/newsfirstlive-kannada/media/media_files/2025/10/19/kiccha-aniversary-5-2025-10-19-16-16-36.jpg)
ಬಿಗ್‌ಬಾಸ್ ಮನೆಯಲ್ಲಿ ಮೊದಲ ಗ್ರ್ಯಾಂಡ್ ಫಿನಾಲೆ ಸಂಭ್ರಮಕ್ಕೆ ಇನ್ನಷ್ಟು ಮೆರುಗು ನೀಡಲೆಂದು ಸುದೀಪ್‌ಗೂ ಸರ್ಪೈಸ್ ನೀಡಲಾಗಿದೆ. ಅವರ 24ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಬಿಗ್‌ಬಾಸ್ ವೇದಿಕೆಯಲ್ಲೇ ಸಂಭ್ರಮದಿಂದ ಆಚರಿಸಲಾಗಿದೆ.
ಇದನ್ನೂ ಓದಿ: ಕಿಚ್ಚ ಸುದೀಪ್‌ಗೇ ಸರ್ಪೈಸ್ ಕೊಟ್ಟ ಬಿಗ್‌ಬಾಸ್..!
ಇದೇ ಸಂಭ್ರಮಕ್ಕೆ ಮತ್ತಷ್ಟು ಮೆರಗು ನೀಡಿದ್ದು, ಸುದೀಪ್​ ಅವರ ತಂದೆಯ ಮಾತು.. ಮಗನ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಸುದೀಪ್​ ತಂದೆ ಎಂ.ಸಂಜೀವ್​, ಸೊಸೆಯನ್ನ ಹಾಡಿ ಹೊಗಳಿದ್ದಾರೆ. ಅವಳು ನನ್ನ ಮನೆಗೆ ಬಂದ ಸೊಸೆ ಎಂದು ಕರೆಯಲೋ, ಮಗಳು ಅಂತ ಕರೆಯಲೋ ಅಥವಾ ಭಾಗ್ಯ ದೇವತೆ ಅಂತ ಕರೆಯಲೋ.. ಗೊತ್ತಿಲ್ಲ. ಇದೇ ರೀತಿ ನೀವಿಬ್ಬರೂ ಒಗ್ಗಟ್ಟಿನಿಂದ ಬಾಳಿ ಬದುಕಿ ಅಂತಾ ಹಾರೈಸಿದರು.
ಆಗ ಸುದೀಪ್ ಪತ್ನಿ ಪ್ರಿಯಾ, ಭಾವುಕರಾದರು. ತುಂಬಾ ಥ್ಯಾಂಕ್ಸ್ ಅಪ್ಪ ಎಂದು ಕಣ್ಣೀರು ಇಟ್ಟರು. ಇಂದು ರಾತ್ರಿ 8 ಗಂಟೆಯಿಂದ ಬಿಗ್​ಬಾಸ್ ಸಂಚಿಕೆ ಪ್ರಸಾರವಾಗಲಿದೆ. ಈ ವೇಳೆ ಸುದೀಪ್​ ತಂದೆ ಮಾತನ್ನಾಡಿದ ಕ್ಷಣ ಪ್ರಸಾರವಾಗಲಿದೆ.