/newsfirstlive-kannada/media/media_files/2025/08/31/hardik-pandya-5-2025-08-31-09-48-59.jpg)
ವಿರಾಟ್ ಕೊಹ್ಲಿ.. ಮಾಡ್ರನ್ ಕ್ರಿಕೆಟ್​ನ ದೊರೆ ಮಾತ್ರವಲ್ಲ.. ಆಫ್​ ದ ಫೀಲ್ಡ್​ನ ದೊರೆ. ವಿಶ್ವದ ಒನ್​ ಆಫ್​ ದ ರಿಚೆಸ್ಟ್​​ ಅಥ್ಲೀಟ್ ಆಗಿರುವ ವಿರಾಟ್ ಕೊಹ್ಲಿ, ಸೋಶಿಯಲ್ ಮೀಡಿಯಾದ ಸಾಮ್ರಾಟನೂ ಆಗಿದ್ದಾರೆ. ಇನ್​​ಸ್ಟಾಗ್ರಾಮ್​ ಲೋಕಕ್ಕಂತೂ ಕೊಹ್ಲಿಯೇ ಅಧಿಪತಿ, ಆದರೆ ಪಾಂಡ್ಯ ಕತೆ ನಿಮಗೆ ಗೊತ್ತಾ..?
ಇದನ್ನೂ ಓದಿ:ಟೀಮ್ ಇಂಡಿಯಾ ಆಟಗಾರರಿಗೆ 'ಬ್ರಾಂಕೋ ಟೆಸ್ಟ್' ವರದಾನವಾಗುತ್ತಾ..?
42.5 ಮಿಲಿಯನ್ ಫಾಲೋವರ್ಸ್​!
ಟೀಮ್ ಇಂಡಿಯಾ ಕ್ರಿಕೆಟರ್​ಗಳ ಪೈಕಿ ವಿರಾಟ್, ಇನ್​ಸ್ಟಾದಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿದ್ರೆ, ರೋಹಿತ್ ಶರ್ಮಾ 44.1 ಮಿಲಿಯನ್ ಫಾಲೋವರ್​​ಗಳನ್ನ ಹೊಂದಿದ್ದಾರೆ. ರೋಹಿತ್​ ಶರ್ಮಾಗಿಂತ ಹಾರ್ದಿಕ್, 2.4 ಮಿಲಿಯನ್ ಫಾಲೋವರ್​​ಗಳನ್ನು ಕಡಿಮೆ ಹೊಂದಿದ್ದಾರೆ. ಹೀಗಾದ್ರೂ ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್​ನಲ್ಲಿ ಒನ್ ಆಫ್ ದಿ ಟಾಪ್ INFLUENCER ಪಾಂಡ್ಯ.. ಇಂಟ್ರೆಸ್ಟಿಂಗ್ ಅಂದ್ರೆ, ಸೋಶಿಯಲ್ ಮೀಡಿಯಾ ಮಾರ್ಕೆಂಟಿಂಗ್​ನಲ್ಲಿ ರೋಹಿತ್ ಶರ್ಮಾರನ್ನೇ ಮೀರಿಸಿರುವ ಪಾಂಡ್ಯ, ವಿರಾಟ್ ಕೊಹ್ಲಿ ನಂತರದ ಸ್ಥಾನ ಕಬ್ಜಾ ಮಾಡಿದ್ದಾರೆ.
ರೋಲ್ ಮಾಡೆಲ್
ಹಾರ್ದಿಕ್​ ಪಾಂಡ್ಯರ ಲೈಫ್ ಸ್ಟ್ರೈಲ್​, ಫಿಟ್ನೆಸ್, ಫ್ಯಾಷನ್​​​​​​​​ ಯುವಕರಿಗೆ ಅಚ್ಚುಮೆಚ್ಚು. ಪ್ರತಿಷ್ಠಿತ ಕಂಪನಿಗಳ ಬಹುತೇಕ ಟಾರ್ಗೆಟ್​ ಯುವಕರು. ಹೀಗಾಗಿ ಯುವಕರನ್ನೇ ಟಾರ್ಗೆಟ್ ಮಾಡುವ ಕಂಪನಿಗಳಿಗೆ ಹಾರ್ದಿಕ್ ಪಾಂಡ್ಯನೇ ಬೆಸ್ಟ್ ಚಾಯ್ಸ್​. ಹಾರ್ದಿಕ್ ಪಾಂಡ್ಯ ರಾಯಭಾರಿ ಕಂಪನಿಗಳು ವೃದ್ಧಿ ಶೇಖಡ 25ರಷ್ಟಿದೆ.
