Advertisment

ಕೊಹ್ಲಿ ನಿವೃತ್ತಿ ಪ್ಲಾನ್ ರೆಡಿ.. ಲಂಡನ್​ನಲ್ಲಿ ನೆಲೆಯೂರಲು ನಿರ್ಧರಿಸಿದ್ದೇಕೆ..?

ಟೀಮ್​ ಇಂಡಿಯಾ ಬ್ಯಾಟ್ಸ್​ಮನ್​ ವಿರಾಟ್​ ಕೊಹ್ಲಿ ಭವಿಷ್ಯದ ಬಗ್ಗೆ ಚರ್ಚೆ ಜೋರಾಗಿ ನಡೀತಿದೆ. ಕೊಹ್ಲಿ ಆಸಿಸ್​​ ಪ್ರವಾಸದ ಬಳಿಕ ನಿವೃತ್ತಿ ಆಗ್ತಾರಾ? 2027ರ ವಿಶ್ವಕಪ್​ ಆಡ್ತಾರಾ? ಹಲವು ಪ್ರಶ್ನೆಗಳು ದಿನನಿತ್ಯ ಚರ್ಚೆಯಲ್ಲಿವೆ. ಈ ವಿಚಾರದಲ್ಲಿ ತುಟಿಪಿಟಿಕ್​ ಅನ್ನದಿರೋ ಕೊಹ್ಲಿ, ಸೈಲೆಂಟಾಗೇ ರಿಟೈರ್​​ಮೆಂಟ್​​ ಪ್ಲಾನ್​ ಮಾಡ್ತಿದ್ದಾರೆ.

author-image
Ganesh Kerekuli
VIRAT_KOHLI (1)
Advertisment

ಟೀಮ್​ ಇಂಡಿಯಾ ಬ್ಯಾಟ್ಸ್​ಮನ್​ ವಿರಾಟ್​ ಕೊಹ್ಲಿ ಭವಿಷ್ಯದ ಬಗ್ಗೆ ಚರ್ಚೆ ಜೋರಾಗಿ ನಡೀತಿದೆ. ಕೊಹ್ಲಿ ಆಸಿಸ್​​ ಪ್ರವಾಸದ ಬಳಿಕ ನಿವೃತ್ತಿ ಆಗ್ತಾರಾ? 2027ರ ವಿಶ್ವಕಪ್​ ಆಡ್ತಾರಾ? ಹಲವು ಪ್ರಶ್ನೆಗಳು ದಿನನಿತ್ಯ ಚರ್ಚೆಯಲ್ಲಿವೆ. ಈ ವಿಚಾರದಲ್ಲಿ ತುಟಿಪಿಟಿಕ್​ ಅನ್ನದಿರೋ ಕೊಹ್ಲಿ, ಸೈಲೆಂಟಾಗೇ ರಿಟೈರ್​​ಮೆಂಟ್​​ ಪ್ಲಾನ್​ ಮಾಡ್ತಿದ್ದಾರೆ. ನಿವೃತ್ತಿ ಬಳಿಕ ಲಂಡನ್​ನಲ್ಲೇ ಕೊಹ್ಲಿ ಸೆಟಲ್​ ಆಗಲು ಸಿದ್ಧತೆ ಆರಂಭಿಸಿದ್ದಾರೆ.

Advertisment

ಟೀಮ್​ ಇಂಡಿಯಾ ಬ್ಯಾಟಿಂಗ್​ ಸೂಪರ್ ಸ್ಟಾರ್​ ವಿರಾಟ್​ ಕೊಹ್ಲಿ ಬಹುಕಾಲದ ಬಳಿಕ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. 7 ತಿಂಗಳ ಅಂತರದ ಬಳಿಕ ಬ್ಲ್ಯೂ ಜೆರ್ಸಿ ತೊಟ್ಟು ಫೀಲ್ಡ್​ಗಿಳಿಯಲು ಕಾಂಗರೂ ನಾಡಿಗೆ ಕೊಹ್ಲಿ ಕಾಲಿಟ್ಟಿದ್ದೂ ಆಗಿದೆ. ಕೊಹ್ಲಿಯ ರಿಟೈರ್​ಮೆಂಟ್​​ ಕುರಿತು ಭಿನ್ನ-ವಿಭಿನ್ನ ರೂಮರ್ಸ್​ಗಳು ಸದ್ಯ ಮಾಡುತ್ತಲೇ ಇವೆ. ಈ ವಿಚಾರದಲ್ಲಿ ಕೊಹ್ಲಿ ಫುಲ್​ ಸೈಲೆಂಟ್​ ಆಗಿದ್ದಾರೆ. ಸೈಲೆಂಟಾಗೇ ರಿಟೈರ್​ಮೆಂಟ್​ ಪ್ಲಾನ್​ ರೂಪಿಸಿದ್ದಾರೆ.

