/newsfirstlive-kannada/media/media_files/2025/10/20/raghu-vs-jahnavi-2025-10-20-16-35-16.jpg)
ಬಿಗ್​ಬಾಸ್ (Bigg Boss) ಮನೆಗೆ ವೈಲ್ಡ್ ಕಾರ್ಡ್ ಮೂಲಕ​ ಎಂಟ್ರಿ ಕೊಟ್ಟಿರುವ ಮ್ಯೂಟಂಟ್ ರಘು, ಬೆಳ್ಳಂಬೆಳಗ್ಗೆ ಸ್ಪರ್ಧಿಗಳ ಎದೆಗೆ ಢವಢವದ ಕಿಚ್ಚು ಹಚ್ಚಿದ್ದಾರೆ. ಹಾಯಾಗಿ ನಿದ್ರಿಸುತ್ತಿದ್ದ ಸ್ಪರ್ಧಿಗಳ ಬಿಗ್​ಬಾಸ್ ಕನಸನ್ನು ಕಸಿದುಕೊಂಡಿದ್ದಾರೆ.
ಹೇಗಿತ್ತು ರಘು ಎಂಟ್ರಿ..?
ಇಂದು ರಾತ್ರಿ ಪ್ರಸಾರವಾಗಲಿರುವ ಎಪಿಸೋಡ್​ನ ಪ್ರೊಮೋವನ್ನು ಕಲರ್ಸ್ ಕನ್ನಡ ಶೇರ್ ಮಾಡಿದೆ. ಸ್ಪರ್ಧಿಗಳು ನಿದ್ರಿಸುತ್ತಿರುವ ಹೊತ್ತಿನಲ್ಲಿ ರಘು ಎಂಟ್ರಿಯಾಗಿದೆ. ಮೈಕ್ ಹಿಡಿದು ಬಿಗ್​ಬಾಸ್ ಮನೆಗೆ ಬರುವ ರಘು, ಇದು ವೇಕಪ್ ಟೈಂ. ನೀವು ಯಾವುದೋ ರೆಸಾರ್ಟ್​ಗೆ ಬಂದಿಲ್ಲ. ಎದ್ದೇಳ್ರಪ್ಪಾ ಎಂದು ಜೋರಾಗಿ ಮೈಕ್​ ಮೂಲಕ ಕಿರುಚಾಡಿದ್ದಾರೆ. ಇದರಿಂದ ಬೆಚ್ಚಿದ ಸ್ಪರ್ಧಿಗಳು ಒಬ್ಬೊಬ್ಬರೆ ಹಾಸಿಗೆಯಿಂದ ಎದ್ದಿದ್ದಾರೆ.
ನಂತರ ಗಾರ್ಡನ್ ಏರಿಯಾದಲ್ಲಿ ಅಶ್ವಿನಿ ಗೌಡ, ಜಾಹ್ನವಿ ಇಬ್ಬರು ರಘು ಜೊತೆ ವಾಗ್ಯುದ್ಧಕ್ಕೆ ಇಳಿದಿದ್ದಾರೆ.
ನೀವು ಹೇಳಿದ್ದೆಲ್ಲ ಕೇಳೋದಕ್ಕೆ ನಿಮ್ಮ ಪಪ್ಪೆಟ್​ಗಳೆಲ್ಲ ನಾವು ಎಂದು ಕೈತೋರಿಸಿದ್ದಾರೆ. ಅದಕ್ಕೆ ಕೋಪಿಸಿಕೊಳ್ಳುವ ರಘು. ಏನು ಪಪ್ಪೆಟ್.. ನೀನು ಎಲ್ಲರನ್ನೂ ಪಪ್ಪೆಟ್ ಮಾಡಿಕೊಂಡಿರೋದು ಎಂದು ಕಿರುಚಾಡುತ್ತಾರೆ.
ಅದಕ್ಕೆ ಅಶ್ವಿನಿ ಗೌಡ, ಏಕ ವಚನದಲ್ಲಿ ನೀವು ಮಾತನ್ನಾಡಬೇಡಿ ಎಂದು ಗದರುತ್ತಾರೆ. ಅದಕ್ಕೆ ರಘು, ನೀನು ನನ್ನ ಹತ್ತಿರ ಕೈ ತೋರಿಸಬೇಡ ಅಂತಾ ಜೋರಾಗುತ್ತಾರೆ. ಆಗ ಜಾಹ್ನವಿ ಎಂಟ್ರಿಯಾಗಿ, ನಮ್ಮ ಹತ್ತಿರ ಏಕವಚನದಲ್ಲಿ ಮಾತನ್ನಾಡಿದ್ರೆ, ನೀವು ಹೊಗ್ತ ಇರಬಹುದು ಎಂದು ಆವಾಜ್ ಹಾಕಿದ್ದಾರೆ. ಇಂದು ರಾತ್ರಿ ಈ ಕಿತ್ತಾಟದ ದೃಶ್ಯ ಪ್ರಸಾರವಾಗಲಿದ್ದು, ವೀಕ್ಷಕರು ಎಕ್ಸೈಟ್ ಆಗಿದ್ದಾರೆ.
ಬೆಳ್ಳಂಬೆಳಗ್ಗೆ ಮ್ಯೂಟಂಟ್ ರಘು ಸಿಂಹ ಘರ್ಜನೆಗೆ ನಡುಗಿದ ಬಿಗ್ ಮನೆ ಮಂದಿ
— Colors Kannada (@ColorsKannada) October 20, 2025
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9:30 | ಶನಿ-ಭಾನು ರಾತ್ರಿ 9#BiggBossKannada12#BBK12#ColorsKannada#AdeBeruHosaChiguru#ಕಲರ್ಫುಲ್ಕತೆ#colorfulstory#KicchaSudeep#ExpectTheUnexpected#CKPromopic.twitter.com/qqcVGfEAvz
ಇದನ್ನೂ ಓದಿ: ಫಿನಾಲೆಗೆ ಯಾರು ಅರ್ಹ ಎಂದು ಕೇಳಿದ ಪ್ರಶ್ನೆಗೆ ಇಬ್ಬರು ಒಂದೇ ಹೆಸರು ಹೇಳಿದ ಮಂಜು, ಅಶ್ವಿನಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