/newsfirstlive-kannada/media/post_attachments/wp-content/uploads/2025/04/VIRAT_KOHLI_BAT.jpg)
ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಬಿಗ್ ಶಾಕ್ ನೀಡಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ವಿರಾಟ್, ಆರ್​ಸಿಬಿ ಒಪ್ಪಂದ ತಿರಿಸ್ಕರಿಸಿದ್ದಾರೆ ಅನ್ನೋ ಸುದ್ದಿ ಕೇಳಿಬಂದಿತ್ತು. ಇದು ನಿಜಾನೋ ಸುಳ್ಳೋ ಗೊತ್ತಿಲ್ಲ.. ಕೊಹ್ಲಿ ನಿಜವಾಗ್ಲೂ ಆರ್​ಸಿಬಿ ತಂಡದಿಂದ ದೂರವಾಗ್ತಿದ್ದಾರಾ? ಮುಂದಿನ ಸೀಸನ್​​ನಲ್ಲಿ ಕೊಹ್ಲಿ ಐಪಿಎಲ್ ಆಡಲ್ವಾ? ಈ ಎಲ್ಲಾ ಪ್ರಶ್ನೆಗಳು, ಇದೀಗ ಎಲ್ಲರನ್ನ ಕಾಡ್ತಿದೆ.
18 ವರ್ಷಗಳ ಬಳಿಕ ಐಪಿಎಲ್ ಟ್ರೋಫಿ ಗೆದ್ದ ಖುಷಿಯಲ್ಲಿ ಆರ್​ಸಿಬಿ, ಹೋಂ ಗ್ರೌಂಡ್ ಚಿನ್ನಸ್ವಾಮಿ ಸ್ಟೇಡಿಯಮ್​​ನಲ್ಲಿ ಸಂಭ್ರಮಾಚರಣೆ ಆಚರಿಸಿಕೊಂಡಿತ್ತು. ಅಂದು ನಡೆದ ಆ ಘನಘೋರ ಕಾಲ್ತುಳಿದ ದುರಂತ, ಕೊಹ್ಲಿ ಸೇರಿದಂತೆ ಆರ್​ಸಿಬಿ ಆಟಗಾರರನ್ನ ಕಂಗೆಡಿಸಿತ್ತು. ಆ ದುರ್ಘಟನೆಯ ನಂತರ ಯಾರ ಕಣ್ಣಿಗೂ ಕಾಣಿಸಿಕೊಳ್ಳದೇ ಸೈಲೆಂಟ್ ಆಗಿದ್ದ ವಿರಾಟ್ ಕೊಹ್ಲಿ, ಇಂದು ಇದ್ದಕ್ಕಿದಂತೆ ಭಾರೀ ಚರ್ಚೆಗೆ ಗ್ರಾಸವಾಗಿದ್ದಾರೆ.
ಇದನ್ನೂ ಓದಿ: ಸೈಲೆಂಟ್ ಆಗಿಯೇ ಚೆಕ್​ಮೇಟ್ ಕೊಟ್ಟ ಜಾರಕಿಹೊಳಿ ಬ್ರದರ್ಸ್..!
