/newsfirstlive-kannada/media/media_files/2025/09/07/virat-kohli-10-2025-09-07-13-16-18.jpg)
ಬ್ಲಾಕ್​​ಬಸ್ಟರ್​ ಇನ್ನಿಂಗ್ಸ್​​​ನ​ ಕನಸನ್ನ ಕಟ್ಟಿಕೊಂಡು ಕಾದಿದ್ದ ವಿಶ್ವದ ಕ್ರಿಕೆಟ್​ ಅಭಿಮಾನಿಗಳು ತೀವ್ರ ನಿರಾಸೆ ಅನುಭವಿಸಿದ್ರು. ಬರೋಬ್ಬರಿ 6 ತಿಂಗಳ ಬಳಿಕ ಕ್ರಿಕೆಟ್​ ಫೀಲ್ಡ್​​​ಗಿಳಿದ ವಿರಾಟ್​​​ ಕೊಹ್ಲಿ ಅಕೌಂಟ್​​ ಓಪನ್ ಕೂಡ ಮಾಡಲಿಲ್ಲ. ಈ ಹಿಂದೆ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿದಾಗ ಏನು ಯಡವಟ್ಟು ಮಾಡಿದ್ರಲ್ವಾ. ನಿನ್ನೆನೂ ಕೂಡ ಅದೇ ತಪ್ಪು ಮಾಡಿ ಕೈ ಸುಟ್ಟು ಮಾಡಿಕೊಂಡ್ರು.
ಕ್ರಿಕೆಟ್​ ಲೋಕದ ಸುಲ್ತಾನ ವಿರಾಟ್​ ಕೊಹ್ಲಿ ಬ್ಲ್ಯೂ ಜೆರ್ಸಿಯಲ್ಲಿ ಕಾಣಿಸಿಕೊಂಡು ಇಷ್ಟು ದಿನ ಆಗಿತ್ತು. ನ್ಯೂಜಿಲೆಂಡ್​​ ವಿರುದ್ಧದ ಚಾಂಪಿಯನ್ಸ್​ ಟ್ರೋಫಿ ಫೈನಲ್​ ಪಂದ್ಯವಾಡಿದ್ದೇ ಕೊನೆ. ಆ ಬಳಿಕ ಫೀಲ್ಡ್​ನಿಂದ ಹೊರಗುಳಿದಿದ್ದ ವಿರಾಟ್​ ಕೊಹ್ಲಿ ಕೊನೆಗೂ ದರ್ಶನ ಕೊಟ್ರು. ಸುದೀರ್ಘ ಅಂತರದ ಬಳಿಕ ಕಮ್​​​​​ಬ್ಯಾಕ್ ಮಾಡಿದ​​ ಕೊಹ್ಲಿಯ ಮೇಲೆ ಅಭಿಮಾನಿಗಳ ಅಪಾರ ನಿರೀಕ್ಷೆಯಿತ್ತು.
ಸೊನ್ನೆ ಸುತ್ತಿದ ಕೊಹ್ಲಿ
ಕಿಂಗ್​ ಕೊಹ್ಲಿಯ ಕಮ್​ಬ್ಯಾಕ್​ಗಾಗಿ ಇಡೀ ಕ್ರಿಕೆಟ್​ ಜಗತ್ತೇ ಕಾಯ್ತಿತ್ತು. ಪರ್ತ್​​ ಸ್ಟೇಡಿಯಂ ಕೊಹ್ಲಿ ಅಭ್ಯಾಸ ನಡೆಸಿದಾಗಲೇ ಅಭಿಮಾನಿಗಳೇ ದಂಡೆ ಹರಿದು ಬಂದಿತ್ತು. ಮ್ಯಾಚ್ ಡೇ ಅಂತೂ ಸ್ಟೇಡಿಯಂ ಹೌಸ್​​ಫುಲ್​ ಆಗಿತ್ತು. ಕೊಹ್ಲಿ ಪೋಸ್ಟರ್​ಗಳು ರಾರಾಜಿಸ್ತಾ ಇದ್ರು. ಅತಿಯಾದ ನಿರೀಕ್ಷೆಯಿಟ್ಟು ಬಂದಿದ್ದ ಫ್ಯಾನ್ಸ್​​ಗೆ ಅಂತಿಮವಾಗಿ ಅನುಭವಿಸಿದ್ದು ನಿರಾಸೆಯನ್ನ.
