/newsfirstlive-kannada/media/media_files/2025/10/14/siddaramaiah-dinner-meeting-2025-10-14-08-22-44.jpg)
ಸಿಎಂ ಕುರ್ಚಿಯ ಕಿಚ್ಚಿನ ನಡುವೆ ಡಿನ್ನರ್ ಮೀಟಿಂಗ್ ಮುಗಿದಿದೆ. ಊಟದ ಬಳಿಕ ಸಿದ್ದು ರಾಜಕೀಯ ದಾಳಗಳನ್ನ ಇಳಿಸಿದ್ದಾರೆ. ಪಟ್ಟದಾಟದಲ್ಲಿ ಶಾಸಕರ ಬಲವೇ ಮುಖ್ಯ ಅಂತ ಅಸ್ತ್ರ ಬಿಟ್ಟಿದ್ದ ಸಿದ್ದು, ನೇರವಾಗಿ ಡಿಸಿಎಂ ಡಿಕೆಶಿ ಕನಸನ್ನ ಭಗ್ನವೇಷಗೊಳಿಸಿದ್ದಾಗಿ.. ಈ ಬೆನ್ನಲ್ಲೆ ನಡೆದ ಡಿನ್ನರ್​​​ ಪಾರ್ಟಿಯಲ್ಲಿ ಆರು ವಿಷಯಗಳ ಪ್ರಸ್ತಾಪ ಆಗಿದೆ..
ಸಂಪುಟ ಪುನಾರಚನೆಯ ಸಂದೇಶ ಕೊಟ್ಟ ಸಿದ್ದು
ಇದು ಜಸ್ಟ್​​ ಟ್ರೈಲರ್​​​ ಅಲ್ಲ, ಪಿಕ್ಚರ್​​​ ಇನ್ನೂ ಅಭಿ ಇದೆ.. ಸಂಪುಟ ಪುನಾರಚನೆ ಖಚಿತ ಅನ್ನೋ ಸುಳಿವು ಕೊಟ್ಟ ಸಿದ್ದು, ತ್ಯಾಗಕ್ಕೆ ಸಿದ್ಧರಾಗಿ ಅನ್ನೋ ಸಂದೇಶ ಕೊಟ್ಟಿದ್ದಾರೆ. ಸಿದ್ದು ಕೊಟ್ಟ ಚಮಕ್​ಗೆ ಸಚಿವರ ತಳದಲ್ಲಿ ತಳಮಳ ಸೃಷ್ಟಿ ಆಗಿದೆ.. ಔತಣಕೂಟದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಮೇಲೆ ಹೆಚ್ಚು ಫೋಕಸ್​​ ಆಗಿರೋದು ಗೊತ್ತಾಗಿದೆ.. ಸಭೆಯಲ್ಲಿ ಒಟ್ಟು 6 ವಿಷಯಗಳ ಚರ್ಚೆ ಆಗಿದೆ ಅಂತ ಗೊತ್ತಾಗಿದೆ..
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ಹೈವೋಲ್ಟೇಜ್ ಭೋಜನಕೂಟ ಆರಂಭ: ಕ್ಯಾಬಿನೆಟ್ ಪುನರ್ ರಚನೆಯ ಸುಳಿವು ಕೊಡುತ್ತಾರಾ ಸಿಎಂ?
