬಿಗ್​ಬಾಸ್​ಗಳು, ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯನ್ನು ಬಿಟ್ಟು ಮುಂದೆ ಸಾಗಲು ರೆಡಿ ಇದ್ದಾರೆ. ಆದ್ರೆ, ಈ ಬ್ರಾಂಕೋ ಟೆಸ್ಟ್​ ರೋಹಿತ್ ಶರ್ಮಾಗೆ ಮುಳ್ಳಾಗುವ ಸಾಧ್ಯತೆ ಇದೆ. ವಿರಾಟ್ ಕೊಹ್ಲಿಯ ಫಿಟ್ನೆಸ್​ಗೆ ಹೋಲಿಕೆ ಮಾಡಿದ್ರೆ ರೋಹಿತ್ ಶರ್ಮಾ ಫಿಟ್ನೆಸ್ ವಿಚಾರದಲ್ಲಿ ಹಿಂದಿದ್ದಾರೆ. 38 ವರ್ಷದ ರೋಹಿತ್ ಶರ್ಮಾ, 2027ರ ವಿಶ್ವಕಪ್ ವೇಳೆಗೆ ಫುಲ್ ಫಿಟ್ ಇರೋದು ಕಷ್ಟ ಸಾಧ್ಯ. ಹೀಗಾಗಿ ರೋಹಿತ್ ಫಿಟ್ನೆಸ್ ಕಾಯ್ದುಕೊಳ್ಳುವುದು ಸವಾಲಾಗಿದೆ.

ಇದನ್ನೂ ಓದಿ:ವಿರಾಟ್ ಕೊಹ್ಲಿ ಹಾದಿಯಲ್ಲೇ ಹಾರ್ದಿಕ್ ಪಾಂಡ್ಯ.. ಏನದು?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Rohit Sharma car Rohith Sharma Virat Kohli Rohit Sharma-Virat Kohli
Advertisment