ರೋಹಿತ್​ ಶರ್ಮಾ ಔಟಾದ ಬಳಿಕ ಬ್ಯಾಟಿಂಗ್​ಗೆ ಬಂದ ವಿರಾಟ್​ ಕೊಹ್ಲಿ ಆರಂಭದಿಂದಲೂ ಸ್ಟ್ರಗಲ್​ ಮಾಡಿದ್ರು. 7 ಎಸೆತಗಳಾದ್ರೂ ಅಕೌಂಟ್​ ಓಪನ್​ ಮಾಡದ ಕೊಹ್ಲಿ, 8 ಎಸೆತದಲ್ಲಿ ಕವರ್​ ಡ್ರೈವ್​​ ಹೊಡೆಯೋ ಪ್ರಯತ್ನದಲ್ಲಿ ಎಡವಿದ್ರು. ಮಿಚೆಲ್​ ಸ್ಟಾರ್ಕ್​ ಎಸೆತದಲ್ಲಿ ಕೂಪರ್​ ಕೊನೊಲಿಗೆ ಕ್ಯಾಚ್​ ನೀಡಿ ನಿರ್ಗಮಿಸಿದ ಕೊಹ್ಲಿ, ಆಸ್ಟ್ರೇಲಿಯಾ ನೆಲದಲ್ಲಿ ಮೊದಲ ಬಾರಿ ಡಕೌಟ್​ ಆದ್ರು. ಈ ಡಕೌಟ್​ನೊಂದಿಗೆ ಕಾಂಗರೂ ನಾಡಲ್ಲಿ 51.03ರಷ್ಟಿದ್ದ ಬ್ಯಾಟಿಂಗ್​ ಸರಾಸರಿ 49.14ಕ್ಕೆ ಕುಸಿತ ಕಾಣ್ತು.
ಇದನ್ನೂ ಓದಿ:ಕೊಹ್ಲಿ ನಿವೃತ್ತಿ ಪ್ಲಾನ್ ರೆಡಿ.. ಲಂಡನ್​ನಲ್ಲಿ ನೆಲೆಯೂರಲು ನಿರ್ಧರಿಸಿದ್ದೇಕೆ..?
ಕೊಹ್ಲಿಗೂ ಈ ಔಟ್​ ಸೈಡ್​ ಆಫ್​​ ಸ್ಟಂಪ್​ ಲೈನ್​ನ ಎಸೆತಗಳಿಗೂ ಆಗಿ ಬರೋದೆ ಇಲ್ಲ. ಕವರ್​​ಡ್ರೈವ್​ ಯತ್ನ ಮಾಡೋದು ಕ್ಯಾಚ್​ ನೀಡಿ ನಿರ್ಗಮಿಸೋದು ಇದೇ ಆಗ್ಬಿಟ್ಟಿದೆ. ಕಳೆದ ಬಾರಿ ಆಸ್ಟ್ರೇಲಿಯಾ ಪ್ರವಾಸಕ್ಕೆ ಟೀಮ್​ ಇಂಡಿಯಾ ತೆರಳಿತ್ತಲ್ವಾ? ಆಗಲೂ ಇದೇ ಕಥೆ. ಟೆಸ್ಟ್​ ಸರಣಿಯಲ್ಲಿ ಒಂದಲ್ಲ.. ಎರಡಲ್ಲ.. 7 ಬಾರಿ ಸೇಮ್​ ಟು ಸೇಮ್​.. ಇದೇ ರೀತಿ ಔಟ್​​ ಸೈಡ್​ ಆಫ್​ ಸ್ಟಂಪ್​ ಎಸೆತವನ್ನ ಕೆಣಕಿ ಕೈ ಸುಟ್ಟುಕೊಂಡಿದ್ರು.
ಅಂದು ಆಸಿಸ್​ ಪ್ರವಾಸದಲ್ಲಿ ಮಾಡಿದ ಪ್ರಮಾದಕ್ಕೆ ದೊಡ್ಡ ಮೊತ್ತದ ಬೆಲೆ ತೆತ್ತಿದ್ದು ಕ್ರಿಕೆಟ್​ ಜಗತ್ತಿಗೆ ಗೊತ್ತಿರೋ ಸತ್ಯ. ಆ ವೈಫಲ್ಯದ ಕಾರಣಕ್ಕೆ ಕೊಹ್ಲಿ ಸಾಮರ್ಥ್ಯದ ಬಗ್ಗೆ ಪ್ರಶ್ನೆಗಳೆದ್ವು. ಬಿಸಿಸಿಐ, ಟೀಮ್​ ಮ್ಯಾನೇಜ್​ಮೆಂಟ್​ ಅಸಮಾಧಾನ ಉಂಟಾಯ್ತು. ಅಂತಿಮವಾಗಿ ಕೊಹ್ಲಿ ಟೆಸ್ಟ್​ ಕ್ರಿಕೆಟ್​ಗೆ ಗುಡ್​ ಬೈ ಹೇಳಬೇಕಾಗಿ ಬಂತು. ಇದೀಗ ಏಕದಿನ ಕ್ರಿಕೆಟ್​ ಕರಿಯರ್​ ಸಂಕಷ್ಟಕ್ಕೆ ಸಿಲುಕಿರೋ ಸಮಯದಲ್ಲಿ ಮತ್ತದೇ ತಪ್ಪು ಮಾಡಿದ್ದಾರೆ.
