/newsfirstlive-kannada/media/media_files/2025/10/20/ashwini-gowda-and-risha-gowda-2025-10-20-17-48-14.jpg)
ಬಿಗ್​ಬಾಸ್​ ಮನೆಗೆ ವೈಲ್ಡ್​ ಕಾರ್ಡ್​ ಮೂಲಕ ಎಂಟ್ರಿ ಕೊಟ್ಟಿರುವ ರಿಷಾ ಗೌಡ, ಬರ್ತಿದ್ದಂತೆಯೇ ಸ್ಪರ್ಧಿಗಳ ಎದೆಗೆ ನಡುಕ ಹುಟ್ಟಿಸಿದ್ದಾರೆ. ಎಂಟ್ರಿ ಆಗ್ತಿದ್ದಂತೆಯೇ ಬಿಗ್​ಬಾಸ್​ ರಿಷಾಗೆ ಸ್ವಾಗತ ಕೋರಿದ್ದಾರೆ.
ನಂತರ ಮನೆಗೆ ಮನೆ ಪ್ರವೇಶ ಮಾಡಿ ಆ್ಯಕ್ಟಿವಿಟಿ ಏರಿಯಾಗೆ ಬರುವ ರಿಷಾ, ‘ಧ್ರುವಂತ್ ಅವರ ಸಮಯ ಮುಗಿದಿದೆ’ ಎನ್ನುತ್ತ ಅಲ್ಲಿದ್ದ ಫೋಟೋ ಬಾಕ್ಸ್​ ಪುಡಿ ಪುಡಿ ಮಾಡಿದ್ದಾರೆ. ಕೊನೆಗೆ ಕಪಟ ಮುಖವಾಡ ಹಾಕಿಕೊಂಡು ಬದುಕುತ್ತಿರೋದು ಸ್ಪಂದನಾ ಎನ್ನುತ್ತಾ, ಅವರ ಭಾವಚಿತ್ರ ಇರುವ ಬಾಕ್ಸ್​ ಅನ್ನೂ ಪುಡಿ ಮಾಡಿದ್ದಾರೆ.
ಇದನ್ನೂ ಓದಿ: ಫಿನಾಲೆಗೆ ಯಾರು ಅರ್ಹ ಎಂದು ಕೇಳಿದ ಪ್ರಶ್ನೆಗೆ ಇಬ್ಬರು ಒಂದೇ ಹೆಸರು ಹೇಳಿದ ಮಂಜು, ಅಶ್ವಿನಿ
ಕೊನೆಗೆ ಅಶ್ವಿನಿ ಗೌಡ ಭಾವಚಿತ್ರದತ್ತ ಬರುವ ಅವರು, ಅಶ್ವಿನಿ ಹೇಳೋದು ಒಂದು. ಮಾಡೋದು ಇನ್ನೊಂದು. ನಾನು ಅವರಿಗೆ ತೋರಿಸ್ತೀನಿ ಬಿಗ್​ಬಾಸ್. ಆನೆ ನಡೆದಿದ್ದೇ ಹಾದಿ ಯಾವಾಗಲೂ ಕರೆಕ್ಟ್ ಆಗಿ ಇರಲ್ಲ ಅನ್ನೋದನ್ನ ತೋರಿಸ್ತೀನಿ ಎನ್ನುತ್ತ ಭಾವಚಿತ್ರಕ್ಕೆ ಬಾರಿಸಿದ್ದಾರೆ. ಅದಾದ ಬಳಿಕ ನನ್ನ ಟಾರ್ಗೆಟ್​ ನೇರ ಕಾಕ್ರೋಚ್ ಎಂದಿರುವ ರಿಷಾ ಗೌಡ, ಅವರು ತುಂಬಾನೇ ಟಫ್ ಕಂಟೆಸ್ಟೆಂಟ್ ಅಂತಾ ಅನ್ಕೊಂಡಿದ್ದೆ. ಕಾಕ್ರೋಚ್ ಅನ್ನೋದ್ರ ಬದಲು ಉತ್ತರ ಕುಮಾರ ಎಂದು ಹೆಸರಿಡಲು ನಿರ್ಧರಿಸಿದ್ದೇನೆ ಎನ್ನುತ್ತ ಅವರ ಭಾವಚಿತ್ರವನ್ನೂ ಹಾನಿ ಮಾಡಿದ್ದಾರೆ.
ರಿಷಾ ಗೌಡ ಅವರ ಈ ರೋಷಾವೇಷಕ್ಕೆ ಸ್ಪರ್ಧಿಗಳು ಹೇಗೆ ಪ್ರತಿಕ್ರಿಯಿಸುತ್ತಾರೆ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ. ಇಂದು ರಾತ್ರಿ 9.30ಕ್ಕೆ ಬಿಗ್​ಬಾಸ್​ ಎಪಿಸೋಡ್​ ಪ್ರಸಾರವಾಗಲಿದ್ದು, ಸ್ಪರ್ಧಿಗಳು ಎಕ್ಸೈಟ್ ಆಗಿದ್ದಾರೆ.
ಇದನ್ನೂ ಓದಿ:ರಘುಗೆ ಬರ್ತಿದ್ದಂತೆ ‘ಹೋಗ್ತಾ ಇರ್ಬೇಕು’ ಎಂದು ಗದರಿದ ಜಾಹ್ನವಿ -ಆಮೇಲೆ ಏನಾಯ್ತು..?
ರಿಷಾ ಕೊಟ್ಟ ಮಾತಿನ ಏಟನ್ನ ಅರಗಿಸಿಕೊಳ್ತಾರಾ ಮನೆಮಂದಿ?
— Colors Kannada (@ColorsKannada) October 20, 2025
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9:30 | ಶನಿ-ಭಾನು ರಾತ್ರಿ 9#BiggBossKannada12#BBK12#ColorsKannada#AdeBeruHosaChiguru#ಕಲರ್ಫುಲ್ಕತೆ#colorfulstory#KicchaSudeep#ExpectTheUnexpected#CKPromopic.twitter.com/NSxIR3Tgvi
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