ದಿತ್ವಾ ಎಂಟ್ರಿಗೆ ಬೆಂಗಳೂರು ಗಢಗಢ.. ತಾಪಮಾನ 12 ಡಿಗ್ರಿ ಸೆಲ್ಸಿಯಸ್‌ಗೆ ಜಾರುವ ಎಚ್ಚರಿಕೆ..!

ಅಲ್ಲಿ ಸ್ವಿಚ್​ ಆನ್​ ಮಾಡಿದ್ರೆ.. ಇಲ್ಲಿ ಆನ್​ ಆಗ್ತಿದೆ ಅನ್ನೋ ಮಾತು ಕೇಳಿರ್ತಿರಾ. ತಮಿಳುನಾಡಲ್ಲಿ ಸೈಕ್ಲೋನ್​ ಬಂದ್ರೆ.. ಬೆಂಗಳೂರಲ್ಲಿ ಮಳೆ ಸುರಿಯುತ್ತೆ.. ಈಗ ಬೆಂಗಳೂರಿಗರು ಅನುಭವಿಸುತ್ತಿರೋ ಚಳಿಗೆ ಅದೇ ಕಾರಣ.. ಲಂಕಾ ಮೇಲೆ ಅಬ್ಬರಿಸಿ ಬೊಬ್ಬಿರಿದ ದಿತ್ವಾ ಚಂಡಮಾರುತ ತಮಿಳುನಾಡಿಗೆ ಎಂಟ್ರಿ ಕೊಟ್ಟಿದೆ.

author-image
Ganesh Kerekuli
Bengaluru city
Advertisment
  • ತಮಿಳುನಾಡನಲ್ಲಿ ರೆಡ್ ಅಲರ್ಟ್.. ವಿಮಾನಗಳು ರದ್ದು!
  • ಮಧ್ಯಾಹ್ನದ ಸಮಯದಲ್ಲೂ ಮೈ ನಡುಗಿಸುವ ಚಳಿ
  • ತಾಪಮಾನವು 12 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುವ ಸಾಧ್ಯತೆ!

ಅಲ್ಲಿ ಸ್ವಿಚ್​ ಆನ್​ ಮಾಡಿದ್ರೆ.. ಇಲ್ಲಿ ಆನ್​ ಆಗ್ತಿದೆ ಅನ್ನೋ ಮಾತು ಕೇಳಿರ್ತಿರಾ. ಇದಕ್ಕೆ ನಮ್ಮ ಪ್ರಕೃತಿ ಕೂಡ ಒಂದು ಸಾಕ್ಷಿ.. ತಮಿಳುನಾಡಲ್ಲಿ ಸೈಕ್ಲೋನ್​ ಬಂದ್ರೆ.. ಬೆಂಗಳೂರಲ್ಲಿ ಮಳೆ ಸುರಿಯುತ್ತೆ.. ಈಗ ಬೆಂಗಳೂರಿಗರು ಅನುಭವಿಸುತ್ತಿರೋ ಚಳಿಗೆ ಅದೇ ಕಾರಣ.. ಲಂಕಾ ಮೇಲೆ ಅಬ್ಬರಿಸಿ ಬೊಬ್ಬಿರಿದ ದಿತ್ವಾ ಚಂಡಮಾರುತ ತಮಿಳುನಾಡಿಗೆ ಎಂಟ್ರಿ ಕೊಟ್ಟಿದೆ. 

ಶ್ರೀಲಂಕಾದಲ್ಲಿ 123 ಜನರ ಸಾವಿಗೆ ಕಾರಣವಾದ ದಿತ್ವಾ ಚಂಡಮಾರುತ ಭಾರತಕ್ಕೆ ಲಗ್ಗೆ ಇಟ್ಟಿದೆ. ಲಂಕಾ ದಹನ ಮಾಡಿದ ದಿತ್ವಾ ತಮಿಳುನಾಡಿಗೆ ಎಂಟ್ರಿಯಾಗಿದೆ. ತಮಿಳುನಾಡು ಕರಾವಳಿಗೆ ಅಪ್ಪಳಿಸಿದ ದಿತ್ವಾ ಚಂಡಮಾರುತ ಭಾರೀ ಗಾಳಿ.. ಮಳೆಯನ್ನ ಹೊತ್ತು ತಂದಿದೆ. ತಮಿಳುನಾಡಿಗೆ ಸೈಕ್ಲೋನ್​ ಅಪ್ಪಳಿಸುತ್ತಿದ್ದಂತೆ ಸಿಲಿಕಾನ್ ಸಿಟಿ ಬೆಂಗಳೂರು ಮಂಜಿನಲ್ಲಿ ಮರೆಯಾಗಿದೆ. 

ಇದನ್ನೂ ಓದಿ:ಪ್ರಾದೇಶಿಕ ಭಾಷೆಗಳು ಕನ್ನಡವನ್ನು ಶ್ರೀಮಂತಗೊಳಿಸಿವೆ: ಮುಖ್ಯಮಂತ್ರಿ ಸಿದ್ದರಾಮಯ್ಯ

SRILANKA DITWA CYCLONE EFFECT02

ಇವತ್ತೀಡಿ ದಿನ ಮೈ ಕೊರೆಯುವ ಚಳಿ.. ಮೋಡ ಕವಿದ ವಾತಾವರಣ.. ಬೆಂಗಳೂರಲ್ಲೇ ಮಡಿಕೇರಿ.. ಚಿಕ್ಕಮಗಳೂರನ್ನ ನೆನಪು ಮಾಡಿಸಿತ್ತು. ವೀಕೆಂಡ್​ನಲ್ಲಿ ಔಟಿಂಗ್​ ಹೋಗೋ ಜನ ಇವತ್ತು ಮನೆಯಲ್ಲೇ ಬೆಚ್ಚಿಗೆ ಕೂತು ಬಿಟ್ಟಿದ್ರು. ಜನ ಇಲ್ಲದೆ ನಗರದ ಬಹುತೇಕ ಎಲ್ಲಾ ರಸ್ತೆಗಳು ಖಾಲಿ ಖಾಲಿಯಾಗಿತ್ತು.

