/newsfirstlive-kannada/media/media_files/2025/11/11/delhi-insident-1-2025-11-11-11-31-18.jpg)
ದೆಹಲಿಯಲ್ಲಿ 9 ಮಂದಿ ಅಮಾಯಕರ ಜೀವ ತೆಗೆದ ಪ್ರಕರಣದ ಪ್ರಮುಖ ರೂವಾರಿ ಡಾ.ಉಮರ್ ಮೊಹ್ಮದ್ ಎಂಬ ಅನುಮಾನ ಪೊಲೀಸ್ ಅಧಿಕಾರಿಗಳಿಗೆ ಮೂಡಿದೆ. ಉಮರ್​ ಆತ್ಮಾ*ತಿ ದಾಳಿಕೋರನಾಗಿ ಬಂದು ಪೈಶಾಚಿಕ ಕೃತ್ಯ ನಡೆಸಿರುವ ಶಂಕೆ ಇದೆ.
ಸದ್ಯ ತನಿಖಾ ತಂಡಗಳು ಉಮರ್ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಸದ್ಯ ಉಮರ್ ತಾಯಿ ಸೇರಿದಂತೆ ಕುಟುಂಬಸ್ಥರ ವಿಚಾರಣೆಯನ್ನು ಪೊಲೀಸರು ನಡೆಸುತ್ತಿದ್ದಾರೆ. ಈಗಾಗಲೇ ಉಮರ್ ತಾಯಿ ಹಾಗೂ ಸಹೋದರರಿಬ್ಬರ ವಿಚಾರಣೆ ಮಾಡಿ, ಡಾ.ಉಮರ್ ಮಹಮ್ಮದ್ ಡಿಎನ್​ಎ ಟೆಸ್ಟ್​ಗೂ ರವಾನೆ ಮಾಡಿದ್ದಾರೆ.
ಇದನ್ನೂ ಓದಿ:ದೆಹಲಿ ಕೃತ್ಯದ ಶಂಕಿತ ವ್ಯಕ್ತಿಯ ಫೋಟೋ ರಿಲೀಸ್..! ಸಿಸಿಟಿ ಫೋಟೋಗಳೂ ಲಭ್ಯ
ಸ್ಫೋ*ದ ಹಿಂದಿನ ಪ್ರತೀ ಹೆಜ್ಜೆಯ ಬಗ್ಗೆ ತನಿಖೆ ಚುರುಕುಗೊಂಡಿದೆ. ಘಟನೆ ನಡೆದ ಸುತ್ತಮುತ್ತಲಿನ ಸಿಸಿಟಿವಿಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ಈವರೆಗೆ ಸುಮಾರು 300ಕ್ಕೂ ಹೆಚ್ಚು ಸಿಸಿಟಿವಿಗಳನ್ನು ಪರಿಶೀಲಿಸಲಾಗಿದೆ. ಬದರಾಪುರ್​ನಿಂದ ಮಸೀದಿಯವರೆಗೆ ಎಲ್ಲಾ ಸಿಸಿಟಿವಿ ಚೆಕ್ ಮಾಡಿದ್ದಾರೆ.
‘ಕಾರಿನ’ ಕಹಾನಿ!
ಮತ್ತೊಂದು ಕಡೆ ಕೃತ್ಯಕ್ಕೆ ಬಳಸಿದ್ದ ಕಾರಿನ ಜಾಡು ಹಿಡಿದು ಹೊರಟಿರುವ ಪೊಲೀಸರಿಗೆ ಕೆಲವು ಮಹತ್ವದ ಮಾಹಿತಿಗಳು ಲಭ್ಯವಾಗಿದೆ. HR 26 CE 7674 ನಂಬರ್ ಪ್ಲೇಟ್ ಹೊಂದಿರುವ i20 ಕಾರನ್ನು ಕೃತ್ಯಕ್ಕೆ ಬಳಸಲಾಗಿದೆ. ಕಾರಿನ ಮೂಲ ಮಾಲೀಕನನ್ನ ಪೊಲೀಸರು ಬಂಧಿಸಿದ್ದಾರೆ. ಕಾರಿನ ಮೂಲ ಮಾಲೀಕನ ಹೆಸರು ಮೊಹಮ್ಮದ್ ಸಲ್ಮಾನ್.
ಆಮೀರ್ ಯಾರು? : ಈ ಸಲ್ಮಾನ್ ತನ್ನ i20 ಕಾರನ್ನು ಆಮೀರ್​​ಗೆ ನೀಡಿದ್ದ. ಸಲ್ಮಾನ್​​ನಿಂದ ಆಮೀರ್​​​ ಕಾರು ಖರೀದಿ ಮಾಡಿರೋದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ತಾರಿಖ್ ಎಂಟ್ರಿ: ನಂತರ ಆಮೀರ್​ನಿಂದ ತಾರಿಖ್​ಗೆ i20 ಕಾರು ಹಸ್ತಾಂತರವಾಗಿದೆ. ಮೊನ್ನೆ ರಾತ್ರಿ ಕಾಶ್ಮೀರದಲ್ಲಿ ತಾರಿಖ್​​ನನ್ನು ಪೊಲೀಸರು ಬಂಧಿಸಿದ್ದಾರೆ. ಅದಕ್ಕೂ ಮೊದಲೇ ಕಾರು ಹಸ್ತಾಂತರವಾಗಿದೆ.
ಡಾ.ಉಮರ್ ಮೊಹಮ್ಮದ್: ತಾರಿಖ್ ಬಳಿಯಿದ್ದ ಕಾರನ್ನು ಡಾ ಉಮರ್ ಮೊಹ್ಮದ್​ ಪಡೆದು, ಸೂ*ಡ್ ಬಾಂಬರ್​ ಆಗಿ ಬಂದಿರುವ ಅನುಮಾನ ಈಗ ಮಾಡಿದೆ.
ಡಾ. ಆದಿಲ್, ಡಾ.ಮುಜಾಮಿಲ್ ಅನ್ನೋರು ಫರಿದಾಬಾದ್​ನಲ್ಲಿ ಸ್ಪೋಟಕ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದು, ಇವರಿಬ್ಬರಿಗೂ ಜೈಶ್ ಸಂಘಟನೆ ಜೊತೆ ಲಿಂಗ್ ಇರೋದು ಗೊತ್ತಾಗಿದೆ. ಈ ಇಬ್ಬರ ಸಹಚರ ಡಾ.ಉಮರ್ ಮೊಹಮ್ಮದ್ ಎನ್ನಲಾಗುತ್ತಿದೆ.
ಇದನ್ನೂ ಓದಿ: ದೆಹಲಿಯಲ್ಲಿ ಪೈಶಾಚಿಕ ಕೃತ್ಯ.. ನಾಲ್ವರು ಶಂಕಿತರ ವಶಕ್ಕೆ ಪಡೆದ ಪೊಲೀಸರು..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us