/newsfirstlive-kannada/media/media_files/2025/10/20/kiran-mazumdar-2025-10-20-19-31-59.jpg)
ಬೆಂಗಳೂರು: ‘ನಾನು ಮಣ್ಣಿನ ಮಗಳು’ ಎಂದ ಬಯೋಕಾನ್ ಮುಖ್ಯಸ್ಥೆ ಉದ್ಯಮಿ ಕಿರಣ್ ಮಜುಂದಾರ್​​ಗೆ (Kiran Mazumdar-Shaw) ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ.
ಕೆಂಪೇಗೌಡರು ಕಟ್ಟಿದ ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳು ದೊಡ್ಡ ಚರ್ಚೆಗೆ ಕಾರಣವಾಗಿವೆ. ಸಿಲಿಕಾನ್​​ ಜಗತ್ತಿನ ದಿಗ್ಗಜ ಐಟಿ ಸಿಟಿ, ಈ ಸಮಸ್ಯೆಯೊಂದಿಗೆ ಆರು-ಮೂರರ ಮಧ್ಯೆ ಏಳುಬೀಳಿನ ಜೂಜಾಟ ಆಡ್ತಿದೆ. ಇದೇ ರಸ್ತೆಗಳು ಗುಂಡಿಗಳು, ಟ್ರಾಫಿಕ್​ ಜಾಮ್​​, ಟೆಕ್​​​ ಉದ್ಯಮಿ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಸರ್ಕಾರವನ್ನು ಟೀಕಿಸಿದ್ದರು. ನಗರದ ಕೆಲವು ರಸ್ತೆಗಳನ್ನ ಸ್ವಂತ ದುಡ್ಡಿನಲ್ಲಿ ಅಭಿವೃದ್ಧಿ ಪಡಿಸ್ತೇನೆ ಎಂದು ಹೇಳಿ ಸಂಚಲನ ಸೃಷ್ಟಿಸಿದ್ದರು.
ಇದನ್ನೂ ಓದಿ: ಅಶ್ವಿನಿ ಗೌಡ ಮುಖಕ್ಕೆ ಹೊಡೆದಂತೆ ಆರ್ಭಟಿಸಿದ ರಿಷಾ ಗೌಡ.. ಸ್ಪರ್ಧಿಗಳು ಶಾಕ್..!
I am a proud ಮಣ್ಣಿನ ಮಗಳು do you understand? I was born in Bengaluru n am proud of my city.
— Kiran Mazumdar-Shaw (@kiranshaw) October 19, 2025
ಇದೀಗ ಮಣ್ಣಿನ ಮಗಳು ಎಂದೇಳಿ ಮತ್ತೆ ಟೀಕೆಗೆ ಗುರಿಯಾಗಿದ್ದಾರೆ. ಕಿರಣ್ ಮಜುಂದಾರ್ ಹಳೇ ಟ್ವೀಟ್ ರಿ-ಪೋಸ್ಟ್ ಮಾಡಿ ನೆಟ್ಟಿಗರು ಟಾರ್ಗೆಟ್ ಮಾಡುತ್ತಿದ್ದಾರೆ. 2020ರಲ್ಲಿ ನಾನು 100% ಗುಜರಾತಿ ಇಂಡಿಯನ್ ಎಂದಿದ್ದರು. ಹಳೇ ಟ್ವೀಟ್ ರೀ-ಪೋಸ್ಟ್ ಮಾಡಿ ಕಿರಣ್ ಮಜುಂದಾರ್ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ.
‘ನಾನು ಬೆಂಗಳೂರಲ್ಲೇ ಹುಟ್ಟಿದ್ದು. ನಾನು ಈ ಮಣ್ಣಿನ ಮಗಳು’ ಎನ್ನುತ್ತಿದ್ದಂತೆಯೇ ನೆಟ್ಟಿಗರು ಮತ್ತೆ ಅವರನ್ನು ಟ್ರೋಲ್ ಮಾಡಿದ್ದಾರೆ. ಅವತ್ತು ಗುಜರಾತಿ ಎಂದು, ಇವತ್ತು ಮಣ್ಣಿನ ಮಗಳು ಹೇಗೆ ಸಾಧ್ಯ? ಕನ್ನಡಿಗರ ಉದ್ಯೋಗ ಬಿಲ್ ವಿರೋಧಿಸಿದವರು ಮಣ್ಣಿನ ಮಗಳು ಹೇಗೆ ಆಗ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ.
ಹಿಂದೆ ಖಾಸಗಿ ಉದ್ಯೋಗಗಳಲ್ಲೂ ಕನ್ನಡಿಗರಿಗೆ ಮೀಸಲಾತಿ ಕೊಡಬೇಕು ಎಂಬ ಕೂಗು ಕೇಳಿ ಬಂದಿತ್ತು. ಆಗ ಕಿರಣ್ ಮಜುಂದಾರ್ ಶಾ ವಿರೋಧಿಸಿದ್ದರು. ಆ ಟ್ವೀಟ್ ಅನ್ನ, ರೀ-ಪೋಸ್ಟ್ ಮಾಡಿ ಟ್ರೋಲಿಗರು ಕ್ಲಾಸ್ ತೆಗೆದುಕೊಳ್ತಿದ್ದಾರೆ. ಬೆಂಗಳೂರಲ್ಲಿ ಹುಟ್ಟಿದ ಮಾತ್ರಕ್ಕೆ ಮಣ್ಣಿನ ಮಗಳು ಆಗಲ್ಲ ಎಂದು ಕೌಂಟರ್ ನೀಡಿದ್ದಾರೆ.
ಇದನ್ನೂ ಓದಿ: ರಘುಗೆ ಬರ್ತಿದ್ದಂತೆ ‘ಹೋಗ್ತಾ ಇರ್ಬೇಕು’ ಎಂದು ಗದರಿದ ಜಾಹ್ನವಿ -ಆಮೇಲೆ ಏನಾಯ್ತು..?
I am "100%" Gujarati
— ಅರುಣ್ ಜಾವಗಲ್ | Arun Javgal (@ajavgal) October 18, 2025
ಅಷ್ಟೇ ಟ್ವಿಟ್ !!!@kiranshawpic.twitter.com/Mu4JtJdwrt
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