ವಿರಾಟ್ ಕೊಹ್ಲಿ ಮುಂದಿನ ಐಪಿಎಲ್ ಆಡಲ್ಲ. ಕೊಹ್ಲಿ ಆರ್​ಸಿಬಿ ತಂಡವನ್ನ ತ್ಯಜಿಸುತ್ತಾರೆ. ವಿರಾಟ್ ಅಭಿಮಾನಿಗಳ ಹೃದಯದಿಂದ ದೂರ ಹೋಗ್ತಿದ್ದಾರೆ. ಈ ಸುದ್ದಿ ಇದೀಗ ಎಲ್ಲೆಡೆ ಹರಡಿದೆ. ಮೂಲಗಳ ಪ್ರಕಾರ, ಕೊಹ್ಲಿ ಆರ್​ಸಿಬಿ ಬಿಡೋ ವಿಚಾರ, ಸತ್ಯಕ್ಕೆ ಹತ್ತಿರವಾಗಿದೆ. ಯಾಕಂದ್ರೆ ಕೊಹ್ಲಿಗೆ ಕ್ರಿಕೆಟ್ ಮೇಲಿನ ಆಸಕ್ತಿ, ದಿನೇ ದಿನೇ ಕಡಿಮೆಯಾಗ್ತಿದೆ. ಕೊಹ್ಲಿ, ಎಲ್ಲರಿಂದಲೂ ದೂರ ಹೋಗುವ ಚಿಂತನೆ ನಡೆಸುತ್ತಿದ್ದಾರೆ. ಅದ್ರಲ್ಲೂ ಕೊಹ್ಲಿ, ಆರ್​ಸಿಬಿ ತಂಡವನ್ನ ಬಿಡಲು ಹಲವು ಕಾರಣಗಳಿವೆ.
ಕಾರಣ ನಂ.1: ಕೊಹ್ಲಿಯ ಕಪ್ ಗೆಲ್ಲೋ ಕನಸು ನನಸು
ಐಪಿಎಲ್ ಸೀಸನ್-1ರಿಂದ 18 ವರ್ಷಗಳ ಕಾಲ ವಿರಾಟ್ ಕೊಹ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಒಂದರಲ್ಲೇ ಆಡಿದ್ದಾರೆ. ಕೊಹ್ಲಿ, ಆರ್​ಸಿಬಿಯ ಲಾಯಲ್ ಪ್ಲೇಯರ್. ಆಟಗಾರನಾಗಿ ಮತ್ತು ನಾಯಕನಾಗಿ ವಿರಾಟ್​​​​​​, ಆರ್​ಸಿಬಿಗೆ ತನ್ನದೇ ಕೊಡುಗೆ ನೀಡಿದ್ದಾರೆ. ಆರ್​ಸಿಬಿ ತಂಡದ ಬಗ್ಗೆ ಅಪಾರ ಗೌರವ, ಪ್ರೀತಿ ಹೊಂದಿದ್ದ ಕೊಹ್ಲಿಗೆ, ಕಪ್​​​​​​​​​​​​​​​​​​​​​​​ ಗೆದ್ದಿಲ್ಲ ಅನ್ನೋ ಕೊರಗು ಕಾಡ್ತಿತ್ತು. ಆದ್ರೆ ಐಪಿಎಲ್ ಸೀಸನ್-18ರಲ್ಲಿ, ಕೊಹ್ಲಿಯ ಕನಸು ನನಸಾಗಿದೆ. ಅಂದುಕೊಂಡಿದ್ದನ್ನ ಈಗಾಗಲೇ ಸಾಧಿಸಿರೋದು ಕೊಹ್ಲಿ, ಆರ್​ಸಿಬಿ ತಂಡಕ್ಕೆ ಗುಡ್​ಬೈ ಹೇಳಲು ಒಂದು ಕಾರಣವಿರಬಹುದು.
ಕಾರಣ ನಂ.2: ಚಿನ್ನಸ್ವಾಮಿ ಕಾಲ್ತುಳಿತದಿಂದ ಬೇಸರ
ಒಂದೇ ಒಂದು ಐಪಿಎಲ್ ಟ್ರೋಫಿ ಗೆಲ್ಲಲು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 18 ವರ್ಷಗಳು ಬೇಕಾಯ್ತು. ಆದ್ರೆ ಕಪ್ ಗೆದ್ದ ಖುಷಿಯನ್ನೂ, ಆರ್​ಸಿಬಿ ಆಟಗಾರರು ಮನಸಾರೆ ಸಂಭ್ರಮಿಸಿಕೊಳ್ಳಲು ಆಗಲಿಲ್ಲ. ಸಂಭ್ರಮಾಚರಣೆ ವೇಳೆ, ಚಿನ್ನಸ್ವಾಮಿ ಸ್ಟೇಡಿಯಂ ಬಳಿ 11 ಮಂದಿ ಕಾಲ್ತುಳಿತಕ್ಕೆ ಬಲಿಯಾಗಬೇಕಾಯ್ತು. ಈ ಘಟನೆ, ಕೊಹ್ಲಿಯನ್ನ ಹಗಲಿರುಳು ಕಾಡ್ತಿದೆ. ಹಾಗಾಗೇ ಈ ಕಹಿ ಘಟನೆಯನ್ನ ಅರಗಿಸಿಕೊಳ್ಳಲಾಗದೇ, ಕೊಹ್ಲಿ ಆರ್​ಸಿಬಿಯನ್ನ ತೊರೆಯಲು ಮನಸು ಮಾಡಿರಬಹುದು.
