‘ತಮಿಳುನಾಡು ಮಾದರಿ’ಯಲ್ಲಿ RSS ನಿರ್ಬಂಧ..? ಅದು ಹೇಗೆ..?

ರಾಜ್ಯದಲ್ಲಿ ಸೈದ್ಧಾಂತಿಕ ಸಂಘರ್ಷಕ್ಕೆ ಸಿಎಂ ಸಿದ್ದರಾಮಯ್ಯ ಸಜ್ಜಾದಂತೆ ಕಾಣಿಸ್ತಿದೆ.. ಇದೇ ವಿಚಾರ ಬಿಜೆಪಿ-ಕಾಂಗ್ರೆಸ್ ವಾಗ್ಯುದ್ಧಗಳ ಪ್ರಯೋಗ ಆಗ್ತಿದೆ.. RSSಗೆ ಕಡಿವಾಣ ಹಾಕಿ ಅಂತ ಪ್ರಿಯಾಂಕ್‌ ಖರ್ಗೆ ಪತ್ರ ಬರೆದ ಬೆನ್ನಲ್ಲೆ ಸಮರಕ್ಕೆ ಸಿದ್ದು ಪಂಚೆ ಕಟ್ಟಿದ್ದಾರೆ..

author-image
Ganesh Kerekuli
RSS
Advertisment

ರಾಜ್ಯದಲ್ಲಿ ಸೈದ್ಧಾಂತಿಕ ಸಂಘರ್ಷಕ್ಕೆ ಸಿಎಂ ಸಿದ್ದರಾಮಯ್ಯ ಸಜ್ಜಾದಂತೆ ಕಾಣಿಸ್ತಿದೆ. ಇದೇ ವಿಚಾರ ಬಿಜೆಪಿ-ಕಾಂಗ್ರೆಸ್ ವಾಗ್ಯುದ್ಧಗಳ ಪ್ರಯೋಗ ಆಗ್ತಿದೆ. RSSಗೆ ಕಡಿವಾಣ ಹಾಕಿ ಅಂತ ಪ್ರಿಯಾಂಕ್‌ ಖರ್ಗೆ ಪತ್ರ ಬರೆದ ಬೆನ್ನಲ್ಲೆ ಸಮರಕ್ಕೆ ಸಿದ್ದು ಪಂಚೆ ಕಟ್ಟಿದ್ದಾರೆ. 

‘ಸಂಘ’ರ್ಷಕ್ಕಿಳಿಯುತ್ತಾರಾ ಸಿಎಂ?

ಬಿಜೆಪಿ ಮಾತೃಶಾಖೆ ಸಂಘಕ್ಕೆ ಬೇಲಿ ಹಾಕಲು ಸಿದ್ದು ಸರ್ಕಾರ ಸಜ್ಜಾಗ್ತಿದೆ. ನೆರೆ ರಾಜ್ಯಗಳನ್ನೇ ಮಾದರಿ ಆಗಿಸಿ RSS​ಗೆ ಅಂಕುಶ ಹಾಕಲು ಹೊರಟಿದೆ. ನಿನ್ನೆ ಇದೇ ವಿಚಾರ ಬಗ್ಗೆ ಬಾಗಲಕೋಟೆಯಲ್ಲಿ ಪ್ರಸ್ತಾಪಿಸಿದ್ದ ಸಿಎಂ, ಕ್ರಮದ ಸುಳಿವು ಕೊಟ್ಟಿದ್ದಾರೆ. 

ಇದನ್ನೂ ಓದಿ: ತೀಟೆ ತಿರಿಸಿಕೊಳ್ಳೋಕೆ, ಪ್ರಚಾರಕ್ಕಾಗಿ ಮಾತಾಡ್ತಿದ್ದಾರೆ; ಪ್ರಿಯಾಂಕ್ ಖರ್ಗೆ ವಿರುದ್ಧ R ಅಶೋಕ್ ಕೆಂಡಾಮಂಡಲ

