Advertisment

ಕೈಕೊಟ್ಟ ರೋಹಿತ್, ಕೋಹ್ಲಿ.. ಬಿಸಿಸಿಐ ಹಾದಿ ಮತ್ತಷ್ಟು ಸರಾಗ..!

ಇಂಡಿಯಾ ವರ್ಸಸ್​​ ಆಸ್ಟ್ರೇಲಿಯಾ ಏಕದಿನ ಸರಣಿ ಇಡೀ ವಿಶ್ವದ ಗಮನ ಸೆಳೆದಿದೆ. ಹೈವೋಲ್ಟೇಜ್ ಪಡೆದುಕೊಂಡಿರುವ ಸರಣಿ, ಈ ಹಿಂದಿಗಿಂತಲೂ ರೋಚಕತೆ ಹೆಚ್ಚಿಸಿದೆ. ಅದಕ್ಕೆ ಕಾರಣ ಅವರಿಬ್ಬರೇ.. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ! ಆದರೆ ಮೊದಲ ಪಂದ್ಯದಲ್ಲೇ ರೋ-ಕೋ ನಿರಾಸೆ ಮೂಡಿಸಿದ್ದಾರೆ.

author-image
Ganesh Kerekuli
Kohli rohit gill (1)
Advertisment

ಇಂಡಿಯಾ ವರ್ಸಸ್​​ ಆಸ್ಟ್ರೇಲಿಯಾ ಏಕದಿನ ಸರಣಿ ಇಡೀ ವಿಶ್ವದ ಗಮನ ಸೆಳೆದಿದೆ. ಹೈವೋಲ್ಟೇಜ್ ಪಡೆದುಕೊಂಡಿರುವ ಸರಣಿ,  ಈ ಹಿಂದಿಗಿಂತಲೂ ರೋಚಕತೆ ಹೆಚ್ಚಿಸಿದೆ. ಅದಕ್ಕೆ ಕಾರಣ  ಅವರಿಬ್ಬರೇ.. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ! ಆದರೆ ಮೊದಲ ಪಂದ್ಯದಲ್ಲೇ ರೋ-ಕೋ ನಿರಾಸೆ ಮೂಡಿಸಿದ್ದಾರೆ. 

Advertisment

ಇದನ್ನೂ ಓದಿ: ಭಾರತ vs ಆಸ್ಟ್ರೇಲಿಯಾದ ಮೊದಲ ಪಂದ್ಯಕ್ಕೆ ವಿಘ್ನ.. ಮತ್ತೆ ಮ್ಯಾಚ್ ಆರಂಭ ಆಗುತ್ತಾ?

ರೋ-ಕೋ ಜೋಡಿಯ ಆಟ ನೋಡಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದರು.  ಪಂದ್ಯದ ಟಿಕೆಟ್ ಕೊಳ್ಳಲು ಮುಗಿಬಿದ್ದರುವ ಅಭಿಮಾನಿಗಳು, ಎಷ್ಟೇ ಖರ್ಚಾದ್ರೂ ಪರವಾಗಿಲ್ಲ ಆಸ್ಟ್ರೇಲಿಯಾದಲ್ಲಿ ರೋಹಿತ್-ಕೊಹ್ಲಿಯ ಆಟ ನೋಡಲೇಬೇಕು ಅಂತ ಬಂದಿದ್ದರು. ಆದರೆ ಕೊಹ್ಲಿ ಮತ್ತು ರೋಹಿತ್ ನಿರೀಕ್ಷೆಗೆ ತಕ್ಕಂತೆ ಆಡಲಿಲ್ಲ. 

ಕೊಹ್ಲಿ ಶೂನ್ಯಕ್ಕೆ ಔಟ್!

ಟಾಸ್ ಸೋತ ಪರಿಣಾಮ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್​ ಬಂದಿತ್ತು. ತುಂಬಾ ದಿನಗಳ ನಂತರ ಕ್ರೀಸ್​ಗೆ ಬಂದಿದ್ದ ರೋಹಿತ್ ಆಸ್ಟ್ರೇಲಿಯಾ ಬೌಲರ್​ಗಳನ್ನು ದಂಡಿಸುವಲ್ಲಿ ವಿಫಲರಾದರು. ಕೇವಲ 14 ಬಾಲ್​ನಲ್ಲಿ ಒಂದು ಬೌಂಡರಿ ಬಾರಿಸಿ 8 ರನ್​​ಗೆ ಆಟ ಮುಗಿಸಿದರು. ಇತ್ತ ರನ್ ಮಷಿನ್ ಕೊಹ್ಲಿ 8 ಬಾಲ್ ಎದುರಿಸಿ ಖಾತೆ ತೆರೆಯದೇ ನಿರ್ಗಮಿಸಿರೋದು ಅಭಿಮಾನಿಗಳಿಗೆ ಸಾಕಷ್ಟು ನಿರಾಸೆಗೆ ಕಾರಣವಾಯ್ತು. 

Advertisment

ಬಿಸಿಸಿಐ vs ರೋ-ಕೋ

ಬಿಸಿಸಿಐ ಈಗಾಗಲೇ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರನ್ನು ಸೈಡ್​ಲೈನ್ ಮಾಡಿದೆ. 2027 ವಿಶ್ವಕಪ್ ಆಡುವ ಕನಸು ಕಾಣ್ತಿರುವ ರೋ-ಕೋ ಅವರಿಂದ ಬಿಸಿಸಿಐ ರಿಟೈರ್​​ಮೆಂಟ್ ನಿರೀಕ್ಷೆ ಮಾಡ್ತಿದೆ. ಇದು ಕೊಹ್ಲಿ ಹಾಗೂ ಶರ್ಮಾ ಅಭಿಮಾನಿಗಳ ಆಕ್ರೋಶಕ್ಕೂ ಕಾರಣವಾಗಿದೆ. ಇದರ ಮಧ್ಯೆ ತಾವು ಫಿಟ್ ಆಗಿದ್ದೇವೆ, ಮುಂದಿನ ಏಕದಿನ ವಿಶ್ವಕಪ್ ಆಡಿಯೇ ತೀರುತ್ತೇವೆ ಎಂಬ ಸಂದೇಶವನ್ನು ಅಭಿಮಾನಿಗಳಿಗೆ, ವಿರೋಧಿ ಬಿಸಿಸಿಐಗೆ ನೀಡಲು ಆಸಿಸ್ ಸಿರೀಸ್​ ಸುವರ್ಣಾವಕಾಶ. ಇಂಥ ಚಿನ್ನದಂತ ಅವಕಾಶವನ್ನು ಮೊದಲ ಪಂದ್ಯದಲ್ಲೇ ಕೊಹ್ಲಿ, ರೋಹಿತ್ ಕೈ ಚೆಲ್ಲಿಸಿದ್ದಾರೆ. 

ಇದನ್ನೂ ಓದಿ:ಕೊಹ್ಲಿ, ರೋಹಿತ್, ಗಿಲ್ ಬ್ಯಾಟಿಂಗ್​ ವೈಫಲ್ಯ.. ಸಾಧಾರಣ ಮೊತ್ತದ ಟಾರ್ಗೆಟ್​ ನೀಡಿದ ಟೀಮ್ ಇಂಡಿಯಾ

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
India vs Australia Rohit Sharma Rohith Sharma Kohli Virat Kohli
Advertisment
Advertisment
Advertisment