Advertisment

ಸೈಲೆಂಟ್ ಆಗಿಯೇ ಚೆಕ್​ಮೇಟ್ ಕೊಟ್ಟ ಜಾರಕಿಹೊಳಿ‌ ಬ್ರದರ್ಸ್..!

ಹುಕ್ಕೇರಿ ಸೋಲಿನ ಸೇಡು, ಡಿಸಿಸಿ ಬ್ಯಾಂಕ್​ನಲ್ಲಿ ಸಾಹುಕಾರ್ ಬ್ರದರ್ಸ್ ತೀರಿಸಿಕೊಂಡಿದ್ದಾರೆ. 16 ಸ್ಥಾನಗಳ ಪೈಕಿ ಜಾರಕಿಹೊಳಿ‌ ಕ್ಯಾಂಪ್​​ನ 9 ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದಾರೆ. ಸೈಲೆಂಟ್ ಆಗಿಯೇ ಜಾರಕಿಹೊಳಿ‌ ಬ್ರದರ್ಸ್ ರಾಜಕೀಯ ವೈರಿಗಳಿಗೆ ಚೆಕ್​ಮೇಟ್ ಕೊಟ್ಟಿದ್ದಾರೆ.

author-image
Ganesh Kerekuli
BJP ಮೇಲೆ ತನಿಖಾಸ್ತ್ರ ಪ್ರಯೋಗ; 40% ಕಮಿಷನ್, ಕೋವಿಡ್ ಅಕ್ರಮದ ತ‌ನಿಖೆಗೆ ಮುಂದಾದ ಸಿದ್ದರಾಮಯ್ಯ​​ ಸರ್ಕಾರ
Advertisment

ಹುಕ್ಕೇರಿ ಸೋಲಿನ ಸೇಡು, ಡಿಸಿಸಿ ಬ್ಯಾಂಕ್​ನಲ್ಲಿ ಸಾಹುಕಾರ್ ಬ್ರದರ್ಸ್ ತೀರಿಸಿಕೊಂಡಿದ್ದಾರೆ. 16 ಸ್ಥಾನಗಳ ಪೈಕಿ ಜಾರಕಿಹೊಳಿ‌ ಕ್ಯಾಂಪ್​​ನ 9 ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದಾರೆ. ಸೈಲೆಂಟ್ ಆಗಿಯೇ ಜಾರಕಿಹೊಳಿ‌ ಬ್ರದರ್ಸ್ ರಾಜಕೀಯ ವೈರಿಗಳಿಗೆ ಚೆಕ್​ಮೇಟ್ ಕೊಟ್ಟಿದ್ದಾರೆ.

Advertisment

ಬೆಳಗಾವಿ ಡಿಸಿಸಿ ಬ್ಯಾಂಕ್​​​ ಚುನಾವಣೆ.. ಮತದಾನದ ಅಖಾಡದಲ್ಲಿ ಜಾರಕಿಹೊಳಿ‌ ಬ್ರದರ್ಸ್ ಗೆದ್ದು ಮೀಸೆ ತಿರುವಿದ್ದಾರೆ.. 16 ನಿರ್ದೇಶಕ ಸ್ಥಾನದಲ್ಲಿ 9 ಸ್ಥಾನದ ಜಾರಕಿಹೊಳಿ‌ ಪೆನಲ್ ಅಭ್ಯರ್ಥಿಗಳು ಅವಿರೋಧ ಆಯ್ಕೆ ಆಗಿದ್ದಾರೆ.. ‌ಮತದಾನಕ್ಕೂ ಮುನ್ನವೇ ಬೆಳಗಾವಿ ಡಿಸಿಸಿ ಬ್ಯಾಂಕ್​ನಲ್ಲಿ ಜಾರಕಿಹೊಳಿ‌ ಟೀಂ ಮ್ಯಾಜಿಕ್ ನಂಬರ್ ಪಡೆದುಕೊಂಡಿದೆ. ಹುಕ್ಕೇರಿ ಸೋಲಿನ ಬಳಿಕ ಬುಸುಗುಡ್ತಿದ್ದ ಜಾರಕಿಹೊಳಿ‌ ಬ್ರದರ್ಸ್, ಪ್ರತಿಷ್ಠಿತ ಡಿಸಿಸಿ ಬ್ಯಾಂಕ್​ನಲ್ಲಿ ಮತದಾನಕ್ಕೂ ಮೊದಲೇ ಸೋಲಿನ‌ ಸೇಡು ತೀರಿಸಿದ್ದಾರೆ.. 

ಇದನ್ನೂ ಓದಿ: ಡಿಸಿಎಂ ಜೊತೆ ಸಿಎಂ ಪ್ರತ್ಯೇಕ ಮಾತುಕತೆ.. ‘ಡಿನ್ನರ್ ಮೀಟಿಂಗ್’ ಇನ್​ಸೈಡ್​ ಸ್ಟೋರಿ..!

