/newsfirstlive-kannada/media/media_files/2025/10/21/jahnavi-1-2025-10-21-16-15-10.jpg)
ಬಿಗ್​ಬಾಸ್​ ಮನೆಯಲ್ಲಿ ಸ್ಪರ್ಧಿ ಜಾಹ್ನವಿಗೆ ಆತಂಕ ಶುರುವಾಗಿದೆ. ಕಲರ್ಸ್ ಕನ್ನಡ ಶೇರ್ ಮಾಡಿರುವ ಪ್ರೊಮೋದಲ್ಲಿ ಜಾಹ್ನವಿ ತಮ್ಮ ನೋವುಗಳನ್ನು ಹೇಳಿಕೊಂಡು ಕಣ್ಣೀರು ಇಟ್ಟಿದ್ದಾರೆ.
ನಿನ್ನೆಯ ದಿನ ಬಿಗ್​ಬಾಸ್​ ಮನೆಗೆ ಮೂವರು ವೈಲ್ಡ್ ಕಾರ್ಡ್​​ ಸ್ಪರ್ಧಿಯಾಗಿ ಎಂಟ್ರಿ ನೀಡಿದ್ದಾರೆ. ಮ್ಯೂಟಂಟ್ ರಘು ಮತ್ತು ರಿಷಾ ಗೌಡ, ಬರುತ್ತಿದ್ದಂತೆಯೇ ಜಾಹ್ನವಿ ಅವರ ತಪ್ಪುಗಳನ್ನು ಒತ್ತಿ ಹೇಳಿ ಸರಿ ಪಡಿಸಿಕೊಳ್ಳುವಂತೆ ತಾಕೀತು ಮಾಡಿದ್ದಾರೆ. ಆರಂಭದಲ್ಲಿ ನಾನು ಇರೋದೇ ಹೀಗೆ ಎಂದು ವರ್ತಿಸಿದ್ದ ಜಾಹ್ನವಿ ಇಂದು ಕಣ್ಣೀರು ಇಟ್ಟಿದ್ದಾರೆ.
ಇಲ್ಲಿ ನೀವು ಪುಕ್ಕ ತರಾನೇ ಇದ್ದರೆ ಜಾಹ್ನವಿ ಕಳೆದುಹೋಗ್ತಾಳೆ. ನೀವು ಸಾಕಷ್ಟು ಕೆಲಸ ಮಾಡಬೇಕು ಅಂತಾ ಕನಸು ಕಟ್ಟಿಕೊಂಡು ಬಂದಿರ್ತೀರಿ. ನಿಮಗೆ ನೀವೇ ಮುಳ್ಳಾಗ್ತೀದ್ದೀರಿ ಅನಿಸುತ್ತೆ ಎಂದು ರಿಷಾ ಗೌಡ ಮತ್ತೆ ಚುಚ್ಚಿದ್ದಾರೆ. ಅದನ್ನು ನೆಲದ ಮೇಲೆ ಕೂತ ಕೇಳಿಸಿಕೊಳ್ತಿದ್ದ ಜಾಹ್ನವಿ ನಂತರ ಅಶ್ವಿನಿ ಗೌಡ ಮುಂದೆ ಹೋಗಿ ಅಳಲು ತೋಡಿಕೊಂಡಿದ್ದಾರೆ.
‘ಸುಮ್ನೆ ನೆಗೆಟೀವ್ ಮಾಡಿಕೊಂಡು ಹೋದ್ರೆ, ನಮ್ಮ ಗುಂಡಿನ ನಾವೇ ತೋಡಿಕೊಂಡು..’ ಅಂತಾ ಅತ್ತಿದ್ದಾರೆ. ಅದಕ್ಕೆ ಏನೂ ಇಲ್ಲ. ಬಿಗ್​ ಬಾಸ್ ಮನೆಯಲ್ಲಿ ಇರೋರು ಯಾರೂ ತಪ್ಪೇ ಮಾಡಿಲ್ವಾ? ಎನ್ನುತ್ತ ಅಶ್ವಿನಿ ಗೌಡ ಸಮಾಧಾನ ಮಾಡಿದ್ದಾರೆ. ಅದರಿಂದ ನೀವು ಹೊರಗಡೆ ಬನ್ನಿ. ನಮ್ಮ ವ್ಯಕ್ತಿತ್ವ, ನಿಮ್ಮ ವ್ಯಕ್ತಿತ್ವ ಅದಲ್ಲ ಎಂದು ಅಶ್ವಿನಿ ಗೌಡ ಬುದ್ಧಿ ಹೇಳಿದ್ದಾರೆ.
ಇದನ್ನೂ ಓದಿ: 4 ಸಾವಿರ ಕೋಟಿ ವೆಚ್ಚದಲ್ಲಿ 500 ಕಿ.ಮೀ ರಸ್ತೆಗೆ ವೈಟ್ ಟಾಪಿಂಗ್ ಗೆ ಡಿಪಿಆರ್ ಸಿದ್ಧತೆ: ಡಿಸಿಎಂ ಡಿ.ಕೆ. ಶಿವಕುಮಾರ್
ವೈಲ್ಡ್ ಕಾರ್ಡ್ ಎಂಟ್ರಿ ಜಾನ್ವಿಗೆ ಎಚ್ಚರಿಕೆ ಗಂಟೆಯಾಯ್ತಾ?
— Colors Kannada (@ColorsKannada) October 21, 2025
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9:30 | ಶನಿ-ಭಾನು ರಾತ್ರಿ 9#BiggBossKannada12#BBK12#ColorsKannada#AdeBeruHosaChiguru#ಕಲರ್ಫುಲ್ಕತೆ#colorfulstory#KicchaSudeep#ExpectTheUnexpected#CKPromopic.twitter.com/TZl6jOT5xI
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