/newsfirstlive-kannada/media/media_files/2025/10/19/team-india-3-2025-10-19-16-54-37.jpg)
ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯವಾಗಿ ಸೋತಿದೆ. ಆ ಮೂಲಕ ಗಂಭೀರ್ ಅಂಡ್ ಗಿಲ್ ಪಡೆಗೆ ದೊಡ್ಡ ಮೊಟ್ಟದಲ್ಲಿ ಮುಖಭಂಗ ಆಗಿದೆ.
ಟಾಸ್ ಸೋತ ಟೀಂ ಇಂಡಿಯಾ, ಮೊದಲು ಬ್ಯಾಟಿಂಗ್​​ಗೆ ಬಂದಿತ್ತು. ಈ ಹೈ-ವೋಲ್ಟೇಜ್ ಪಂದ್ಯಕ್ಕೆ ಮಳೆರಾಯ ಆರಂಭದಲ್ಲೇ ಕಾಟ ಕೊಟ್ಟ. ಇದರಿಂದ ಟೀಂ ಇಂಡಿಯಾ ಬ್ಯಾಟಿಂಗ್​ಗೆ ಭಾರೀ ಹಿನ್ನಡೆ ಆಯ್ತು. ಕೊನೆಗೆ 26 ಓವರ್​ಗೆ ಪಂದ್ಯವನ್ನು ಸೀಮಿತ ಮಾಡಲಾಗಿತ್ತು. 26 ಓವರ್​ನಲ್ಲಿ 9 ವಿಕೆಟ್ ಕಳೆದುಕೊಂಡ ಭಾರತ, ಕೇವಲ 136 ರನ್​ಗಳಿಸಿ ಇನ್ನಿಂಗ್ಸ್ ಮುಗಿಸಿತು.
ಇದನ್ನೂ ಓದಿ:ಕೈಕೊಟ್ಟ ರೋಹಿತ್, ಕೋಹ್ಲಿ.. ಬಿಸಿಸಿಐ ಹಾದಿ ಮತ್ತಷ್ಟು ಸರಾಗ..!
ಅಕ್ಸರ್ ಪಟೇಲ್ 31, ಕೆಎಲ್ ರಾಹುಲ್ 38 ರನ್​​ಗಳಿಸಿರೋದು ಬಿಟ್ಟರೆ ಬೇರೆ ಯಾರೂ ಕೂಡ ಆಡಲಿಲ್ಲ. ಅನುಭವಿ ಕೊಹ್ಲಿ ಸೊನ್ನೆ ಸುತ್ತಿದ್ರೆ, ಮಾಜಿ ಕ್ಯಾಪ್ಟನ್ ರೋಹಿತ್ 8 ರನ್​ಗಳಿಸಿದರು. ಇನ್ನು ಕ್ಯಾಪ್ಟನ್ ಗಿಲ್ 10 ರನ್​ಗಳಿಸಿ ಆಟ ಮುಗಿಸಿದರು.
137 ರನ್​ಗಳ ಸಾಧಾರಣ ಟಾರ್ಗೆಟ್ ಬೆನ್ನು ಹತ್ತಿದ ಆಸ್ಟ್ರೇಲಿಯಾ ಮೂರು ವಿಕೆಟ್ ಕಳೆದುಕೊಂಡು ನಿಗಧಿತ ಗುರಿಯನ್ನು ಮುಟ್ಟಿತು. ಮೊದಲ ಪಂದ್ಯ ಗೆದ್ದಿರುವ ಆಸ್ಟ್ರೇಲಿಯಾ, ಮುನ್ನಡೆ ಕಾಯ್ದಕೊಂಡಿದೆ. ಇನ್ನುಳಿದ ಎರಡೂ ಪಂದ್ಯಗಳನ್ನು ಗಿಲ್ ಪಡೆ ಗೆದ್ದರೆ ಮಾತ್ರ ಏಕದಿನ ಸರಣಿ ಟೀಂ ಇಂಡಿಯಾ ಪಾಲಾಗಲಿದೆ. ಅಕ್ಟೋಬರ್ 23 ರಂದು ಎರಡನೇ ಪಂದ್ಯ ನಡೆಯಲಿದೆ.
ಇದನ್ನೂ ಓದಿ: ಸೊಸೆಯನ್ನ ಹಾಡಿ ಹೊಗಳಿದ ಸುದೀಪ್ ತಂದೆ.. ಭಾವುಕರಾದ ಪ್ರಿಯಾ ಸುದೀಪ್..! VIDEO
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