ಇದನ್ನೂ ಓದಿ: ಕೈಕೊಟ್ಟ ರೋಹಿತ್, ಕೋಹ್ಲಿ.. ಬಿಸಿಸಿಐ ಹಾದಿ ಮತ್ತಷ್ಟು ಸರಾಗ..!

Kohli

ಕೊಹ್ಲಿ ರಿಟೈರ್​ಮೆಂಟ್​​ ಪ್ಲಾನ್​ ರೆಡಿ

ಐಪಿಎಲ್​ ಅಂತ್ಯವಾದ ಬೆನ್ನಲ್ಲೇ ವಿದೇಶಕ್ಕೆ ಹಾರಿದ್ದ ವಿರಾಟ್​ ಕೊಹ್ಲಿ ಲಂಡನ್​​ನಲ್ಲಿ ಬೀಡು ಬಿಟ್ಟಿದ್ರು. ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳೋ ಸಲುವಾಗಿ ಸರಿ ಸುಮಾರು 4 ತಿಂಗಳ ಬಳಿಕ ಭಾರತಕ್ಕೆ ಮೊನ್ನೆ ವಾಪಾಸ್ಸಾಗಿದ್ರು. ಲಂಡನ್​ನಿಂದ ಭಾರತಕ್ಕೆ ಬಂದ ಕೊಹ್ಲಿ ದೆಹಲಿಯ ಇಂದಿರಾಗಾಂಧಿ ಇಂಟರ್​ನ್ಯಾಷನಲ್​ ಏರ್​​ಪೋರ್ಟ್​​ನಿಂದ ನೇರವಾಗಿ ಗುರುಗ್ರಾಮ್​ನಲ್ಲಿರೋ ಮನೆಗೆ ತೆರಳಿದ್ರು. ಬಹುಕಾಲದ ಬಳಿಕ ವಾಪಾಸ್ಸಾಗಿರೋ ಕೊಹ್ಲಿ, ತಾಯಿ, ಅಣ್ಣ, ಅತ್ತಿಗೆ ಹಾಗೂ ಆಪ್ತರ ಜೊತೆಗೆ ಸಮಯ ಕಳೆದಿದ್ರು. ಇದೇ ವೇಳೆ ಮತ್ತೊಂದು ಮಹತ್ವದ ಕಾರ್ಯವನ್ನ ಕೊಹ್ಲಿ ಮಾಡಿ ಮುಗಿಸಿದ್ದಾರೆ. ಕೊಹ್ಲಿಯ ಈ ನಡೆಯೇ ಲಂಡನ್​ನಲ್ಲೇ ಸೆಟಲ್​ ಆಗೋದ್ರ ಸುಳಿವು ನೀಡಿದೆ. 

