Advertisment

ಮಂದಾನ ಭಾವಿ ಪತಿ ಹಾಕಿಸಿಕೊಂಡಿರೋ ಟ್ಯಾಟೂ ಏನು..? ಅಷ್ಟೊಂದು ಪ್ರೀತಿಸ್ತಾರಾ?

ಮಹಿಳಾ ಏಕದಿನ ವಿಶ್ವಕಪ್​ ಟೂರ್ನಿಯ ನಡುವೆ ಟೀಮ್​ ಇಂಡಿಯಾ ಕ್ಯಾಂಪ್​ನಿಂದ ಬಿಗ್​ನ್ಯೂಸ್​ ಹೊರಬಿದ್ದಿದೆ. ಅಭಿಮಾನಿಗಳನ್ನ ಕಾಡಿದ್ದ ಬಹುಕಾಲದ ಪ್ರಶ್ನೆಗೆ ಶೀಘ್ರದಲ್ಲೇ ಉತ್ತರ ಸಿಗಲಿದೆ. ಮಹಿಳಾ ಕ್ರಿಕೆಟ್​ ಲೋಕದ ಕ್ವೀನ್​ ಸ್ಮೃತಿ ಮಂದಾನ ಹಸೆಮಣೆ ಏರೋಕೆ ಸಜ್ಜಾಗಿದ್ದಾರೆ.

author-image
Ganesh Kerekuli
Smruti
Advertisment

ಮಹಿಳಾ ಏಕದಿನ ವಿಶ್ವಕಪ್​ ಟೂರ್ನಿಯ ನಡುವೆ ಟೀಮ್​ ಇಂಡಿಯಾ ಕ್ಯಾಂಪ್​ನಿಂದ ಬಿಗ್​ನ್ಯೂಸ್​ ಹೊರಬಿದ್ದಿದೆ. ಅಭಿಮಾನಿಗಳನ್ನ ಕಾಡಿದ್ದ ಬಹುಕಾಲದ ಪ್ರಶ್ನೆಗೆ ಶೀಘ್ರದಲ್ಲೇ ಉತ್ತರ ಸಿಗಲಿದೆ. ಮಹಿಳಾ ಕ್ರಿಕೆಟ್​ ಲೋಕದ ಕ್ವೀನ್​ ಸ್ಮೃತಿ ಮಂದಾನ ಹಸೆಮಣೆ ಏರೋಕೆ ಸಜ್ಜಾಗಿದ್ದಾರೆ. ಅತೀ ಶೀಘ್ರದಲ್ಲಿ ಮಂದಾನ ಇಂದೋರ್​ನ ಸೊಸೆಯಾಗಲಿದ್ದಾರೆ. 

Advertisment

ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯ ಫೀವರ್​ ಕ್ರಿಕೆಟ್​ ಲೋಕವನ್ನ ಆವರಿಸಿದೆ. ಸೆಮಿಸ್​ ಸ್ಥಾನದ ಮೇಲೆ ಕಣ್ಣಿಟ್ಟಿರೋ ಟೀಮ್​ ಇಂಡಿಯಾ ಭರ್ಜರಿ ಹೋರಾಟ ನಡೆಸ್ತಿದೆ. ಪ್ರತಿಷ್ಟಿತ ಟೂರ್ನಿಯ ಕಾವಿನ ನಡುವೆ ಇಂಡಿಯನ್​ ಕ್ಯಾಂಪ್​ನಿಂದ ಬಿಗ್​ ನ್ಯೂಸ್​ ಹೊರಬಿದ್ದಿದೆ. ಮಹಿಳಾ ಕ್ರಿಕೆಟ್​ ಲೋಕದ ಕ್ವೀನ್​, ಟೀಮ್​ ಇಂಡಿಯಾ ಬ್ಯಾಟರ್​​ ಸ್ಮೃತಿ ಮಂದಾನಾ ಮದುವೆ ಸುದ್ದಿ ಸೆನ್ಸೇಷನ್​ ಸೃಷ್ಟಿಸಿದೆ.