ಕಾರಣ ನಂ.3: ಆರ್​ಸಿಬಿ ಮಾರಾಟಕ್ಕೆ ಮುಂದಾಗಿರುವ ಫ್ರಾಂಚೈಸಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ, ದೇಶ ವಿದೇಶಗಳಿಂದ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಸದ್ಯ ಆರ್​ಸಿಬಿ, ಚೆನ್ನೈ ಸೂಪರ್​​ಕಿಂಗ್ಸ್​- ಮುಂಬೈ ಇಂಡಿಯನ್ಸ್​ನಂತಹ ಸೂಪರ್​ಸ್ಟಾರ್ಸ್​​ ಇರುವ ತಂಡಗಳನ್ನ ಫ್ಯಾನ್ ಬೇಸ್ಡ್​​ ಮತ್ತು ವ್ಯಾಲ್ಯೂ ಬೇಸ್ಡ್​​ ಎರಡರಲ್ಲೂ ಹಿಂದಿಕ್ಕಿದೆ. ಹಾಗಾಗಿ ಆರ್​ಸಿಬಿ ಮಾಲೀಕರು, ತಂಡವನ್ನ ದುಪ್ಪಟ್ಟು ಮೊತ್ತಕ್ಕೆ ಮಾರಾಟ ಮಾಡಲು ಮುಂದಾಗಿದ್ದಾರೆ. ಆರ್​ಸಿಬಿ ಮಾಲೀಕರ ನಡೆಯಿಂದ, ಕೊಹ್ಲಿ ಆರ್​ಸಿಬಿ ಮ್ಯಾನೇಜ್ಮೆಂಟ್ ನೀಡಿದ್ದ ಒಪ್ಪಂದವನ್ನ ತಿರಸ್ಕರಿಸಲು ಮುಂದಾಗಿಬಹುದು.
ಕಾರಣ ನಂ.4: ಈ ಹಿಂದಿನಂತೆ ವರ್ತಿಸ್ತಿಲ್ಲ ಕೊಹ್ಲಿ ದೇಹ
ನವೆಂಬರ್ 5ರಂದು ವಿರಾಟ್ ಕೊಹ್ಲಿ, 37ನೇ ವಸಂತಕ್ಕೆ ಕಾಲಿಡಲಿದ್ದಾರೆ. 17 ವರ್ಷಗಳ ಕಾಲ ಅಂತರಾಷ್ಟ್ರೀಯ ಕ್ರಿಕೆಟ್ ಮತ್ತು 18 ವರ್ಷಗಳ ಕಾಲ ಐಪಿಎಲ್ ಟೂರ್ನಿ ಆಡಿರುವ ವಿರಾಟ್ ಮನಸ್ಥಿತಿ ಬಹುಷಃ, ಈ ಹಿಂದಿನಂತಿಲ್ಲ.! ನಿಜ..! ಕೊಹ್ಲಿ ಮನಸ್ಥಿತಿ ಬದಲಾಗಿದೆ. ಕೊಹ್ಲಿ ದೇಹ ಈ ಹಿಂದಿನಂತೆ ಇಲ್ಲ. ವಯಸ್ಸಾಗುತ್ತಿದಂತೆ ದೇಹ ವಿಶ್ರಾಂತಿ ಭಯಸುತ್ತಿದೆ. ಕೊಹ್ಲಿ ನೋಡೋಕೆ ಹಂಡ್ರೆಡ್​​​​ ಪರ್ಸಂಟ್ ಫಿಟ್ ಆಗಿ ಕಾಣುತ್ತಾರೆ. ಆದ್ರೆ ತನ್ನ ದೇಹ ಹೇಗೆ ಸ್ಪಂಧಿಸುತ್ತಿದೆ ಅನ್ನೋದು, ಕೊಹ್ಲಿಗೆ ಮಾತ್ರ ಗೊತ್ತು. ಇದು ಕೂಡ ಕೊಹ್ಲಿ ಆರ್​ಸಿಬಿ ಬಿಡಲು ಕಾರಣ ಇರಬಹುದು.