ಇದನ್ನೂ ಓದಿ: ವಿರುಷ್ಕಾ ನೆಚ್ಚಿನ ಶ್ವಾನದ ಹೆಸರೇನು? KL ರಾಹುಲ್ ಏನೆಂದು ಕರೀತಾರೆ?
ಇನ್​ಸ್ಟಾ ಪೋಸ್ಟ್​ ಬೆಲೆ 80 ಲಕ್ಷಕ್ಕೂ ಅಧಿಕ
ಹಲವು ಬ್ರಾಂಡ್​ಗಳ ರಾಯಭಾರಿಯಾಗಿರುವ ಹಾರ್ದಿಕ್ ಪಾಂಡ್ಯ, ಇನ್​ಸ್ಟಾದಲ್ಲಿ ಬ್ರ್ಯಾಂಡ್ ಪ್ರಮೋಷನ್ ಪೋಸ್ಟ್​ಗೆ 80 ಲಕ್ಷಕ್ಕೂ ಅಧಿಕ ಚಾರ್ಜ್ ಮಾಡ್ತಾರೆ. ಪ್ರಮುಖವಾಗಿ ಆಟೋ ಮೊಬೈಲ್ಸ್​, ಕಾರು, ಮೊಬೈಲ್ಸ್​, ಹೆಲ್ತ್​, ಫಿಟ್ನೆಸ್, ಇ-ಕಾಮರ್ಸ್​, ವಿಡಿಯೋ ಗೇಮ್ಸ್​​ಗಳನ್ನ ಪ್ರಮೋಟ್ ಮಾಡುವ ಹಾರ್ದಿಕ್, ಇನ್​​ಸ್ಟಾ ಡಿಜಿಟಲ್ ಮಾರ್ಕೆಟಿಂಗ್​ನಿಂದಲೇ 15 ಕೋಟಿಗೂ ಅಧಿಕ ಆದಾಯ ಗಳಿಸ್ತಾರೆ.
ಒಂದು ಶೂಟ್​ಗೆ 2.5 ಕೋಟಿ
ಪ್ರತಿಷ್ಠಿತ ಕಂಪನಿಗಳ ರಾಯಭಾರಿಯಾಗಿರುವ ಹಾರ್ದಿಕ್​, ಸದ್ಯ 20 ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಬ್ರ್ಯಾಂಡ್​ಗಳ ಒಂದೊಂದು ಶೂಟ್​ಗೆ ಬರೋಬ್ಬರಿ 2.5 ಕೋಟಿ ಚಾರ್ಜ್​ ಮಾಡ್ತಾರಂತೆ. ವರ್ಷದಿಂದ ವರ್ಷಕ್ಕೆ ಖ್ಯಾತಿಯ ಜೊತೆಗೆ ಹಾರ್ದಿಕ್ ಆದಾಯವೂ ದುಪ್ಪಟ್ಟಾಗ್ತಿದೆ. 2022ರಲ್ಲಿ 34.8 ಮಿಲಿಯನ್​ ಇದ್ದ ಬ್ರ್ಯಾಂಡ್​ ವ್ಯಾಲ್ಯೂ, 2023ರಲ್ಲಿ 38.4 ಮಿಲಿಯನ್​ಗೆ ಏರಿಕೆಯಾಗಿತ್ತು. 2024ರ ಅಂತ್ಯಕ್ಕೆ 40 ಮಿಲಿಯನ್​ ಬ್ರ್ಯಾಂಡ್ ವಾಲ್ಯೂ ಹೊಂದಿದ್ದ ಹಾರ್ದಿಕ್, ಈ ವರ್ಷ ಮತ್ತಷ್ಟು ಗಳಿಸೋದು ಗ್ಯಾರಂಟಿ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