ಮಧ್ಯಾಹ್ನದ ಸಮಯದಲ್ಲೂ ಮೈ ನಡುಗಿಸುವ ಚಳಿ

ಕಳೆದೊಂದು ವಾರದಿಂದ ಬೆಂಗಳೂರು ಮಂದಿ ಆಗಾಗ ಬಿಟ್ರೆ ಸೂರ್ಯನನ್ನೇ ನೋಡಿಲ್ಲ.. ತೀವ್ರಗೊಂಡಿರೋ ಚಳಿ.. ಮಧ್ಯಾಹ್ನದ ಸಮಯದಲ್ಲೂ ಮೈ ನಡುಗಿಸುತ್ತಿದೆ. ನಿನ್ನೆ.. ಇವತ್ತು ಬೆಂಗಳೂರು ವೆದರ್ ಹಠಾತ್ ಕುಸಿದಿದೆ. ತಾಪಮಾನ ಕುಸಿತದಿಂದ ಕನಿಷ್ಟ ತಾಪಮಾನ 16 ಡಿಗ್ರಿ ಸೆಲ್ಸಿಯಸ್​ನಷ್ಟು ದಾಖಲಾಗಿದೆ. ಇದನ್ನ ಈ ವರ್ಷದ ಕನಿಷ್ಠ ತಾಪಮಾನ ಅಂತ ಪರಿಗಣಿಸಲಾಗಿದೆ. 

ತಾಪಮಾನವು 12 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುವ ಸಾಧ್ಯತೆ!

ಚಳಿಗೆ ಮನೆಯಿಂದ ಹೊರ ಬರಲು ಅಯ್ಯೋ ಅಂತಿರೋ ಜನಕ್ಕೆ ಮತ್ತೊಂದು ಶಾಕಿಂಗ್ ಸುದ್ದಿ ಹೊರಬಿದ್ದಿದೆ. ಈ ತಣ್ಣನೆಯ ವಾತಾವರಣ ಇನ್ನೂ ಮೂರು ದಿನ ಮುಂದುವರಿಯುತ್ತೆ. ತಂಗಾಳಿಯ ವೇಗ ಘಂಟೆಗೆ 20 ಕಿಲೋ ಮೀಟರ್​ ತಲುಪುದೆ. ರಾಜ್ಯದ ಕೆಲವೆಡೆ ಮಳೆಯಾಗುವ ಸಾಧ್ಯತೆಯೂ ಇದೆ. ಬೆಂಗಳೂರಿನಲ್ಲಿ ತಾಪಮಾನವು 12 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುವ ಸಾಧ್ಯತೆ ಇದೆ ಅನ್ನೋ ಮೂಲಕ ಕೊರೆವ ಚಳಿ ಇನ್ನಷ್ಟು ಕಾಟ ಕೊಡೋದು ಫಿಕ್ಸ್ ಅಂತಿರೋ ಹವಾಮಾನ ಇಲಾಖೆ.
ತಮಿಳುನಾಡನಲ್ಲಿ ರೆಡ್ ಅಲರ್ಟ್.. ವಿಮಾನಗಳು ರದ್ದು! 

ತಮಿಳುನಾಡಿನಲ್ಲಿ ಚಂಡಮಾರುತದ ಕಾರಣ ಭಾರೀ ಮಳೆ, ಮೂವರು ಸಾವು. ರೆಡ್‌ ಅಲರ್ಟ್‌ ಘೋಷಣೆ. ಸುಮಾರು 47 ವಿಮಾನಗಳ ಹಾರಾಟ ರದ್ದು. ತಮಿಳುನಾಡಿಗೆ ರೆಡ್ ಅಲರ್ಟ್ ನೀಡಿದೆ. ಚೆನ್ನೈ ವಿಮಾನ ನಿಲ್ದಾಣವು ಇಂದು ನಿಗದಿಯಾಗಿದ್ದ 47 ವಿಮಾನಗಳ ಸಂಚಾರವನ್ನು ರದ್ದುಗೊಳಿಸಿದ್ದು, ಅವುಗಳಲ್ಲಿ 36 ದೇಶೀಯ ಮತ್ತು 11 ಅಂತರರಾಷ್ಟ್ರೀಯ ವಿಮಾನಗಳಾಗಿವೆ ಎಂದು ಎಎನ್‌ಐ ತಿಳಿಸಿದೆ. 

ಇದನ್ನೂ ಓದಿ: ದಕ್ಷಿಣ ಆಫ್ರಿಕಾಗೆ ನೀರು ಕುಡಿಸಿದ RoKo, ರಾಹುಲ್..! ಸೂಪರ್ ಬ್ಯಾಟಿಂಗ್!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

cyclone Ditwah cyclone wreaks havoc
Advertisment