ಪ್ರಿಯಾಂಕ್ ಖರ್ಗೆ ಬರೆದಿರೋದು ನಿಜ. ಆರ್​ಎಸ್​ಎಸ್​ ನವರು ಸರ್ಕಾರಿ ಜಾಗಗಳನ್ನು ಬಳಸಿಕೊಳ್ಳುತ್ತಾರೆ. ತಮಿಳುನಾಡಿನಲ್ಲಿ ಸರ್ಕಾರ ಏನು ಮಾಡಿದೆ. ಅದನ್ನೇ ಮಾಡಿ ಎಂದಿದ್ದಾರೆ. ನಾನು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ತಮಿಳುನಾಡಿನಲ್ಲಿ ಏನು ಮಾಡಿದ್ದಾರೆ ಎಂದು ತಿಳಿದುಕೊಳ್ಳಲು ಹೇಳಿದ್ದೇನೆ
-ಸಿದ್ದರಾಮಯ್ಯ, ಮುಖ್ಯಮಂತ್ರಿ

ಇದನ್ನೂ ಓದಿ: ಕೆಎಸ್‌ಆರ್‌ಟಿಸಿ ಪ್ರಯಾಣಿಕರಿಗೆ ಗುಡ್ ನ್ಯೂಸ್ : ದೀಪಾವಳಿ ಹಬ್ಬಕ್ಕೆ ಊರಿಗೆ ಹೋಗಲು 2500 ಹೆಚ್ಚುವರಿ ಬಸ್ ಸಂಚಾರ

Siddaramaiah (1)

ಇದೊಂದು ಹೇಳಿಕೆ ಬೆನ್ನಲ್ಲೆ, ನಿನ್ನೆ ಡಿನ್ನರ್​ ಮೀಟಿಂಗ್​ನಲ್ಲೂ RSS ನಿಷೇಧ ಬಗ್ಗೆ ಸಿಎಂ ಸಿದ್ದು ಪ್ರಸ್ತಾಪಿಸಿದ್ದಾರೆ.. 

ಡಿನ್ನರ್​ನಲ್ಲಿ RSS ಬ್ಯಾನ್​ ಚರ್ಚೆ!

  • RSS ಬ್ಯಾನ್​ ಕುರಿತು ಡಿನ್ನರ್​​​ ವೇಳೆ ಗಂಭೀರ ಚರ್ಚೆ
  • ಸರ್ಕಾರಿ ಸ್ಥಳಗಳಲ್ಲಿ RSS ಕಾರ್ಯಕ್ರಮಗಳ ನಿಷೇಧ
  • ಗಣಪತಿ ಹಬ್ಬದ ಸಂದರ್ಭದಲ್ಲಿ ಅನುಮತಿ ಪಡೀತಾರೆ
  • ಆದರೆ RSS ಯಾವುದೇ ಅನುಮತಿ ಪಡೆಯುವುದಿಲ್ಲ
  • ಡಿನ್ನರ್​​​ ಮೀಟಿಂಗ್​​​ನಲ್ಲಿ ಈ ಕುರಿತು ಗಂಭೀರ ಚರ್ಚೆ
  • ಪ್ರತಿಪಕ್ಷಗಳ ಟೀಕೆಗಳಿಗೆ ಪ್ರತಿಕ್ರಿಯೆ ನೀಡದ ಸಚಿವರು
  • ಬಾಯ್ಬಿಟ್ಟು ಮಾತ್ನಾಡಿ ಅಂತ ಸೂಚಿಸಿದ ಸಿಎಂ ಸಿದ್ದು

ಸರ್ಕಾರಿ ಸ್ಥಳಗಳಲ್ಲಿ RSS ನಿರ್ಬಂಧಿಸಲು ತಮಿಳುನಾಡು ಮಾದರಿ ಪರಿಶೀಲನೆಗೆ ಸಿದ್ದು ಸರ್ಕಾರ ಮುಂದಾಗಿದೆ.. ಈ ಬಗ್ಗೆ ಸಿಎಂ, ತಮಿಳುನಾಡು ನಿಯಮ ಪರಿಶೀಲನೆಗೆ ಸೂಚಿಸಿದ್ದಾರೆ.. ಹಾಗಾದ್ರೆ, ಏನಿದು ತಮಿಳುನಾಡು ಮಾದರಿ? ಸ್ಟಾಲಿನ್​​ ಸರ್ಕಾರ ಏನ್​ ಕ್ರಮ ಕೈಗೊಂಡಿದೆ.. ತೋರಿಸ್ತೀವಿ ನೋಡಿ.. 

