ದೀಪಾವಳಿ ಹಬ್ಬಕ್ಕೆ ಭರ್ಜರಿ ಗುಡ್​ನ್ಯೂಸ್​.. ಸರ್ಕಾರಿ ನೌಕರರಿಗೆ ಬೋನಸ್ ಘೋಷಣೆ..!

ಉತ್ತರ ಪ್ರದೇಶದ ಯೋಗಿ ಸರ್ಕಾರವು ತನ್ನ ಲಕ್ಷಾಂತರ ಸರ್ಕಾರಿ ನೌಕರರಿಗೆ ಗುಡ್​ನ್ಯೂಸ್ ನೀಡಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಶುಭ ಸುದ್ದಿ ನೀಡಿದ್ದು, ಅರ್ಹ ಎಲ್ಲಾ ಉದ್ಯೋಗಿಗಳ ಖಾತೆಗಳಿಗೆ ಬೋನಸ್ ನೀಡಲಾಗುವು ಎಂದು ಘೋಷಿಸಿದೆ.

author-image
Ganesh Kerekuli
ಟೀ ಅಂಗಡಿ ಮಾಲೀಕನಿಗೆ ಬಂಪರ್​​; ಬರೋಬ್ಬರಿ 999 ಕೋಟಿ ರೂ. ಜಮಾ; ಆಮೇಲೇನಾಯ್ತು?
Advertisment

ಉತ್ತರ ಪ್ರದೇಶದ ಯೋಗಿ ಸರ್ಕಾರವು ತನ್ನ ಲಕ್ಷಾಂತರ ಸರ್ಕಾರಿ ನೌಕರರಿಗೆ ಗುಡ್​ನ್ಯೂಸ್ ನೀಡಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಶುಭ ಸುದ್ದಿ ನೀಡಿದ್ದು, ಅರ್ಹ ಎಲ್ಲಾ ಉದ್ಯೋಗಿಗಳ ಖಾತೆಗಳಿಗೆ ಬೋನಸ್ ನೀಡಲಾಗುವು ಎಂದು ಘೋಷಿಸಿದೆ.

ಬೋನಸ್ ಆಗಿ ಎಷ್ಟು ಹಣ ಸಿಗುತ್ತದೆ?

ಸರ್ಕಾರದ ಈ ಕ್ರಮವು ನೌಕರರ ಜೇಬಿನಲ್ಲಿ ನಗು ತರಿಸುವುದಲ್ಲದೇ, ರಾಜ್ಯಾದ್ಯಂತ ಹಬ್ಬದ ಉತ್ಸಾಹವನ್ನು ದ್ವಿಗುಣಗೊಳಿಸಿದೆ. 1.4 ಮಿಲಿಯನ್‌ಗಿಂತಲೂ ಹೆಚ್ಚು ಸರ್ಕಾರಿ ನೌಕರರಿಗೆ ಬೋನಸ್ ಘೋಷಣೆ ಮಾಡಿದೆ. 2024-25ರ ಆರ್ಥಿಕ ವರ್ಷಕ್ಕೆ ಅನುಗುಣವಾಗಿ ಬೋನಸ್ ನೀಡಲಾಗುವುದು. ಬೋನಸ್​ ಮೊತ್ತವು ಗರಿಷ್ಠ ಮಿತಿ ₹7,000  ಆಗಿದೆ.

ಇದನ್ನೂ ಓದಿ: IPS ಅಧಿಕಾರಿ ಅಲೋಕ್ ಕುಮಾರ್ ವಿರುದ್ಧದ ಇಲಾಖಾ ತನಿಖೆ ರದ್ದುಗೊಳಿಸಿದ ಸಿಎಟಿ : ರಾಜ್ಯ ಸರ್ಕಾರಕ್ಕೆ ಹಿನ್ನಡೆ

ನೌಕರರ ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ಪ್ರಾಮಾಣಿಕತೆಗೆ ಈ ನಿರ್ಧಾರ ಎಂದು ಯೋಗಿ ಸರ್ಕಾರ ಹೇಳಿದೆ. ಹಣಕಾಸು ಇಲಾಖೆ ಹೊರಡಿಸಿದ ಆದೇಶದ ಪ್ರಕಾರ, ಅರ್ಹ ಉದ್ಯೋಗಿಗಳಿಗೆ 30 ದಿನಗಳ ವೇತನದ ಆಧಾರದ ಮೇಲೆ ಬೋನಸ್ ಸಿಗುತ್ತದೆ. ಗರಿಷ್ಠ ಮಿತಿಯನ್ನು ₹7,000 ಎಂದು ನಿಗದಿಪಡಿಸಲಾಗಿದೆ. ಪ್ರತಿ ಉದ್ಯೋಗಿಗೆ ₹6,908 ಬೋನಸ್ ಸಿಗುತ್ತದೆ. ಈ ಮೊತ್ತವನ್ನು ದೀಪಾವಳಿಗೆ ಮೊದಲು ನೌಕರರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ. 

ಸರ್ಕಾರಕ್ಕೆ ಎಷ್ಟು ವೆಚ್ಚ?

ಈ ಬೋನಸ್ ರಾಜ್ಯ ಸರ್ಕಾರದ ಮೇಲೆ ಸುಮಾರು 1022 ಕೋಟಿ ರೂ.ಗಳ ಆರ್ಥಿಕ ಹೊರೆ ಹೇರುತ್ತದೆ.  ಈ ವೆಚ್ಚವನ್ನು ನೌಕರರ ಕಠಿಣ ಪರಿಶ್ರಮಕ್ಕೆ ಗೌರವವೆಂದು ಪರಿಗಣಿಸಬೇಕು. ಇದು ರಾಜ್ಯದ ಆಡಳಿತ ರಚನೆಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಸರ್ಕಾರ ಹೇಳಿದೆ. 

ಇದನ್ನೂ ಓದಿ:ಬಿಗ್ ಬಾಸ್ ನಲ್ಲಿ ಫೈನಲಿಸ್ಟ್ ಆಗಲು ಕೊನೆಯ ಚಾನ್ಸ್‌ : ಫೇಲ್‌ ಆಯ್ತಾ ಕಾವ್ಯ ಸ್ಟ್ರಾಟಜಿ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

deepavali bonus bonus
Advertisment