ಸಪ್ತ ವಿಷಯ ಚರ್ಚೆ
- ಸಚಿವರ ರಿಪೋರ್ಟ್ ಕಾರ್ಡ್
- ಶೀಘ್ರ ಸಂಪುಟ ಪುನಾರಚನೆ
- ಗ್ರೇಟರ್ ಬೆಂಗಳೂರು ಎಲೆಕ್ಷನ್​​​
- ಜಿಲ್ಲಾ & ತಾಲ್ಲೂಕು ಪಂಚಾಯ್ತಿ
- ಬಿಹಾರ ವಿಧಾನಸಭೆ ಚುನಾವಣೆ
- ಪ್ರತಿಪಕ್ಷಗಳ ವಿರುದ್ಧ ಒಗ್ಗಟ್ಟು
ಸಿಎಂ ಸಿದ್ದರಾಮಯ್ಯ ಕಿವಿಮಾತು
ಪರೋಕ್ಷವಾಗಿ ಕ್ಯಾಬಿನೆಟ್ ಪುನಾರಚನೆ ಬಗ್ಗೆ ಮಾಹಿತಿ ನೀಡಿರುವ ಸಿಎಂ, ಹೈಕಮಾಂಡ್ ಒಪ್ಪಿದರೆ ಡಿಸೆಂಬರ್​ನಲ್ಲಿ ಪುನಾರಚನೆ ಆಗಲಿದೆ ಎಂದಿದ್ದಾರೆ.. ಪಕ್ಷವು ಸಂಘಟನೆ ಜವಾಬ್ದಾರಿ ನೀಡಿದರೆ ತೆಗೆದುಕೊಳ್ಳಲು ಸಿದ್ದರಾಗಿ ಅಂತ ಸೂಚಿಸಿದ್ದಾರೆ.. ಅಲ್ಲದೆ ಕೆಲ ಸಚಿವರಿಗೆ ಒನ್ ಟು ಒನ್ ಸಭೆ ನಡೆಸಿದ ಸಿಎಂ, ಸಚಿವ ಸ್ಥಾನ ತ್ಯಾಗ ಮತ್ತು ಪಕ್ಷದ ಜವಾಬ್ದಾರಿ ಉದ್ದೇಶ ವಿವರಿಸಿದ್ದಾರೆ ಅಂತ ಗೊತ್ತಾಗಿದೆ.. ಪ್ರತಿಪಕ್ಷಗಳ ಟೀಕೆಗಳಿಗೆ ಅಗ್ರೆಸ್ಸಿವ್ ಆಗಬೇಕೆಂದು ಇದೇ ವೇಳೆ ಸಿಎಂ ಕಿವಿಮಾತು ಹೇಳಿದ್ದಾರಂತೆ..
ಇದನ್ನೂ ಓದಿ: ತೀಟೆ ತಿರಿಸಿಕೊಳ್ಳೋಕೆ, ಪ್ರಚಾರಕ್ಕಾಗಿ ಮಾತಾಡ್ತಿದ್ದಾರೆ; ಪ್ರಿಯಾಂಕ್ ಖರ್ಗೆ ವಿರುದ್ಧ R ಅಶೋಕ್ ಕೆಂಡಾಮಂಡಲ
‘ಸ್ವಲ್ಪ ಅಗ್ರೆಸ್ಸಿವ್ ಆಗಿರಿ’
ಪ್ರತಿಪಕ್ಷಗಳು ನಿರಂತರವಾಗಿ ಆರೋಪ ಮಾಡುತ್ತಿದ್ದರೂ ಗಟ್ಟಿಯಾಗಿ ಉತ್ತರಿಸುತ್ತಿಲ್ಲ ಯಾಕೆ? ಸರ್ಕಾರ ಒಳ್ಳೆಯ ಯೋಜನೆಗಳನ್ನು ಕೊಟ್ಟಿದೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಾಧ್ಯವೇ ಇಲ್ಲ ಅಂತ ಪ್ರತಿಪಕ್ಷಗಳು ಆರೋಪ ಮಾಡಿದ್ದವು. ಎರಡು ವರ್ಷಗಳೇ ಕಳೆದರೂ ತಪ್ಪದೆ ಯೋಜನೆ ಕೊಡ್ತಿದ್ದೀವಿ.. ಜೊತೆಗೆ ಅಭಿವೃದ್ಧಿ ಕೆಲಸಗಳಿಗೆ ಯಾವುದೇ ತೊಂದರೆ ಆಗಿಲ್ಲ. ಎಲ್ಲಾ ಶಾಸಕರಿಗೂ ಅನುದಾನ ನೀಡಲಾಗ್ತಿದೆ. ಇಷ್ಟಾದರೂ ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಟೀಕೆ ಮಾಡ್ತಿವೆ.. ಆದ್ರೆ, ನೀವು ಇನ್ನಷ್ಟು ಪರಿಣಾಮಕಾರಿ ಆಗಬೇಕು.