ಮನೆಯ ಅಧಿಕಾರ ಅಣ್ಣನಿಗೆ ನೀಡಿದ ಕೊಹ್ಲಿ

ಭಾರತಕ್ಕೆ ಬಂದ ಬಳಿಕ ಒಂದು ದಿನದ ಸಮಯಾವಕಾಶ ಸಿಕ್ಕಿತ್ತಲ್ವಾ? ಸಿಕ್ಕಿದ್ದ ಆ ಟೈಮ್​ನಲ್ಲಿ ಮಹತ್ವದ ಕೆಲಸವೊಂದನ್ನ ಮುಗಿಸಿದ್ದಾರೆ. ಗುರುಗ್ರಾಮ್​ನಲ್ಲಿರೋ 80 ಕೋಟಿಗೂ ಅಧಿಕ ಮೌಲ್ಯದ ಮನೆಯ ಜನರಲ್​​ ಪವರ್​ ಆಫ್​ ಅಟಾರ್ನಿಯನ್ನ ಅಣ್ಣ ವಿಕಾಸ್​ ಕೊಹ್ಲಿಗೆ ಹೆಸರಿಗೆ ಮಾಡಿದ್ದಾರೆ. ವಝಿರಾಬಾದ್​​ ಟೆಹ್ಸಿಲ್​​ ಆಫಿಸ್​​ಗೆ ತೆರಳಿ ಅಫಿಶಿಯಲ್​ ಆಗಿ ಅಣ್ಣನಿಗೆ ಪವರ್​ ಆಫ್​ ಅಟಾರ್ನಿಯನ್ನ ಟ್ರಾನ್ಸ್​ಪರ್​ ಮಾಡಿದ್ದು, ಇನ್ಮುಂದೆ ಮನೆಯ ಆಗುಹೋಗುಗಳನ್ನ ಇನ್ಮುಂದೆ ವಿಕಾಸ್​ ಕೊಹ್ಲಿ ನೋಡಿಕೊಂಡು ಹೋಗಲಿದ್ದಾರೆ. 

Advertisment

ಕೇವಲ ಗುರಗ್ರಾಮದಲ್ಲಿರೋ ಮನೆ ಮಾತ್ರವಲ್ಲ. ಮುಂಬೈನಲ್ಲಿರೋ ಅಪಾರ್ಟ್​ಮೆಂಟ್​ ಹಾಗೂ ಅಲಿಭಾಗ್​ನಲ್ಲಿರೋ ಐಷಾರಾಮಿ ಮನೆಯ ಜನರಲ್​ ಪವರ್​ ಆಫ್​​ ಅಟಾರ್ನಿಯನ್ನೂ ಅಣ್ಣನಿಗೆ ನೀಡಲು ಕೊಹ್ಲಿ ಮುಂದಾಗಿದ್ದಾರೆ. ಆಸಿಸ್​​ ಸರಣಿಯ ಬಳಿಕ ಸಿಗೋ ಬಿಡುವಿನ ಸಮಯದಲ್ಲಿ ಪೇಪರ್​​ ವರ್ಕ್ಸ್​​ ಮಾಡಲು ಕೊಹ್ಲಿ ಪ್ಲಾನ್​ ಮಾಡಿಕೊಂಡಿದ್ದಾರೆ ಅನ್ನೋದು ಆಪ್ತ ಮೂಲಗಳ ಮಾಹಿತಿಯಾಗಿದೆ.

ಇದನ್ನೂ ಓದಿ: ಗಿಲ್ ಪಡೆಗೆ ಭಾರೀ ಮುಖಭಂಗ.. ಮೊದಲ ಪಂದ್ಯ ಗೆದ್ದ ಆಸ್ಟ್ರೇಲಿಯಾ..!

VIRAT_KOHLI

ವಿದೇಶಗಳಲ್ಲಿ ಸೆಟಲ್​ ಆಗಿರೋ ಬಹುತೇಕ ಭಾರತೀಯರು ತಮ್ಮ ನಂಬಿಕಸ್ಥರಿಗೆ ಈ ಪವರ್​ ಆಫ್​ ಅಟಾರ್ನಿಯನ್ನ ಮಾಡಿಸಿರ್ತಾರೆ. ಯಾವುದೇ ಕೆಲಸಗಳಿದ್ರೂ ಮಾಲೀಕರ ಅನುಪಸ್ಥಿಯಲ್ಲಿ ಪವರ್​ ಆಫ್​ ಅಟಾರ್ನಿ ಪಡೆದವರು ನಿಭಾಯಿಸಬಹುದು. ಇದೀಗ ಕೊಹ್ಲಿ ಅಣ್ಣನಿಗೆ ತನ್ನ ಪ್ರಾಪರ್ಟಿಗಳ ಪವರ್​ ಆಫ್​ ಅಟಾರ್ನಿಯನ್ನ ನೀಡರೋದ್ರ ಹಿಂದಿನ ಉದ್ದೇಶವೂ ಇದೆ ಆಗಿದೆ. ನಿವೃತ್ತಿ ನಂತರದ ಜೀವನವನ್ನ ಬಹುಪಾಲು ವಿದೇಶದಲ್ಲಿ ಕಳೆಯಲು ನಿರ್ಧರಿಸಿರೋದು ಸ್ಪಷ್ಟವಾಗಿದೆ.

