/newsfirstlive-kannada/media/media_files/2025/10/20/bengalore-school-boy-2025-10-20-20-19-06.jpg)
ಬೆಂಗಳೂರು: ಹೊಯ್ಸಳ ನಗರದ ಸೇಂಟ್ ಮೇರಿಸ್ ಶಾಲೆಯ ಪ್ರಿನ್ಸಿಪಲ್​ ರಾಕೇಶ್ ಶರ್ಮಾ ವಿರುದ್ಧ ಪುಟ್ಟ ಹುಡುಗನ ಮೇಲೆ ದಬ್ಬಾಳಿಕೆ ಮಾಡಿರುವ ಆರೋಪ ಕೇಳಿಬಂದಿದೆ.
ಈ ಬಾಲಕ ಜಸ್ಟ್​ 5ನೇ ತರಗತಿ ಕಣ್ರೀ. ಪುಟ್ಟ ಕಂದ ಅಂತಾನೂ ನೋಡದೇ, ಪ್ಲಾಸ್ಟಿಕ್ ಪೈಪ್​ನಿಂದ ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿದ್ದಾನಂತೆ. ಅಷ್ಟೇ ಅಲ್ಲ, ಆ ಬಾಲಕ ನೋವಿನಿಂದ ಒದ್ದಾಡ್ತಿದ್ರೂ.. ಸಹ ಶಿಕ್ಷಕಿ ಚಂದ್ರಿಕಾ ಕೂಡ ಹಲ್ಲೆ ಮಾಡಿದ್ದಾಳೆ ಅನ್ನೋ ಆರೋಪ ಇದೆ.
ಇದನ್ನೂ ಓದಿ: ‘ಕನ್ನಡಿಗರ ಉದ್ಯೋಗ ಮೀಸಲಾತಿ’ ವಿರೋಧಿಸಿದ ನೀವು ಈ ಮಣ್ಣಿನ ಮಗಳು ಹೇಗೆ ಆಗ್ತೀರಿ? ನೆಟ್ಟಿಗರು ಕ್ಲಾಸ್​..!
ದೈಹಿಕ ಮತ್ತು ಮಾನಸಿಕ ಚಿತ್ರಹಿಂಸೆ ಕೊಟ್ಟಿದ್ದಲ್ಲದೇ, ನಮ್ಮ ಶಾಲೆಯಲ್ಲಿ ಇದೇ ಟ್ರೀಟ್ಮೆಂಟ್ ಅಂತ ವಿದ್ಯಾರ್ಥಿ ಹಾಗೂ ಪೋಷಕರಿಗೆ ಜೀವ ಬೆದರಿಕೆ ಹಾಕ್ತಾರಂತೆ. ಇದೀಗ ಬಾಲಕನ ತಾಯಿ ದಿವ್ಯಾ ಕೊಟ್ಟಿರೋ ದೂರಿನನ್ವಯ…ಕೆಲವು ಶಿಕ್ಷಕರು ಹಾಗೂ ಪ್ರಿನ್ಸಿಪಲ್ ವಿರುದ್ಧ ಎಫ್​ಐಆರ್ ದಾಖಲಾಗಿದ್ದು ನೋಟಿಸ್ ನೀಡಿ ತನಿಖೆ ಮುಂದುವರೆದಿದೆ. ವಿಚಾರಣೆ ವೇಳೆ ಹುಡುಗ ಶಾಲೆಗೆ ಸರಿಯಾಗಿ ಬರ್ತಿರ್ಲಿಲ್ಲ.. ಅದಕ್ಕೆ ಏಟು ಕೊಟ್ಟಿದ್ದಾಗಿ ಹೇಳಿಕೆ ಕೊಟ್ಟಿದ್ದಾರಂತೆ.
ಶಾಲೆಯಲ್ಲಿ ನಡೆದಿರುವ ಘಟನೆ ಮತ್ತು ಹಲ್ಲೆ ಬಗ್ಗೆ ಶಿಕ್ಷಣ ಇಲಾಖೆಯ BEO ಮತ್ತು DDPIಗೆ ಪತ್ರ ಬರೆದಿರುವ ಪೊಲೀಸರು ಕ್ರಮಕ್ಕೆ ಆಗ್ರಹಿಸಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