ಇದನ್ನೂ ಓದಿ: ಸೂರಜ್​ ಮೈಮಾಟಕ್ಕೆ ಕಳೆದುಹೋದ ಹೆಣ್ಣೈಕ್ಳು.. ನಾಚಿ ನೀರಾದ ವಿಡಿಯೋ ಇಲ್ಲಿದೆ..

Smriti_Mandhana_1

ಟೀಮ್​ ಇಂಡಿಯಾದ ಬ್ಯೂಟಿ ಸ್ಮೃತಿ ಮಂದಾನ ಮದುವೆ ಯಾವಾಗ? ಅನ್ನೋ ಪ್ರಶ್ನೆ ಟೀಮ್​ ಇಂಡಿಯಾ ಅಭಿಮಾನಿಗಳನ್ನ ಬಹುವಾಗಿ ಕಾಡಿತ್ತು. ಆ ಪ್ರಶ್ನೆಗೆ ಉತ್ತರ ಸಿಗೋ ಕಾಲ ಹತ್ತಿರವಾಗಿದೆ. ಟೀಮ್​ ಇಂಡಿಯಾದ ಗ್ಲಾಮರ್​ ಗರ್ಲ್​ ಮಂದಾನ ಹಸೆಮಣೆ ಏರಲು ರೆಡಿಯಾಗಿದ್ದಾರೆ. ಶೀಘ್ರದಲ್ಲೆ ಮಂದಾನ ಮದುವೆ ನಡೆಯಲಿದೆ.

Advertisment

ಸಾಂಗ್ಲಿ ಸುಂದರಿ

ಬಾಲಿವುಡ್​ ಮತ್ತು ಕ್ರಿಕೆಟ್​ಗೂ ದೀರ್ಘಕಾಲದ ಸಂಬಂಧವಿದೆ. ಬಾಲಿವುಡ್​ ನಟಿಮಣಿಯರನ್ನ ವರಿಸಿದ ಹಲವು  ಟೀಮ್​ ಇಂಡಿಯಾ ಕ್ರಿಕೆಟಿಗರಿದ್ದಾರೆ. ಸ್ಮೃತಿ ಮಂದಾನ ವಿಚಾರದಲ್ಲೂ ಇದೇ ರಿಪಿಟ್​ ಆಗ್ತಿದೆ. ಮಹಾರಾಷ್ಟ್ರದ ಸಾಂಗ್ಲಿಯ ಸುಂದರಿ ಸ್ಮೃತಿ ಮಂದಾನ, ಸದ್ಯದಲ್ಲೇ ಇಂದೋರ್​ ಸೊಸೆಯಾಗಲಿದ್ದಾರೆ. ಬಾಲಿವುಡ್​ನ ಗಾಯಕ, ಮ್ಯೂಸಿಕ್​ ಡೈರೆಕ್ಟರ್​​ ಪಲಾಶ್​​ ಮುಚ್ಚಲ್​ ಜೊತೆಗೆ ಹಸೆಮಣೆ ಸಪ್ತಪದಿ ತುಳಿಯಲಿದ್ದಾರೆ. ಪಲಾಶ್​ ಮುಚ್ಚಲ್​​ ಸಹೋದರಿ ಪಾಲಕ್​ ಈ ಸುದ್ದಿಯನ್ನ ಹಂಚಿಕೊಂಡಿದ್ದಾರೆ. 

ಇದನ್ನೂ ಓದಿ: ಈ ಕಂದನ ಪಾಲಿಗೆ ರಕ್ಕಸನಾದ ಪ್ರಿನ್ಸಿಪಾಲ್.. ಬೆಂಗಳೂರಲ್ಲಿ ರಕ್ಕಸೀ ಕೃತ್ಯ..!

