/newsfirstlive-kannada/media/media_files/2025/10/23/mp_carbide_gun-2025-10-23-15-27-23.jpg)
ಬೋಪಾಲ್: ದೀಪಾವಳಿ ಬದುಕಿನಲ್ಲಿ ಹೊಸ ಬೆಳಕು ತರುವಂತಹ ಸಂಭ್ರಮದ ಹಬ್ಬ. ಎಲ್ಲರೂ ಖುಷಿ ಖುಷಿಯಾಗಿ ಆಚರಣೆ ಮಾಡೋ ಈ ಹಬ್ಬ ಹಲವರ ಬದುಕಿಗೆ ಕತ್ತಲೆಯಾಗಿ ಮಾರ್ಪಟ್ಟಿದೆ. ಅದರಲ್ಲಿ ಮಕ್ಕಳಿಗೆ ಬದುಕಿನ ಪೂರ್ತಿ ದೃಷ್ಟಿ ಇಲ್ಲದಂತೆ ಮಾಡಿ ಕತ್ತಲೆಯಲ್ಲಿ ನಿಲ್ಲಿಸಿ ಬಿಟ್ಟಿದೆ. ಹೌದು.. ಈ ರಾಜ್ಯದಲ್ಲಿ ಕೇವಲ ಮೂರು ದಿನಗಳಲ್ಲಿ ಒಬ್ಬರಲ್ಲ, ಇಬ್ಬರಲ್ಲ ಬರೋಬ್ಬರಿ 122ಕ್ಕೂ ಹೆಚ್ಚು ಮಕ್ಕಳು ಕಣ್ಣಿನ ಸಮಸ್ಯೆಗೆ ಒಳಗಾಗಿ ಆಸ್ಪತ್ರೆಗೆ ದಾಖಲು ಆಗಿದ್ದಾರೆ. ಇದಕ್ಕೆ ಮುಖ್ಯ ಕಾರಣ ಎಂದರೆ ದೀಪಾವಳಿ ಹಬ್ಬದ ಕಾರ್ಬೈಡ್​ ಗನ್ (Carbide Gun) ಆಗಿದೆ.
ಮಧ್ಯಪ್ರದೇಶದ್ಯಾಂತ ದೀಪಾವಳಿ ಹಬ್ಬದ ಆಚರಣೆಯಲ್ಲಿ ಕಾರ್ಬೈಡ್​ ಗನ್​ ಬಳಕೆ ಮಾಡಿದ್ದ 122ಕ್ಕೂ ಹೆಚ್ಚಿನ ಮಕ್ಕಳು ಕಣ್ಣಿನ ಸಮಸ್ಯೆಗೆ ಒಳಗಾಗಿ ಆಸ್ಪತ್ರೆ ಪಾಲಾಗಿದ್ದಾರೆ. ಇದರಲ್ಲಿ 14 ಮಕ್ಕಳು ಸಂಪೂರ್ಣವಾಗಿ ಕಣ್ಣುಗಳನ್ನು ಕಳೆದುಕೊಂಡಿದ್ದು ಜೀವನ ಪೂರ್ತಿ ಕತ್ತಲೆಯಲ್ಲೇ ಕಳೆಯುವಂತ ಪರಿಸ್ಥಿತಿಗೆ ಒಳಗಾಗಿದ್ದಾರೆ. ಇದು ಮಕ್ಕಳ ಪೋಷಕರಿಗೆ ಹಾಗೂ ವೈದ್ಯರಿಗೆ ಎಲ್ಲಿಲ್ಲದ ಸಂಕಷ್ಟಗಳನ್ನು ತಂದೊಡ್ಡಿದೆ.
ಮಧ್ಯಪ್ರದೇಶದ ವಿದಿಶಾ ಜಿಲ್ಲೆಯಲ್ಲಿ ಮಕ್ಕಳ ಕಣ್ಣುಗಳಿಗೆ ಹೆಚ್ಚಿನ ಹಾನಿಯಾಗಿರುವುದು ತಿಳಿದು ಬಂದಿದೆ. ಅಲ್ಲಿನ ಸ್ಥಳೀಯ ಮಾರ್ಕೆಟ್​ಗಳಲ್ಲಿ ಕಾರ್ಬೈಡ್​ ಗನ್​ಗಳನ್ನು ರಾಜಾರೋಷವಾಗಿ ಮಾರಾಟ ಮಾಡಲಾಗುತ್ತಿದೆ. ಆದರೆ ಈ ಗನ್​ಗಳನ್ನು ಮಾರಾಟ ಮಾಡುವುದನ್ನು ಮಧ್ಯಪ್ರದೇಶ ಸರ್ಕಾರ ಬ್ಯಾನ್ ಮಾಡಿದೆ. ಆದರೂ ಅಲ್ಲಿ ಸ್ಥಳೀಯವಾಗಿ ಈ ಗನ್​ಗಳನ್ನು ರೆಡಿ ಮಾಡಿ 150 ರೂಪಾಯಿಗಳಿಂದ 200 ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತಿದೆ.