ಲಂಡನ್​ನಲ್ಲಿ ನೆಲೆಯೂರಲು ಕೊಹ್ಲಿ ನಿರ್ಧರಿಸಿದ್ದೇಕೆ? 

ಕೊಹ್ಲಿ ಲಂಡನ್​ನಲ್ಲಿ ಬೀಡು ಬಿಡಲು ನಿರ್ಧರಿಸೋದ್ರ ಹಿಂದಿನ ಪ್ರಮುಖ ಕಾರಣವೇ ಕುಟುಂಬ. ಅನುಷ್ಕಾ ಮತ್ತು ಮಕ್ಕಳ ಜೊತೆಗೆ ಹೆಚ್ಚು ಟೈಮ್​​ ಸ್ಪೆಂಡ್​​ ಮಾಡಲು ಲಂಡನ್​ ಉತ್ತಮ ಜಾಗ ಅನ್ನೋದು ಕೊಹ್ಲಿ ನಿಲುವಾಗಿದೆ. ಭಾರತದಲ್ಲಿ ವಿರಾಟ್​ ಕೊಹ್ಲಿಗೆ ಸಾಮಾನ್ಯರಂತೆ ಬದುಕಲು ಸಾಧ್ಯವಿಲ್ಲ. ವಿದೇಶದಲ್ಲಾದ್ರೆ ಯಾವುದೇ ಸಮಸ್ಯೆಗಳಿಲ್ಲದೇ ಸಾಮಾನ್ಯರಲ್ಲಿ ಸಾಮಾನ್ಯನಾಗಿ ಬದುಕಬಹುದು. ಜೊತೆಗೆ ಬೆಳೆಯುತ್ತರೋ ಒಳ್ಳೆಯ ಶಿಕ್ಷಣವನ್ನ ಕೊಡಬಹುದು. ಈ ಎಲ್ಲಾ ಕಾರಣದಿಂದಲೇ ಲಂಡನ್​ನಲ್ಲಿ ವಾಸ್ತವ್ಯ ಹೂಡಲು ಕೊಹ್ಲಿ ಮುಂದಾಗಿದ್ದಾರೆ. 

Advertisment

ಒಂದೆಡೆ ನಿವೃತ್ತಿಯ ರೂಮರ್ಸ್​ ಕ್ರಿಕೆಟ್​ ಲೋಕದಲ್ಲಿ ಮಿಂಚಿನ ಸಂಚಾರ ಮಾಡ್ತಿದ್ರೆ, ಮತ್ತೊಂದೆಡೆ ಕೊಹ್ಲಿ ರಿಟೈರ್​ಮೆಂಟ್​ ನಂತರದ ಜೀವನಕ್ಕೆ ಸೈಲೆಂಟಾಗೇ ಪ್ಲಾನ್​ ರೂಪಿಸ್ತಿದ್ದಾರೆ. ಇದನ್ನೆಲ್ಲಾ ಗಮನಿಸಿದ್ರೆ ನಿಜಕ್ಕೂ ಕೊಹ್ಲಿ 2027ರ ಏಕದಿನ ವಿಶ್ವಕಪ್​​​ ಆಡ್ತಾರಾ? ಎಂಬ ಪ್ರಶ್ನೆ ಕಾಡದೇ ಇರಲ್ಲ.

ಇದನ್ನೂ ಓದಿ: ದೀಪಾವಳಿ.. ಪಟಾಕಿ ಸಿಡಿಸುವಾಗ ಈ 7 ವಿಷಯ ಮರೆಯಬೇಡಿ.. ಇಲ್ಲದಿದ್ದರೆ..

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Kohli Virat Kohli beard Virat Kohli
Advertisment
Advertisment
Advertisment