ಕಾರಣ ನಂ.5: ಮಕ್ಕಳ ಜೊತೆ ಕಾಲ ಕಳೆಯಲು ನಿರ್ಧಾರ..!
ವಿರಾಟ್ ಕೊಹ್ಲಿ ಮಾಡದ ಸಾಧನೆ ಇಲ್ಲ. ಕೊಹ್ಲಿ ಬರೆಯದ ದಾಖಲೆ ಇಲ್ಲ. ಟೀಮ್ ಇಂಡಿಯಾ ಪರ, ಆರ್​ಸಿಬಿ ಪರ ಕೊಹ್ಲಿ, ಲೆಕ್ಕವಿಲ್ಲದಷ್ಟು ಸಾಧನೆಗಳನ್ನ, ದಾಖಲೆಗಳನ್ನ ಮಾಡಿದ್ದಾರೆ. ಸುಮಾರು 2 ದಶಕಗಳ ಕಾಲ ಕಷ್ಟ, ನೋವು, ನಲಿವು, ತ್ಯಾಗಗಳೊಂದಿಗೆ ಕ್ರಿಕೆಟ್ ಫೀಲ್ಡ್​ನಲ್ಲಿ ಕಾಲ ಕಳೆದಿರುವ ಕೊಹ್ಲಿ, ಮುಂದಿನ ದಿನಗಳಲ್ಲಿ ಕುಟುಂಬಸ್ಥರ ಜೊತೆ ಇರಲು ನಿರ್ಧರಿಸಿರಬಹುದು. ಇಬ್ಬರು ಮುದ್ದಾದ ಮಕ್ಕಳು ಮತ್ತು ಸದಾ ಗಂಡನನ್ನ ಬೆಂಬಲಿಸುವ ಪತ್ನಿಗೆ ಟೈಮ್ ಕೊಡಲು, ಕೊಹ್ಲಿ ಕ್ರಿಕೆಟ್​​ನಿಂದ ದೂರ ಸರಿಯಲು ನಿರ್ಧರಿಸಿರಬಹುದು.
ಇದನ್ನೂ ಓದಿ: ಡಿಸಿಎಂ ಜೊತೆ ಸಿಎಂ ಪ್ರತ್ಯೇಕ ಮಾತುಕತೆ.. ‘ಡಿನ್ನರ್ ಮೀಟಿಂಗ್’ ಇನ್​ಸೈಡ್​ ಸ್ಟೋರಿ..!
ವಿರಾಟ್ ಕೊಹ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನ ಬಿಡ್ತಾರೆ ಅಂತ ಎಲ್ಲೂ ಅಧಿಕೃತ ಮಾಹಿತಿ ಇಲ್ಲ. ಇತ್ತೀಚಿನ ಬೆಳವಣಿಗೆಗಳನ್ನ ಸೂಕ್ಷ್ಮವಾಗಿ ನೋಡಿದ್ರೆ ಕೊಹ್ಲಿ ಆರ್​ಸಿಬಿ ಬಿಟ್ಟರೂ ಆಶ್ಚರ್ಯ ಪಡಬೇಕಾಗಿಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