ಏನಿದು ತಮಿಳುನಾಡು ಮಾದರಿ?

  • ಸೂಕ್ಷ್ಮ ಪ್ರದೇಶದಲ್ಲಿ RSS ಹೊರಡುವ ಜಾಥಾಕ್ಕೆ ಅನುಮತಿ ಇಲ್ಲ
  • ಸರ್ಕಾರಿ ಆವರಣದಲ್ಲಿ RSS ಚಟುವಟಿಕೆಯ ಮೇಲೆ ನಿಯಂತ್ರಣ
  • ಸಾರ್ವಜನಿಕ ಸ್ಥಳಗಳಲ್ಲಿ ರೂಟ್​ ಮಾರ್ಚ್‌ಗಳಿಗೆ ಸರ್ಕಾರ ಬ್ರೇಕ್​​
  • ಶಾಖಾ ತರಬೇತಿ, ಗುರು ಪೂಜೆಗಳಂತಹ ಕಾರ್ಯಕ್ರಮಗಳಿಗೆ ತಡೆ
  • ಸರ್ಕಾರಿ ಶಾಲೆಯಲ್ಲಿ ಆಧ್ಯಾತ್ಮಿಕ ಜಾಗೃತಿ ತರಗತಿ ನಡೆಸಿದಕ್ಕೆ ಕ್ರಮ
  • ಚೆನ್ನೈನ ಶಾಲೆಯಲ್ಲಿ ಕಾರ್ಯಕ್ರಮ ನಡೆಸಿದ್ದ 39 ಜನರ ಬಂಧನ
  • ಶಾಲೆಗಳಲ್ಲಿ ಯಾವುದೇ ಧಾರ್ಮಿಕ ಕಾರ್ಯಕ್ರಮಕ್ಕಿಲ್ಲ ಅನುಮತಿ
  • ತಮಿಳುಮಾಡಲ್ಲಿ ಅನುಮತಿ ಇಲ್ಲದೆ ಕಾರ್ಯಕ್ರಮ ನಡೆಸುವಂತಿಲ್ಲ 

ಈ ಜಟಾಪಟಿ 2022ರಿಂದ ಶುರುವಾಗಿದೆ.. RSS ಜಾಥಾಕ್ಕೆ ಮೊದಲ ಬಾರಿ ಪರ್ಮಿಸನ್​​ ನಿರಾಕರಿಸಿತ್ತು.. ಹೈಕೋರ್ಟ್‌, ಸುಪ್ರೀಂಕೋರ್ಟ್ ಮಧ್ಯಪ್ರವೇಶ ಮಾಡಿ ಅನುಮತಿ ನೀಡಿದ್ದವು. 2024ರ RSSನ ವಿಜಯದಶಮಿ ಪಥಸಂಚಲನಕ್ಕೆ ಮದ್ರಾಸ್ ಹೈಕೋರ್ಟ್ ಅನುಮತಿ ನೀಡಿದ್ದರೂ, ತಮಿಳುನಾಡು ಸರ್ಕಾರವು ಕೆಲವು ಸ್ಥಳಗಳಲ್ಲಿ ನಿರಾಕರಣೆ ಮಾಡಿತ್ತು.. ಈಗ ರಾಜ್ಯದಲ್ಲೂ ಸಂಘದ ಮೇಲೆ ನಿರ್ಬಂಧ ಹೇರಲು ಸಿದ್ದು ಸಜ್ಜಾಗಿದ್ದು, ಸ್ಟಾಲಿನ್​ ಮಾದರಿ ಅನುಸರಿಸ್ತಾರ ಕಾದು ನೋಡಬೇಕಿದೆ.

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ಹೈವೋಲ್ಟೇಜ್‌ ಭೋಜನಕೂಟ ಆರಂಭ: ಕ್ಯಾಬಿನೆಟ್ ಪುನರ್ ರಚನೆಯ ಸುಳಿವು ಕೊಡುತ್ತಾರಾ ಸಿಎಂ?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

RSS RSS ban Tamil Nadu model
Advertisment