Smriti_Mandhana

ಪಲಾಶ್​​ ಮುಚ್ಚಲ್​ ಜೊತೆ ಸ್ಮೃತಿ ಮಂದಾನ ಮದುವೆಯಾಗ್ತಿರೋದು ಸರ್​​ಪ್ರೈಸ್​ ಸುದ್ದಿ ಏನಲ್ಲ. ಕಳೆದ ಕೆಲ ವರ್ಷಗಳಿಂದಲೇ ಇವರಿಬ್ಬರ ಹೆಸರು ತಳುಕುಹಾಕಿಕೊಂಡಿತ್ತು. ಇಬ್ಬರೂ ಡೇಟಿಂಗ್​ ನಡೆಸ್ತಿರೋ ಗುಸುಗುಸು ಬಾಲಿವುಡ್​ ಹಾಗೂ ಕ್ರಿಕೆಟ್​ ವಲಯದಲ್ಲಿ ಹರಿದಾಡಿತ್ತು. ಇಬ್ಬರೂ ಸೋಷಿಯಲ್​ ಮೀಡಿಯಾಗಳಲ್ಲಿ ಹಂಚಿಕೊಳ್ತಿದ್ದ ಫೋಟೋಗಳು ಡೇಟಿಂಗ್​ನ ಕಥೆಯನ್ನ ಬಿಚ್ಚಿಟ್ಟಿದ್ವು. ಜೊತೆಗೆ ಇಬ್ಬರೂ. ಹಲವು ಕಡೆಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಿದೆ. ಪಂದ್ಯಗಳ ವೇಳೆ ಸ್ಟ್ಯಾಂಡ್​ನಲ್ಲಿ ಕುಳಿತು ಪಲಾಶ್​​ ಸ್ಮೃತಿಗೆ ಚಿಯರ್​ ಮಾಡಿದ್ದೂ ಇದೆ.

Advertisment

ಸೀಸನ್​ನ ಮಹಿಳಾ ಪ್ರೀಮಿಯಲ್​ ಲೀಗ್​​ ವೇಳೆ ಆರ್​​​ಸಿಬಿ ಇನ್​​​ಸೈಡರ್​​​ ಶೋನಲ್ಲಿ ಪಲಾಶ್​​ ಬಗ್ಗೆ ಕೇಳಿದ್ದಕ್ಕೆ ಮಂದಾನ ಹೀಗೆ ಬ್ಲಶ್​ ಆಗಿದ್ರು. ಆಗಲೇ ಬಹುತೇಕ ಇಬ್ಬರ ನಡುವಿನ ಪ್ರೇಮ ಕನ್​​ಫರ್ಮ್​ ಆಗಿತ್ತು. ಸ್ಮೃತಿ ಮಂದಾನ ಆಗಲಿ, ಪಲಾಶ್​ ಮುಚ್ಚಲ್​ ಆಗಲಿ ಯಾರೊಬ್ರೂ ಕೂಡ ಈ ಬಗ್ಗೆ ಎಲ್ಲೂ ಅಧಿಕೃತವಾಗಿ ಹೇಳಿಕೊಂಡಿರಲಿಲ್ಲ. ಇವರಿಬ್ಬರ ಲವ್​ ಕಹಾನಿ ಸೀಕ್ರೆಟ್​ ಆಗೂ ಉಳಿದಿರಲಿಲ್ಲ. ಇವರಿಬ್ಬರ ಲವ್​ ಸ್ಟೋರಿ ಶುರುವಾಗಿದ್ದು 4-5 ವರ್ಷದ ಹಿಂದೆ. ಸಹೋದರಿ ಪಲಾಕ್​ ಮೂಲಕ ಪಲಾಶ್​ ಹಾಗೂ ಸ್ಮೃತಿ ಪರಿಚಯವಾಗಿರೋದು. ಆ ಬಳಿಕ ಪರಿಚಯದಿಂದ ಗೆಳೆತನ, ಗೆಳೆತನದಿಂದ ಪ್ರೀತಿ ಆಗಿತ್ತು.