Jarakiholi brothers

ನಿನ್ನೆ ನಾಮಪತ್ರ ವಾಪಸ್ ಪಡೆಯಲು ಕಡೆಯ ದಿನ. ಮೊನ್ನೆ ಖಾನಾಪುರ.. ನಿನ್ನೆ ಕಾಗವಾಡ ಮತ್ತು ಇತರೆ ಮತಕ್ಷೇತ್ರದ ನಾಮಪತ್ರವನ್ನ ಶಾಸಕ ಬಾಲಚಂದ್ರ ಜಾರಕಿಹೊಳಿ ವಾಪಸ್ ತೆಗೆಸೋದ್ರಲ್ಲಿ ಯಶಸ್ವಿ ಆಗಿದ್ದಾರೆ‌. 9 ತಾಲೂಕಿನಲ್ಲಿ ಜಾರಕಿಹೊಳಿ‌ ಬ್ರದರ್ಸ್ ಪೆನಲ್​ನ ನಿರ್ದೇಶಕರು ಅವಿರೋಧ ಆಯ್ಕೆ ಆಗಿದ್ದಾರೆ.. ಅದ್ರಲ್ಲೂ ಕಾಗವಾಡದಿಂದ ಶಾಸಕ ರಾಜು ಕಾಗೆ, ಚಿಕ್ಕೋಡಿಯಿಂದ ಶಾಸಕ ಗಣೇಶ್ ಹುಕ್ಕೇರಿ, ಉಸ್ತುವಾರಿ ಸಚಿವ ಸತೀಶ್ ಬೆಂಬಲದಿಂದ ಮೇಲುಗೈ ಸಾಧಿಸಿದ್ದಾರೆ..

Advertisment

ಅತ್ತ ಯರಗಟ್ಟಿಯಿಂದ ವಿಶ್ವಾಸ ವೈದ್ಯ.. ಗೋಕಾಕ್​ನಿಂದ ಅಮರನಾಥ್ ಜಾರಕಿಹೊಳಿ.. ಮೂಡಲಗಿ ನೀಲಕಂಠ ಕಪ್ಪಲಗುದ್ದಿ.. ಬೆಳಗಾವಿ ತಾಲೂಕಿನಿಂದ ಸತೀಶ್​ ಜಾರಕಿಹೊಳಿ ಪುತ್ರ ರಾಹುಲ್ ಜಾರಕಿಹೊಳಿ‌.. ಸವದತ್ತಿಯಿಂದ ವಿರೂಪಾಕ್ಷ ಮಾಮನಿ.. ಖಾನಾಪುರದಿಂದ ಅರವಿಂದ್ ಪಾಟೀಲ್.. ಜನರಲ್ ಕ್ಷೇತ್ರದಿಂದ ಚನ್ನರಾಜ್ ಹಟ್ಟಿಹೊಳಿ ಅವಿರೋಧ ಆಯ್ಕೆಯಾಗಿದ್ರು. ಒಟ್ಟು 9 ನಿರ್ದೇಶಕರನ್ನ ಅವಿರೋಧ ಆಯ್ಕೆ ಮಾಡುವ ಮೂಲಕ ಬ್ಯಾಂಕ್ ಕಂಟ್ರೋಲ್​ಗೆ ಪಡೆದಿದ್ದಾರೆ.. ಚುನಾವಣೆ ಗೆಲ್ಲುತ್ತಿದ್ದಂತೆ ಡಿಸಿಸಿ ಬ್ಯಾಂಕ್ ಮುಂದೆ ಜಾರಕಿಹೊಳಿ‌ ಬೆಂಬಲಿಗರು ಸಂಭ್ರಮಾಚರಣೆ ಮಾಡಿದ್ದಾರೆ.

ಇದನ್ನೂ ಓದಿ: ‘ತಮಿಳುನಾಡು ಮಾದರಿ’ಯಲ್ಲಿ RSS ನಿರ್ಬಂಧ..? ಅದು ಹೇಗೆ..?

ಅಕ್ಟೋಬರ್ 19ಕ್ಕೆ ಹುಕ್ಕೇರಿ, ರಾಮದುರ್ಗ, ಅಥಣಿ, ರಾಯಬಾಗ, ನಿಪ್ಪಾಣಿ, ಕಿತ್ತೂರು, ಬೈಲಹೊಂಗಲ ತಾಲೂಕಿನಲ್ಲಿ ಮತದಾನ ನಡೆಯಲಿದೆ.. ಈ ಮಧ್ಯೆ ರಾಮದುರ್ಗ ಮತಕ್ಷೇತ್ರದಿಂದ ಶಾಸಕ ಅಶೋಕ ಪಟ್ಟಣ ಕೊನೆ ಕ್ಷಣದಲ್ಲಿ ತಮ್ಮ ನಾಮಪತ್ರ ವಾಪಸ್ ಪಡೆದಿದ್ದಾರೆ.. ಒಟ್ಟಿನಲ್ಲಿ ಬೆಳಗಾವಿಯಲ್ಲಿ ತಮ್ಮದೇ ಪಾರುಪತ್ಯ ಅನ್ನೋದನ್ನ ಜಾರಕಿಹೊಳಿ ಬ್ರದರ್ಸ್​​ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.. ಸಹಕಾರ ಕ್ಷೇತ್ರಕ್ಕೂ ರೆಸಾರ್ಟ್ ರಾಜಕಾರಣ ಕಾಲಿಟ್ಟಿದ್ದು, ಮತದಾರರಿಗೆ ಟೂರ್​ ಭಾಗ್ಯ ಲಭಿಸಿದೆ..

ವಿಶೇಷ ವರದಿ: ನಾಗೇಶ್ ಕುಂಬಳಿ, ನ್ಯೂಸ್​ಫಸ್ಟ್

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
jarkiholi brothers
Advertisment
Advertisment
Advertisment