/newsfirstlive-kannada/media/media_files/2025/11/11/dr-umar-mohammad-delhi-incident-2-2025-11-11-09-15-46.jpg)
ದೆಹಲಿ ಪ್ರಕರಣಕ್ಕೆ ಸಂಬಂಧಿಸಿ ಶಂಕಿತ ವ್ಯಕ್ತಿ ಉಮರ್​ನ ತಾಯಿ ಸೇರಿದಂತೆ ಇಬ್ಬರು ಸಹೋದರರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದೆಹಲಿಯ ಕೆಂಪು ಕೋಟೆಯ ಬಳಿ ನಡೆದ ಸ್ಫೋ* ಪ್ರಕರಣದಲ್ಲಿ ಉಮರ್ ಮೊಹಮ್ಮದ್​ ಆತ್ಮಾ*ತಿ ಬಾಂಬರ್ ಎಂದು ಶಂಕಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಉಮರ್ ಮನೆಯ ಸದಸ್ಯರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ. ಅಲ್ಲದೇ, ಉಮರ್​​​, ಹೆಚ್ಚಿನ ತನಿಖೆಗಾಗಿ ಡಿಎನ್​ಎ ಪರೀಕ್ಷೆಗೂ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ದೆಹಲಿಯಲ್ಲಿ ಪೈಶಾಚಿಕ ಕೃತ್ಯ.. ನಾಲ್ವರು ಶಂಕಿತರ ವಶಕ್ಕೆ ಪಡೆದ ಪೊಲೀಸರು..!
ಕೃತ್ಯಕ್ಕೆ ಬಳಸಲಾದ ಕಾರಿನಲ್ಲಿ ಡಾ.ಉಮರ್ ಮೊಹಮ್ಮದ್ ನಬಿ ಮಾತ್ರ ಇದ್ದ ಅನ್ನೋದು ದೃಢವಾಗಿದೆ. ರಸ್ತೆಯ ಸಿಸಿಟಿವಿಯಲ್ಲಿ ಒಬ್ಬನೇ ಕಾರ್ ಡ್ರೈವ್ ಮಾಡುತ್ತಿದ್ದಿದ್ದು ಕಾಣಿಸಿದೆ. ಪುಲ್ವಾಮಾ ಜಿಲ್ಲೆಯ ವೈದ್ಯರ ತಂಡವೇ ಈಗ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯಲ್ಲಿ ಸಕ್ರಿಯವಾಗಿತ್ತಾ ಎಂಬ ಅನುಮಾನ ಶುರುವಾಗಿದೆ.
ಕಾರನ್ನು ಚಲಾಯಿಸುತ್ತಿದ್ದದ್ದು ಉಮರ್ ಮೊಹಮ್ಮದ್ ಎಂದು ಹೇಳಲಾಗುತ್ತಿದೆ. ವ್ಯಕ್ತಿಯ ಡಿಎನ್​ಎ ಪರೀಕ್ಷೆ ಮಾಡಲಾಗಿದೆ. ದೆಹಲಿಯ ಪೋಲಿಸರು ಘಟನಾ ಸ್ಥಳದಲ್ಲಿ ಸಿಕ್ಕ ದೇಹದ ಭಾಗಗಳನ್ನ ಸಂಗ್ರಹಿಸಿ ಪರೀಕ್ಷೆಗೆ ರವಾನಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us