ಇದನ್ನೂ ಓದಿ: ಆಸ್ಟ್ರೇಲಿಯಾದ ವಿರುದ್ಧದ 2ನೇ ಪಂದ್ಯಕ್ಕೆ ಟೀಮ್ ಇಂಡಿಯಾದಲ್ಲಿ ಏನೆಲ್ಲಾ ಬದಲಾವಣೆ? : ಯಾರು ಸೇರ್ಪಡೆ, ಯಾರು ಡ್ರಾಪ್ ಆಗ್ತಾರೆ?
ಮೊದಲ ಏಕದಿನ ಪಂದ್ಯದಲ್ಲಿ ಡಕೌಟ್ ಆದ ಬೆನ್ನಲ್ಲೇ ಕೊಹ್ಲಿಯ ಭವಿಷ್ಯದ ಚರ್ಚೆ ಮತ್ತೆ ಜೋರಾಗಿದೆ. ಆಸ್ಟ್ರೇಲಿಯಾ ಪ್ರವಾಸದಲ್ಲೇ ಕೊಹ್ಲಿಯ ಕರಿಯರ್​ ಅಂತ್ಯವಾಗಲಿದೆ ಅಂತಿದ್ದಾರೆ. ಒಂದೇ ಫಾರ್ಮೆಟ್​​ ಮಾತ್ರ ಸೀಮಿತವಾಗಿರೋದು ಕಷ್ಟ. ಕೊಹ್ಲಿ ಗುಡ್​ ಬೈ ಹೇಳೋದೆ ಬೆಸ್ಟ್​ ಎಂಬ ಅಭಿಪ್ರಾಯಗಳು ವ್ಯಕ್ತವಾಗ್ತಿವೆ. ಕೊಹ್ಲಿ ಮಾತ್ರ ನನಗೀಗ ಫಿಟ್​​ ಅನ್ನೋ ಫೀಲ್​ ಇದೆ. ರಿಫ್ರೆಶ್​ ಆಗಿ ರೆಡಿಯಾಗಿದ್ದಿನಿ ಅಂತಿದ್ದಾರೆ.
ನಿಜ ಹೇಳಬೇಕಂದ್ರೆ ಕಳೆದ 15ರಿಂದ 20 ವರ್ಷಗಳಲ್ಲಿ ನಾನು ಆಡಿದ ಪಂದ್ಯಗಳನ್ನ ನೋಡಿದ್ರೆ ನನಗೆ ವಿಶ್ರಾಂತಿಯೇ ಸಿಕ್ಕಿರಲಿಲ್ಲ. ಇಂಟರ್ನ್ಯಾಷನಲ್ ಮತ್ತು ಐಪಿಎಲ್ ಸೇರಿಸಿದ್ರೆ ಕಳೆದ 15 ವರ್ಷಗಳಲ್ಲಿ ನಾನು ಉಳಿದವರಿಗಿಂತ ಅತಿ ಹೆಚ್ಚು ಪಂದ್ಯಗಳನ್ನ ಆಡಿದ್ದೇನೆ. ಈ ಬಿಡುವು ನನ್ನ ಪಾಲಿಗೆ ರಿಫ್ರೆಶಿಂಗ್ ಸಮಯವಾಗಿತ್ತು. ನಾನು ಈಗ ಈ ಹಿಂದಿಗಿಂತ ಫಿಟ್ ಇದ್ದೀನಿ ಎಂದು ಅನ್ನಿಸ್ತಾ ಇದೆ. ಫ್ರೆಶ್ನೆಸ್ ಫೀಲ್ ಆಗ್ತಿದೆ.
-ವಿರಾಟ್ ಕೊಹ್ಲಿ, ಬ್ಯಾಟ್ಸ್ಮನ್
ಮೊದಲ ಪಂದ್ಯದಲ್ಲಿ ಡಕೌಟ್​ ಆಗಿರೋ ಕೊಹ್ಲಿಗೆ ಇನ್ನೂ 2 ಪಂದ್ಯಗಳ ಅವಕಾಶವಿದೆ. ಫಿಟ್​​ ಅಂಡ್ ಫ್ರೆಶ್​ ಇದ್ದೀನಿ ಎಂದು ಆತ್ಮವಿಶ್ವಾಸದ ಮಾತುಗಳನ್ನಾಡಿರುವ ಕೊಹ್ಲಿ, ಮುಂದಿನ ಪಂದ್ಯಗಳಲ್ಲಾದ್ರೂ ಪರ್ಫಾಮ್​ ಮಾಡ್ತಾರಾ? ಕಾದು ನೋಡೋಣ.
ಇದನ್ನೂ ಓದಿ: ಕೊಹ್ಲಿಯನ್ನ ಅಟ್ಯಾಕ್ ಮಾಡಿದ ಬಾಬಾ ಬಾಗೀಶ್ವರ್.. ಫುಲ್ ಟ್ರೆಂಡಿಂಗ್ ವಿಷ್ಯ ಇಲ್ಲಿದೆ..!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