Advertisment

ಕೊಹ್ಲಿ, ರೋಹಿತ್, ಗಿಲ್ ಬ್ಯಾಟಿಂಗ್​ ವೈಫಲ್ಯ.. ಸಾಧಾರಣ ಮೊತ್ತದ ಟಾರ್ಗೆಟ್​ ನೀಡಿದ ಟೀಮ್ ಇಂಡಿಯಾ

ಪರ್ತ್​ ಮೈದಾನದಲ್ಲಿ ನಡೆಯುತ್ತಿರುವ ಏಕದಿನ ಪಂದ್ಯದಲ್ಲಿ ಆಸಿಸ್​ ನಾಯಕ ಮಿಚೆಲ್ ಮಾರ್ಷ್ ಅವರು ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿದರು. ಇದರಿಂದ ಟೀಮ್ ಇಂಡಿಯಾ ಮೊದಲ ಬ್ಯಾಟಿಂಗ್ ಮಾಡಿದ್ದು ಸಾಧಾರಣ ಮೊತ್ತದ ಟಾರ್ಗೆಟ್​ ಅನ್ನು ಎದುರಾಳಿಗೆ ನೀಡಿದೆ.

author-image
Bhimappa
KL_RAHUL_AUS
Advertisment

ಮೊದಲ ಒಡಿಐ ಪಂದ್ಯದಲ್ಲಿ ಟೀಮ್ ಇಂಡಿಯಾ 9 ವಿಕೆಟ್​ಗೆ 137 ರನ್​ಗಳ ಟಾರ್ಗೆಟ್​ ಅನ್ನು ಆಸ್ಟ್ರೇಲಿಯಾ ತಂಡಕ್ಕೆ ನೀಡಿದೆ. ಮಳೆ ಬಂದ ಕಾರಣ ಪಂದ್ಯವನ್ನ ಕೇವಲ 26 ಓವರ್​ಗಳಿಗೆ ಮಾತ್ರ ಸೀಮಿತ ಮಾಡಲಾಗಿದೆ. 

Advertisment

ಆಸ್ಟ್ರೇಲಿಯಾದ ಪರ್ತ್​ ಮೈದಾನದಲ್ಲಿ ನಡೆಯುತ್ತಿರುವ ಏಕದಿನ ಪಂದ್ಯದಲ್ಲಿ ಆಸಿಸ್​ ನಾಯಕ ಮಿಚೆಲ್ ಮಾರ್ಷ್ ಅವರು ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿದರು. ಇದರಿಂದ ಟೀಮ್ ಇಂಡಿಯಾ ಮೊದಲ ಬ್ಯಾಟಿಂಗ್ ಮಾಡಿದ್ದು ಸಾಧಾರಣ ಮೊತ್ತದ ಟಾರ್ಗೆಟ್​ ಅನ್ನು ಎದುರಾಳಿಗೆ ನೀಡಿದೆ. ಆರಂಭದಲ್ಲಿ ಪ್ರಮುಖ ವಿಕೆಟ್​ಗಳನ್ನು ಕಳೆದುಕೊಂಡು ಶುಭ್​ಮನ್ ಗಿಲ್ ನೇತೃತ್ವದ ಟೀಮ್ ಇಂಡಿಯಾ ಭಾರೀ ಸಮಸ್ಯೆ ಅನುಭವಿಸಿತು.  

ಇದನ್ನೂ ಓದಿ: ದೀಪಾವಳಿ ಧಮಾಕ.. ಆಭರಣ ಪ್ರಿಯರಿಗೆ ಗುಡ್​ನ್ಯೂಸ್​, ಬೆಲೆಯಲ್ಲಿ ಭಾರೀ ಇಳಿಕೆ ಕಂಡ ಚಿನ್ನ!

ROHIT_KOHLI_Bat

ಆರಂಭಿಕರಾಗಿ ಕ್ರೀಸ್​ಗೆ ಆಗಮಿಸಿದ್ದ​ ರೋಹಿತ್ ಶರ್ಮಾ ಹಾಗೂ ನಾಯಕ ಶುಭ್​ಮನ್ ಗಿಲ್​ ಬಂದಷ್ಟೇ ವೇಗವಾಗಿ ಹೊರ ನಡೆದರು. 14 ಎಸೆತಗಳಲ್ಲಿ 1 ಬೌಂಡರಿ ಸೇಮತ 8 ರನ್​ಗೆ ರೋಹಿತ್ ಔಟ್ ಆದರು. ಬಳಿಕ ಕ್ರೀಸ್​ಗೆ ಆಗಮಿಸಿದ ವಿರಾಟ್ ಕೊಹ್ಲಿ ಪಂದ್ಯದಲ್ಲಿ 8 ಎಸೆತಗಳನ್ನು ಎದುರಿಸಿ ಡಕೌಟ್ ಆದರು. ಇನ್ನೊಬ್ಬ ಓಪನರ್ ಶುಭ್​ಮನ್ ಗಿಲ್​ 18 ಬಾಲ್​ಗಳಲ್ಲಿ 2 ಬೌಂಡರಿ ಬಾರಿಸಿ 10 ರನ್​ಗೆ ವಿಕೆಟ್​ ಒಪ್ಪಿಸಿದರು. ಈ ಮೂವರು ಔಟ್ ಆಗುತ್ತಿದ್ದಂತೆ ಭಾರತ ರನ್​ಗಳು ಕುಸಿಯಿತು ಎನ್ನಬಹುದು. 

Advertisment

ಶ್ರೇಯಸ್ ಅಯ್ಯರ್ 11, ಅಕ್ಷರ್ ಪಟೇಲ್ 31, ಕೆ.ಎಲ್ ರಾಹುಲ್​ 38, ಸುಂದರ್ 10, ನಿತೀಶ್ ಕುಮಾರ್ 19, ಹರ್ಷಿತ್ ರಾಣಾ 1, ಅರ್ಷ್​ದೀಪ್ ಸಿಂಗ್ ಡಕೌಟ್​, ಸಿರಾಜ್ ಅಜೇಯ ಈ ಎಲ್ಲರ ಬ್ಯಾಟಿಂಗ್​ನಿಂದ ಟೀಮ್ ಇಂಡಿಯಾ 26 ಓವರ್​ಗಳಲ್ಲಿ 9 ವಿಕೆಟ್​ಗೆ 137 ರನ್​ಗಳ ಟಾರ್ಗೆಟ್ ಅನ್ನು ಸೆಟ್ ಮಾಡಿದೆ. 

ಆಸ್ಟ್ರೇಲಿಯಾ ಪರ ಒಟ್ಟು 6 ಬೌಲರ್​ಗಳು ಬೌಲಿಂಗ್ ಮಾಡಿದ್ದು ಮ್ಯಾಥ್ಯ ಶಾರ್ಟ್​ ಬಿಟ್ಟು ಉಳಿದೆಲ್ಲ ಬೌಲರ್​ಗಳು ವಿಕೆಟ್​ಗಳನ್ನು ಕಬಳಿಸಿದರು. ಜೋಶ್ ಹ್ಯಾಜಲ್​ವುಡ್​, ಮಿಚೆಲ್ ಓವನ್, ಮ್ಯಾಥ್ಯ ಕುಹ್ನೆಮೆನ್ ತಲಾ ವಿಕೆಟ್​ ಪಡೆದು ತಂಡಕ್ಕೆ ಬಹುದೊಡ್ಡ ಕೊಡುಗೆ ನೀಡಿದರು.    
  
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

Rohit Sharma-Virat Kohli Virat Kohli
Advertisment
Advertisment
Advertisment