/newsfirstlive-kannada/media/media_files/2025/10/19/kiccha-aniversary-1-2025-10-19-14-50-43.jpg)
ಬಿಗ್‌ಬಾಸ್‌ನ ಕಳೆ ಹೆಚ್ಚಾಗೋದೆ ಶನಿವಾರ ಹಾಗೂ ಭಾನುವಾರದ ಎಪಿಸೋಡ್‌ನಿಂದ. ಇದರ ಮೈನ್ ಹೈಲೈಟ್ ಕಿಚ್ಚ ಸುದೀಪ್. ಅವರ ನಿರೂಪಣೆ, ಮಾತಿನ ಶೈಲಿ, ಸ್ಪರ್ಧಿಗಳಿಗೆ ನೀಡುವ ಪ್ರೋತ್ಸಾಹ ಎಲ್ಲವೂ ಭಿನ್ನ. ಅವರ ಮಾತಿನ ಶೈಲಿಗೆ ಕರುನಾಡೇ ಮನಸೋತಿದೆ. ಇಂಥಾ ಕಿಚ್ಚನಿಗೆ ಬಿಗ್‌ಬಾಸ್ ಕೂಡ ಸರ್ಪೈಸ್ ಕೊಟ್ಟಿದೆ.
ಬಿಗ್‌ಬಾಸ್ ಮನೆಯಲ್ಲಿ ಮೊದಲ ಗ್ರ್ಯಾಂಡ್ ಫಿನಾಲೆ ಸಂಭ್ರಮ ಮನೆ ಮಾಡಿದೆ. ಈ ಸಡಗರಕ್ಕೆ ಇನ್ನಷ್ಟು ಮೆರುಗು ನೀಡಲೆಂದೇ ಬಿಗ್‌ಬಾಸ್ ಮನೆಯಲ್ಲಿ ಸುದೀಪ್‌ಗೂ ಸರ್ಪೈಸ್ ನೀಡಲಾಗಿದೆ. ಅವರ 24ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಬಿಗ್‌ಬಾಸ್ ವೇದಿಕೆಯಲ್ಲೇ ಸಂಭ್ರಮದಿಂದ ಆಚರಿಸಲಾಗಿದೆ. ಇವೆಲ್ಲದರ ನಡುವೆಯೂ ಸುದೀಪ್ ತಮ್ಮ ತಾಯಿಯನ್ನು ಸ್ಮರಿಸಿದ್ದು, ಇವತ್ತಿನ ದಿನವೇ ತಾನು ತಾಯಿಯೊಂದಿಗೆ ಕೊನೆಯದಾಗಿ ಮಾತನಾಡಿದ್ದು ಎಂದು ಹೇಳಿದ್ದಾರೆ.
ಕಾಕ್ರೋಚ್ ಸುಧಿ ಮೊದಲ ಫಿನಾಲೆ ವಿನ್ನರ್ ಆಗಿದ್ದಾರೆ ನಿಜ. ಒಂದೇ ವಾರದಲ್ಲಿ ಸತೀಶ್, ಅಶ್ವಿನಿ ಎಸ್.ಎನ್, ಮಂಜುಭಾಷಿಣಿ ಬಿಗ್‌ಬಾಸ್ ಮನೆಯಿಂದ ಎಲಿಮಿನೇಷನ್ ಆಗಿದ್ದಾರೆ. ಇವರ ಬದಲಿಗೆ ಬಿಗ್‌ಬಾಸ್ ಮನೆಗೆ ಇನ್ನಷ್ಟು ಜನರು ಎಂಟ್ರಿಕೊಟ್ಟು ಹೊಸ ಆಟ ಆರಂಭಿಸಲಿದ್ದು, ಅವರು ಯಾರು? ಬಿಗ್‌ಬಾಸ್ ಮನೆಯಲ್ಲಿ ಇನ್ನೇನೇನು ಟ್ವಿಸ್ಟ್ ಕಾದಿದೆ ಅನ್ನೋದನ್ನು ಇವತ್ತಿನ ಬಿಗ್‌ಬಾಸ್‌ನಲ್ಲಿ ಕಾದು ನೋಡಬೇಕಿದೆ..