ಆಲ್​ ಟೈಮ್ IPL ತಂಡ ಪ್ರಕಟಿಸಿದ ಗೇಲ್..! ಆರ್​ಸಿಬಿಯಿಂದ ಎಷ್ಟು ಮಂದಿಗೆ ಸ್ಥಾನ..?

ಕ್ರಿಕೆಟ್ ಲೋಕದ ದೈತ್ಯ ಕ್ರಿಸ್​ ಗೇಲ್ ಹಲವು ವಿಚಾರಕ್ಕೆ ಮತ್ತೆ ಮತ್ತೆ ಸುದ್ದಿ ಆಗ್ತಿದ್ದಾರೆ. ಇದೀಗ ಅವರು ಐಪಿಎಲ್​ನ ಸಾರ್ವಕಾಲಿಕ ಆಟಗಾರರ ಹೆಸರನ್ನು ಪ್ರಕಟಿಸಿದ್ದಾರೆ. ಗೇಲ್ ಸೆಲೆಕ್ಟ್ ಮಾಡಿರುವ ತಂಡದಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ ಕೂಡ ಇದ್ದಾರೆ.

author-image
Ganesh Kerekuli
Chris Gayle (1)
Advertisment

ಕ್ರಿಕೆಟ್ ಲೋಕದ ದೈತ್ಯ ಕ್ರಿಸ್​ ಗೇಲ್ ಹಲವು ವಿಚಾರಕ್ಕೆ ಮತ್ತೆ ಮತ್ತೆ ಸುದ್ದಿ ಆಗ್ತಿದ್ದಾರೆ. ಇದೀಗ ಅವರು ಐಪಿಎಲ್​ನ ಸಾರ್ವಕಾಲಿಕ ಆಟಗಾರರ ಹೆಸರನ್ನು ಪ್ರಕಟಿಸಿದ್ದಾರೆ. ಗೇಲ್ ಸೆಲೆಕ್ಟ್ ಮಾಡಿರುವ ತಂಡದಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ ಕೂಡ ಇದ್ದಾರೆ. 

ಹೇಗಿದೆ ಕ್ರಿಸ್​ಗೇಲ್ ತಂಡ..?

ವಿರಾಟ್ ಕೊಹ್ಲಿ, ಕ್ರಿಸ್ ಗೇಲ್, ಸುರೇಶ್ ರೈನಾ, ಕೆ.ಎಲ್.ರಾಹುಲ್, ಎಬಿ ಡೆವಿಲಿಯರ್ಸ್, ರವೀಂದ್ರ ಜಡೇಜಾ, ಎಂಎಸ್ ಧೋನಿ, ಡಿಜೆ ಬ್ರಾವೋ, ಸುನಿಲ್ ನರೈನ್, ಭುವನೇಶ್ವರ್ ಕುಮಾರ್, ಜಸ್​ಪ್ರಿತ್ ಬುಮ್ರಾ

2008ರಿಂದ ಆರಂಭವಾಗಿರುವ ಐಪಿಎಲ್​ 18 ಸೀಸನ್​​ಗಳನ್ನು ಕಂಡಿದೆ. ಅಲ್ಲಿಂದ ಇಲ್ಲಿಯವರೆಗೆ ಅದೆಷ್ಟೋ ಆಟಗಾರರು ಬೆಳಕಿಗೆ ಬಂದು ಬದುಕನ್ನು ಕಟ್ಟಿಕೊಂಡು ಮರೆಯಾಗಿ ಹೋಗಿದ್ದಾರೆ. ಜೊತೆಗೆ ಈಗಲೂ ಕೂಡ ಅನೇಕರು ಮಿಂಚುತ್ತಿದ್ದಾರೆ. ಅವರಲ್ಲಿ ಅಳೆದು ತೂಗಿ ಗೇಲ್ ತಂಡವನ್ನು ಪ್ರಕಟಿಸಿದ್ದಾರೆ. 

ಕ್ರಿಸ್ಟೋಪರ್​ ಹೆನ್ರಿ ಗೇಲ್ ಅಲಿಯಾಸ್​​ ಕ್ರಿಸ್​ ಗೇಲ್​. ದಶಕಕ್ಕೂ ಹೆಚ್ಚು ಕಾಲ ಕ್ರಿಕೆಟ್​ ಲೋಕವನ್ನ ತನ್ನದೇ ಶೈಲಿಯಲ್ಲಿ ಆಳಿದ ಈ ಗೇಲ್​ಗೆ ವಿಶ್ವಾದ್ಯಂತ ಸಪರೇಟ್​ ಫ್ಯಾನ್​​​​ ಬೇಸ್​ಯಿದೆ. ಟಿ-20 ಕ್ರಿಕೆಟ್​ನಲ್ಲಂತೂ ಈತನನ್ನ ಮೀರಿಸೋ ಮತ್ತೊಬ್ಬ ಮಾಸ್​ ಎಂಟರ್​​ಟೈನರ್​ ಬಂದಿಲ್ಲ ಬಿಡಿ. ಕ್ರಿಸ್​ನಲ್ಲಿ ನಿಂತು ಈ ದೈತ್ಯ ಬೌಂಡರಿ, ಸಿಕ್ಸರ್​ ಸುರಿಮಳೆ ಸುರಿಸುತ್ತಿದ್ದರೆ, ಸ್ಟ್ಯಾಂಡ್​ನಲ್ಲಿ ಫ್ಯಾನ್ಸ್​ ಹುಚ್ಚೆದ್ದು ಕುಣೀತಿದ್ರು. ಸಪ್ತ ಸಾಗರದಾಚೆ ಇರುವ ಜಮೈಕಾದಿಂದ ಹಿಡಿದು ನಮ್ಮ ಬೆಂಗಳೂರುವರೆಗೂ ಕ್ರಿಸ್​ಗೇಲ್​ ನಂಟಿದೆ. 

ಇದನ್ನೂ ಓದಿ: ಏಷ್ಯಾಕಪ್​​ಗೂ ಮೊದಲೇ ಟೀಂ ಇಂಡಿಯಾಗೆ ಭರ್ಜರಿ ಗುಡ್​ನ್ಯೂಸ್​..

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Gayle all-time IPL XI
Advertisment