/newsfirstlive-kannada/media/media_files/2025/10/19/ashwini-manju-bahshini-2025-10-19-20-44-07.jpg)
ಬಿಗ್​ಬಾಸ್ ಮನೆಯಿಂದ ನಿನ್ನೆ ಮಂಜು ಭಾಷಿಣಿ ಹಾಗೂ ಅಶ್ವಿನಿ ಎನ್​.ಎಸ್​. ಅವರು ಹೊರ ಬಂದಿದ್ದಾರೆ. ಕಳೆದ ಸಂಚಿಕೆಯಲ್ಲಿ ಡೇಂಜರ್ ಝೋನ್‌ನಲ್ಲಿ ಇದ್ದ ಅಭಿಷೇಕ್, ಅಶ್ವಿನಿ ಎಸ್, ಸ್ಪಂದನಾ ಸೋಮಣ್ಣ ಮತ್ತು ಮಂಜು ಭಾಷಿಣಿ ಪೈಕಿ ದೊಡ್ಮನೆಯಿಂದ ಈ ವಾರ ಅಶ್ವಿನಿ ಎಸ್ ಮತ್ತು ಮಂಜು ಭಾಷಿಣಿ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ.
ಇದನ್ನೂ ಓದಿ: ಬಿಗ್​ಬಾಸ್ ಮನೆಗೆ ವೈಲ್ಡ್ ಕಾರ್ಡ್​ ಎಂಟ್ರಿ.. ಯಾಱರು ಬರ್ತಿದ್ದಾರೆ..?
ಹೊರ ಬಂದಿರುವ ಇಬ್ಬರು ಸ್ಪರ್ಧಿಗಳು ಬಿಗ್​​ಬಾಸ್ ವೇದಿಕೆಯಲ್ಲಿ ಕಿಚ್ಚ ಸುದೀಪ್​ಗೆ ಎದುರಾದರು. ಈ ವೇಳೆ ಸುದೀಪ್​ ಪ್ರಶ್ನೆಯೊಂದನ್ನ ಕೇಳಿದ್ದಾರೆ. ಮನೆಯಲ್ಲಿ ಈಗಿರುವ ಸ್ಪರ್ಧಿಗಳಲ್ಲಿ ಯಾರು ಫಿನಾಲೆಗೆ ಹೋಗುವ ತನಕ ಅರ್ಹತೆ ಇರುವ ಸ್ಪರ್ಧಿ ಯಾರು ಎಂದು ಕೇಳಿದ್ದಾರೆ. ಅದಕ್ಕೆ ಇಬ್ಬರು ಗಿಲ್ಲಿ ಎಂದು ಉತ್ತರಿಸಿದ್ದಾರೆ. ಇಬ್ಬರು ಒಂದೇ ಬಾರಿಗೆ ಹೇಳುವ ಉತ್ತರವನ್ನು, ಕಲರ್ಸ್ ಕನ್ನಡ ಪ್ರೊಮೋದಲ್ಲಿ ಹಂಚಿಕೊಂಡಿದೆ.
ಇದೇ ವೇಳೆ, ಮಂಜು ಭಾಷಿಣಿ ಅವರಿಗೆ ಒಂದು ಲಕ್ಷ ರೂಪಾಯಿಗಳ ಚೆಕ್​ ವಿತರಿಸಲಾಯಿತು. ಇದು ಅಶ್ವಸೂರ್ಯ ರಿಯಾಲಿಟೀಸ್​ ನೀಡಿರುವ ಕೊಡುಗೆಯಾಗಿದೆ. ಅಶ್ವಿನಿ ಅವರಿಗೂ ಒಂದು ಲಕ್ಷ ರೂಪಾಯಿಗಳ ಚೆಕ್​ ವಿತರಿಸಲಾಯಿತು. ಅದರ ಹೊರತಾಗಿ ಇಬ್ಬರೂ ಸ್ಪರ್ಧಿಗಳಿಗೆ ಇದಾಗಲೇ ನಿಗದಿಯಾಗಿರುವಂತೆ ಭರ್ಜರಿ ಹಣ, ಗಿಫ್ಟ್​ ಕೂಡ ಸಿಗಲಿದೆ.
ಇದನ್ನೂ ಓದಿ: ಗಿಲ್ಲಿ ಹಾಗೂ ಕಾವ್ಯಾಗೆ ಸುದೀಪ್​ ಏನಂದ್ರು ಗೊತ್ತಾ..? VIDEO
ನಿಮ್ಮ ಪ್ರಕಾರ ಫಿನಾಲೆ ತಲುಪೋ ಅರ್ಹತೆ ಯಾರಿಗಿದೆ?
— Colors Kannada (@ColorsKannada) October 19, 2025
ಬಿಗ್ ಬಾಸ್ Grand Launch 2.0 | ಇಂದು ರಾತ್ರಿ 8#BiggBossKannada12#BBK12#ColorsKannada#AdeBeruHosaChiguru#ಕಲರ್ಫುಲ್ಕತೆ#colorfulstory#KicchaSudeep#ExpectTheUnexpected#CKSPpic.twitter.com/W9ppBKtQtQ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