/newsfirstlive-kannada/media/media_files/2025/10/19/bigg-boss-grand-finale-1-2025-10-19-16-56-25.jpg)
ಇಂದಿನ ಗ್ರ್ಯಾಂಡ್​​ ಫಿನಾಲೆ 2.0ನಲ್ಲಿ ಮೂವರು ವೈಲ್ಡ್​ ಕಾರ್ಡ್​ ಸ್ಪರ್ಧಿಗಳು ಬಿಗ್​ ಮನೆಗೆ ಎಂಟ್ರಿ ಕೊಡಲಿದ್ದಾರೆ. ಈಗಾಗಲೇ ಬಿಗ್​ ಮನೆಯಿಂದ ಸತೀಶ್​, ಅಶ್ವಿನಿ ಹಾಗೂ ಮಂಜು ಭಾಷಿಣಿ ಹೊರಬಂದಿದ್ದಾರೆ.
ಇವರ ಬದಲಿಗೆ ಬಿಗ್‌ಬಾಸ್ ಮನೆಗೆ ಇನ್ನಷ್ಟು ಜನರು ಎಂಟ್ರಿಕೊಟ್ಟು ಹೊಸ ಆಟ ಆರಂಭಿಸಲಿದ್ದು, ಅವರು ಯಾರು? ಬಿಗ್‌ಬಾಸ್ ಮನೆಯಲ್ಲಿ ಇನ್ನೇನೇನು ಟ್ವಿಸ್ಟ್ ಕಾದಿದೆ ಅನ್ನೋದನ್ನು ಇವತ್ತಿನ ಬಿಗ್‌ಬಾಸ್‌ನಲ್ಲಿ ಕಾದು ನೋಡಬೇಕಿದೆ..
ವೈಲ್ಡ್ ಕಾರ್ಡ್ ಸ್ಪರ್ಧಿಗಳು ಇವರೇ ನೋಡಿ?
ಇಂದು ಬಿಡುಗಡೆಯಾದ ಪ್ರೋಮೋದಲ್ಲಿ ಬಿಗ್​ ಮನೆಗೆ ಓರ್ವ ಮಹಿಳೆ ಹಾಗೂ ಇಬ್ಬರು ಪುರುಷ ಸ್ಪರ್ಧಿಗಳು ವೈಲ್ಡ್​ ಕಾರ್ಡ್​ ಆಗಿ ಎಂಟ್ರಿ ಕೊಟ್ಟಿದ್ದಾರೆ. ಆ ಸ್ಪರ್ಧಿಗಳು ಯಾರೆಂದು ಈಗಾಗಲೆ ಅಭಿಮಾನಿಗಳು ಊಹಿಸಿದ್ದಾರೆ. ಇಂದಿನ ವೈಲ್ಡ್​ ಕಾರ್ಡ್​ ಎಂಟ್ರಿಯಲ್ಲಿ ನಟಿ ರಿಷಿ ಗೌಡ, ಕ್ವಾಟ್ಲೆ ಕಿಚನ್​ ಖ್ಯಾತಿಯ ರಘು ಹಾಗೂ ಸೂರಜ್​ ಸಿಂಗ್​ ಬರಲಿದ್ದಾರೆ ಅಂತ ಗೆಸ್​ ಮಾಡಲಾಗಿದೆ. ಅಭಿಮಾನಿಗಳ ಗೆಸ್​ ಎಷ್ಟರ ಮಟ್ಟಿಗೆ ಸರಿ ಇದೆ ಅನ್ನೋದನ್ನ ಇಂದಿನ ಬಿಗ್​ಬಾಸ್​ ಶೋದಲ್ಲೇ ನೋಡಬೇಕಿದೆ.