ಸಿದ್ದರಾಮಯ್ಯ, ಮುಖ್ಯಮಂತ್ರಿ
ಶಾಸಕರು ಪದೇ ಪದೇ ಅಸಮಾಧಾನ ಹೊರ ಹಾಕ್ತಿದ್ದಾರೆ. ಇನ್ನಾದರೂ ನೀವು ನಿಮ್ಮ ನಡೆ ಬದಲಿಸಿಕೊಳ್ಳಬೇಕು. ನಮ್ಮದೇ ಶಾಸಕರಿಗೇ ಸಚಿವರು ಸ್ಪಂದಿಸದೇ ಇದ್ರೆ ಹೇಗೆ ಅಂತ ಸಿಎಂ ಪ್ರಶ್ನೆ ಮಾಡಿದ್ದಾರೆ.. ಅವರ ಯಾವುದೇ ಪತ್ರಗಳು ಬಂದರೂ ಕೂಡಲೇ ಸ್ಪಂದಿಸಿ ಅಂತ ಬುದ್ಧಿ ಹೇಳಿದ್ದಾರಂತೆ..
ಡಿಸಿಎಂ ಡಿಕೆಶಿ ಜೊತೆ ಸಿಎಂ ಸಿದ್ದು ಪ್ರತ್ಯೇಕ ಮಾತುಕತೆ!
ವೇರಿ ಇಂಟ್ರಸ್ಟಿಂಗ್​​​ ಅಂದರೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಪ್ರತ್ಯೇಕ ಮಾತುಕತೆ ನಡೆಸಿದ್ದಾರೆ.. ಡಿನ್ನರ್ ಮೀಟಿಂಗ್ ನೆಪದಲ್ಲಿ ಮಹತ್ವದ ಚರ್ಚೆ ನಡೆಸಿರುವ ಸಿಎಂ, ಡಿಸಿಎಂ, ಸುಮಾರು 20 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ.. ಇನ್ನು, ಸಭೆ ಬಳಿಕ ಸಚಿವರು ಮಾತ್ನಾಡಿದ್ರು..
ಐದು ಸಚಿವರು ಡಿನ್ನರ್​​ ಮೀಟಿಂಗ್​​ನಿಂದ ದೂರ ಉಳಿದಿದ್ರು. ಸಿಎಂ ಅನುಮತಿ ಪಡೆದು ಸಭೆಗೆ ಗೈರಾಗಿದ್ರು.. ಸತೀಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳಕರ್ ಡಿಸಿಸಿ ಬ್ಯಾಂಕ್​ ಎಲೆಕ್ಷನ್​ ಖುದ್ದು ಮಾನಿಟರ್​​ ಮಾಡಲು ಬೆಳಗಾವಿಯಲ್ಲಿ ಉಳಿದ್ರು. ಜಮೀರ್, ಭೋಸರಾಜು, ಮಂಕಾಳ ವೈದ್ಯ ಅನ್ಯ ಕಾರಣದಿಂದ ಸಭೆಗೆ ಬಂದಿರಲಿಲ್ಲ.. ಒಟ್ಟಾರೆ, ಬಿಹಾರ ಎಲೆಕ್ಷನ್​ ಬಳಿಕ ರಾಜ್ಯದಲ್ಲಿ ಪಾಲಿಟಿಕಲ್​ ಅರ್ಥ್​ಕ್ವೈಕ್​ ಫಿಕ್ಸ್​ ಅನ್ನೋ ಮಾತು ಈ ಸಭೆಯಿಂದಲೇ ಗೊತ್ತಾಗ್ತಿದೆ..
ಇದನ್ನೂ ಓದಿ: ‘ತಮಿಳುನಾಡು ಮಾದರಿ’ಯಲ್ಲಿ RSS ನಿರ್ಬಂಧ..? ಅದು ಹೇಗೆ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