/newsfirstlive-kannada/media/media_files/2025/09/07/shivam-dube-team-india-new-jursey-1-2025-09-07-08-06-28.jpg)
ಮ್ಯಾಂಚೆಸ್ಟರ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ರಿಷಬ್ ಪಂತ್ ಗಾಯಗೊಂಡಿದ್ದರು. ಇದೀಗ 2025ರ ಏಷ್ಯಾ ಕಪ್‌ಗೆ ಮೊದಲು ಬಿಗ್ ಅಪ್‌ಡೇಟ್ ಸಿಕ್ಕಿದೆ. ಪಂತ್ ಶೀಘ್ರದಲ್ಲೇ ಟೀಂ ಇಂಡಿಯಾಗೆ ಮರಳಲಿದ್ದಾರೆ.
ಹಾಗಂತ ರಿಷಭ್ ಪಂತ್ ಏಷ್ಯಾ ಕಪ್​ನಲ್ಲಿ ಆಡ್ತಿಲ್ಲ. ಅಕ್ಟೋಬರ್​ನಲ್ಲಿ ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡಲಿದ್ದಾರೆ. ಟೀಮ್ ಇಂಡಿಯಾ ಅಕ್ಟೋಬರ್-ನವೆಂಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಏಕದಿನ ಮತ್ತು ಟಿ20 ಸರಣಿ ಆಡಲಿದೆ. ಈ ವೇಳೆ ಕೂಡ ಪಂತ್ ಟೀಂ ಇಂಡಿಯಾದ ಭಾಗವಾಗಿರಲಿದ್ದಾರೆ.
/filters:format(webp)/newsfirstlive-kannada/media/media_files/2025/08/08/rishabh_pant-5-2025-08-08-11-04-19.jpg)
ರಿಷಭ್ ಪಂತ್ ಕಾಲಿನಲ್ಲಿ ಮೂಳೆ ಮುರಿತ
ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಕ್ರಿಸ್ ವೋಕ್ಸ್ ಎಸೆದ ಚೆಂಡಿನಿಂದ ರಿಷಭ್ ಪಂತ್ ಗಾಯಗೊಂಡರು, ನಂತರ ಅವರು 37 ರನ್ ಗಳಿಸಿದ್ದಾಗ ಗಾಯಗೊಂಡು ನಿವೃತ್ತರಾದರು. ಆದರೆ ತಂಡಕ್ಕೆ ಅಗತ್ಯವಿದ್ದಾಗ, ಬ್ಯಾಟಿಂಗ್ ಮಾಡಲು ಕುಂಟುತ್ತಾ ಮೈದಾನಕ್ಕೆ ಇಳಿದರು. ಕಾಲಿನ ಗಾಯದ ನಂತರ ತೀವ್ರ ನೋವಿನಿಂದ ಬಳಲುತ್ತಿದ್ದರೂ ಪಂತ್ 54 ರನ್ ಗಳಿಸಿ ಅರ್ಧಶತಕ ಗಳಿಸಿದರು. ಆ ಪಂದ್ಯವನ್ನು ಟೀಮ್ ಇಂಡಿಯಾ ಡ್ರಾ ಮಾಡಿಕೊಳ್ಳುವಲ್ಲಿ ಪಂತ್ ಪ್ರಮುಖ ಪಾತ್ರ ವಹಿಸಿದರು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us