SM18 ಎಂದು ಟ್ಯಾಟೂ ಹಾಕಿಸಿಕೊಂಡಿದ್ದಾರೆ ಪಲಾಶ್​

ಇವರಿಬ್ಬರ ಲವ್​ ಗಾಸಿಪ್​ ಮೊದಲು ಹಬ್ಬಿದ್ದು ಒಂದು ಟ್ಯಾಟೂಯಿಂದ. ಪಲಾಶ್ ಮಚ್ಚಲ್​​ ಕೈ ಮೇಲೆ SM18 ಅನ್ನೋ ಟ್ಯಾಟೋಯಿದೆ. SM ಅಂದ್ರೆ ಸ್ಮೃತಿ ಮಂದಾನ, 18 ಅಂದ್ರೆ ಮಂದಾನರ ಜೆರ್ಸಿ ನಂಬರ್​. 30 ವರ್ಷದ ಈ ಪಲಾಶ್ ಮುಚ್ಚಲ್, ಜನಿಸಿದ್ದು ಮಧ್ಯ ಪ್ರದೇಶದ ಇಂಧೋರ್​ನಲ್ಲಿ. ಮ್ಯೂಸಿಕ್ ಡೈರೆಕ್ಟರ್​ ಆಗಿ ಬಾಲಿವುಡ್​ನಲ್ಲಿ ಗುರುತಿಸಿಕೊಂಡಿರೋ ಪಲಾಶ್​ ಅದ್ಭುತ  ಗಾಯಕ ಕೂಡ ಹೌದು. ಡಿಷ್ಕ್ಯಾವ್ ಚಿತ್ರದ ಸಂಗೀತ ನಿರ್ದೇಶಕನಾಗಿ 18ನೇ ವಯಸ್ಸಿಗೇ ಬಾಲಿವುಡ್​​ಗೆ ಡೆಬ್ಯು ಮಾಡಿದ್ದ ಪಲಾಷ್​, ಭೂತನಾಥ್ ರಿಟರ್ನ್ಸ್ ಚಿತ್ರ ಸೇರಿದಂತೆ 18ಕ್ಕೂ ಅಧಿಕ ಸಿನಿಮಾಗಳ ಮ್ಯುಸಿಕ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದಾರೆ. ಇದಲ್ಲದೇ ಖೇಲೆ ಹಮ್ ಜಿ ಜಾನ್ ಸೇ ಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಮಚ್ಚಲ್, ಬಡ ಮಕ್ಕಳ ನೆರವಿಗಾಗಿ ದೇಶ, ವಿದೇಶದಲ್ಲಿ ಮ್ಯೂಸಿಕಲ್ ಶೋ ನಡೆಸಿಕೊಡ್ತಾರೆ. 

ಇದನ್ನೂ ಓದಿ: ‘ಕನ್ನಡಿಗರ ಉದ್ಯೋಗ ಮೀಸಲಾತಿ’ ವಿರೋಧಿಸಿದ ನೀವು ಈ ಮಣ್ಣಿನ ಮಗಳು ಹೇಗೆ ಆಗ್ತೀರಿ? ನೆಟ್ಟಿಗರು ಕ್ಲಾಸ್​..!

Advertisment

ಟೀಮ್​ ಇಂಡಿಯಾ ಕ್ವೀನ್​ ಸ್ಮೃತಿ ಮಂದಾನ-ಪಲಾಶ್​ ಮುಚ್ಚಲ್​ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಡೋದು ಸದ್ಯಕ್ಕೆ ಕನ್​ಫರ್ಮ್​ ಆಗಿದೆ. ಮದುವೆ ಯಾವಾಗ ಅನ್ನೋದಕ್ಕೂ ಶೀಘ್ರದಲ್ಲೇ ಉತ್ತರ ಸಿಗಲಿದೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

smriti mandhana
Advertisment
Advertisment
Advertisment