/filters:format(webp)/newsfirstlive-kannada/media/media_files/2025/10/23/mp_carbide-2025-10-23-15-27-40.jpg)
ಕಾರ್ಬೈಡ್​ ಗನ್​ಗಳನ್ನು ಮಾರ್ಕೆಟ್​​ಗಳಲ್ಲಿ ಗೊಂಬೆಗಳಂತೆ ಮಾರಾಟ ಮಾಡಿದರೂ ಇವುಗಳಿಂದ ಬರುವ ಶಬ್ಧ ಒಳ್ಳೆ ಬಾಂಬ್​ ರೀತಿಯಲ್ಲಿರುತ್ತದೆ. ಹೀಗಾಗಿ ದೀಪಾವಳಿ ಹಬ್ಬಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಖರೀದಿ ಮಾಡಿದ್ದ ಮಕ್ಕಳು ಕಣ್ಣಿನ ಸಮಸ್ಯೆ ಒಳಗಾಗಿರುವುದು ನೋವಿನ ಸಂಗತಿಯೇ ಸರಿ. ಸದ್ಯ ಆಸ್ಪತ್ರೆಗೆ ದಾಖಲಾದಂತ 122 ಮಕ್ಕಳ ಪೈಕಿ 14 ಮಕ್ಕಳು ಸಂಪೂರ್ಣವಾಗಿ ಕಣ್ಣುಗಳನ್ನು ಕಳೆದುಕೊಂಡಿದ್ದಾರೆ.
ಕಣ್ಣಿಗೆ ಗಾಯ ಮಾಡಿಕೊಂಡು ಆಸ್ಪತ್ರೆಗೆ ದಾಖಲಾದ 7 ವರ್ಷದ ಬಾಲಕಿ ನೇಹಾ ಅಳುತ್ತ ಮಾತನಾಡಿ, ಹಮಿಡಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಮನೆಯಲ್ಲಿ ತಯಾರಿಸಿದಂತಹ ಕಾರ್ಬೈಡ್​ ಗನ್​ ಖರೀದಿ ಮಾಡಿದ್ದೆ. ಒಂದು ಬಾರಿ ಅಷ್ಟೇ ಅದನ್ನು ಸ್ಫೋಟಿಸಿದ್ದು ಆದರೆ ಅದು ನನ್ನ ಒಂದು ಕಣ್ಣನ್ನು ಸಂಪೂರ್ಣವಾಗಿ ಸುಟ್ಟಿದೆ. ಸುಟ್ಟಿರುವ ಕಣ್ಣಿನಿಂದ ಈಗ ನೋಡಲು ನನಗೆ ಆಗುತ್ತಿಲ್ಲ.
ಇದೇ ಸಂಬಂಧ ಮಾತನಾಡಿದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಜ್​ ವಿಶ್ವಕರ್ಮ ಎನ್ನುವ ಬಾಲಕ, ಸೋಷಿಯಲ್ ಮೀಡಿಯಾದಲ್ಲಿ ಇದರ ವಿಡಿಯೋಗಳನ್ನು ನೋಡಿದ್ದೆ. ಹೀಗಾಗಿ ಪ್ರೇರಿತನಾಗಿ ನಾನು ಕಾರ್ಬೈಡ್​ ಗನ್ ಅನ್ನು ಕೊಂಡುಕೊಂಡಿದ್ದೆ. ಗನ್​ ಹೊಡೆಯುವಾಗ ಅದು ನನ್ನ ಮುಖದ ಮೇಲೆ ಸಿಡಿಯಿತು. ಇದರಿಂದ ನನ್ನ ಕಣ್ಣಗಳನ್ನು ಕಳೆದುಕೊಂಡಿದ್ದೇನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us