/newsfirstlive-kannada/media/media_files/2025/10/15/kruthika_father-2025-10-15-19-15-03.jpg)
ಬೆಂಗಳೂರು: ಡಾಕ್ಟರ್​ ಕೃತಿಕಾಗೆ ನಾನೇ ಅನಸ್ತೇಷಿಯಾ ಕೊಟ್ಟಿದ್ದು ಎಂದು ಪತಿ ಮಹೇಂದ್ರ ಒಪ್ಪಿಕೊಂಡಿದ್ದಾನೆ ಅನ್ನೋ ಮಾಹಿತಿ ಸಿಕ್ಕಿದೆ. ಕೃತಿಕಾ ಪೋಷಕರು ಮೋಸ ಮಾಡಿ ಮದುವೆ ಮಾಡಿದರು. ಹೀಗಾಗಿ ಅದರ ರಿವೇಂಜ್ ತೀರಿಸಿಕೊಂಡೆ ಎಂದಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ:ಕಿಚ್ಚ ಸುದೀಪ್‌ಗೇ ಸರ್ಪೈಸ್ ಕೊಟ್ಟ ಬಿಗ್‌ಬಾಸ್..!
ತಾನು ಒಂದೊಳ್ಳೆ ಜೀವನದ ಕನಸು ಕಂಡಿದ್ದೆ. ಆದ್ರೆ ಒಬ್ಬ ರೋಗಿಷ್ಟೆಯನ್ನ ಮದುವೆ ಮಾಡಿಸಿದ್ರು. ಅವಳು ಏನೇ ತಿಂದರೂ ಕುಡಿದರೂ ವಾಂತಿ ಮಾಡ್ತಾಳೆ. ಪಾರ್ಟಿ ಸಂದರ್ಭದಲ್ಲಿ ಕೂಡ ಇದೇ ರೀತಿ ಮಾಡಿ ಮುಜುಗರ ಮಾಡ್ತಿದ್ದಳು. ನಿನಗೆ ರೋಗದ ಹೆಂಡತಿ ಸಿಕ್ಕಿದ್ದಾಳೆ ಅಂತಾ ಸ್ನೇಹಿತರು ತಮಾಷೆ ಮಾಡ್ತಿದ್ದರು.
ಇದ್ರಿಂದ ಪತ್ನಿ ಬಗ್ಗೆ ಬೇಸರ ಅನಿಸ್ತಿತ್ತು. ತನಗೆ ಸಿಗಬೇಕಾದ ಪ್ರೀತಿಗಾಗಿ ತಾನು ಬೇರೆಯವರನ್ನ ಪ್ರೀತಿ ಮಾಡಿದ್ದೆ. ಕೃತಿಕಾ ಸಾವನ್ನಪ್ಪಿದರೆ ನಾನು ಪ್ರೀತಿಸಿದಾಕೆ ಜೊತೆ ಇರಬಹುದು ಎಂಬ ಕಾರಣಕ್ಕೆ ಪ್ಲಾನ್​ ಮಾಡಿ ಕೊಲೆ ಮಾಡಿದೆ ಎಂದು ತಪ್ಪು ಒಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಕೈಕೊಟ್ಟ ರೋಹಿತ್, ಕೋಹ್ಲಿ.. ಬಿಸಿಸಿಐ ಹಾದಿ ಮತ್ತಷ್ಟು ಸರಾಗ..!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